POLICE BHAVAN KALABURAGI

POLICE BHAVAN KALABURAGI

16 November 2011


ಕುಖ್ಯಾತ ಮನೆ ಕಳವು ಮಾಡುವ ಮೂರು ಜನರ ಬಂದನ , ಸುಮಾರು 3.5 ಲಕ್ಷ ರೂ ಬೆಲೆಭಾಳುವ ಬಂಗಾರ, ಬೆಳ್ಳಿ ಆಭರಣಗಳು ಮತ್ತು ಮೋಟಾರ ಸೈಕಲ್ ವಶ

ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿಯ ಆರೋಪಿತರ ಪತ್ತೆ ಮಾನ್ಯ ಎಸ.ಪಿ ಸಾಹೇಬರು ಗುಲಬರ್ಗಾ ಮತ್ತು ಹೆಚ್ಚುವರಿ ಎಸ.ಪಿ ಸಾಹೇಬರು ಹಾಗು ಗ್ರಾಮಾಂತರ ಉಪ-ವಿಭಾಗದ ಡಿ.ಎಸ.ಪಿ ರವರ ಮಾರ್ಗದರ್ಶನದ ಮೇರೆಗೆ ದಿನಾಂಕ:15-11-2011 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಂ.ಬಿ.ನಗರ ವೃತ್ತ ಗುಲರ್ಗಾ ರವರ ನೇತ್ರತ್ವದಲ್ಲಿ ಪಿಐ ಗಳಾದ ಶ್ರೀ ಬಿ.ಬಿ.ಪಟೇಲ್ ಪಿಐ ಡಿಸಿಐಬಿ ಘಟಕ ಗುಲಬರ್ಗಾ, ಶ್ರೀ ಅಸ್ಲಂ ಬಾಷಾ ಪಿ.ಐ ಡಿ.ಎಸ್.ಬಿ ಘಟಕ ಗುಲಬರ್ಗಾ ಮತ್ತು ಪಿ.ಎಸ್.ಐ ರವರುಗಳಾದ ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ, ಭೋಜರಾಜ ರಾಠೋಡ ಪಿ.ಎಸ್.ಐ ಫರಹತಾಬಾದ , ಶ್ರೀ ಶಾಂತಿನಾಥ ಪಿ.ಎಸ್.ಐ ಕಮಲಾಪುರ ಮತ್ತು ಸಿಬ್ಬಂದಿಯವರಾದ ಗುರಶರಣ ಹೆಚ.ಸಿ , ಶ್ರೀ ಶಿವಪುತ್ರ ಸ್ವಾಮಿ ಹೆಚ್.ಸಿ, ಶ್ರಿ ಅಶೋಕ ಪಿಸಿ, ವೇದರತ್ನಂ ಪಿಸಿ,ಪ್ರಭಾಕರ ಪಿಸಿ, ಮಶಾಕ ಪಿಸಿ, ಅಣ್ಣಪ್ಪಾ ಪಿಸಿ, ರಮೇಶ ಪಿಸಿ, ಮತ್ತು ಅರ್ಜುನ ಎಪಿಸಿ ರವರು ಖಚಿತ ಭಾತ್ಮಿ ಮೇರೆಗೆ ಶಹಾಬಾದ ರಿಂಗ ರೊಡ ಹತ್ತಿರ ಖಚಿತ ಭಾತ್ಮಿಯಂತೆ ಕುಖ್ಯಾತ ಮನೆ ಕಳವು ಮಾಡುವ ಆರೋಪಿತರಾದ 1) ನಾಗ್ಯಾ @ ನಾಗರಾಜ ತಂದೆ ಮೊನ್ಯಾ ವಃ 24 ವರ್ಷ 2) ಚೊಕಲು ತಂದೆ ಗುಡ್ಯಾ ಪಾರದಿ ವಃ 26 ವರ್ಷ 3) ಅರ್ಜುನ ತಂದೆ ಮೊನ್ಯಾ @ ಮೊಹನ ವಃ 22 ವರ್ಷ ಸಾ.. ಎಲ್ಲರೂ ಸಾವಳಗಿ ಇವರನ್ನು ಓಡಿ ಹೋಗುತ್ತಿರುವಾಗ ಮಿಂಚಿನ ದಾಳಿ ಮಾಡಿ ಹಿಡಿದು ಸದರಿಯವರ ಹೆಚ್ಚಿನ ವಿಚಾರಣೆ ಕುರಿತು ತನಿಖೆಗೆ ಒಳ ಪಡಿಸಿದಾಗ ಸುಮಾರು 2 ತಿಂಗಳಿಂದ ಹಿಂದೆ ಗುಲಬರ್ಗಾ ನಗರದ ಮಹಾತ್ಮ ಬಸವೇಶ್ವರ ನಗರ, ಪ್ರಶಾಂತ ನಗರ, ಮತ್ತು ಅಣ್ಣೆಮ್ಮಾ ನಗರದಲ್ಲಿ ಬಿಗ ಹಾಕಿದ ಮನೆ ಬಾಗಿಲ ಕಿಲಿಗಳನ್ನು ಮುರಿದು ಒಳಗೆ ಹೋಗಿ ಅಲಮಾರಿಗಳಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೋದ ಬಗ್ಗೆ ತನಿಖೆ ಕಾಲಕ್ಕೆ ತಿಳಿಸಿದ್ದು ಸದರಿ ಆರೋಪಿತರಿಂದ ಬಂಗಾರದ ಆಭರಣಗಳು , ಬೆಳ್ಳಿ ಆಭರಣಗಳು ಮನೆ ಬಳಕೆ ವಸ್ತುಗಳು ಹಾಗೂ ಒಂದು ಮೊಟಾರ ಸೈಕಲ ವಗೈರೆ ವಸ್ತುಗಳನ್ನು ಜಪ್ತು ಮಾಡಿಕೊಂಡು ತನಿಖೆ ಮುಂದುವರೆಸಲಾಗಿದೆ ಮಾನ್ಯ ಎಸ್.ಪಿ ಸಾಹೇಬರು ಪ್ರಕರಣವನ್ನು ಭೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಅವರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

ಕಳ್ಳತನ ಪ್ರಕರಣ;

ಗ್ರಾಮೀಣ ಠಾಣೆ : ಶ್ರಿ. ಶಿವಮೂರ್ತಿ ತಂದೆ ಪೀರಪ್ಪಾ ಹಡಪದ ವಯ;45 ವರ್ಷ ಉ;ಹೈನುಗಾರಿಕೆ ಸಾ; ಶಿವಲಿಂಗೇಶ್ವರ ಕಾಲೂನಿ ರಾಣೇಸ್ಪೀರ ದಾರ್ಗ ರೋಡ ಗುಲಬರ್ಗಾ.ರವರು ನಾನು ಸುಮಾರು ಇಪ್ಪತ್ತು ವರ್ಷಗಳಿಂದ ಹೈನುಗಾರಿಕೆ ಮಾಡುತ್ತಾ ಬಂದಿದ್ದು. ನನ್ನ ಹತ್ತಿರ ಒಟ್ಟು 15 ಎಮ್ಮೆಗಳು ಇರುತ್ತವೆ, ಅವುಗಳಲ್ಲಿ ಕೆಲವು ಹಾಲು ಕೋಡುತ್ತವೆ. ಹೀಗಿದ್ದು ದಿನಾಂಕ. 14-11-2011 ರಂದು ರಾತ್ರಿಗೆ ಎಲ್ಲಾ ಎಮ್ಮೆಗಳು ಮನೆ ಎದರು ಆವರಣದಲ್ಲಿ ಕಟ್ಟಿ ಹಾಕಿರುತ್ತೇನೆ. ದಿನಾಂಕ. 15-11-2011 ರಂದು ಮುಂಜಾನೆ ಎದ್ದು ನೋಡಲು 2 ಹಾಲು ಕೋಡುವ ಎಮ್ಮೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಿನ್ನೆಯಿಂದ ಇವತ್ತಿನವರೆಗೆ ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಮೇಲಿಂದ ಮೇಲಿಂದ ಠಾಣೆ ಗುನ್ನೆ ನಂ. 339/2011 ಕಲಂ. 379 ಐಪಿಸಿ ನೆದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗಾಂಜಾ ಜಪ್ತಿ ಪ್ರಕರಣ:

ಅಫಜಲಪೂರ ಪೊಲೀಸ್ ಠಾಣೆ : ಶ್ರೀ ಡಿ.ಕೆ. ತೋರವಿ ಎಸ್.ಪಿ. .ಡಿ.ಎಸ್. ಸಿ..ಡಿ ಗುಲಬರ್ಗಾ ರವರು ಮತ್ತು ಆರ್.ವಿ. ಸಾವಳಗಿ ಪಿ. ಮತ್ತು ಮಂಜುನಾಥ ಎಸ್, ಪಿಎಸ್ಐ ಅಫಜಲಪೂರ ಠಾಣೆ ರವರು ಮತ್ತು ಸಿಬ್ಬಂದ್ದಿ ಜನರಾದ ಥಾಮದೇವ ಸಿ.ಎಚ್.ಸಿ, ಸಂಜಿವ ರೆಡ್ಡಿ. ಈರಣ್ಣ. ಲಕ್ಷ್ಮಿಕಾಂತ ಸಿಪಿಸಿ. ರವರು ಪಂಚರ ಸಮಕ್ಷಮ ಮಣೂರ ಗ್ರಾಮದ ದ್ಯಾವಪ್ಪ ನಗರದಲ್ಲಿ ಅಶೋಕ ತಂದೆ ಹಣಮಂತ ದೊಂಬರ ಈತನು ತನ್ನ ಹೊಲದಲ್ಲಿ ಗಾಂಜಾ ಬೆಳೆದು ಒಣಗಿದ ತಪ್ಪಲು ತನ್ನ ಹೋಲದಲ್ಲಿಯೆ ಓಣಗಲು ಹಾಕಿದ ಬಗ್ಗೆ ಭಾತ್ಮಿ ಬಂದಿದ್ದು ನಾವು ಸ್ತಳಕ್ಕೆ ಹೋಗಿ ಕಬ್ಬಿನ ಹೊಲದಲ್ಲಿ ಹುಡುಕಾಡಲಾಗಿ ಕಬ್ಬಿನ ಬೆಳೆಯಲ್ಲಿ ನೆಲದ ಮೇಲೆ ಗಾಂಜಾದ ತಪ್ಪಲು ಓಣಗಲು ಹಾಕಿದ್ದು ನೋಡಿ ಖಚಿತ ಪಡಿಸಿಕೊಂಡು ಮೆಲ್ಕಂಡ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದ್ದಿ ಜನರು ದಾಳಿ ಮಾಡಿ ಹೋಲದ ಮಾಲಿಕನನ್ನು ವಿಚಾರಿಸಲಾಗಿ ಅಶೋಕ ತಂದೆ ಹಣಮಂತ ದೊಂಬರ ಸಾ|| ದ್ಯಾವಪ್ಪ ನಗರ ಮಣ್ಣೂರ ಅಂತಾ ಹೇಳಿದ್ದು ಮತ್ತು ಓಣಗಲು ಹಾಕಿದ ಗಾಂಜಾ 250 ಗ್ರಾಮ || ಕಿ|| 2.500-00 ನೇದನ್ನು ಜಪ್ತ ಮಾಡಿಕೊಂಡಿದ್ದರ ಜ್ಞಾಪನ ಪತ್ರದ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ,191/2011 ಕಲಂ.20 (ಬಿ) ಎನ್.ಡಿ.ಪಿ ಎಸ್ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

Gulbarga District Reported Crimes

ಹಲ್ಲೆ ಪ್ರಕರಣ:

ಫರಹತಾಬಾದ ಠಾಣೆ : ಶ್ರೀ ಲಕ್ಷ್ಮಣ ತಂದೆ ಮರೇಪ್ಪಾ ನಡುಗೇರಿ ವಯ: 45 ವರ್ಷ ಸಾ: ಇಟಗಾ(ಕೆ) ರವರು ನಾನು ಮತ್ತು ನನ್ನ ಹೆಂಡತಿ ಜಗದೇವಿ ಇಬ್ಬರು ಊಟ ಮಾಡಿ ಮಲಗಿ ಕೊಳ್ಳುತ್ತಿದ್ದಾಗ ನನ್ನ ಹಿರಿಯ ಅಣ್ಣನಾದ ಶಾಂತಪ್ಪಾ ನಡುಗೇರಿ ಈತನು ನಮ್ಮ ಮನೆಗೆ ಬಂದಿದ್ದರು. ನಾವೆಲ್ಲರೂ ಮನೆಯಲ್ಲಿ ಮಾತಾನಾಡುತ್ತಾ ಕುಳಿತ್ತಿದ್ದಾಗ ರಾತ್ರಿ 9-30 ಗಂಟೆಯ ಸುಮಾರಿಗೆ ನನ್ನ ಅಣ್ಣನ ಮಕ್ಕಳಾದ ಪ್ರಕಾಶ, ಈಜ್ಞನಪ್ಪಾ, ಅನ್ನಪೂರ್ಣ ನಡುಗೇರಿ, ಸುಭದ್ರವ್ವಾ ಇವರೆಲ್ಲರೂ ನನ್ನ ಮನೆಯ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಆಗ ನಾನು ಹೊರಗೆ ಹೋಗಿ ನಾವು ನಮ್ಮ ಸಂಸಾರದ ವಿಷಯ ಮಾತನಾಡುತ್ತಿದ್ದೇವೆ ಯಾಕೆ ಚಿರಾಡುತ್ತಿದ್ದಿರಿ ಅಂತಾ ಕೇಳಿದಕ್ಕೆ ಪ್ರಕಾಶ ಈತನು ಅಲ್ಲೆ ಬಿದಿದ್ದ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಈಜ್ಞನಪ್ಪಾ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬಲಗೈ ಮೊಳಕೈ ಹತ್ತಿರ ಹೊಡೆದು ಭಾರಿ ರಕ್ತಗಾಯ ಮಾಡಿದನು. ಅನ್ನಪೂರ್ಣ ಹಾಗೂ ಸುಭದ್ರವ್ವಾ ಇವರು ಕೂಡಿ ಇವರದು ಇದೆ ಚಾಡಿ ಮಾತು ಹೇಳುವದೇ ಕೆಲಸ ಅಂತಾ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 207/2011 ಕಲಂ 323, 324, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಾಕೇಶ ತಂದೆ ಸಿದ್ದಪ್ಪ ಉದನೂರ ಸಾ; ಸಮುದಾಯ ಭವನ ಹತ್ತಿರ ಅಶೋಕ ನಗರ ಗುಲಬರ್ಗಾ ರವರು ನಾನು ದಿನಾಂಕ 14-11-2011 ರಂದು 23:30 ಗಂಟೆಗೆ ಹೈಕೋರ್ಟ ದಿಂದ ರಾಮಮಂದಿರ ರಿಂಗ ರೋಡದ ಸಾಯಿ ಮಂದಿರ ಸಮೀಪ ರೋಡಿನ ಲಾರಿ ನಂ::ಕೆಎ 32- 6694 ನೇದ್ದರ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿರುವವನಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 144/2011 ಕಲಂ 279, 337 ಐಪಿಸಿ ಸಂಗಡ 187 .ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಕಬೀರದಾಸ ತಂದೆ ಸಿದ್ರಾಮಪ್ಪ ಪೊತೆ ರವರು ;ತಾರಫೈಲ ಗುಲಬರ್ಗಾ ರವರು ನಾನು ದಿನಾಂಕ 13-11-2011 ರಂದು 05:00 ಗಂಟೆಗೆ ನಗರದ ರೈಲ್ವೆ ಸ್ಟೇಷನ ಎದುರು ರೋಡಿನ ಮೇಲೆ ಕಾರ ಚಾಲಕ ತನ್ನ ಕಾರನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಾದ ಕಮಲದಾಸ ಈತನ ಬಲಗಾಲ ಮೇಲಿಂದ ಕಾರ ಹಾಯಿಸಿ ಅಪಘಾತ ಮಾಡಿ ಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 145/2011 ಕಲಂ 279, 337 ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತಣಕೆ ಕೈಕೊಳ್ಳಲಾಗಿದೆ.