POLICE BHAVAN KALABURAGI

POLICE BHAVAN KALABURAGI

21 August 2014

Gulbarga District Reported Crimes

ಕಳವು ಪ್ರಕರಣಗಳು :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಸಾತಣ್ಣಾ ತಂದೆ ಶಿವಬಸಪ್ಪ ಪಾಗಾ ಸಾ: ನಿಂಬಾಳ ತಾ:ಆಳಂದ. ಇವರು ನಿಂಬಾಳ ಗ್ರಾಮದಲ್ಲಿನ ನನ್ನ ಹೊಲದಲ್ಲಿನ ಬಾವಿಯಲ್ಲಿ ನೀರು ಎತ್ತುವ ಸಲುವಾಗಿ ಕುಡಿಸಿದ 3 H.P ಸಬ್ ಮರ್ಸಿಬಲ್ ಮೋಟಾರ ಅಂದಾಜು. ಕೀ.4000/- ಇದನ್ನು ದಿನಾಂಕ: 06-08-14 ರಂದು ರಾತ್ರಿ 08:00 ಗಂಟೆಯಿಂದ  ದಿ:07/08/2014ರ ಬೇಳಗಿನ 06:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ನಂತರ ಸದರಿ ಕಳುವಾದ ಮೋಟರ ಸಲುವಾಗಿ ನಾನು ಮತ್ತು ನನ್ನ ಮಗ ನಮ್ಮ ಹೊಲದ ಹತ್ತಿರ ಇರುವ ಮೇಟಗಿಗಳಿಗೆ ಹೋಗಿ ವಿಚಾರಿಸಲಾಗಿ ನನ್ನ ಮೋಟರ್ ಬಗ್ಗೆ ನಮ್ಮಗೆ ಏನು ಗೊತ್ತಾಗಲಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ.ಸುಧಾಕರ ತಂದೆ ಗುರುಶಾಂತಪ್ಪಾ ಮಾಳಗೆ ಸಾ: ನಿಂಬಾಳ ತಾ:ಆಳಂದ. ಇವರು ನಿಂಬಾಳ ಗ್ರಾಮದ ಸಿಮಾಂತರದಲ್ಲಿ ನಮ್ಮ ಹೊಲವಿದ್ದು ಆ ಹೋಲದಲ್ಲಿ ನಾವು ನೀರಿಗಾಗಿ ಬಾವಿ ತೊಡಿದ್ದು. ಆ ಬಾವಿಯಲ್ಲಿ  ನೀರೆತ್ತುವ ಸಲುವಾಗಿ ಕುಡಿಸಿದ 5 H.P ಸಬ್ ಮರ್ಸಿಬಲ್ ಮೋಟಾರ ಬಿಟ್ಟಿದ್ದು. ಆ ಮೋಟಾರನಿಂದಲ್ಲೆ ನಮ್ಮ ಬೇಳೆಗಳಿಗೆ ನೀರು ಬಿಡುತ್ತಿದ್ದು. ಹಿಗಿದ್ದು ದಿನಾಂಕ:07-07-14 ರಂದು ರಾತ್ರಿ 07:00 ಗಂಟೆಯಿಂದ ದಿ:08/07/2014 ರ ಬೇಳಗಿನ 06;00 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಹೊಲದ ಬಾವಿಯಲ್ಲಿದ 5.H.P ಸಬ್ ಮರ್ಸಿಬಲ್ ಮೋಟಾರ ಅಂದಾಜು ಕಿಮ್ಮತ್ತು 8000/- ರೂ.ಉಳದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ.ಪರಮೇಶ್ವರ ತಂದೆ ತಮ್ಮಣಪ್ಪಾ ಮಾಳಗೆ ಸಾ:ನಿಂಬಾಳ ತಾ:ಆಳಂದ. ಇವರು ನಿಂಬಾಳ ಗ್ರಾಮದ ಸಿಮಾಂತರದಲ್ಲಿ ನಮ್ಮ ಹೊಲವಿದ್ದು ಆ ನಮ್ಮ ಹೋಲದಲ್ಲಿ ಕೊಳವೆ ಬಾವಿ ತೊಡಿದ್ದು. ಆ ಕೊಳವೆ ಬಾವಿಯಲ್ಲಿ ನೀರೆತ್ತುವ ಸಲುವಾಗಿ ಕುಡಿಸಿದ 5 H.P ಸಬ್ ಮರ್ಸಿಬಲ್ ಬೋರ ಮೋಟಾರ ಬಿಟ್ಟಿದ್ದು. ಆ ಮೋಟಾರನಿಂದ ನಮ್ಮ ಬೇಳೆಗಳಿಗೆ ನೀರುಣಿಸುತ್ತಿದ್ದೆವು. ಹಿಗಿದ್ದು ದಿನಾಂಕ:13-03-14 ರಂದು ಸಾಯಂಕಾಲ 06:00 ಗಂಟೆಯಿಂದ ದಿ:14/03/2014 ರ ಬೆಳಗಿನ 06;00 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಹೊಲದ ಕೊಳವೆ ಬಾವಿಯಲ್ಲಿನ 5.H.P ಸಬ್ ಮರ್ಸಿಬಲ್ ಬೋರ ಮೋಟಾರ ಅಂದಾಜು ಕಿಮ್ಮತ್ತು 8000/- ಮತ್ತು ಅದರ ಕೇಬಲ್ ವಾಯರ್ ಅ.ಕೀ.7000/- ರೂ. ಕೀಮ್ಮತಿನದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀ ಮರಲಿಂಗಪ್ಪ ತಂದೆ ಸಾಬಣ್ಣಾ ಸಾ : ಲಾಡ್ಲಾಪೂರ ಇವರು  ರಸ್ತೆ  ಅಪಘಾತದಲ್ಲಿ ಗಾಯ ಹೊಂದಿ ಉಪಚಾರ ಕುರಿತು ಯುನೈಟೆಡ್  ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಸಾಬಣ್ಣಾ ಈತನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ್ದರಿಂದ ಆತನ ತಂದೆ ಸಾಬಣ್ಣಾ ತಂದೆ ಮಲ್ಲಪ್ಪಾ ರವರು  ದಿನಾಂಕ 04-08-2014 ರಂದು ಪ್ರತಿ ದಿನದಂತೆ ಮರಲಿಂಗಪ್ಪಾ ತಂದೆ ಸಾಬಣ್ಣಾ ಈತನು ತನ್ನ ಟಂಟಂ ಆಟೊ ನಂ ಕೆಎ-33 7693 ನೆದ್ದನ್ನು ತೆಗೆದುಕೊಂಡು ಲಾಡ್ಲಾಪೂರದಿಂದ ಅಳ್ಳೊಳ್ಳಿ ವರೆಗೆ ಜನರಿಂದ ಹಣ ಪಡೆದು ಬಾಡಿಗೆ ಹೊಡೆಯುತ್ತಿದ್ದು ರಾತ್ರಿ ಅಳ್ಳೊಳ್ಳಿಯಲ್ಲಿ ಜನರಿಗೆ ಬಿಟ್ಟು ತಾನು ಮತ್ತು ತಮ್ಮ ಗ್ರಾಮದ ಮಲ್ಲಪ್ಪಾ ಭಜಂತ್ರಿ ಮತ್ತು ಸಿದ್ದಪ್ಪಾ ಇವರೊಂದಿಗೆ ಲಾಡ್ಲಾಪೂರಕ್ಕೆ ಹೊರಟಾಗ ರಾಮಾ ನಾಯಕ ತಾಂಡಾ ದಾಟಿ ಮರಲಿಂಗಪ್ಪಾ ಈತನು ಟಂಟಂ ಅಟೊವನ್ನು ಅತಿವೇಗವಾಗಿ ಓಡಿಸಿಕೊಂಡು ಹೊರಟು ರೊಡಿಗೆ ಅಡ್ಡಲಾಗಿ ದನ ಬಂದಿದ್ದರಿಂದ ಟಂಟಂ ಅಟೊ ಕಟ ಹೊಡೆಯಲು ಹೊಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮಲ್ಲಪ್ಪನಿಗೆ ಅಲ್ಲಲ್ಲಿ ಅಲ್ಪಗಾಯವಾಗಿದ್ದು ಮರಲಿಂಗ ಈತನ ಎದೆಗೆ ಎರಡು ಭುಜ ಹಾಗು ಕೈಗಳಿಗೆ ತೆರಚಿದ ರಕ್ತಗಾಯಗಳಾಗಿದ್ದು ಅಲ್ಲದೆ ಬಲ ತಲೆಗೆ ಭಾರಿ ರಕ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಹೆಚ್ಚಿನ ಉಪಚಾರ ಕುರಿತು ಸೊಲಾಪೂರದ ಮಾರ್ಕಂಡೇಯ ಸಹಕಾರಿ ರುಗ್ನಾಲಯ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದು ಸದರಿ ಗಾಯಾಳು ಮರಲಿಂಗಪ್ಪಾ ಈತನು ಆಸ್ಪತ್ರೆಯಲ್ಲಿ ಉಪಚಾರ ಹೊಂದುವ ಕಾಲಕ್ಕೆ ದಿನಾಂಕ 14-08-2014 ರಂದು 04-30 ಎ,ಎಮ್,ಕ್ಕೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.