POLICE BHAVAN KALABURAGI

POLICE BHAVAN KALABURAGI

19 November 2018

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 18-11-2018 ರಂದು ಶಿವೂರ ಗ್ರಾಮದ ಭಿಮಾ ನದಿಯಲ್ಲಿ ಅನದಿಕೃತವಾಗಿ ಕಳ್ಳತನದಿಂದ ಟ್ಯಾಕ್ಟರನಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ, ಶ್ರೀ  ಮಂಜುನಾಥ ಹೂಗಾರ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಸಿ ಪಿ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಕರಜಗಿಮಣೂರ ರೋಡಿಗೆ ಶಿವೂರ ಕ್ರಾಸ ಹತ್ತಿರ ಹೋಗುತ್ತಿದ್ದಂತೆ ಶಿವೂರ ಕಡೆಯಿಂದ ಒಂದು ಟ್ಯಾಕ್ಟರ ಬರುತ್ತಿದ್ದುದನ್ನು ನಮ್ಮ ಇಲಾಖಾ ಜೀಪಿನ ಬೆಳಕಿನಲ್ಲಿ ನೋಡಿ, ಟ್ಯಾಕ್ಟರ ಚಾಲಕನಿಗೆ ಟ್ಯಾಕ್ಟರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ಟ್ಯಾಕ್ಟರ ಚಾಲಕ, ಟ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋಗಿ ಕತ್ತಲಲ್ಲಿ ತಪ್ಪಿಸಿಕೊಂಡನು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು. ಟ್ಯಾಕ್ಟರ ನಂಬರ ಪರಿಶೀಲಿಸಿ ನೋಡಲಾಗಿ 1) ಸೋನಾಲಿಕಾ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಹಾಕಿರುವುದಿಲ್ಲ.  ನೀಲಿ ಬಣ್ಣದ ಇಂಜೆನ್ ಇದ್ದು, ಅದರ ಚೆಸ್ಸಿ ನಂ: FZVDG741011S3 ಇಂಜೆನ್ ನಂಬರ 3105ELU83E733787F20 ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿ ಕೇಸರಿ ಬಣ್ಣದ್ದು ಇದ್ದು ಟ್ರೈಲಿಗೂ ಸಹ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರ ಟ್ರೈಲಿಯಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ  ಠಾಣೆಗೆ  ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 18-11-2018 ರಂದು ಶಿವಪೂರ ಗ್ರಾಮದ ಕಡೆಯಿಂದ ಅಫಜಲಪೂರ ಕಡೆಗೆ ಅನದಿಕೃತವಾಗಿ ಕಳ್ಳತನದಿಂದ ಎರಡು ಟ್ಯಾಕ್ಟರಗಳಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಶ್ರೀ  ಮಂಜುನಾಥ ಹೂಗಾರ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಸಿ ಪಿ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಅಫಜಲಪೂರಘತ್ತರಗಾ ರೋಡಿಗೆ ಇರುವ ಬನ್ನೇಟ್ಟಿ ಕ್ರಾಸ ಹತ್ತಿರ ಹೋಗುತ್ತಿದ್ದಂತೆ ಶಿವಪೂರ- ಬನ್ನೇಟ್ಟಿ ಕಡೆಯಿಂದ ಎದುರುಗಡೆ ಎರಡು ಟ್ಯಾಕ್ಟರಗಳು ಬರುತ್ತಿದ್ದು, ಸದರಿ ಟ್ಯಾಕ್ಟರಗಳನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ಟ್ಯಾಕ್ಟರ ಚಾಲಕರು, ಟ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋಗಿ ತಪ್ಪಿಸಿಕೊಂಡರು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಎರಡು ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು. ಟ್ಯಾಕ್ಟರಗಳ ನಂಬರ ಪರಿಶೀಲಿಸಿ ನೋಡಲಾಗಿ 1) ಅರ್ಜುನ ಮಹೇಂದ್ರಾ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಹಾಕಿರುವುದಿಲ್ಲ.  ಕೆಂಪು ಬಣ್ಣದ ಇಂಜೆನ್ ಇದ್ದು ಅದರ ಇಂಜೆನ್ ನಂಬರ NNHY06321 ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿ ಹಳದಿ ಬಣ್ಣದ್ದು ಇದ್ದು ಟ್ರೈಲಿಗೂ ಸಹ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರ ಟ್ರೈಲಿಯಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) ಅರ್ಜುನ ಮಹೇಂದ್ರಾ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಹಾಕಿರುವುದಿಲ್ಲ. ಕೆಂಪು ಬಣ್ಣದ ಇಂಜೆನ್ ಇದ್ದು ಅದರ ಇಂಜೆನ್ ನಂಬರ NHJ2TAE0972 ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿ ಹಳದಿ ಬಣ್ಣದ್ದು ಇದ್ದು ಟ್ರೈಲಿಗೂ ಸಹ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರ ಟ್ರೈಲಿಯಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಜಪ್ತಿ ಮಾಡಿಕೊಂಡು  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸಾವಿತ್ರಿ ಗಂಡ ರಮೆಶ ಕಂಬಾರ ಸಾ||ಭುಯ್ಯಾರ ತಾ||ಇಂಡಿ ಜಿ||ವಿಜಯಪೂರ ರವರು ಗಂಡನಾದ ರಮೇಶ ತಂದೆ ಕಾಳಪ್ಪ ಕಂಬಾರ ನಮ್ಮ  ಎರಡು ಮಕ್ಕಳೊಂದಿಗೆ ಈಗ 8 ದಿವಸದ ಹಿಂದೆ ಅಫಜಲಪೂರ ಪಟ್ಟಣದ ಹತ್ತಿರ ಇರುವ ಶಿರವಾಳ ಗ್ರಾಮದ ಶಂಕರ ತಂದೆ ಸಿದ್ದಪ್ಪ ಕುಂಬಾರ ರವರ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡಲು ಬಂದು ಅಲ್ಲೆ ವಾಸವಾಗಿರುತ್ತೇವೆ ನಮ್ಮಂತೆ ಇನ್ನೂ 15 ಜನರು ಇಟ್ಟಿಗೆ ಮಾಡುವ ಕೆಲಸಕ್ಕೆ ಅಲ್ಲೆ ವಾಸವಾಗಿರುತ್ತಾರೆ. ನನ್ನ ಗಂಡನಿಗೆ ಈಗ 6 ತಿಂಗಳಿಂದ ಹೊಟ್ಟೆ ನೋವು ಇದೆ ಆಸ್ಪತ್ರೆಗೆ ತೊರಿಸಿದರು ಕಡಿಮೆಯಾಗಿರುವುದಿಲ್ಲ ಈಗ 2 ದಿನದಿಂದ ನನ್ನ ಗಂಡ ಹೊಟ್ಟೆ ನೋವಿನಿಂದ ತುಂಬಾ ತೊಂದರೆಯಾಗುತ್ತಿದೆ ಅಂತ ನನಗೆ ಹೇಳುತಿದ್ದರು ನಾನು ಕಡಿಮೆಯಾಗುತ್ತೆ ಅಂತ ಸಮಾದಾನದ ಮಾತು ಹೇಳಿದ್ದು ಇರುತ್ತದೆ.ದಿನಾಂಕ 18-11-2018 ರಂದು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ನನ್ನ ಗಂಡ ನನಗೆ ಹೊಟ್ಟೆ ತುಂಬಾ ನೋವು ಮಾಡುತಿದ್ದೆ ನನಗೆ ಜೀವನ ಸಾಕಾಗಿದೆ ಅಂತ ಹೇಳಿ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ನಾವು ವಾಸವಾಗಿದ್ದ ಸ್ಥಳದಿಂದ ತಂಬಿಗೆ ತಗೆದುಕೊಂಡು ಹೋಗಿರುತ್ತಾರೆ.ಬೆಳಿಗ್ಗೆ 8.00 ಗಂಟೆಯಾದರು ನನ್ನ ಗಂಡ ಮರಳಿ ಬಾರದರಿಂದ ನಾನು ಗಾಬರಿಯಾಗಿ ನಾನು ಹಾಗು ನಮ್ಮ ಇಟ್ಟಿಗೆ ಬಟ್ಟಿಯ ಮಾಲಿಕನಾದ ಶಂಕರ ಕಂಬಾರ, ನಮ್ಮಂತೆ ಕೆಲಸಗಾರರಾದ ಸಂತೋಷ ಜಮಾದಾರ, ಭೀಮಣ್ಣ ಹೊಸ್ಮನಿ,ಶೇಖಪ್ಪ ಕೋಗನೂರ ಎಲ್ಲರು ಕೂಡಿ ಹುಡುಕಾಡುತ್ತಾ ಹೋದಾಗ ಅಲ್ಲೆ ಸ್ವಲ್ಪ ದೂರದಲ್ಲಿರುವ ಬೆವಿನ ಮರಕ್ಕೆ ನನ್ನ ಗಂಡ ಹಗ್ಗದಿಂದ ನೇಣು ಹಾಕಿಕೊಂಡು ಜೋತಾಡುತಿದ್ದನು ನಾವು ನನ್ನ ಗಂಡನನ್ನು ಕೆಳಗೆ ಹಾಕಿ ನೋಡಲಾಗಿ ನನ್ನ ಗಂಡನು ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಧರ್ಮಣ್ಣ ತಂದೆ ಶರಣಪ್ಪ ಕೊಗಟನೂರ ಸಾ||ಗೌರ(ಬಿ) ತಾ||ಅಫಜಲಪೂರ ರವರ ತಂದೆ ತಾಯಿ ನಮ್ಮ ತಮ್ಮನಾದ ಗೌಡಪ್ಪನೊಂದಿಗೆ ವಾಸವಾಗಿರುತ್ತಾರೆ ನಮ್ಮ ತಂದೆ ತಾಯಿಗೆ ನಾನು ಹೊಲ ಮೆನೆಯಲ್ಲಿ ಸರಿಯಾಗಿ ಪಾಲ ಮಾಡಿ ಅಂತ ಕೇಳಿದ್ದಕ್ಕೆ ನಮ್ಮ ತಮ್ಮ ನನ್ನೊಂದಿಗೆ ಆಗಾಗ ಬಾಯಿಮಾತಿನಿಂದ ಜಗಳ ಮಾಡುತ್ತಾ ಬಂದಿರುತ್ತಾನೆ ನಮ್ಮ ಹೊಲ ಗೌರ(ಬಿ) ಸಿಮಾಂತರದಲಿದ್ದು ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಹೊಲದಲ್ಲಿಯೇ ವಾಸವಾಗಿರುತ್ತೇನೆ ನನ್ನಂತೆ ನಮ್ಮ ತಮ್ಮನಾದ ಗೌಡಪ್ಪನು ನಮ್ಮ ತಂದೆ ತಾಯಿ ಹಾಗು ತನ್ನ ಹೆಂಡತಿ ಮಕ್ಕಳೊಂದಿಗೆ ಹೊಲದಲ್ಲಿಯೆ ಮೇಟಗಿಹಾಕಿಕೊಂಡು  ವಾಸವಾಗಿರುತ್ತಾನೆ. ದಿನಾಂಕ 12/11/2018 ರಂದು ರಾತ್ರಿ 9.00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಹಾಗು ನನ್ನ ಮಕ್ಕಳು ನಮ್ಮ ಹೊಲದಲ್ಲಿನ ಮೆಟಗಿಯಲಿದ್ದಾಗ  ನಮ್ಮ ತಮ್ಮ ನಮ್ಮ ಗ್ರಾಮದ ನಮ್ಮ ಸಂಬಂದಿಕರಾದ ಕೃಷ್ಣಪ್ಪ ತಂದೆ ಷಣ್ಮುಕಪ್ಪ ನಿಂಬರ್ಗಿ, ನಾಗಪ್ಪ ತಂದೆ ಯಲ್ಲಪ್ಪ ಪ್ಯಾಟಿ ಮೂರು ಜನರು ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನಮ್ಮ ತಮ್ಮ ಧರಮ್ಯಾ ಬಾರೋ ನಮ್ಮ ಹೊಲದಲ್ಲಿ ನಮಗ ಹತ್ತಿ ಬಿಡಸಾಕ ಬಿಡಲ್ಲಾ ಮಗನಾ ನಿನಗ ಸರಿಯಾಗಿ ಆಸ್ತಿ ಪಾಲಾ ಮಾಡ್ಯಾದ ಅಂತ ಬೈಯುತಿದ್ದಾಗ ನಾನು ನನ್ನ ಹೆಂಡತಿ ನಮ್ಮ ಮೇಟಗಿಯಿಂದ ಹೋರಗೆ ಬಂದು ಸದರಿಯವರ ಹತ್ತಿರ ಹೋಗಿ ಯಾಕೆ ಅಂತ ಕೇಳುತಿದ್ದಾಗ ಕೃಷ್ಣಪ್ಪ ಈತನು ಬೋಸಡಿಕೆ ನಾವು ಪಂಚಾಯತ ಮಾಡಿ ನಿನ್ನ ಆಸ್ತಿಯಲ್ಲಿ ಸರಿ ಪಾಲಾ ಮಾಡಿವಿ ನಿಮ್ಮ ತಮ್ಮನ ಜೋತೆ ಮತ್ತ ಜಗಳ ಮಾಡ್ತಿ ಅಂತ ಅಂದು ತನ್ನ ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದನು ಆಗ ಗೌಡಪ್ಪನು ರಂಡಿ ಮಗನಿಗಿ ಬಾಯಿ ಮಾತಿನಿಂದ ಹೇಳಿದರು ಕೇಳಲ್ಲಾ ಅಂತ ಹೇಳಿ ಅಲ್ಲೆ ಇದ್ದ ಬಡಿಗೆಯನ್ನು ತಗೆದುಕೊಂಡು ಬಡಿಗೆಯಿಂದ ನನ್ನ ಎರಡು ತೊಡೆಗೆ, ಎರಡು ಕೈಗೆ, ಬೆನ್ನಿಗೆ ಮನ ಬಂದಂತೆ ಹೊಡೆಯುತಿದ್ದಾಗ ಕೃಷ್ಣಪ್ಪ ಹಾಗು ನಾಗಪ್ಪ ಇಬ್ಬರು ಹೊಡಿ ರಂಡಿ ಮಗನಿಗೆ ಹೇಳಿ ಮಾತ ಹೇಳಲ್ಲಾ ಅಂತ ಅನ್ನುತಿದ್ದರು ನನ್ನ ಹೆಂಡತಿ ಚಿರಾಡುತ್ತಾ ನಮ್ಮ ತಮ್ಮನಿಗೆ ಹಿಡಿದು ನನಗೆ ಹಡೆಯುವದನ್ನು ಬಿಡಿಸಿರುತ್ತಾಳೆ ನಂತರ ಮೂರು ಜನರು ಅಲ್ಲಿಂದ ಹೋಗುವಾಗ ಧರಮ್ಯಾ ಇನ್ನೊಮ್ಮೆ ಆಸ್ತಿಯಲ್ಲಿ ಪಾಲ ಅಂದಿ ನಿನ್ನ ಜಿವಾನೇ ಹೊಡಿತಿವಿ ಅಂತ ಅಂದು ನಮ್ಮ ತಮ್ಮ ಬಡಿಗೆಯನ್ನು ಅಲ್ಲೆ ಬಿಸಾಡಿ ಅಲ್ಲಿಂದ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.