POLICE BHAVAN KALABURAGI

POLICE BHAVAN KALABURAGI

31 January 2014

Gulbarga District Reported Crimes

ಅಪಹರಣ ಪ್ರಕರಣ :
ಮಳಖೇಡ ಠಾಣೆ : ಶ್ರೀಮತಿ ಮಹಾದೇವಿ  ಗಂಡ ಜಗನ್ನಾಥ ಕಂಬಾರ ಸಾ|| ಶಾಪೂರ ದರ್ಗಾ ಹತ್ತಿರ ಮಳಖೇಡ ತಾ|| ಸೇಡಂ ರವರ ಮಗಳಾದ ಕಾವೇರಿ ಇವಳಿಗೆ ಈಗಾಗಲೇ ಈ ಹಿಂದೆ ದಿನಂಕ 3-12-2013 ರಂದು ನಮ್ಮೂರ ಮಹ್ಮದಖಲೀಲ ತಂದೆ ಮಹ್ಮದ ಗೌಸ ಕಪಾಟೇ ಈತನು ಅಪಹ್ರಿಸಿಕೊಂಡು ಹೋಗಿದ್ದು ನಂತ್ರ ಅವನಿಗೆ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು ಈಗ ಅವನು ಸದ್ಯ ಜೇಲಿನಲ್ಲಿ ಇರುತ್ತಾನೆ. ನಂತರ ನನ್ನ ಮಗಳು ಕಾವೇರಿ ಇವಳು ಬೇರೆ ಯಾರದೋ ಸಂಗಡ ಸಂಬಂಧ ಬೆಳೆಸಿದ್ದುಯಾರೋ ನನ್ನ ಮಗಳಾದ ಕಾವೇರಿ ಇವಳಿಗೆ ದಿನಾಂಕ 28-1-2014 ರಂದು ಮಧ್ಯಾನ 1-00 ಗಂಟೆಗೆ ತಾನು ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೋದವಳು ಮರಳಿ ಬಂದಿಲ್ಲ ನನ್ನ ಮಗಳಿಗೆ ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಖಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಬಸವರಾಜ ತಂದೆ ಶಿವಶರಣಪ್ಪಾ ಪಾಟಿಲ್ ಸಾಃ 3 ನೇ ಹಂತ ಆದರ್ಶ ನಗರ ಗುಲಬರ್ಗಾ ರವರ ತಂಗಿಯಾದ ಶ್ರೀಮತಿ ಗಂಗಾ @ ಗಂಗಮ್ಮ ಗಂಡ ರವಿಕುಮಾರ್ ಪಾಟೀಲ್, ವಯಃ 28 ವರ್ಷ ಇವಳು ದಿನಾಂಕ 29/01/2014 ರಂದು ಬೆಳಿಗ್ಗೆ 5:30 ಎ.ಎಂ ದಿಂದ 6.00 ಎ.ಎಂ. ರ ಅವಧಿಯಲ್ಲಿ ತನ್ನ ಮನೆಯಿಂದ ತಮ್ಮ ಮಗುವನ್ನು ಮನೆಯಲ್ಲಿಯೆ ಬಿಟ್ಟು, ಮನೆಯಿಂದ ಹೋದವಳು ಇಲ್ಲಿಯವರೆಗೆ ಮನೆಗೆ ಮರಳಿ ಬಂದಿರುವುದಿಲ್ಲಾ. ನನ್ನ ತಂಗಿ ಕಾಣೆಯಾದ ಬಗ್ಗೆ ನಾನು ಮತ್ತು ನಮ್ಮ ಸಂಭಂದಿಕರು ಕೂಡಿಕೊಂಡು ಗುಲಬರ್ಗಾ ನಗರದಲ್ಲಿ ಎಲ್ಲಾ ಕಡೆಗೂ ಹುಡುಕಾಡಿದರು ಸಹ ಪತ್ತೆಯಾಗಿರುವುದಿಲ್ಲ ಮತ್ತು ಅವಳ ಗಂಡನಾದ ರವಿಕುಮಾರ್ ಪಾಟೀಲ್ ಗವನಳ್ಳಿ ಸಾ/ಹೈದ್ರಾಬಾದ್ ಇವರಿಗೂ ಸಹ ಫೋನ್ ಮುಖಾಂತರ ವಿಷಯ ತಿಳಿಸಿ ಕೇಳಿದಾಗ ಬಂದಿರುವುದಿಲ್ಲ ಅಂತಾ ತಿಳಿಸಿದ್ದು ಇರುತ್ತದೆ ಹಾಗೂ ದೂರದ ಸಂಭಂದಿಕರಿಗೆ ಫೋನ್ ಮೂಖಾಂತರ ವಿಚಾರಣೆ ಮಾಡಿದರು ಕೂಡ ನನ್ನ ತಂಗಿ ಇರುವಿಕೆಯ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲಾ. ಕಾರಣ ತಾವುಗಳ ದಯಮಾಡಿ ಕಾಣೆಯಾದ ನನ್ನ ತಂಗಿ ಶ್ರೀಮತಿ ಗಂಗಾ @ ಗಂಗಮ್ಮ ಇವಳು ಮಾನಸಿಕ ಮಾಡಿಕೊಂಡು ಹೋಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 30-01-2014 ರಂದು ರಾತ್ರಿ ವೇಳೆಯಲ್ಲಿ ಯಾರೊ ಕಿಡಿಗೇಡಿಗಳು ಎಚ್.ಎಂ. ಸನಾ ಇಂಗ್ಲೀಷ ಮಧ್ಯಾಮ ಪ್ರೌಢ ಶಾಲೆ, ಮದಿನಾ ಕಾಲೋನಿ, ಎಮ್.ಎಸ್.ಕೆ ಗುಲಬರ್ಗಾದ ಶಾಲೆಪ್ರೋಜೆಕ್ಟರ್ ಇವರು ರೂಮಿನ ಬಾಗಿಲು ಬೀಗ ಮೂರಿದು ಒಳಗಡೆ ಹೋಗಿ ಒಳಗಡೆ ಇರುವ ಗಣಕಯಂತ್ರದ ಸಾಮಾಗ್ರಿಗಳು ಅ.ಕಿ 79,500/- ರೂ. ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಶ್ರೀಮತಿ ವೀಕರುನ್ನಿಸಾ ಬೇಗಂ ಗಂಡ ಸೈಯದ ವಹೀದುದ್ದಿನ ಎಚ್.ಎಂ. ಸನಾ ಇಂಗ್ಲೀಷ ಮಧ್ಯಾಮ ಪ್ರೌಢ ಶಾಲೆ, ಮದಿನಾ ಕಾಲೋನಿ, ಎಮ್.ಎಸ್.ಕೆ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ: 31-01-2014 ರಂದು ಬೆಳಗಿನ ಜಾವ 4-00 ಗಂಟೆಯ ಸುಮಾರಿಗೆ ನನಗೆ ಯಾರೋ ನನ್ನ ತಮ್ಮನ ಮೊಬೈಲದಿಂದ ಫೊನ ಮಾಡಿ ಜೇವರಗಿ ಶಹಾಪೂರ ರೋಡ ಮುದಬಾಳ (ಬಿ) ಸಮಿಪ ಇರುವ ಜೆ.ಬಿ.ಸಿ ಕೆನಾಲ ಹತ್ತಿರ ನಿಮ್ಮ ತಮ್ಮ ಎಕ್ಸಿಡೆಂಟ ಆಗಿ ಮೃತ ಪಟ್ಟಿರುತ್ತಾನೆ. ಅಂತಾ ತಿಳಿಸಿದ  ಕೂಡಲೇ ನಾನು ಮತ್ತು ನಮ್ಮ ಸಂಬಂಧಿಕರು ಕೂಡಿಕೊಂಡು ಅಲ್ಲಿಗೆ ಹೋಗಿ ನೋಡಲಾಗಿ ಅಲ್ಲಿ ಪಲ್ಟಿಯಾಗಿ ಬಿದ್ದ ಒಂದು ಕಾರ ನಂ 33-ಎಮ್ 2189 ನೇದ್ದು ಇತ್ತು ಸದರಿ ಕಾರಿನಲ್ಲಿ ನನ್ನ ತಮ್ಮ ಮರೆಪ್ಪ ಹಾಗೂ ಅವನ ಗೆಳಯ ಶಶೀಧರ ಇವರು ಶಹಾಪುರದಿಂದ ಜೇವರ್ಗಿ ಕಡೆಗೆ ಬರುತ್ತಿದ್ದಾಗ ಯಾವೆದೋ ಒಂದು ವಾಹನದ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ತಮ್ಮ ಕುಳಿತ ಕಾರಿಗೆ  ಡಿಕ್ಕಿ ಪಡಿಸಿದ ಪರಿಣಾಮ ಕಾರ ಪಲ್ಟಿಯಾಗಿ ರೋಡಿನ ಬಲಗಡೆ ಬಿದ್ದದರಿಂದ ನನ್ನ ತಮ್ಮನು ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾನೆ. ಶಶೀದರ ಈತನು ಭಾರಿಗಾಯಗೊಂಡಿರುತ್ತಾನೆ,  ಈ ಘಟನೆಯು ದಿನಾಂಕ: 30/01/2014 ರಂದು ರಾತ್ರಿ 11-30 ಗಂಟೆಯಿಂದ ದಿ: 31/01/2014 ರಂದು ಬೆಳಗಿನಜಾವ 1-30 ಗಂಟೆಯವ ಅವದಿಯಲ್ಲಿ ಸಂಭವಿಸಿರುತ್ತದೆ. ಅಂತಾ ಶ್ರೀ ಸಾಬಣ್ಣ ತಂದೆ ಯಂಕಪ್ಪ ಬಾವೂರ ಸಾ: ಕಿಲ್ಲನ ಕೇರ ತಾ: ಯಾದಗೀರ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಕಳವು ಪ್ರಕರಣಗಳು :
ಆಳಂದ ಠಾಣೆ : ಶ್ರೀಮತಿ ಲಕ್ಷ್ಮೀಬಾಯಿ ಗಂಡ ನಿವೃತ್ತಿ ಸಿಂಧೆ  ಸಾ : ಆಳಂಗಾ ತಾ : ಆಳಂದ ರವರು ದಿನಾಂಕ 29-01-2014 ರಂದು ಬೆಳಗಿನ ಜಾವ ಎಂದಿನಂತೆ 6 ಗಂಟೆಗೆ ಎದ್ದು ಮನೆಯ ಅಂಗಳದ ಕಸಗುಡಿಸಿ ಮಗನಾದ ದಯಾನಂದನಿಗೆ ಅಡುಗೆ ಮಾಡಿ ಕಟ್ಟಿ ಕಳುಹಿಸಿ ನಂತರ ನಾನು ನನ್ನ 1. ಬೋರಮಾಳ ಸರ ಬಂಗಾರದ 7 ಗ್ರಾಂ ಅಂ ಕಿ 3000 ರೂಪಾಯಿ ಹಾಗೂ 2. ಅಷ್ಟಪಲ್ ಮಣಿ 6 ಗ್ರಾಂ ಬಂಗಾರದು ಅಂ ಕಿ 2500 ರೂಪಾಯಿ 3. ತಾಳೀಯಲ್ಲಿನ 2 ಗುಂಡು 2 ಗ್ರಾಂ ಅಂ ಕಿ 1000 ರೂಪಾಯಿ ಹಾಗೂ ನಗದು 4. ಹಣ 18000 ಸಾವಿರ ರೂಪಾಯಿ ಹೀಗೆ ಒಟ್ಟು 24500 ರೂಪಾಯಿ ಎಣಿಸಿ ಮನೆಯ ಅಲಮಾರಿಯಲ್ಲಿಟ್ಟು ಅಲಮಾರಿಗೆ ಕೀಲಿ ಇರದ ಕಾರಣ ಮನೆಯ ಬಾಗಿಲಿನ ಕೊಂಡಿ ಹಾಕಿ ಅದಕ್ಕೆ ಕೀಲಿ ಹಾಕಿ ಮನೆಯ ಮುಖ್ಯ ದ್ವಾರಕ್ಕೆ ಕೀಲಿ ಹಾಕಿ ನನ್ನ ಸೊಸೆಯು ಬರುವ ದಾರಿ ನೋಡುತ್ತಾ ಹೊರಗಡೆ ಕುಳಿತಿದ್ದೆ ಬರದೆ ಇದ್ದಾಗ ಬೆಳಿಗ್ಗೆ ಸುಮಾರು 11 ಗಂಟೆಗೆ ನನಗೆ ಸೇರಿದ ನಮ್ಮ ಸ್ವಂತ ಹೊಲಕ್ಕೆ ಹೋಗಿದೆ, ನಂತರ ಮಧ್ಯಾಹ್ನ 3 ಗಂಟೆಗೆ ನಮ್ಮ ಸೊಸೆಯಾದ ಶಿವಾಂಗ್ನಿ ಮನೆಗೆ ಬಂದು ಬಾಗಿಲು ಬಡಿದಾಗ ಬಾಗಿಲು ತೆರೆಯದೆ ಇದ್ದಾಗ ನಮ್ಮೂರಿನ ಒಬ್ಬ ಹುಡುಗನಿಗೆ ಕರೆಯಿಸಿ ಮನೆಯ ಕಂಪೌಂಡಿನ ಒಳಗೆ ಹೋಗಿ ಒಳಗಿನ ಕೊಂಡಿ ತೆಗೆದು ನೋಡಲಾಗಿ ಮನೆಗೆ ಹಾಕಿದ ಮತ್ತೊಂದು ಮನೆಯ ಬಾಗಿಲು ಒಂದು ತೆರೆದಿದ್ದು, ಇನ್ನೊಂದು ಬಾಗಿಲು ಕೊಂಡಿ ಹಾಗೂ ಕೀಲಿ ಹಾಗೆ ಇದ್ದುದನ್ನು ನೋಡಿ ಗಾಬರಿಯಾಗಿ ನನ್ನ ಸೊಸೆಯು ಮೋಬಾಯಿಲನಿಂದ ಕರೆ ಮಾಡಿದ ಮೇರೆಗೆ ಬಂದು ನಾವೆಲ್ಲರೂ ಒಳಗಡೆ ಹೋಗಿ ನೋಡಲಾಗಿ ಸದರಿ ಅಲಮಾರಿಯು ತೆರೆದಿದ್ದು ಅಲಮಾರಿಯಲ್ಲಿದ್ದ ಬಂಗಾರದ ಆಭರಣಗಳನ್ನು ಮತ್ತು ನಗದು ಹಣ ಹೀಗೆ ಒಟ್ಟು 24500 ರೂಪಾಯಿ ದಿನಾಂಕ 29-01-2014 ರ ಬೆಳಗಿನ 11 ಎಎಮ್‌ದಿಂದ ಮಧ್ಯಾಹ್ನ 3 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಬ್ರಹ್ಮಪೂರ ಠಾಣೆ : ಶ್ರೀ.ಶಂಕರ ತಂದೆ ಜಟ್ಟೆಪ್ಪ ಸಂಕಾ  ಗುಲಬರ್ಗಾ ರವರು ದಿನಾಂಕ: 30/01/2014 ರಂದು 1230 ಗಂಟೆಯಿಂದ 1420 ಗಂಟೆಯ ನಡುವಿನ ವೇಳೆಯಲ್ಲಿ ಯಾರೋ ಕಳ್ಳರು ಜಿಲ್ಲಾ ಸರಕಾರಿ ಆಸ್ಪತ್ರೆಯ ಹತ್ತಿರ ಇರುವ ನರ್ಸ ಕ್ವಾಟರ್ಸ್ ಈ-ಬ್ಲಾಕ ನಂ:1 ಗುಲಬರ್ಗಾ ನೇದ್ದರ ಬಾಗಿಲ ಕೀಲಿ ತೆರೆದು  ಹಾಗೂ ಒಳಗಡೆ ಅಲಮಾರಿ ಕೀಲಿಗಳನ್ನು ಸಹ ತೆರೆದು  ಒಳಗಿನಿಂದ 1. 2 ತೋಲಿ ಬಂಗಾರದ ಲಾಕೇಟ  2. ನಗದು ಹಣ 10,000/- ಹೀಗೆ ಒಟ್ಟು 70,000/- ಬೆಲೆಬಾಳುವ ಮಾಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ವಿದ್ಯಾಶ್ರೀ ಗಂಡ ರಾಹುಲ ದೊಡ್ಡಮನಿ ಸಾ;ಕಾಂತಾ ಕಾಲನಿ ಗುಲಬರ್ಗಾ ಇವರನ್ನು ದಿನಾಂಕ;06.09.2013 ರಂದು (ನಾವು ಪ್ರೀತಿಸಿ) ಹಿರಿಯರ ಅನುಮತಿ ಪಡೆದು ಸಂಪ್ರದಾಯದಂತೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಮದುವೆಯಲ್ಲಿ ವರದಕ್ಷಿಣೆಯಾಗಿ 1.50.000/- ರೂಪಾಯಿ   3 ವರೆ ತೊಲೆ ಬಂಗಾರ ಕೊಡುವಂತೆ ಮಾತನಾಡಿದ್ದು ಅದರ ಪ್ರಕಾರ ಮದುವೆಯಲ್ಲಿ 51.000/-ರೂ  3 ವರೆ ತೊಲೆ ಬಂಗಾರ ಮತ್ತು ಸುಮಾರು 1 ಲಕ್ಷ ರೂಪಾಯಿ ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ನನ್ನ ಗಂಡ ರಾಹುಲ ಅತ್ತೆ ಶಾಂತಾಬಾಯಿ ಮಾವ ಹಸನಪ್ಪ ಮತ್ತು ಮಾವನ ತಮ್ಮನಾದ ಸೂರ್ಯಕಾಂತ ಇವರು ನನಗೆ. ಉಳಿದ ಇನ್ನು 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಮನೆಯಿಂದ ಹೊರಗೆ ಬರದಂತೆ ಹೊಡೆಯುವುದು ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಮಾಡುತ್ತಿದ್ದರು. ನೀನು ಇನ್ನು 1 ಲಕ್ಷ ರೂಪಾಯಿ ಹಣ ತವರು ಮನೆಯಿಂದ ತರದೆ ಇದ್ದರೆ ನಿನ್ನ ವಿದ್ಯಾಭ್ಯಾಸಕ್ಕೆ ಸಂಬಂದಪಟ್ಟ ದಾಖಲಾತಿಗಳು ಸುಟ್ಟು ಹಾಕುತ್ತೇವೆ ಅಂತಾ ಹೆದರುಸುತ್ತಿದ್ದರು. ದಿನಾಂಕ 17.12.2013 ರಂದು 11 ಗಂಟೆಗೆ ಮನೆಯಲ್ಲಿ ನನ್ನ ಗಂಡ ಅತ್ತೆ ಮಾವ ಮತ್ತು ಮಾವನ ತಮ್ಮ ಎಲ್ಲರೂ ಕೂಡಿ ಇವರ್ಯಾರು ನನ್ನ ಸಾವಿಗೆ ಕಾರಣ ಇಲ್ಲವೆಂದು ಬರೆದುಕೊಡು ಎಂದು ಹೊಡೆಬಡೆ ಮಾಡಿ 3.4 ದಿವಸ ನನಗೆ ಊಟ ಕೊಡದಂತೆ ಮನೆಯಲ್ಲಿಯೇ ಇಟ್ಟು ಕೈಮೇಲೆ ಕಡಚಿಯಿಂದ ನನ್ನ ಅತ್ತೆ ಬರೆ  ಹಾಕಿರುತ್ತಾಳೆ. ಇವಳು ಸತ್ತರೆ ನಮಗೆ ಇನ್ನು ಹೆಚ್ಚಿನ ವರದಕ್ಷಿಣೆ ಕೊಟ್ಟು ಮದುವೆ ಮಾಡುವವರಿದ್ದಾರೆ ಎಂದು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು. ಮದುವೆಯಾದಾಗಿನಿಂದಲೂ ತವರು ಮನೆಯಿಂದ 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಯ ನಿರ್ದೇಶಿತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ: 30-01-2014 ರಂದು ಬೆಳಗ್ಗೆ 8-30 ಗಂಟೆಗೆ ಫರಹತಾಬಾದ ಪೊಲೀಸ್ ಠಾಣೆಯ ಕೊರ್ಟ ನಿರ್ವಹಿಸುತ್ತಿರುವ ಶ್ರೀ ಗಿರಿಮಲ್ಲಪ್ಪಾ ಸಿಪಿಸಿ 1254 ರವರು ಮಾನ್ಯ 2 ನೇ ಹೆಚ್ಚುವರಿ ಜಿವಿಲ್ ಜಡ್ಜ & ಜೆ.ಎಮ್.ಎಫ್.ಸಿ ನ್ಯಾಯಾಲಯ ಗುಲಬರ್ಗಾ ರವರ ಪತ್ರ ನಂ: 513/13 ದಿನಾಂಕ: 18/1/2014 ನೇದ್ದರ ಖಾಸಗಿ ದೂರನ್ನು ಠಾಣೆಗೆ ತಂದು ಹಾಜರ ಪಡಿಸಿದ್ದುಸದರಿ ಪತ್ರವನ್ನು ಪರೀಶಿಲಿಸಲಾಗಿ ಅರ್ಜಿದಾರರಾದ ಶಿವಾನಂದ ತಂದೆ ರೇವಣಸಿದ್ದಪ್ಪಾ ಹಾಗರಗಿ ವಯ: 45 ವರ್ಷ ಸಾ: ಮೇಳಕುಂದಾ(ಕೆ) ತಾ:ಗುಲಬರ್ಗಾ ಹಾ:ವ: ಜಯನಗರ ಸೇಡಂ ರೋಡ ಗುಲಬರ್ಗಾ ಇವರು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ಅರ್ಜಿಯ ಸಾರಾಂಶವೆನೆಂದರೆಮೇಳಕುಂದಾ(ಕೆ) ಗ್ರಾಮದಲ್ಲಿ ತನ್ನ ಹೆಸರಿನಲ್ಲಿ ಇರುವ ಹೊಲ ಸರ್ವೆ ನಂ: 1 ಎಕರೆ 5 ಗುಂಟೆ ಮತ್ತು 1 ಎಕರೆ 35 ಗುಂಟೆ ಜಮೀನಿನಲ್ಲಿ 9 ಗುಂಟೆಯಲ್ಲಿ ಬಾವಿ ಇದ್ದು ಸದರಿ ಬಾವಿ ಸಮಪಾಲನಲ್ಲಿ ಇರುತ್ತದೆ ಅಂತಾ ಮಾನ್ಯ ಸಹಾಯಕ ಆಯುಕ್ತರು ಗುಲಬರ್ಗಾ ರವರು ದಿನಾಂಕ: 8/10/2013ರಂದು ಆದೇಶ ಮಾಡಿದ್ದು ಇರುತ್ತದೆ. ಅದರಂತೆ ಸಮಪಾಲಿನಲ್ಲಿ ಇದ್ದ ಬಾವಿ ಕೂಡಿಸಿದ ವಿದ್ಯುತ್ ಮೊಟಾರಕೇಬಲ್ ವಾಯರ್,ಪೈಪಗಳು ಮತ್ತು ಸ್ಟಾಟರ ಗಳನ್ನು ದಿನಾಂಕ: 6/12/2013 ರಂದು 4-00 ಪಿಎಮ್‌ ಸುಮಾರಿಗೆ ಅರ್ಜಿಯಲ್ಲಿ ನಮೂದಿಸಿ ಆರೋಪಿತರು ಹಾಳು ಮಾಡಿರುತ್ತಾರೆ. ಅದರ ಅ.ಕಿ. 75,000=00 ರೂ. ಗಳು ಆಗುತ್ತದೆ ಇದರಿಂದ ನನ್ನ ಹೊಲದ ವ್ಯವಸಾಯದ ಬೆಳೆ ಹಾಳು ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ದೇವಾನಂದ ತಂದೆ ಅರ್ಜುನ ರುಕ್ಕನೂರ ಸಾ: ದುತ್ತರಗಾಂವ ರವರು ತಮ್ಮ ಹೊಲದಲ್ಲಿನ ಜೋಳದ ತೆನೆ ಕಿತ್ತಿದ್ದರಿಂದ ಗಲಾಟೆಗಳಾಗಿ ಅದೆ ಒಂದು ವೈಷ್ಯಮ್ಯ ದಿಂದ ಮಾಹಾಂತಪ್ಪ ತಂದೆ ರಾಮಚಂದ್ರ ರುಕ್ಕನೂರ ಸಂಗಡ 3 ಜನರು ಸಾ: ಎಲ್ಲರೂ  ದುತ್ತರಗಾಂವ ತಾ: ಆಳಂದ ರವರು ಕುಡಿಕೊಂಡು ದಿನಾಂಕ 30-01-2014 ರಂದು ಬೆಳಿಗ್ಗೆ 9-30 ಗಂಟೆಗೆ ಗ್ರಾಮದ ಭೀಮಶಾ ರಾಜೋಳ ಇವರ ಹೋಟೆಲ ಮುಂದೆ ನಾನು ಹಾಗೂ ನನ್ನ ತಂದೆ ನಿಂತಾಗ ಸದರಿ ಆರೋಪಿತರೆಲ್ಲರೂ ಕೈಯಿಂದ ತಡೆದು ಅವಾಚ್ಯ ಶಬ್ದಗಲಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

30 January 2014

Gulbarga District Reported Crimes

ಮಹಿಳೆ ಕಾಣೆಯಾದ ಪ್ರಕರಣ:
ಅಶೋಕ ನಗರ ಠಾಣೆ : ದಿನಾಂಕ 29/01/2014 ರಂದು  ಶ್ರೀ ಕುಶಾಲ ತಂದೆ ಶಿವಶರಣಪ್ಪ ಠಕ್ಕಾಳ  ಸಾ: ನಿಲೂರ ತಾ: ಅಫಜಲಪೂರ ರವರ ನನ್ನ ತಾಯಿ ಸುಶೀಲಾಬಾಯಿ ರವರು ತನ್ನ ಅಣ್ಣನಾದ ಮಾಣಿಕರಾವ ತಂದೆ ಬಸವಣ್ಣಪ್ಪಾ ಶಂಕರಶೆಟ್ಟಿ  ರವರ ಆಳಂದ ಕಾಲೋನಿ ಗುಲಬರ್ಗಾ  ಮನೆಗೆ ದಿನಾಂಕ 22-01-2014 ರಂದು ಮುಂಜಾನೆ 11 ಗಂಟೆಗೆ ಹೋಗಿ ಬರುತ್ತೇನೆ ಅಂತಾ ನೀಲೂರದಿಂದ  ಬಸ್ಸಿನಲ್ಲಿ ಕುಳಿತು ಗುಲಬರ್ಗಾಕ್ಕೆ ಬಂದಿದ್ದು,  ನಂತರ 4-5 ದಿವಸ ಆದರೂ ಸಹ ಮನೆಗೆ ಬಂದಿರುವುದಿಲ್ಲ.  ನಾವು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನಮ್ಮ ಸಂಬಂಧಿಕರಿಗೆ ಪೋನ ಮಾಡಿ ಕೇಳಿದ್ದು,  ನನ್ನ ತಾಯಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ.  ನಮ್ಮೂರ ಅಪ್ಪಾಶಾ.ಎಸ. ದೊಡ್ಡಮನಿ ರವರು ದಿನಾಂಕ 22-01-2014 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಗುಲಬರ್ಗಾ ಬಸ್ಸ ಸ್ಟಾಂಡದಲ್ಲಿ ಬಸ್ಸಿನಿಂದ ಇಳಿದು ಹೋಗುತ್ತಿರುವುದನ್ನು ನೋಡಿರುವುದಾಗಿ ಹೇಳಿರುತ್ತಾರೆ.  ಕಾರಣ ನನ್ನ ತಾಯಿಯವರು ಗುಲಬರ್ಗಾ ಬಸ್ಸ ಸ್ಟಾಂಡದಿಂದ  ಕಾಣೆಯಾಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ವಾಡಿ ಠಾಣೆ : ಕುಮಾರಿ ಅಂಬಿಕಾ ತಂದೆ ಬಸವರಾಜ ವಯಾ : 19 ವರ್ಷ ಸಾ: ರಾವೂರ  ಇವಳು ಎದ್ದು ಬೈಲ್ ಕಡೆಗೆ ಹೊಗುತ್ತೇನೆ ಎಂದು ಹೋದವಳು ಮರಳಿ ಬರದೆ ಇದ್ದಾಗ ನಾವು ಮನೆಯವರು ಎದ್ದು ಆಕೆಯನ್ನು ಹುಡುಕಾಡಿದ್ದು ಅಲ್ಲದೆ ಈಗ ಸುಮಾರು ಒಂದು ವರಿ ತಿಂಗಳ ಹಿಂದೆ ನಮ್ಮ ಗ್ರಾಮದ ಬಸವರಾಜ ತಂದೆ ಮಲ್ಲಪ್ಪಾ ಈತನು ಫೋನನಲ್ಲಿ ನನ್ನ ತಂಗಿಯೊಂದಿಗೆ ಮಾತನಾಡುವುದನ್ನು ನೋಡಿದ್ದು ಆತನ ಮೇಲೆ ಸಂಶಯ ಬಂದು ಬಸವರಾಜ ಇವರ ಮನೆಗೆ ಹೋಗಿ ಆತನ ಬಗ್ಗೆ ವಿಚಾರಿಸಲಾಗಿ ಆತನು ಸಹ ಮನೆಯಲ್ಲಿ ಇರಲಿಲ್ಲ ನಮ್ಮ ತಂಗಿ  ಅಂಬಿಕಾ ಇವಳಿಗೆ ಬಸವರಾಜ ಈತನೆ ಅಪಹರಿಸಿಕೊಂಡು ಹೋಗಿದ್ದು ಇದಕ್ಕೆ ಆತನ ತಮ್ಮ ದೌಲಪ್ಪ ತಂದೆ ಮಲ್ಲಪ್ಪಾ ಹಾಗೂ ಕಂಟೆಪ್ಪಾ ಸಾ|| ರಾವೂರ ಇವರ ಪ್ರಚೋದನೆ ಇರುತ್ತದೆ. ಅಂತಾ ಕುಮಾರಿ ಜ್ಯೋತಿ ತಂದೆ ಬಸವರಾಜ ಪರೀಟ ಸಾ : ರಾವೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀ ಮಹ್ಮದ ಆರೀಫ್ ಖುರೇಷಿ ತಂದೆ ದಸ್ತಗಿರಿಸಾಬ ಸಾ : ಚವಡಾಪೂರ ತಮ್ಮ ಹಿರೋ ಕಂಪನಿಯ ಸ್ಪ್ಲೇಂಡರ ಫ್ಲಸ್ ಸೈಕಲ ಮೋಟಾರ ನಂ.KA-32 EB-9106 ಅಂತಾ ಇದ್ದು ಅದು ತನ್ನ ಹೆಸರಿನಿಂದ ಇರುತ್ತದೆ. ಅದರ ಚಸ್ಸಿ ನಂ.MBLHA10AMCHF68351ಇಂಜೀನ ನಂ, HA10EJCHF79375 ಅಂತಾ ಇರುತ್ತದೆ. ಸದರ ಮೋಟಾರ ಸೈಕಲನ್ನು ತಾನೆ ಉಪಯೋಗಿಸುತ್ತಿದ್ದು,  ದಿನಾಂಕ: 27-01-2014 ರಂದು ಸಂಜೆ 7-30 ಗಂಟೆಯ ಸುಮಾರಿಗೆ ತಾನು ತನ್ನ ಕಾಕನ ಮಗ ಸದ್ದಾಂ ಖುರೇಷಿ ಇಬ್ಬರೂ ಕೂಡಿ ಮಜ್ಜಿದ್ದಕ್ಕೆ ನಮಾಜ ಮಾಡಲು ಹೋಗಿದ್ದುಸೈಕಲ ಮೋಟಾರನ್ನು ಮಜ್ಜಿದ್ದ ಮುಂದೆ ನಿಲ್ಲಿಸಿ,  ನಮಾಜ್ ಮುಗಿಸಿಕೊಂಡು ದಿನಾಂಕ: 27-01-2014 ರಂದು ಸಂಜೆ 8-00 ಗಂಟೆಗೆ ಹೊರಗಡೆ ಬಂದು ನೋಡಲು ತಮ್ಮ ಸೈಕಲ ಮೋಟಾರ ಕಾಣಲಿಲ್ಲಾಆಗ  ಗಾಬರಿಯಾಗಿ ಊರಲ್ಲಿ ಎಲ್ಲಾ ಕಡೆ ಹುಡುಕಾಡಿದೆವು ಸಿಕ್ಕಿರುವುದಿಲ್ಲಾ  ಹೋಗಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ. ದಿನಾಂಕ: 27-01-2014 ರಂಧು ಸಂಜೆ 7-45  ಗಂಟೆಯಿಂದ ಸಂಜೆ 8-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ಮಜ್ಜಿದ್ದ ಮುಂದೆ ನಿಲ್ಲಿಸಿದ ತನ್ನ ಸಿಲ್ವರ ಕಲರ್ ಸೈಕಲ ಮೋಟಾರ ನಂ. KA-32 EB-9106 ಅ:ಕಿ: 30,000=00 ರೂ ನೇದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಬಸಯ್ಯ ತಂದೆ ವೀರಯ್ಯ ಬಳೂತಿ  ಸಾಃ ಕುಸನೂರ ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ದಿನಾಂಕ 29-01-2014 ರಂದು 03:30 ಪಿ.ಎಂ ಕ್ಕೆ ಜಯನಗರ ಕ್ರಾಸ್ ಹತ್ತಿರ ಮುಖ್ಯ ರಸ್ತೆಯ ಮೇಲೆ ನಡೆದುಕೊಂಡು ರಸ್ತೆ ದಾಟುತ್ತಿರುವಾಗ ಸೇಡಂ ರಿಂಗ್ ರೋಡ್ ಕಡೆಯಿಂದ ಕಾರ್ ನಂ. ಕೆ.ಎ 33 ಪಿ 8383 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿ ಹೊಡೆದ ಪರಿಣಾಮ ಎಡಕಿನ ಟೊಂಕಕ್ಕೆ, ಎಡಗೈ ಹಸ್ತಕ್ಕೆ, ಎಡಕಿನ ಹತ್ತಿರ, ಬಲ ಭುಜಕ್ಕೆ ಮತ್ತು ತಲೆಯ ಹಿಂಬದಿಗೆ ಭಾರಿ ಗುಪ್ತಗಾಯವಾಗಿದ್ದು ಹಾಗು ಎಡಕಿನ ಮೊಳಕಾಲಿಗೆ ಬಲಗಾಲಿನ ಪಾದದ ಹತ್ತಿರ ತರಚಿದ ಗಾಯಗಳಾಗಿದ್ದು ಇರುತ್ತವೆ. ಸದರ ಕಾರ್ ಚಾಲಕನು ತನ್ನ ಕಾರನ್ನು ನಿಲ್ಲಿಸದೇ ಹಾಗೇ ಚಲಾಯಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ.ತುಕಾರಾಮ ತಂದೆ ವೆಂಕಟಪ್ಪ ಪಿಲ್ಲಮಗೋಲೆ ಸಾ;ಕಾಂಬಳೆ ವಾಡಿ ಗ್ರಾಮ ,ಪೊಸ್ಟ : ಮಂಠಾಳ ತಾ;ಬ.ಕಲ್ಯಾಣ ಜಿ:ಬೀದರ ರವರು  ದಿನಾಂಕ: 28/01/2014 ರಂದು ಜಹಿರಾಬಾದ ಹತ್ತಿರ ಇರುವ ಕೊತ್ತೂರ ಗ್ರಾಮದಿಂದ ಬೂಸಾ ಲೋಡ ತುಂಬಿಕೊಂಡು ಆಳಂದ ತಾಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆಗೆ ಹೋಗುವ ಬಾಡಿಗೆ ಬಂದಿದ್ದರಿಂದ  ನಾನು ಮತ್ತು ನಮ್ಮ ಲಾರಿಯ ಚಾಲಕ ಮಚ್ಚೇಂದ್ರ ಕೂಡಿಕೊಂಡು ಕೊತ್ತೂರ ಗ್ರಾಮಕ್ಕೆ ಹೋಗಿ ಅಲ್ಲಿಂದ ಬೂಸಾ ಲೋಡ ಮಾಡಿಕೊಂಡು  ರಾತ್ರಿ 09-00 ಗಂಟೆ ಸುಮಾರಿಗೆ ಕೊತ್ತೂರ ಗ್ರಾಮ ಬಿಟ್ಟಿದ್ದುಮುಂದೆ ಹುಮನಾಬಾದ ಆರ್.ಟಿ,ಓ ಆಫೀಸ್ ಹತ್ತಿರ ಬಂದು ಇಬ್ಬರೂ ಊಟ ಮಾಡಿಕೊಂಡು ದಿನಾಂಕ: 29/01/2014 ರಂದು ಬೆಳಗಿನ ಜಾವ 02-30 ಗಂಟೆ ಸುಮಾರಿಗೆ ಹುಮನಾಬಾದ ಬಿಟ್ಟು ಹುಮನಾಬಾದ – ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ರಸ್ತೆಯ ಮೂಲಕ ಕಮಲಾಪೂರ ಮಾರ್ಗವಾಗಿ ಭೂಸನೂರಕ್ಕೆ ಹೊರಟಿದ್ದುನಮ್ಮ ಲಾರಿಯನ್ನು ಮಚ್ಚೇಂದ್ರ ಈತನು ಚಲಾಯಿಸುತ್ತಿದ್ದನು. ನಾನು ಆತನೊಂದಿಗೆ ಲಾರಿ ಕ್ಯಾಬೀನದಲ್ಲಿ ಕುಳಿತುಕೊಂಡಿದ್ದೇನು. ಕಮಲಾಪೂರ ಗ್ರಾಮ ದಾಟಿದ ನಂತರ ನಮ್ಮ ಲಾರಿ ಚಾಲಕ ಮಚ್ಚೇಂದ್ರ ಈತನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕಮಲಾಪೂರ ಗ್ರಾಮ ಸೀಮಾಂತರದ ಡಾ;ಡಿ.ಎಂ.ಕುಲಕರ್ಣಿ ಪೆಟ್ರೋಲ ಪಂಪ ಹತ್ತಿರ ಒಮ್ಮಿಲೇ ಕಟ್ ಹೋಡೆಯಲು ಹೋಗಿ ಲಾರಿಯನ್ನು ರಸ್ತೆಯ ಪಕ್ಕದ ಎಡಗಡೆ ತಗ್ಗಿನಲ್ಲಿ ಗಿಡಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಪಲ್ಟಿ ಮಾಡಿದನು. ಆಗ ನಾನು ಮತ್ತು ಮಚ್ಚೇಂದ್ರ ಇಬ್ಬರೂ ಲಾರಿಯಿಂದ ಹೊರಗೆ ಬಂದು ನೋಡಲಾಗಿ ನಮಗೆ ಯಾವುದೇ ಗಾಯಗಳು ಆಗಿರಲಿಲ್ಲ. ಲಾರಿಯನ್ನು ನೋಡಲಾಗಿ ಲಾರಿಯ ಕ್ಯಾಬೀನ ಮತ್ತು ಮುಂದಿನ ಶೋ ಸಂಪೂರ್ಣವಾಗಿ ಜಖಂಗೊಂಡಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 January 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 28-01-2014 ರಂದು ರಾತ್ರಿ 9:45 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ನಮ್ಮೂರಿನ ಕರೆಯಂಗಳದ ಪೆಟ್ರೊಲ್‌ ಪಂಪ ಸಮೀಪ ಬರುತ್ತಿರುವಾಗ ರೋಡಿನ ಮೇಲೆ ಒಂದು ಮೃತ ದೆಹವು ಬಿದ್ದಿದ್ದನ್ನು  ನೋಡಿ ನಾನು ಕೂಡಲೆ ವಾಹನ ನಿಲ್ಲಿಸಿ ಇಳಿದು ಅಲ್ಲಿಗೆ ಹೋಗಿ ನೋಡುತ್ತಿದ್ದಂತೆ ಸದರಿ ಸ್ಥಳಕ್ಕೆ  ಸುದ್ದಿ ಗೊತ್ತಾಗಿ ಪೊಲೀಸ್‌ನವರು ಬಂದಿರುತ್ತಾರೆ. ನಾನು ಮತ್ತು ಪೊಲೀಸ್‌ರು ಕೂಡಿಕೊಂಡು ಸದರಿ ಮೃತ ಹೊಂದಿದ್ದ ವ್ಯಕ್ತಿಯನ್ನು ಪರಿಶಿಲಿಸಿ ನೋಡಲಾಗಿ ಮೃತಪಟ್ಟ ವ್ಯಕ್ತಿಯ ಮೈಮೇಲೆ ಯಾವುದೊ ಒಂದು ಟಾಟಾ ಇಂಡಿಕಾ ಕಾರನ ಟೈಯರಯುಳ್ಳಂತ ವಾಹನವು ಮೈಮೇಲೆ ಹಾಯ್ದು ಮೃತ ಪಟ್ಟಿದ್ದು ಇರುತ್ತದೆ. ಸದರಿ ಸ್ಥಳದಲ್ಲಿ ಟಾಟಾ ಇಂಡಿಕಾದ ಟೈಯರಯುಳ್ಳಂತ ವಾಹನವು ಬ್ರೇಕ್‌ ಮಾಡಿದ ಸುಮಾರು 20 ಫಿಟ್‌ ಉದ್ದ ಗುರುತು ಬಿದ್ದಿರುತ್ತಿದೆ. ಸದರಿ ಮೃತ ಹೊಂದಿದ ವ್ಯಕ್ತಿಯ ಸುತ್ತಲು ನೋಡಲಾಗಿ ಪಕ್ಕದಲ್ಲಿ ಒಂದು ಮೋಬೈಲ್‌ ಬ್ಯಾಟರಿ ಮತ್ತು ಸಿಮ್‌ಕಾರ್ಡ ಇಲ್ಲದ ಮೋಬೈಲ್‌ ಫೊನ್‌ ಬಿದ್ದಿರುತ್ತದೆ. ಸದರಿ ವ್ಯಕ್ತಿಯ ಅಂದಾಜು ವಯಸ್ಸು 25 ರಿಂದ 30 ಇರುತ್ತದೆ. ಸದರಿ ಘಟನೆಯು ಯಾವುದೊ ಒಂದು ಟಾಟಾ ಇಂಡಿಕಾ ಕಾರನಂತ ಟೈಯರಯುಳ್ಳ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆತನ ಮೈಮೇಲೆ ಹಾಯಿಸಿದ್ದರಿಂದ ತಲೆಯ ಬಾಗ ಪುರ್ತಿಯಾಗಿ ಒಡೆದಿರುತ್ತದೆ ಮತ್ತು ಮುಖ ನುಜ್ಜು ಗುಜ್ಜಾಗಿದ್ದಲ್ಲದೆ ಕೈಕಾಲುಗಳು ಮುರಿದಿರುತ್ತವೆ. ಹಾಗೂ ಮೈಮೇಲೆ ಹಸಿರು ಬಣ್ಣದ ಬಿಳಿ ಗೆರೆಯುಳ್ಳ ಒಂದು ಅಂಗಿ, ಒಂದು ಬಿಳಿ ಬಣ್ಣದ ಬನಿಯನ್‌ ಮತ್ತು ಒಂದು ಕಪ್ಪು ಬಣ್ಣ ಪ್ಯಾಂಟ ದರಿಸಿದ್ದು ಹರಿದು ಚಿಂದಿಯಾಗಿರುತ್ತವೆ, ಹಾಗು ಒಂದು ಬಿಳಿ, ಕೆಂಪು ಮತ್ತು ಕಪ್ಪು ಬಣ್ಣದಿಂದ ಕೂಡಿದ ದಾರ ಇದ್ದಿರುತ್ತವೆ. ಮೃತ ವ್ಯಕ್ತಿಯ ಮುಖವು ನುಜ್ಜು ಗುಜ್ಜಾಗಿ ಗುರುತು ಸಿಗದ ಸ್ಥಿಯಲ್ಲಿ ಇರುತ್ತದೆ. ಅಂತಾ ಶ್ರೀ  ಶಂಕರ ತಂದೆ ನಾಗಪ್ಪಾ ಬಾಳಿ   ಸಾಫರಹತಾಬಾದ ತಾ:ಜಿ; ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಬಸಣ್ಣ ತಂದೆ ಹಳ್ಳೆಪ್ಪಾ ಸಾ:ಸಿಂಧನಮಡು ರವರು ದಿನಾಂಕ:28-01-2014 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾನು ಕೂಲಿ ಕೆಲಸ ಮಾಡಿ ಮನೆಗೆ ಬರುತ್ತಿರುವಾಗ ಹುಸೇನಪ್ಪ ತಂದೆ ರಾಮಣ್ಣ ವಡ್ಡರ ಇವರ ಮನೆಯ ಮುಂದೆ ಸಿ.ಸಿ. ರೋಡಿನ ಮೇಲೆ ಹೊರಟಾಗ ನಮ್ಮೂರಿನ ಅಬ್ದುಲ ತಂದೆ ಅಲ್ಲಾವೊದ್ದಿನ್ ಶಾಹ ಇತನು ನನಗೆ ತಡೆದು ನಿಲ್ಲಿಸಿ ಏ ವೊಡ್ಡ ಸೂಳೆಮಗನೇ ಬಸ್ಸ್ಯಾ ನಮ್ಮ ಮನೆಯ ಮುಂದೆ ದಿನಾಲು ಕುಡಿದು ಬಂದು ಬೈಯುತ್ತಿಯಾ ರಂಡಿ ಮಗನೇ ಅಂತ ಬೈದು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಬಲಗಾಲಿನ ಕಪಗಂಡಕ್ಕೆ ಬಲವಾಗಿ ಹೊಡೆದಿದ್ದರಿಂದ ಕಾಲು ಮುರಿದಿರುತ್ತದೆ. ಆಗ ನಾನು ಚೀರಾಡುತ್ತಿರುವಾಗ ಮತ್ತೆ ಎಡಗಾಲಿನ ಪಾದದ ಬೆರಳಿಗೆ ಬಲವಾಗಿ ಬಡಿಗೆಯಿಂದ ಹೊಡೆದು ಝಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ : 28-01-2014 ರಂದು ಸಾಯಂಕಾಲ  06-00 ಗಂಟೆಗೆ  ಕೋರ್ಟ ಪಿಸಿ - 518  ಮಂಜುನಾಥ  ಇವರು ಮಾನ್ಯ ನ್ಯಾಯಾಲಯದ ಆದೇಶ ಪತ್ರ ಅದಕ್ಕೆ ಫಿರ್ಯಾದಿಯ ಅರ್ಜಿ ಲಗತ್ತು ಇದ್ದು  ತಂದು ಹಾಜರಪಡಿಸಿದ್ದು  ಸಾರಾಂಶ ಏನೆಂದರೆ ಸಂದೀಪ ತಂದೆ ಚಂದ್ರಕಾಂತ ಪಾಟೀಲ  ಸಾ|| ಲಾಡಚಿಂಚೋಳಿ ಗ್ರಾಮ ತಾ|| ಆಳಂದ,  ಜಿ|| ಗುಲಬರ್ಗಾ ಇವನು 50,000/-ರೂ. ನಕಲಿ ಬ್ಯಾಂಕ ಚೆಕ್ ಕೊಟ್ಟು ಮೋಸ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :
ಮಹಿಳಾ ಠಾಣೆ : ಶ್ರೀ ರೇವಣಸಿದ್ದಪ್ಪ ತಂದೆ ಬಂಡಪ್ಪ ಸಾ : ಆಶ್ರಯ ಕಾಲೋನಿ  ಗುಲಬರ್ಗಾ ಇವರು ದಿನಾಂಕ  23.01.2014 ರಂದು ತಮ್ಮ ಮಗಳಾದ ಕುಮಾರಿ ಲಕ್ಷ್ಮೀ ಇವಳು ಎಮ್.ಪಿ.ಎಚ್.ಎಸ್ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಕಲಾ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ದಿನಾಂಕ 23.01.14 ರಂದು ಬೆಳಿಗ್ಗೆ 9-30 ಗಂಟೆಗೆ ಎಮ್.ಪಿ.ಎಚ್.ಎಸ್ ಕಾಲೇಜಿಗೆ ರಂಗೋಲಿ ಸ್ಪರ್ಧೆಯಲ್ಲಿ  ಭಾಗವಹಿಸಲು ಹೋಗಿದ್ದು, ಮರಳಿ ಮನೆಗೆ ಬಂದಿರುವುದಿಲ್ಲ. ಅದೇ ದಿನ ಸಾಯಂಕಾಲದಿಂದ ನಾನು ನನ್ನ ಮಗಳನ್ನು ಹುಡುಕಾಡುತ್ತಿದ್ದೇನೆ ನನ್ನ ಸಂಬಂಧಿಕರ ಹತ್ತಿರ ಕೂಡಾ ವಿಚಾರಣೆ ಮಾಡಿರುತ್ತೇನೆ. ಆದರೆ ಇಂದಿನವರೆಗೆ ನನ್ನ ಮಗಳ ಪತ್ತೆಯಾಗಿರುವುದಿಲ್ಲ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 28/01/2014 ರಂದು 2000 ಗಂಟೆಗೆ  ಶ್ರೀ ಆರ್. ರವೀಂದ್ರನಾಥ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಶ್ರೀ ಯು.ಶರಣಪ್ಪ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರ ಮಾರ್ಗದರ್ಶ ನದಲ್ಲಿ ಡಿ.ಸಿ.ಐ.ಬಿ ಘಟಕದ ಶ್ರೀ ದತ್ತಾತ್ರೇಯ ಎ.ಎಸ್.ಐಮತ್ತು ಡಿಸಿಐಬಿ ಸಿಬ್ಬಂದಿಯವರೊಂದಿಗೆ  ದುತ್ತರಗಾಂವ ಗ್ರಾಮದಲ್ಲಿ ಸಿದ್ದಲಿಂಗಯ್ಯ ತಂದೆ ಗುರುಮುರ್ತಯ್ಯ ವಿಶ್ವನಾಥ ಮಠ ಇತನು ಗ್ರಾಮದ ಗ್ರಾಮ ಪಂಚಾಯತ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ಜೂಜಾಟ ನಡೆಸುತ್ತಿದ್ದಾಗ ದಾಳಿ ಮಾಡಿ ಹಿಡಿದಿದ್ದು ಅವನು ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 5015/- 3 ಮಟಕಾ ಚೀಟಿಗಳುಒಂದು ಬಾಲ ಪೆನ್ನು ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ: 28-01-2014 ರಂದು ಬೆಳಗ್ಗೆ 07-00 ಗಂಟೆಯ ಸುಮಾರಿಗೆ ದೇವಿಂದ್ರ ತಂದೆ ಬಾಬುರಾಯ ಬಾಬನೂರ  ಸಾ: ರಾಮನಗರ ಸುಲ್ತಾನಪೂರ ರೋಡ ಗುಲಬರ್ಗಾ ಮತ್ತು ನನ್ನ ಚಿಕ್ಕಮನ ಗಂಡನಾದ  ಭೀಮರಾಯ ಕೂಡಿಕೊಂಡು ನಮ್ಮ ಸಂಬಂಧಿಕನಾದ ರೇವಣಸಿದ್ದಪ್ಪ ಇತನ ಮೋಟರ ಸೈಕಲ ನಂ ಕೆ.ಎ-32 ಎಲ್-7216 ನೆದ್ದನ್ನು ತಗೆದುಕೊಂಡು ಜೇವರ್ಗಿ ತಾಲೂಕಿನ ಬೇಲೂರ ಗ್ರಾಮಕ್ಕೆ ಹೋಗಿ ನಮ್ಮ ಸಂಬಂಧಿಕರಿಗೆ ಲಗ್ನ ಪತ್ರಗಳು ಹಂಚಿ ಅಲ್ಲಿಂದ ಜೇವರ್ಗಿಗೆ ಬಂದು ಅಲ್ಲಿಯೂ ಕೂಡ ಲಗ್ನ ಪತ್ರಗಳನ್ನು ಹಂಚಿ ಮರಳಿ ಶಹಬಾದಕ್ಕೆ ಹೋಗುವ ಸಲುವಾಗಿ ಜೇವರ್ಗಿಯಿಂದ ಮದ್ಯಾಹ್ನ 2-15 ಗಂಟೆಗೆ ರಾಷ್ಟ್ರಿಯ ಹೆದ್ದಾರಿ 218 ರಸ್ತೆಯ ಮೂಲಕ ಶಹಬಾದ ಕ್ರಾಸ ಹತ್ತಿರ 2-45 ಗಂಟೆಯ ಸುಮಾರಿಗೆ ಶಹಬಾದ ರೋಡಿನ ಕಡೆ ತಿರಗಲು ನಾನು ಮೋಟರ ಸೈಕಲ್ ಇಂಡಿಕೇಟರ್ ಹಾಕಿದ್ದು ಮತ್ತು ನನ್ನ ಹಿಂದೆ ಕುಳಿತ ಭೀಮರಾಯ ಇತನು ಬಲಗೈ ಕೈ ಸನ್ನೆ ಮಾಡಿ ತಿರುಗುತ್ತಿದ್ದಾಗ ನಮ್ಮ ಎದುರುಗಡೆ ಗುಲಬರ್ಗಾ ಕಡೆಯಿಂದ ಒಬ್ಬ ಕಾರು ಚಾಲಕನ್ನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಾವಿಬ್ಬರೂ ಕೇಳಗಡೆ ಬಿದಿದ್ದರಿಂದ ನನಗೆ ಎಡ ಭುಜಕ್ಕೆ ಸ್ವಲ್ಪ ರಕ್ತ ಗಾಯವಾಗಿದಲ್ಲದೆ ಎಡ ಮೊಳಕಾಲಗೆ ಒಳ ಪೆಟ್ಟಾಗಿದ್ದು. ನನ್ನ ಹಿಂದೆ ಕುಳಿತ ನನ್ನ ಕಾಕ ಭೀಮರಾಯ ಇವರಿಗೆ ನೋಡಲು ಅವರ ಎಡ ಮತ್ತು ಬಲ ಭಾಗದ ಪಕ್ಕೆಲಬುಗಳಿಗೆ, ಎದೆಗೆ ಮತ್ತು ತಲೆಗೆ ಭಾರಿ ಒಳಪೆಟ್ಟಾಗಿ ಬೇವುಷ ಆಗಿದ್ದು ನಮಗೆ ಅಪಘಾತ ಪಡಿಸಿದ್ದ ಕಾರ ನಂ ನೋಡಲಾಗಿ ಕೆ.ಎ-35 ಎನ್-1742 ನೆದ್ದರ ಚಾಲಕ ಮತ್ತು ಕಾರಿನಲ್ಲಿದವನು ಕೂಡಿ ಅದೇ ಕಾರಿನಲ್ಲಿ ನನಗೆ ಮತ್ತು ನನ್ನ ಕಾಕನಿಗೆ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತಂದು ಸೇರಿಕೆ ಮಾಡಿದ್ದು ಆಸ್ಪತ್ರೆ ವೈದ್ಯರು ನಮ್ಮ ಕಾಕ ಭಿಮರಾಯ ಇವರಿಗೆ ನೋಡಿ ಪರಿಕ್ಷಿಸಿ ಸದರಿಯವರು ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ: 28-01-2014 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಶ್ರೀ ಮಲ್ಲಣ್ಣಾ ತಂದೆ ಸಾಯಬಣ್ಣಾ ಗುಜಲೇರ ( ಇನಾಮದಾರ)   ಸಾ: ಹುಲಕಲ್ಲ(ಕೆ)  ತಾ:ಶಹಾಪೂರ ಜಿ: ಯಾದಗಿರಿ ರವರ ಮಗ ಭೀಮಾಶಂಕರ ಈತನು ಗುಲಬರ್ಗಾಕ್ಕೆ ನಮ್ಮೂರಿನ ಮರಿಗೌಡ ಮಾಲಿ ಪಾಟೀಲ ಇವರ ಬುಲೋರೋ ಜೀಪ ರೀಪೇರಿ ಮಾಡಿಸುವುದ್ದಕ್ಕಾಗಿ ತಾನು ನಡೆಸುತ್ತಿದ್ದ ಟಾಟಾ ಎಸಿ ನಂ: ಕೆಎ-33 ಎ-0872 ನೇದ್ದಕ್ಕೆ ಟೋಚನ ಮಾಡಿಕೊಂಡು ಹೋಗುವುದ್ದಿದೆ ಅಂತಾ ಹೇಳಿ ಮನೆಯಿಂದ ಹೋದನು. ನಂತರ  ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನಮ್ಮೂರಿನ ಹಣಮಂತರಾಯ ಇನಾಮದಾರ  ಇವರು ಫೊನ ಮಾಡಿ ತಿಳಿಸಿದ್ದೇನೆಂದೆರೆ, ನಾನು ನಿಮ್ಮ ಮಗ ನಡೆಸುತ್ತಿದ್ದ ಟಾಟಾ ಎಸಿ  ವಾಹನಕ್ಕೆ ಮರಿಗೌಡರ ಬುಲೊರೋ ಜೀಪನ್ನು ಟೋಚನ ಮಾಡಿಕೊಂಡು ನಾನು ಬೊಲೊರೋ ಜೀಪಿನಲ್ಲಿ ಕುಳಿತುಕೊಂಡು  ರಾಷ್ಟ್ರೀಯ ಹೆದ್ದಾರಿ ನಂ: 218 ರಸ್ತೆಯ ಮೂಲಕ ಹೋಗುತ್ತಿದ್ದಾಗ ಈಗ ಮದ್ಯಾಹ್ನ 12-45 ಗಂಟೆಯ ಸುಮಾರಿಗೆ ಫಿರೋಜಾಬಾದ ದರ್ಗಾ ದಾಟಿ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಾಟಾ ಎಸಿ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಮಗ ಭೀಮಾಶಂಕರ ಈತನು ವಾಹನದಿಂದ ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತು ಲಾರಿ ಚಾಲಕನು ಅಪಘಾತ ಪಡಿಸಿ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಲಾರಿ ನಂ: ಕೆಎ-32 ಎ-8888 ಅಂತಾ ಇದ್ದಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಮಹಾದೇವಪ್ಪಾ ತಂದೆ ಗುರಪ್ಪಾ ಚಿಂಚೋಳಿ ಮು|| ಸುಂಟನೂರ ತಾ|| ಆಳಂದ  ರವರ ಹೆಂಡತಿಯಾದ ಕುಸಮಾ ರವರು ದಿನಾಂಕ 27-01-2014 ರಂದು ಸಾಯಂಕಾಲ 4.50 ಗಂಟೆಯ ಸುಮಾರಿಗೆ ಶಾಲೆ ಬಿಟ್ಟ ನಂತರ ನನ್ನ ಹೆಂಡತಿಯಾದ  ಕುಸುಮಾ ಶಿಕ್ಷಕಿ ಇವರು ಅದೇ ನಮ್ಮ ಶಾಲೆಯ ಶಿಕ್ಷಕ ದಿಲೀಪ ಕುಲ್ಕರ್ಣಿ ಸಾ|| ಪಡಸಾವಳಗಿ ಇವರ ಮೋಟಾರ ಸೈಕಲ್ ನಂ ಕೆಎ 32 ಎಲ್ 7016 ನೇದರ ಮೇಲೆ ಆಳಂದ ಕಡೆಗೆ ಹೋಗುವಾಗ ಹೊನ್ನಳ್ಳಿ ಕ್ರಾಸ್ ಹಾಗೂ ಹೊನ್ನಳ್ಳಿ ಊರಿನ ಮಧ್ಯದಲ್ಲಿ ಹೋಗುವಾಗ ರೋಡ ಸರಿ ಇರದಿದ್ದರಿಂದ ತಗ್ಗು ದಿನ್ನೆಗಳು ಇರುವುದರಿಂದ ದಿಲೀಪ ಕುಲ್ಕರ್ಣಿ ಶಿಕ್ಷಕರು ತಮ್ಮ ವಾಹನ ಅತಿವೇಗದಿಂದ ಹಾಗೂ ನಿರ್ಲಕ್ಷದಿಂದ ಚಲಾಯಿಸಿದ್ದಕ್ಕೆ ಕುಸುಮಾ ಶಿಕ್ಷಕಿಯವರು ರೋಡಿನ ಜಂಪಿನಲ್ಲಿ ಮೋಟಾರ ಸೈಕಲನಿಂದ ಬಿದ್ದು ತಲೆಯ ಹಿಂಭಾಗಕ್ಕೆ ಭಾರಿ ಗಾಯವಾಗಿ ಕಿವಿಯಿಂದ ರಕ್ತ ಬಂದಿದ್ದು 108 ಅಂಬ್ಯೂಲೆನ್ಸದಲ್ಲಿ ಬಸವೇಶ್ವರ ಆಸ್ಪತ್ರಗೆ ಬಂದು ನನ್ನ ಹೆಂಡತಿಗೆ ಆಸ್ಪತ್ರೆಯ ವೈದ್ಯರು ಉಪಚಾರ ನೀಡಿ ಹೆಚ್ಚಿನ ಉಪಚಾರಕ್ಕಾಗಿ ಕೂಡಲೆ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾವೆಲ್ಲರೂ ಕೂಡಿಕೊಂಡು ನನ್ನ ಹೆಂಡತಿಗೆ ಹೈದ್ರಾಬಾದದ ಯಶೋಧರಾ ಆಸ್ಪತ್ರಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಅಪಘಾತದಿಂದ ಉಂಟಾದ ಭಾರಿ ಗಾಯದಿಂದ 28-01-2014 ರಂದು ಬೆಳಿಗ್ಗೆ 1.30 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ದೌಲತಬೇಗಮ ಗಂಡ ಖಾದರ ಬೇಗ ಸಾ: ಮನೆ ನಂ 4601/24/16 ಹೊಸ ಬಡಾವಣೆ ಎಮ್.ಬಿ ನಗರ  ಗುಲಬರ್ಗಾ ರವರು ದಿನಾಂಕ 28-01-2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಖಾದಿ ಗ್ರಾಮೋದ್ಯೋಗ ಹತ್ತಿರ ದಾಖಲೆಗಳನ್ನು ಝರಾಕ್ಸ ಮಾಡಿಕೊಂಡು ಬ್ರಹ್ಮಪೂರ ಪೊಲೀಸ ಠಾಣೆಯ ಹಿಂದುಗಡೆ ಇರುವ ಮಾರ್ಡನ ಗ್ಯಾಸ ಏಜೇನ್ಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬ್ರಹ್ಮಪೂರ ಪೊಲೀಸ ಠಾಣೆಯ ಎದುರು ರೋಡ ಮೇಲೆ ಮೋ/ಸೈಕಲ ನಂ ಕೆಎ-32 ಇಡಿ-2986 ರ ಸವಾರ ಮೋ/ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಫಿರ್ಯಾದಿಗೆ ಎದುರಿನಿಂದ ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋ/ಸೈಕಲ ಸ್ಥಳದಲ್ಲಿ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಾಳಗಿ ಠಾಣೆ : ಶ್ರೀ ಬಸವರಾಜ ತಂದೆ ಜಗಪ್ಪ ಹೋಸಮನಿ ಸಾ:ಹೆಬ್ಬಾಳ ರವರು ದಿನಾಂಕ 28-01-2014 ರಂದು  ಮುಂಜಾನೆ ನಾನು ನನ್ನ ಖಾಸಗಿ ಕೆಲಸಕ್ಕಾಗಿ ಕಾಳಗಿಗೆ ಬಂದಿದ್ದು ಕಾಳಗಿಯಲ್ಲಿ ನನ್ನ ಗೆಳೆಯನಾದ ಸಿದ್ದು ಸಾಗರ ಇತನು ಭೇಟಿಯಾಗಿ ನನಗೆ ನಮ್ಮ ಅತ್ತೆಯಾದ ಶೋಭಾ ಇವಳಿಗೆ ಭೇಟಿಯಾಗಿ ಬರುವುದಿದ್ದೆ ಕಾರಣ ಮಂಗಲಗಿ ಗ್ರಾಮಕ್ಕೆ ಹೋಗಿ ಬರೋಣ ಅಂತಾ ನನ್ನನ್ನು ಕರೆದುಕೊಡು ಮಂಗಲಗಿ ಗ್ರಾಮಕ್ಕೆ ಬಂದಿದ್ದು ಶೋಭಾ ಇವರ ಮನೆಗೆ ಹೋಗಿ ನೋಡಲಾಗಿ ಶೋಭಾಳು ಮನೆಗೆ ಕೀಲಿ ಹಾಕಿ ಕಾಳಗಿಗೆ ಹೋದ ಬಗ್ಗೆ ಗೋತ್ತಾಯಿತು ಆಗ ನಾವಿಬ್ಬರು ಅಲ್ಲೆ ಇದ್ದ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಮಾತನಾಡುತ್ತಾ ಕುಳಿತೆವು 4-00 ಪಿ.ಎಂ ಸುಮಾರಿಗೆ ಮಾದರ ಓಣಿಯ 10-11 ಜನರು ಕೂಡಿ ಕೈಯಲ್ಲಿ ಕೋಯ್ತಾ, ಚಾಕು ಹಿಡಿದುಕೊಂಡು ನಮ್ಮ ಹತ್ತಿರ ಬಂದವರೇ ನಮಗೆ ಏ ಬೋಸಡಿ ಮಕ್ಕಳೇ ನೀವು ಯಾರು ಇಲ್ಲಿಗ್ಯಾಕೆ ಬಂದಿರಿ ಅಂತಾ ನಮಗೆ ತಿಳಿದು ಬಂದಿದ್ದೆ ಅಂತಾ ಬೈಯುತ್ತಾ ಕೇಲವರು ನಮಗೆ ಒತ್ತಿ ಹಿಡಿದುಕೊಂಡರು ಬಾಬು ಕಟ್ಟಿಮನಿ ಇವನು ನನ್ನ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಯ್ತಾದಿಂದ ನನ್ನ ಕುತ್ತಿಗೆಗೆ ಹೊಡೆಯಲು ಬಂದನು ನಾನು ನನ್ನ ಎಡ ಗೈ ಮುಂದೆ ಮಾಡಿ ಹಿಡಿದುಕೊಳ್ಳುವಷ್ಟರಲ್ಲಿ ನನ್ನ ಎಡ ಗೈ ಹಸ್ತಕ್ಕೆ ಜೋರಾಗಿ ಪೆಟ್ಟು ಬಿದ್ದು ಭಾರಿ ರಕ್ತ ಗಾಯವಾಗಿ ಅರ್ಧದಷ್ಟು ಹಸ್ತ ಕತ್ತರಿಸಿ ಹೋಗಿರುತ್ತದೆ ಬಿಡಿಸಿ ಕೊಳ್ಳಲು ಬಂದಾ ಸಿದ್ದು ಇತನಿಗೆ ಸೂರ್ಯಕಾಂತ ಕಟ್ಟಿಮನಿ ಇತನು ಅದೇ ಕೋಯ್ತಾ ಕಸಿದುಕೊಂಡು ಸಿದ್ದುನ ಕೊಲೆ ಮಾಡುವ ಉದ್ದೇಶದಿಂದ ಅವನ ಕುತ್ತಿಗೆಯ ಮೇಲೆ ಹೊಡೆಯುವಷ್ಟರಲ್ಲಿ ಸಿದ್ದು ತನ್ನ ಬಲ ಗೈ ಅಡ್ಡ ತಂದಾಗ ಆ ಪೆಟ್ಟು ಆತನ ಬಲ ಗೈ ರಟ್ಟೆಗೆ ಭಾರಿ ಜೋರಾಗಿ ಬಿದ್ದು ಭಾರಿ ರಕ್ತ ಗಾಯಗಳಾಗಿರುತ್ತವೆ  ಉಳಿದ 9 ಜನರು ನಮ್ಮಿಬ್ಬರನ್ನು ಕೈಯಿಂದ ಬೆನ್ನಿಗೆ ಹೊಡೆಯುತ್ತಾ ಖಲಾಸ ಮಾಡುವ ತನಕ ಬಿಡಬಾರದು ಅಂತಾ ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.