POLICE BHAVAN KALABURAGI

POLICE BHAVAN KALABURAGI

07 April 2016

Kalaburagi District Reported Crimes.

ಶಹಾಬಾದ ನಗರ   ಠಾಣೆ : ದಿನಾಂಕಃ 07/04/2016 ರಂದು  ಮುಂಜಾನೆ 10-00 ಗಂಟೆಗೆ ಶ್ರೀಮತಿ ಬಿಜಾನಬಿ ಗಂಡ ಮಹ್ಮದ ಹುಸೇನ ಮಿಲ್ಟ್ರಿವಾಲೆ ಸಾ: ಎಮ್.ಎಸ್.ಕೆ.ಮೀಲ ಕಲಬುರಗಿ ರವರು ಠಾಣೆಗೆ ಬಂದು ಹೇಳಿಕೆ ಪಿರ್ಯಾದಿ ನೀಡಿದ್ದು ಅದರ ಸಾರಂಶವೆನೆಂದರೆ. ನನ್ನ ಮಗಳಾದ ಫರೀದಾ ಬೇಗಂ ಇವಳಿಗೆ ಶಾಂತ ನಗರ ಭಂಕೂರದ ಅಬ್ದುಲ ಕಬೀರ ತಂದೆ ಅಬ್ದುಲ ಮಾಜೀದ ಇತನೊಂದಿಗೆ ಸುಮಾರು 18-20 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಸದ್ಯ ಅವಳಿಗೆ ಎರಡು ಗಂಡು ಮಕ್ಕಳು ಒಂದು ಹೆಣ್ಣು ಮಗಳು ಒಟ್ಟು ಮೂರು ಜನ ಮಕ್ಕಳಿರುತ್ತಾರೆ.  ಹೀಗಿದ್ದು ನನ್ನ ಮಗಳೊಂದಿಗೆ ಅಳಿಯ ಅಬ್ದುಲ ಕಬೀರ ಇತನು ತಕರಾರು ಮಾಡುತ್ತಾ ಬಂದಿದ್ದು  ಈ ವಿಷಯ ನಮ್ಮ ಮಗಳು ತವರು ಮನೆಗೆ ನಮ್ಮಲಿ ಬಂದಾಗ ನನ್ನ ಗಂಡ ದಿನಾಲೂ ಕುಡಿದು ಬಂದು ಸಂಸಾರದ ವಿಷಯದಲ್ಲಿ ಜಗಳ ಮಾಡಿ ಹೊಡೆ ಬಡೆ ಮಾಡಿ ನಿನಗೆ ಒಂದಿಲ್ಲಾ ಒಂದು ದಿನ ಸಾಯಿಸುತ್ತೇನೆ. ಅಂತಾ ತಕರಾರು ಮಾಡುತ್ತಾರೆ ಅಂತಾ ಹೇಳಿದ್ದು ಅದಕ್ಕೆ ನಾವು ತಾಲಿಕೊಂಡು ಬರಬೇಕು ಅಂತಾ ಬುದ್ದಿ ಹೇಳಿ ಕಳುಹಿಸಿದ್ದೇವು ಆದರೂ ನನ್ನ ಮಗಳಿಗೆ ಆಕೆಯ ಗಂಡ ಹೊಡೆಬಡೆ ಮಾಡಿ ಜಗಳ ಮಾಡುತ್ತಿದ್ದರಿಂದ ಆತನ ಮೇಲೆ ಪೊಲೀಸ ಕೇಸು ಮಾಡಿದ್ದೇವು. ಆ ಕೇಸು ಕೋರ್ಟಿನಲ್ಲಿ ನಡೆದಿರುತ್ತದೆ.  ಆದರೂ ನನ್ನ ಮಗಳು ಗಂಡ ಮಕ್ಕಳೊಂದಿಗೆ ಸಂಸಾರ ಮಾಡಿಕೊಂಡು ಇದ್ದಳು ನನ್ನ ಅಳಿಯ ನನ್ನ ಮಗಳೊಂದಿಗೆ ತಕರಾರು ಮಾಡುತ್ತಾ ನೀನು ಮಾಡಿದ ಕೇಸು ವಾಪಸ ತೆಗೆದುಕೋ ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇನ ಅಂತಾ ಜಗಳ ಮಾಡುತ್ತಿದ್ದನು ಅಂತಾ ವಿಷಯ ನಮ್ಮ ಮಗಳು ತಿಳಿಸುತ್ತಿದ್ದಳು ಆದರೂ ಕೂಡ ನಾವು ಅವಳಿಗೆ ತಾಳಿಕೊಂಡು ಹೋಗಬೇಕು ಅಂತಾ ತಿಳಿ ಹೇಳುತ್ತಿದ್ದೇವು ಹೀಗಿದ್ದು ಇಂದು ದಿನಾಂಕ: 07/04/2016 ರಂದು ಮುಂಜಾನೆ 6-30 ಗಂಟೆಗೆ ನನ್ನ ಮೊಮ್ಮಗಣಾದ ಅಬ್ದುಲ ಹಫೀಜ ಇತನು ನಮಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ನಮ್ಮ ತಾಯಿ ಪರೀದಾ ಬೇಗಂಗೆ ನಮ್ಮ ತಂದೆ ಅಬ್ದುಲ ಕಬೀರ ಇವರು ಈಗ್ಗೆ ಸ್ವಲ್ಪ ಹೊತ್ತಿನ ಮುಂಚೆ 6-00 ಗಂಟೆ ಸುಮಾರಿಗೆ ಬೆಡ ರೂಮಿನಲ್ಲಿ ಹೋಗಿ ಬಾಗಿಲು ಮುಚ್ಚಿಕೊಂಡರು  ನಾನು ಎದ್ದು ಬಾಗಿಲು ಸ್ವಲ್ಪ ತೆರೆದು ಸಂದಿಯಿಂದ ನೋಡಲಾಗಿ ನಮ್ಮ ತಂದೆ ಅಮ್ಮನಿಗೆ ಕೈಯಿಂದ ಕುತ್ತಿಗೆ ಒತ್ತುತ್ತಿದ್ದರು ನಮ್ಮ ತಾಯಿ ಒದದಾಡುತ್ತಿದ್ದಳು ನಂತರ ನಮ್ಮ ತಂದೆ ಬೇಡ ರೂಮಿನಿಂದ ಹೋರಗೆ ಬಮದಾಗ ನಾನು ಒಳಗೆ ಹೋಗಿ ಅಮ್ಮನಿಗೆ ಎಬ್ಬಿಸಲು ಅವರು ಏನು ಮಾತನಾಡುತಿಲ್ಲಾ ಬೇಗನೆ ಬನ್ನಿ ಅಂತಾ ತಿಳಿಸಿದ್ದರಿಂದ  ಕಲಬುರಗಿಯಿಂದ ನಾನು ಮತ್ತು ನನ್ನ ಮಗ ಮಹ್ಮದ ಸಲೀಮ ನನ್ನ ಸೊಸೆ ಬದ್ದುನೀಸಾ ಎಲ್ಲಾರು ಶಾಂತ ನಗರ ಭಂಕೂರದಲ್ಲಿ ಮಗಳ ಮನಗೆ ಬಂದು ನೋಡಲಾಘಿ ನನ್ನ ಮಗಳ ಕುತ್ತಿಗೆ ಹತ್ತಿರ ಕಂದುಗಟ್ಟಿದ್ದಂತಾಗಿದ್ದು ಕಿವಿಯಿಂದ ರಕ್ತಬಂದಿದ್ದು ನನ್ನ ಮಗಳು ಮೃತ ಪಟ್ಟಿದ್ದಳು ನನ್ನ ಮಗಳಿಗೆ ನನ್ನ ಅಳಿಯ ಜಗಳ ಮಾಡಿ ಹೊಡೆ ಬಡೆ ಮಾಡುತ್ತಿದ್ದರಿಂದ ಅವನ ಮೇಲೆ ಕೇಸು ಮಾಡಿದಳು ಆದರೂ ಕೂಡ ನನ್ನ ಮಗಳು ಗಂಡ ಮಕ್ಕಳೊಂದಿಗೆ ಶಾಂತ ನಗರದಲ್ಲಿ ಮನೆಯಲ್ಲಿಯೇ ಇರುತ್ತಿದ್ದಳು ನನ್ನ ಅಳಿಯ ಅವಳಿಗೆ ನೀನು ಕೇಸು ವಾಪಸ ತೆಗೆದುಕೊಳ್ಳುವ ವಿಷಯದಲ್ಲಿ ಜಗಳ ಮಾಡಿ ನೀನು ಕೇಸು ವಾಪಸ ತೆಗೆದುಕೊ ಅಂದರು ಕೇಳುತ್ತಿಲ್ಲಾ ಅಂತಾ ಇಂದು ಮುಂಜಾನೆ 6-00 ಗಂಟೆಗೆ ಸುಮಾರಿಗೆ ಮನೆಯಲ್ಲಿ ಕೈಯಿಂದ ಕುತ್ತಿಗೆ ಒತ್ತಿ ಕೊಲೆ ಮಾಡಿರುತ್ತಾನೆ. ಕಾರಣ ಅವನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಇದ್ದ ಪಿರ್ಯಾದಿ ಹೇಳೀಕೆ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ ಠಾಣೆ : ದಿನಾಂಕ. 7-4-2016 ರಂದು 2-15 ಪಿ.ಎಂ.ಕ್ಕೆ. ಫಿರ್ಯಾದಿ ಶ್ರೀ. ರಾಜು ತಂದೆ ಶರಣಪ್ಪಾ ಹೊಸಮನಿ ವಯ;33 ವರ್ಷ ಜ್ಯಾತಿ;ಪ.ಜಾ ಉ;ಖಾಸಗಿ ಕೆಲಸ/ಗ್ರಾಮ ಪಂಚಾಯತ ಸದಸ್ಯ ಸಾ;ರಾಣೆಸ್ಪೀರ ದರ್ಗಾಎದರುಗಡೆ ಆಶ್ರಯ ಕಾಲೂನಿ ಕಲಬುರಗಿ   ಇವರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ  ಕೊಟ್ಟ ಫಿರ್ಯಾದಿ ಸಾರಂಶ ಏನಂದರೆ  ದಿನಾಂಕ 7-4-2016 ರಂದು 10-30 ಎ.ಎಂ.ಕ್ಕೆ. ಭಾಗ್ಯಶ್ರೀ ಗಂಡ ಸಲೀಮ ನದಾಫ ವಯ;29 ವರ್ಷ ಸಾ;ವಗ್ದರಗಿ ತಾ;ಅಕ್ಕಲಕೋಟ ಜಿ;ಸೋಲಾಪೂರ ಮಹಾರಾಷ್ಟ್ರ ಇವಳು  ಇಂದು ಕಲಬುರಗಿಗೆ ಬಂದು ತನ್ನ ಅಕ್ಕಳಿಗೆ ಫೋನ ಮಾಡಿದರೆ ಅವಳು ಯಾವುದೇ ರೀತಿಯ  ಸಹಾಯ ಮಾಡುವದಿಲ್ಲಾ ಅಂತಾ ತಿಳಿಸಿದ್ದು ಅಲ್ಲದೆ ಗಂಡನೂ ಕೂಡಾ ಫೋನ  ರಿಸೀವ ಮಾಡಿರುವದಕ್ಕೆ ತನಗೆ ಆದ ಸಾಲಬಾದೆ ತಾಳಲಾರೆದೆ ಆತ್ಮ ಹತ್ಯ ಮಾಡಿಕೊಳ್ಳಬೇಕು ಅಂತಾ  ತನ್ನ 1 ½ ತಿಂಗಳು ವಯಸ್ಸಿನ ಗಂಡು ಮಗುವನ್ನು ತೆಗೆದುಕೊಂಡು ರಾಣೇಸ್ಪೀರದರ್ಗಾದ ಹಿಂದುಗಡೆ ಇರುವ ಲಾಡ್ಲೆಸಾಬ ವಗ್ದರಗಿ ಇತನ ಖಣಿಯ ನೀರಿನಲ್ಲಿ ಮೋದಲು ತನ್ನ ಮಗುವನ್ನು ಸಾಯಿಸುವ ಕುರಿತು ನೀರಿನಲ್ಲಿ ಎಸೆದಿದ್ದು ನಂತರ ತಾನು ಆತ್ಮ ಹತ್ಯಮಾಡಿಕೊಳ್ಳುವ ಉದ್ದೇಶದಿಂದ ನೀರಿನಲ್ಲಿ ಜಿಗಿದಿದ್ದು ಇರುತ್ತದೆ. ಅಷ್ಟರಲ್ಲಿ ಫಿರ್ಯಾದಿ ರಾಜು ಮತ್ತು ಆತನ ಗೆಳಯ ಜಯಪ್ರಕಾಶ ಕಟ್ಟೋಳಿ ಇವರಿಬ್ಬರು ಘಟನೆಯನ್ನು ಕೇಳಿ ಹೋಗಿ ಭಾಗ್ಯಶ್ರೀ ಇವಳನ್ನು ರಕ್ಷಿಸಿದ್ದು ಆದರೆ ಮಗು ಮೃತ ಪಟ್ಟಿರುತ್ತದೆ . ಕಾರಣ ಸದರಿ ಭಾಗ್ಯಶ್ರೀ ಗಂಡ ಸಲೀಮ ನದಾಫ  ಸಾ;ವಗ್ದರಗಿ ಇವಳ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ಅಸಾರಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ..