POLICE BHAVAN KALABURAGI

POLICE BHAVAN KALABURAGI

20 July 2014

Gulbarga District Reported Crimes

ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ: 18-07-2014 ರಂದು ನನ್ನ ಮಗ ತುಕಾರಾಮ ಇತನು ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು  ತನ್ನ ಹೆಂಡತಿ ಮನೆಗೆ ಅಂದರೆ ಕೊಂಕನಳ್ಳಿ  ಗ್ರಾಮಕ್ಕೆ ಹೋಗುತ್ತೇನೆ ಎಂದು  ಬೆಳಿಗ್ಗೆ  8-30 ಹೋಗಿರುತ್ತಾನೆ ರಾತ್ರಿ ಅಂದಾಜು 9-15 ಗಂಟೆ ಸಮಯಕ್ಕೆ ನೀಲಹಳ್ಳಿ ಗ್ರಾಮದ ನನ್ನ ಸಂಭಂದಿಕನಾದ ಭೀಮರಾವ ತಂದೆ ಹಣಮಂತ ಕುಂಬಾರ  ಇತನು ನನ್ನ ಮೊಬೈಲಿಗೆ ಪೋನ್ ಮಾಡಿ ತಿಳಿಸಿದ್ದೆನಮದರೆ ನಿನ್ನ ಮಗ ತುಕಾರಾಮ ಇತನಿಗೆ ಸೇಡಂ ಗುಲಬರ್ಗಾ ರೋಡಿನಲ್ಲಿ ಯಾವುದೋ ಒಂದು ವಾಹನ ಡಿಕ್ಕಿ ಹೊಡೆದು ಹೋಗಿದ್ದು  ತುಕಾರಾಮ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಸೇಡಂಕ್ಕೆ ಬಂದಿದ್ದು ನನ್ನ ಮಗನ ಶವ ಸರಕಾರಿ  ಆಸ್ಪತ್ರೆ  ಸೇಡಂ ಶವಗಾರ ಕೊಣೆಯಲ್ಲಿ ಇರುವುದಾಗಿ ತಿಳಿದುಕೊಂಡು  ಶವಗಾರ ಕೊಣೆಯಲ್ಲಿದ್ದ ನನ್ನ ಮಗನ ಶವವನ್ನು ನೋಡಿದೇನು ನನ್ನ ಮಗನಿಗೆ ಎಡಗಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತ ಗಾಯವಾಗಿರುತ್ತದೆ ಮೆದಳು ಹೊರಗೆ ಬಂದಿರುತ್ತದೆ ಮೇಲತುಟಿಗೆ ರಕ್ತ ಗಾಯ, ಎಡಗೈ ಮುರದಿದ್ದನ್ನು ನೋಡಿದೆನು. ನನ್ನ ಸಂಭಂದಿಕರಾದ ಭೀಮರಾವ ಇತನಿಗೆ ವಿಚಾರ ಮಾಡಲಾಗಿ ತುಕಾರಾಮ ಇತನು ಸೇಡಂ ರಸ್ತೆಯಿಂದ  ತನ್ನ ಮೋಟಾರು ಸೈಕಲ್ ನಂ ಕೆಎ-32-ಇಡಿ 6640 ನ್ನೇದ್ದನ್ನು ನಡೆಸಿಕೊಂಡು ಕೊಂಕನಳ್ಳಿ ಗ್ರಾಮದ ಕಡೆಗೆ ಬರುತ್ತಿದ್ದಾಗ ಯಾವುದೋ ವಾಹನ ಅತಿವೇಗವಾಗಿ ಹಾಗು ನಿಸ್ಕಾಳಜೀತನದಿಂದ ವಾಹನ ಚಾಲಕನು ಚಲಾಯಿಸಿಕೊಂಡು ಬಂದು ತುಕಾರಾಮನಿಗೆ ಡಿಕ್ಕಿ ಹೊಡೆದಿದ್ದರಿಂದ ಅವನಿಗೆ ತಲೆಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ನರಸಪ್ಪ ತಂದೆ ಭೀಮಪ್ಪ ಕುಂಬಾರ  ಸಾ: ಚಿತ್ರಸಾಲ ತಾ: ಚಿಂಚೋಳಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 18-07-2014 ರಂದು ಯಾರೋ ಕಳ್ಳರು ಗುಲಬರ್ಗಾ ನಗರದ ಎಮ್.ಎಸ್.ಕೆ.ಮಿಲ್ ರೋಡಿಗೆ ಇರುವ ಸಿಂಡಿಕೇಟ ಬ್ಯಾಂಕದಲ್ಲಿರುವ ಮಿಸಕ್ರೇನೆಟದ ಮುರಿದು ಒಳಗಡೆ ಪ್ರವೇಶ ಮಾಡಿ ಜನರೇಟರ ಲಾಕ ಮುರಿದು ಒಳಗಡೆಯಿದ್ದ ಜನರೇಟರ ಬ್ಯಾಟರಿ ಅ.ಕಿ. 5200/- ಕಿಮ್ಮತ್ತಿನದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಜಿ.ಬಿ ಬಡಿಗೆರ ಸಿಂಡಿಕೆಟ ಬ್ಯಾಂಕ ಮ್ಯಾನೇಜರ ಸಾ: ಎಮ್.ಎಸ್.ಕೆ.ಮಿಲ್ ರೋಡ ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಶೊಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾಭಾವಿ ಮರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ರಾಜ್ಯ ಮಹಿಳಾನಿಲಯದಲ್ಲಿ ಅನಾಥ ಹೆಣ್ಣುಮಗಳಾದ ಗುರವ್ವಾ ತಂದೆ ಶರಣಪ್ಪಾ ವ:75 ಇವಳಿಗೆ ವಯಸ್ಸಾಗಿದ್ದು ಸದರಿಯವಳು ದಿನಾಂಕ:18-07-20147 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ ಇವಳ ಸಾವಿನಲ್ಲಿ ಯಾವುದೆ ಸಂಶಯ ವಗೈರಿ ಇರುವದಿಲ್ಲಾ ಅಂತಾ  ಶ್ರೀಮತಿ ದ್ರೌಪತಿ.ಕೆ.ನಾಯಕ ಅಧೀಕ್ಷಕರು ರಾಜ್ಯ ಮಹಿಳಾ ನಿಲಯ ಸಂತೋಷ ಕಾಲೋನಿ ಗುಲಬರ್ಗಾ  ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.