POLICE BHAVAN KALABURAGI

POLICE BHAVAN KALABURAGI

18 June 2016

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಜೇವರಗಿ ಠಾಣೆ : ದಿನಾಂಕ 17.06.2016 ರಂದು ಕೊಳಕೂರ ಸೀಮಾಂತರ ಭೀಮಾ ನದಿ ದಂಡೆಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಅಂತಾ ಬಾತ್ಮೀ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೊಳಕೂರ ಸೀಮಾಂತರ ಭೀಮಾ ನದಿಯ ದಂಡೆಯ ದೂರ ಇರುವಾಲೆ ಜೀಪನ್ನು ಮರೆಯಾಗಿ ನಿಲ್ಲಿಸಿ, ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಬೀಮಾ ನದಿ ದಡದ ಕಡೆಗೆ ಹೋಗಿ ಗಿಡಗಂಟೀಗಳ ಮರೆಯಲ್ಲಿ ನಿಂತು ನೋಡಲಾಗಿ  ಭೀಮಾ ನದಿಯಿಂದ ಟಿಪ್ಪರಗಳಲ್ಲಿ ಮರಳು ತುಂಬುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ಸಾಯಂಕಾಲ 7.00 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು ಹೋದಾಗ ಟಿಪ್ಪರ ಚಾಲಕರು ಟಿಪ್ಪರಗಳು ಬಿಟ್ಟು ಓಡಿ ಹೋಗಹತ್ತಿದರು ನಾವು ಅವರಿಗೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನ ಮಾಡಿದರು ಸಿಕ್ಕಿರುವದಿಲ್ಲಾ. ನಂತರ ಟಿಪ್ಪರ ನಿಂತ ಸ್ಥಳಕ್ಕೆ ಬಂದು ನೋಡಲಾಗಿ 1. ಟಿಪ್ಪರ ನಂಬರ ಕೆಎ-32-ಸಿ-4787 ಇತ್ತು ಅದರಲ್ಲಿ ಅಂದಾಜು 1 ಬ್ರಾಸನಷ್ಟು ಉಸುಕು ಇದ್ದು ಅದರ ಅ.ಕಿ 1000/-ರೂ ಆಗಬಹುದು ಟಿಪ್ಪರನ ಅ.ಕಿ 3,00,000/-ರೂ ಆಗಬಹುದು. 2. ಟಿಪ್ಪರ ನಂಬರ ಎಮ್.ಹೆಚ್.-12-ಈಏಪ್-2387  ಇತ್ತು ಅದರಲ್ಲಿ ಅಂದಾಜು 1 ಬ್ರಾಸನಷ್ಟು ಉಸುಕು ಇದ್ದು ಅದರ ಅ.ಕಿ 1000/-ರೂ ಆಗಬಹುದು ಟಿಪ್ಪರನ ಅ.ಕಿ 3,00,000/-ರೂ ಆಗಬಹುದು. ನೋಡಿದರೆ ಸದರಿ ಟಿಪ್ಪರ ಚಾಲಕರು ಸಂಭಂದಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ಮಾರಾಟ ಮಾಡಲು ತುಂಬುತ್ತಿದ್ದ  ಬಗ್ಗೆ  ಕಂಡು ಬಂದಿದ್ದರಿಂದ ಸದರಿ ಮರಳು ಮತ್ತು ಟಿಪ್ಪರಗಳೊಂದಿಗೆ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಜೇವರಗಿ ಠಾಣೆ : ದಿನಾಂಕ 17.06.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ರಿಲಾಯಿನ್ಸ್ ಪೆಟ್ರೊಲ್ ಪಂಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ಮನುಷ್ಯನು ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮೀ ಇದ್ದ ಸ್ಥಳಕ್ಕೆ ಕಾಲು ನಡಿಗೆಯಲ್ಲಿ ಹೊರಟು ಬಾತ್ಮೀ ಸ್ಥಳ  ದೂರು ಇರುವಾಗಲೇ ರೋಡಿನ ಸೈಡಿನಲ್ಲಿ ಹೊಟೇಲ ಗೊಡೆ ಮರೆಯಲ್ಲಿ ನಿಂತು ನೋಡಲಾಗಿ ರಿಲಾಯನ್ಸ್ ಪೆಟ್ರೊಲ್ ಪಂಪ  ಹತ್ತಿರ  ಸಾರ್ವಜನಿಕ ರಸ್ತೆ ಮೇಲೆ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅಂತಾ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ವಿಶ್ವನಾಥ ತಂದೆ ಸಿದ್ರಾಮಪ್ಪ ಶಿವಣಕರ ಸಾಃ ಲಕ್ಮೀಚೌಕ ಜೇವರಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 4540/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು, ಮತ್ತು ಒಂದು ಮೊಬೈಲ್ ಅ.ಕಿ. 500=00 ರೂ ನೇದ್ದವುಗಳು ದೊರೆತಿದ್ದು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ದಿನಾಂಕ 17/06/2016 ರಂದು 0740 ಗಂಟೆಗೆ ನಾನು ನಮ್ಮ ತಾಂಡಾದ ಖೇಮು ಇತನ ಹೊಟೇಲ ಮುಂದೆ ನಾನು ಹೊರಟಾಗ ನನಗೆ 01] ರಂಗನಾಥ ತಂದೆ ಶಾಮರಾವ ಚವ್ಹಾಣ, 02] ದಿಲೀಪ ತಂದೆ ಶಾಮರಾವ ಚವ್ಹಾಣ, 03] ಪ್ರಕಾಶ ತಂದೆ ಜಾಪು ಚವ್ಹಾಣ, 04] ಗೊವಿಂದ ತಂದೆ ಸುಭಾಷ ರಾಠೋಡ ಎಲ್ಲರೂ ತಡೆದು ನಿಲ್ಲಿಸಿ ಏ ರಂಡಿ ಮಗನೆ ನಮ್ಮ ತಾಂಡಾದಾಗ ನಿನ್ನದು ಬಹಳ ನಡದಾದ ಒಂದು ಕೈ ನೋಡೆ ಬಿಡತೇವು ಅಂತ ಬೈದು ರಂಗನಾಥನು ನನಗೆ ಕಲ್ಲಿನಿಂದ ಬೆನ್ನ ಮೇಲೆ ಹೊಡೆದನು, ಮಲ್ಲಿನಾಥ ತಂದೆ ಭೋಜು ಚವ್ಹಾಣ ಇತನು ಬಿಡಿಸಲು ಬಂದಾಗ ಆತನಿಗೆ ರಂಗನಾಥನು ತನ್ನ ಕೈಯಲ್ಲಿದ್ದ ಚೂಪಾದ ಕಟ್ಟಿಗೆಯಿಂದ ಹಣೆಗೆ ತಿವಿದನು, ನನಗೆ ಎಡಗಾಲಿಗೆ ತಿವಿದನು, ನಂತರ ಅನ್ನುಬಾಯಿ ಇವಳು ಬಿಡಿಸಲು ಬಂದಾಗ ಅವಳಿಗೆ ಬೇಬಿಬಾಯಿ ಗಂಡ ಸುಭಾಷ ರಾಠೋಡ ಇವಳು ಕಲ್ಲಿನಿಂದ ಜೋರಾಗಿ ಹಣೆಗೆ ಹೊಡೆದಳು, ನನ್ನ ತಂದೆಯಾದ ಜಗನ್ನಾಥ ಇವರು ಬಿಡಿಸಲು ಬಂದಾಗ ಪ್ರಕಾಶನು ಕಲ್ಲಿನಿಂದ ಎದೆಗೆ ಹೊಡೆದನು, ನನ್ನ ತಾಯಿಯಾದ ಪಾರ್ವತಿ ಇವಳು ಬಿಡಿಸಲು ಬಂದಾಗ ಕವಿತಾಬಾಯಿ ಗಂಡ ಬಸು ರಾಠೊಡ ಇವಳು ಕಾಲಿನಿಂದ, ಹೊಟ್ಟೆ, ಸೊಂಟಕ್ಕೆ ಒದ್ದು ರಂಡಿ ನಿಮ್ಮ ಸೊಕ್ಕು ಬಹಳ ಅದ ಒಂದ ಕೈ ನೋಡತೆವು ಅಂತ ಬೈದು ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಕಪಾಳಕ್ಕೆ ಹೊಡೆದಳು, ದಿಲೀಪನು ನನಗೆ ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ, ಗೊವಿಂದನು ಈ ರಂಡಿ ಮಕ್ಕಳಿಗೆ ಇಡಬಾಡದು ಅಂತ ಅನ್ನುತ್ತಿದ್ದಾಗ ನಮ್ಮ ತಾಂಡಾದವರಾದ ಖೇಮು ತಂದೆ ಸೇವು ಚವ್ಹಾಣ, ಶಾಮರಾವ ತಂದೆ ರಾಮಚಂದ್ರ ಚವ್ಹಾಣ, ದಾಮು ತಂದೆ ನಾಮದೇವ ಚವ್ಹಾಣ ಇವರು ನೊಡಿ ಬಿಡಿಸಿರುತ್ತಾರೆ. ಅಂತಾ ಶ್ರೀ ಅನೀಲ ತಂದೆ ಜಗನ್ನಾಥ ಚವ್ಹಾಣ ಸಾ|| ನಿಂಬರ್ಗಾ ತಾಂಡಾ, ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನರೋಣಾ ಠಾಣೆ : ದಿನಾಂಕ 16/06/2016 ರಂದು ಶ್ರೀ ಮಂಜುಳಾ ಎಸ್. ಬಾನಿ ಉ: ಪಿಡಿಓ ಕಡಗಂಚಿ ಗ್ರಾಮ ಪಂಚಾಯತ ಇವರು ಸುಮಾರು ಒಂದುವರೆ ವರ್ಷದಿಂದ ಕಡಗಂಚಿ ಗ್ರಾಮ ಪಂಚಾಯತನಲ್ಲಿ ಪಿ.ಡಿ.ಓ ಅಂತಾ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದೆನೆ. ನಮ್ಮ ಗ್ರಾಮ ಪಂಚಾಯತನ ಅಧ್ಯಕ್ಷರಾಗಿ ಸದ್ಯ ಅಂಬಿಕಾ ಗಂಡ ಶಾಂತಪ್ಪ ದುತ್ತರಗಾಂವ ಅಂತಾ ಇದ್ದು ಇವರ ಗಂಡನಾದ ಶಾಂತಪ್ಪ ದುತ್ತರಗಾಂವ ಇವರು ಪಂಚಾಯತನ ಕೆಲಸಕಾರ್ಯಗಳ ಬಗ್ಗೆ ತಕರಾರು ಮಾಡುತ್ತಾ ನನ್ನೊಂದಿಗೆ ಆಗಾಗ ಜಗಳಮಾಡುತ್ತಾ ಬಂದಿರುತ್ತಾರೆ. ನಾನು ದಿನಾಂಕ 14/06/2016 ರಂದು ಪ್ರತಿದಿವಸದಂತೆ ಬೆಳಗ್ಗೆ ಕರ್ತವ್ಯ ಕುರಿತು ಕಡಗಂಚಿ ಪಂಚಾಯತ ಕಾರ್ಯಾಲಯಕ್ಕೆ ಬಂದು ಮಿಟಿಂಗ್ ಹಾಲನಲ್ಲಿ ಕುಳಿತು ಸಿಬ್ಬಂದಿಯವರಾದ ಕಂಪ್ಯೂಟರ ಆಪರೇಟರ್ ವಿಜಯಲಕ್ಷ್ಮಿ, ಬಿಲ್ ಕಲೇಕ್ಟರ್ ಪುರುಶೋತ್ತಮ್ ಹಾಗೂ ಪಂಪ ಆಪರೇಟರ್ ಅಶೋಕ ಚಿಂದೆ ರವರೊಂದಿಗೆ ಪಂಚಾಯತ ಕಛೇರಿಗೆ ಸಂಬಂದಿಸಿದ ಲ್ಯಾಪಟಾಪ ಕಂಪ್ಯೂಟರನಲ್ಲಿ  ಉದ್ಯೂಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಕೂಲಿಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಅವರ ಖಾತೆಗೆ ಕೂಲಿ ಹಣವನ್ನು ಆನಲೈನ ಮುಖಾಂತರ ಪಾವತಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾಗ ಅದೆ ದಿವಸ ರಾತ್ರಿ 9-00 ಗಂಟೆ ಸುಮಾರಿಗೆ ಕಡಗಂಚಿ ಗ್ರಾಮದ ಶಾಂತಪ್ಪ ದುತ್ತರಗಾಂವ ಇವರು ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಬಂದು ಏಕವಚನದಲ್ಲಿ ಏ ನಿನಗೆ ಕೂಲಿ ಕಾರ್ಮಿಕರಿಗೆ ಹಣ ಪಾವತಿ ಮಾಡುವುದು ಬೇಡಾ ಅಂತಾ ಹೇಳಿದ್ದರು ಕೂಲಿಕಾರ್ಮಿಕರಿಗೆ ಹಣ ಪಾವತಿ ಕೆಲಸ ಮಾಡುತ್ತಿದ್ದಿಯಾ ಆ ಲ್ಯಾಪಟಾಪ ಕೊಡು ಅಂತಾ ಚೀರಾಡುತ್ತಿದ್ದಾಗ ಆ ಶಬ್ದಕೇಳಿ ಅಲ್ಲಿಯೇ ಇದ್ದ ಕಡಗಂಚಿ ಗ್ರಾಮದ ದತ್ತರಾಜ ತಂದೆ ಕರಬಸಪ್ಪ ಬೊಮ್ಮನಳ್ಳಿ, ಗಣೇಶತಂದೆ ಸುಭಾಷ ಸದಾಪುಲೆ, ಪ್ರಮೋದ ತಂದೆ ಯಶ್ವಂತ ಡೋಣಿ, ಭೀಮರಾವ ತಂದೆ ಸೈಬಣ್ಣ ನರೋಣಾ ಇವರುಗಳು ಬಂದು ಕರ್ತವ್ಯದಲ್ಲಿದ್ದ ಮೇಡಮವರಿಗೆ ಏಕೆ ತೊಂದರೆ ಕೊಡುತ್ತಿದ್ದಿಯಾ ಹೊರಗೆ ಬಾ ಅಂತಾ ಶಾಂತಪ್ಪ ಇವರಿಗೆ ಹೇಳುತ್ತಿದ್ದಾಗ ಶಾಂತಪ್ಪ ಇವರು ನನ್ನ ಹತ್ತಿರವಿದ್ದ ಲ್ಯಾಪಟಾಪ ಕಂಪ್ಯೂಟರ, ಕಛೇರಿಗೆ ನೀಡಿದ ಡೊಂಗಲ್ ಹಾಗೂ ಲ್ಯಾಪಟಾಪ ಚಾರ್ಜರಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ನೀನು ಈ ಲ್ಯಾಪಟಾಪ ಕೇಳಿದರೆ ನೀನಗೆ ಜೀವಸಹಿತ ಬಿಡುವುದಿಲ್ಲಾ ಈಗ ಅದು ಹ್ಯಾಗೆ ಬಿಲ್ ಮಾಡುತ್ತಿ ನಾನು ನೋಡುತ್ತೇನೆ ಅಂತಾ ಜೀವಭೇದರಿಕೆ ಹಾಕುತ್ತಾ ಅಲ್ಲಿಂದ ಹೊರಟು ಹೋಗಿರುತ್ತಾನೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.