POLICE BHAVAN KALABURAGI

POLICE BHAVAN KALABURAGI

06 December 2013

Gulbarga District Reported Crime

ಅಪಹರಣ ಪ್ರಕರಣ :
ಮಳಖೇಡ ಠಾಣೆ : ದಿನಾಂಕ  06-12-2013 ಕ್ಕೆ ಮಧ್ಯಾಹ್ನ ೦1:00 ಗಂಟೆಗೆ ಮಹಾದೇವಿ  ಗಂಡ ಜಗನ್ನಾಥ ಕಂಬಾರ  ಸಾ|| ಶಾಪೂರ ದರ್ಗಾ ಹತ್ತಿರ ಮಳಖೇಡ ತಾ|| ಸೇಡಂ ಇವರ ಮಗಳಾದ ಕುಮಾರಿ ಕಾವೇರಿ ವಯ: 15 ವರ್ಷ ಇವಳಿಗೆ ನಮ್ಮ ಗ್ರಾಮದ ಮಹ್ಮದ್ ಖಲೀಲ ತಂದೆ ಗೌಸ್‌ ಪಾಶಾ ಈತನು  ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಸಂಜೀವನಾಥ ತಂದೆ ಅಯ್ಯಪ್ಪಾ ವಾಡಿ ಸಾ|| ತೆಲ್ಲೂರ ತಾ|| ಅಳಂದ ಹಾ|| || ಜಾಗೃತಿ ಕಾಲೋನಿ ಸೇಡಂ ರಸ್ತೆ ಗುಲಬರ್ಗಾ ಇವರು ತನ್ನ ತಂದೆ ಅಯ್ಯಪ್ಪಾ ಈತನ ಹತ್ತಿರ ನಮ್ಮ ಗ್ರಾಮದ ಮಾಧುರಾಯ ಇವನು 100 ರೂಪಾಯಿ ಕೈಕಡ ಅಂತಾ ತೆಗೆದುಕೊಂಡಿದ್ದು ಅವನಿಗೆ ನನ್ನ ತಂದೆಯವರು ಹಣ ಮರಳಿ ಕೇಳುವಂತೆ ಕೇಳಿದ್ದು ಸುಮಾರು 8 , 10 ತಿಂಗಳಿಂದ ಹಣ ಕೇಳಿದರು ಕೂಡ ಅವನು ಹಣ ಕೊಡದೆ ನನ್ನ ತಂದೆ ಜೊತೆಯಲ್ಲಿ ಜಗಳ ಮಾಡಿದ್ದು ನಾನು ಹೋಗಿ ಏಕೆ ನನ್ನ ತಂದೆಯ ಜೊತೆಯಲ್ಲಿ ಜಗಳ ಮಾಡುತ್ತಿಯ ಅಂತಾ ಕೇಳಿದ್ದು ಅಂದಿನಿಂದ ಅವನು ನನ್ನಗೆ ನೋಡಿದರೆ ಒಂದು ತರಹ ವಾರಕಣ್ಣಿನಿಂದ ನೋಡುತ್ತಿದ್ದನು ದಿನಾಂಕ|| 05-12-2013 ರಂದು ಬೆಳಗ್ಗೆ 10.00 ಗಂಟೆಗೆ ನಾನು ಮತ್ತು ನನ್ನ ತಂದೆ ಅಯ್ಯಪ್ಪಾ ಇಬ್ಬರು ಕೂಡಿಕೊಂಡು ಸಂತೋಷ ಕಾಲೋನಿಯಿಂದ ನಡೆದುಕೊಂಡು ನಮ್ಮ ಸಂಬಂಧಿಕರ ಮನೆಗೆ ಹೋಗುತ್ತಿರುವಾಗ ಮಾಧುರಾಯ ಬಿರಾದಾರ,  ಬಸವರಾಜ ಬಿರಾದಾರಸೋಮಶೇಖರ ಬಿರಾದಾರರಮೇಶ ಪಟ್ಟಣ,ಇವರೆಲ್ಲರೂ ಬಂದು ನಮ್ಮ ತಡೆದು ಮಾಧುರಾಯ ಬಿರಾದಾರ ಇವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು  ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಲ್ಲೇಶಿ ತಂದೆ ಶಿವಣ್ಣ ಜಮಾದಾರ ಸಾ: ಜೇವರ್ಗಿ(ಬಿ) ರವರು ಮತ್ತು ವಿಠೋಬಾ ತಂದೆ ಶರಣಪ್ಪಾ ಕಲಾಲ ಸಾ ದೇವಣಗಾಂವ ತಾ: ಸಿಂದಗಿ ಇವರು ದೂರದ ಸಂಬಂಧಿಕರಿದ್ದು ಇಬ್ಬರ ನಡುವೆ ಹೊಲ ಸರ್ವೇ ನಂ-131 & 131/2 ನೇದ್ದಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹಾಕಿದ್ದು ಇರುತ್ತದೆ. ದಿನಾಂಕ-02-07-2013 ರಂದು ಬೆಳಿಗ್ಗೆ 08:30 ಗಂಟೆಗೆ 1. ವಿಠೋಬಾ ತಂದೆ ಶರಣಪ್ಪಾ ಕಲಾಲ 2.ಗಣಪತಿ ತಂದೆ ಚನ್ನಪ್ಪ 3. ರಾಜೇಂದ್ರ ತಂದೆ ಚನ್ನಪ್ಪಸಾ : ಇಬ್ಬರು ಖಾನಾಪೂರ 4. ಮಾಹಾದೇವ ತಂದೆ ಸಿದ್ರಾಮಪ್ಪಾ ಜಮಾದಾರ 5. ಭೀಮಶಾ ತಂದೆ ಮಾಹಾದೇವ ಜಮಾದಾರ ಸಾ: ಜೇವರ್ಗಿ (ಬಿ) ತಾ : ಅಫಜಲಪೂರ ರವರು ಸದರಿ ಜಮೀನಿನಲ್ಲಿ ಪ್ರವೇಶ ಮಾಡಿ ಭೋಗಪ್ಪ ಜಮಾದಾರ ಮತ್ತು ಶರಣಪ್ಪ ಜಮಾದಾರ ಇವರಿಗೆ ದೊಣ್ಣೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪಪ್ಪು ತಂದೆ ಉದಯರಾಮ ಸಾ: ಕಾವೇರಿ ನಗರ ಶಹಾಬಜಾರ ಗುಲಬರ್ಗಾ ರವರು ದಿನಾಂಕ:04-12-20133 ರಂದು ರಾತ್ರಿ 9=30 ಗಂಟೆ ಸುಮಾರಿಗೆ ನನ್ನ ತಮ್ಮನಾದ ಚೊಟು ಈತನು ಮೋ/ಸೈಕಲ್ ನಂ: ಕೆಎ 32 ಎಕ್ಸ 7956 ನೆದ್ದು ಜಗತ ಸರ್ಕಲ್ ಕಡೆಯಿಂದ ರೈಲ್ವೆ ಸ್ಟೇಶನ ಕಡೆಗೆ ಹೋಗುವ ಕುರಿತು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಜಿಲ್ಲಾ ಹಳೆ ಆಸ್ಪತ್ರೆಯ ಎದುರಿನ ಗೇಟ ಮುಂದೆ ಬ್ರೇಕ್ ಹಾಕಿ ಮೋ/ಸೈಕಲ್ ಮೇಲಿಂದ ತನ್ನಿಂದ ತಾನೆ ಬಿದ್ದು ಭಾರಿ ಗಾಯಹೊಂದಿದ್ದು ಇರುತ್ತದ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ರವಿಕಾಂತ ತಂದೆ ಬಾಬುರಾವ ಮುಂಡೆ ಸಾಃ ಮುಂಡಿವಾಡಿ ತಾಃ ಕಂದಾರ ಜಿಃ ನಾಂದೇಡ ರವರು ದಿನಾಂಕ: 28-11-2013 ರಂದು ನಮ್ಮ ಮಾಲಿಕರಾದ ನಿರ್ಮಲಸಿಂಗ್ ಇವರ ತಿಳಿಸಿದ್ದೆನೆಂದರೆ, ನೀವು ನಾಂದೇಡದಲ್ಲಿರುವ ಅಕ್ಕಿ ಮಿಲ್ ದಿಂದ ಅಕ್ಕಿ ಚೀಲಗಳನ್ನು ಲೋಡ ಮಾಡಿಕೊಂಡು ಕರ್ನಾಟಕ ರಾಜ್ಯದ ಬಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿರುವ ಸರ್ಕಾರಿ ಗೋದಾಮಿಗೆ ತೆಗೆದುಕೊಂಡು ಹೋಗಬೇಕು ಅಂತಾ ತಿಳಿಸಿದ್ದರಿಂದ, ನಮ್ಮ ಲಾರಿ ಚಾಲಕ ರೋಹಿದಾಸ ಮತ್ತು ನಾನು ಇಬ್ಬರು ಕೂಡಿಕೊಂಡು ನಮ್ಮ ಲಾರಿ ನಂ. ಎಂಹೆಚ್: 26, ಹೆಚ್: 7465 ನೇದ್ದರಲ್ಲಿ ನಾಂದೇಡ ದಿಂದ ಅಕ್ಕಿ ಲೋಡ ಮಾಡಿಕೊಂಡು ದಿನಾಂಕ: 30-11-2013 ರಂದು ಬೆಳಿಗ್ಗೆ ನಾಂದೇಡದಿಂದ ಹೊರಟು ಬಸಕಲ್ಯಾಣ, ಮುಡಬಿ, ಕಾಳಮಂದರಗಿ, ಗುಲಬರ್ಗಾ ಮಾರ್ಗವಾಗಿ ಸಿಂದಗಿಗೆ ಹೋಗುತ್ತಿದ್ದಾಗ ಮುಡಬಿ ದಾಟಿ, ಕಾಳಮಂದರಗಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಸಾಯಂಕಾಲ 4-30 ಗಂಟೆ ಸುಮಾರಿಗೆ ಕಾಳಮಂದರಗಿ ಗ್ರಾಮದ ಹತ್ತಿರ ಇರುವ ಇಳುಕಿನಲ್ಲಿ ನಮ್ಮ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ, ಕಾಳಮಂದರಗಿ ಸರ್ಕಾರಿ ಶಾಲೆಯ ಹತ್ತಿರ ತನ್ನ ನಿಯಂತ್ರಣ ಕಳೆದುಕೊಂಡು ರೋಡಿನ ಎಡಬದಿಯಲ್ಲಿ ಪಲ್ಟಿ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಭಾರತಿ ಗಂಡ ಸೋಮಶೇಖರ ಸಂದಿಮಠ ಸಾ: ಮನೆ ನಂ ಈ ಡಬ್ಲೂಎಸ್-70  ಮೊದಲನೇ ಹಂತ ಆದರ್ಶ ನಗರ ಗುಲಬರ್ಗಾ ಇವರನ್ನು  ದಿನಾಂಕ:06.03.2011 ರಂದು ಸೋಮಶೇಖರ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರದಕ್ಷಿಣೆ ವರೊಪಚಾರ ಅಂತಾ ಒಂದು ಲಕ್ಷ ರೂಪಾಯಿ ಒಂದು ತೊಲೆ ಬಂಗಾರ ಮತ್ತು ಗೃಹಪಯೋಗಿಸುವ ಸಾಮಾನುಗಳು ಕೊಟ್ಟಿದ್ದು ಇರುತ್ತದೆ  ಮದುವೆಯಾದ ಸ್ವಲ್ಪ ದಿನ ನನ್ನ ಗಂಡ ನನ್ನ ಜೊತೆ ಚೆನ್ನಾಗಿದ್ದು ನಂತರ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ 2 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡಲು ಪ್ರಾರಂಬಿಸಿದನು.ನಮ್ಮ ಅತ್ತೆಯಾದ ಗುರುಬಾಯಿ ಇವಳು ನೀನು ನೊಡಲು ಚನ್ನಾಗಿಲ್ಲಾ ನಿನಗೆ ಕೆಲಸ ಬರುವುದಿಲ್ಲಾ ತವರು ಮನೆಯಿಂದ ನನ್ನ ಮಗನಿಗೆ ಹಣ ತಂದು ಕೊಡು  ಇಲ್ಲಾವಾದರೆ ನಿನಗೆ ಸೀಮೆ ಎಣ್ಣೆ ಹಾಕಿ ಸುಟ್ಟು ಕೊಲೆ ಮಾಡುತ್ತೇವೆ ಅಂತಾ ನನ್ನ ಗಂಡ ಮತ್ತು ಅತ್ತೆ ಕೂಡಿ  ಜೀವದ ಬೇದರಿಕೆ ಹಾಕಿರುತ್ತಾರೆ . ದಿನಾಂಕ:28.11.2013 ರಂದು ಬೆಳಗ್ಗೆ 6.00 ಗಂಟೆ ಸುಮಾರಿಗೆ ನಮ್ಮ ತಾಯಿ ನನಗೆ ಆದರ್ಶ ಕಾಲೋನಿಯ ಮನೆಯಲ್ಲಿದ್ದಾಗ ನನ್ನ ಗಂಡ ಸೋಮಶೇಖರ ಅತ್ತೆ ಗುರುಬಾಯಿ ಇವರು  ರಂಡಿ ಮತ್ಯಾಕೇ  ಇಲ್ಲಿಗೆ ಬಂದಿರುವೇ ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ಹೊಟ್ಟೆಯ ಮೇಲೆ ಒದ್ದು ಕೈಯಿಂದ ಹೊಡೆ ಬಡೆ ಮಾಡಿದನು  ಆಗ ನನ್ನ ತಾಯಿ ಬಿಡಿಸಲು ಬಂದಾಗ ನಮ್ಮ ಅತ್ತೆ ಗುರುಬಾಯಿ ಹಾಗು ಗಂಡ ಸೋಮಶೇಖರ  ನಿನಗೆ ಖಲಾಸ ಮಾಡಿ ಬಿಡುತ್ತೇವೆ  ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೊದರು ಅಮತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.