POLICE BHAVAN KALABURAGI

POLICE BHAVAN KALABURAGI

23 December 2013

Gulbarga District Reported Crimes

ಹುಡುಗಿ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ ದಾನಮ್ಮಾ @ ರೂಪಾ ಗಂಡ ಶ್ರೀಮಂತ ಓತಿಹಾಳ ಸಾ: ಬಲವಂತನಗರ ಶ್ರೀರಾಮ ಕಾಲೋನಿ ಚಿಂಚವಾಡ ಪೂನಾ ಮಹಾರಾಷ್ಟ್ರ ರಾಜ್ಯ  ಹಾ.ವ: ಸಾಗನೂರ ಗ್ರಾಮ ತಾ:ಅಫಜಲಪೂರ ಜಿ: ಗುಲಬರ್ಗಾ ರವರು   ದಿನಾಂಕ: 21-12-2013 ರಂದು 10:30 ಕ್ಕೆ ಸಾಗನೂರಿನಿಂದ ನನ್ನ ಮಗುವಿಗೆ ಆಸ್ಪತ್ರೆಗೆ ತೋರಿಸಲು ಮತ್ತು ನನ್ನ ತಂಗಿಯಾದ ಪ್ರೇಮಲತಾ ಇವಳ ಪರಿಕ್ಷೆಯ ಫೀಸ್ ಕಟ್ಟಲು ಗುಲಬರ್ಗಾಕ್ಕೆ ನಾನು ನನ್ನ ತಂಗಿಯರಾದ ಕಲ್ಪನಾ, ಪ್ರೇಮಲತಾ ಕೂಡಿಕೊಂಡು 2:30 ಪಿಎಮ್ ಕ್ಕೆ ಗುಲಬರ್ಗಾ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿರುತ್ತೇವೆ. ಬಸ್ ನಿಲ್ದಾಣದಿಂದ ನಾನು ಮತ್ತು ನನ್ನ ತಂಗಿ ಕಲ್ಪನಾ ಯಶೋಧರಾ ಆಸ್ಪತ್ರೆಗೆ ಮಗುವಿಗೆ ತೋರಿಸಲು ಹೋಗಿದ್ದು ನನ್ನ ತಂಗಿಯಾದ ಪ್ರೇಮಲತಾ ಇವಳು ಫಿಸ ಕಟ್ಟಲು ಅವಳೋಬ್ಬಳೆ ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿರುತ್ತಾಳೆ. ನಂತರ ನಾವು 3:30 ಪಿಎಮ್ ಕ್ಕೆ ಬಸ್ ನಿಲ್ದಾಣಕ್ಕೆ ಬಂದು ನನ್ನ ತಂಗಿಯಾದ ಪ್ರೇಮಲತಾಳಿಗೆ ಕಾಯುತ್ತಾ ಕುಳಿತಿದ್ದು 4:30 ಪಿಎಮ್ ವರೆಗೆ ಕಾಯ್ದು ಕುಳಿತರು ಬರದೆ ಇದ್ದುದ್ದಕ್ಕೆ ಮತ್ತೆ ನಾನು ನನ್ನ ತಂಗಿ ಕಲ್ಪನಾಳೊಂದಿಗೆ ಪ್ರೇಮಲತಾಳ ಕಾಲೇಜಿಗೆ ಹೋದೆವು ಅಲ್ಲಿ ಕಾಲೇಜ ಬಂದ ಆಗಿದ್ದು ನಂತರ ಅಲ್ಲಿಂದ ಬಸ್ ನಿಲ್ದಾಣಕ್ಕೆ ಬಂದು ನನ್ನ ತಂಗಿ ಬರುತ್ತಾಳೆಂದು ಕಾಯುತ್ತಾ ಕುಳಿತು 5:30 ಪಿಎಮ್ ಕ್ಕೆ ನನ್ನ ತಂಗಿ ಪ್ರೇಮಲತಾಳ ಗೆಳತಿಯಾದ  ಮತ್ತು ಅವಳ ರೂಂನ ಕೆಳಗೆ ಇರುವ  ರಾಣಿ ಇವಳಿಗೆ ಫೊನ ಮಾಡಿ ನನ್ನ ತಂಗಿ ಪ್ರೇಮಲತಾ ಬಂದಿರುವ ಬಗ್ಗೆ ವಿಚಾರಿಸಲಾಗಿ ಇನ್ನೂ ರೂಂಗೆ ಬಂದಿಲ್ಲಾ ಎಂದು ತಿಳಿಸಿದಳು. ನಂತರ 6:00 ಪಿಎಮ್ ವರೆಗೆ ಬಸ್ ನಿಲ್ದಾಣದಲ್ಲಿ ನನ್ನ ತಂಗಿಗಾಗಿ ಕಾಯುತ್ತ ಕುಳಿತಿದ್ದು 6:00 ಪಿಎಮ್ ಕ್ಕೆ ನನ್ನ ಗೆಳೆಯನಾದ ಮಂಜುನಾಥ ಇವರ ಮನೆಗೆ ಹೋಗಿ ರಾತ್ರಿ ಅವರ ಮನೆಯಲ್ಲಿಯೆ ಇದ್ದು ಮುಂಜಾನೆ ಮತ್ತೆ ಎ್ಲಲಾ ಹುಡುಕಾಡಿದ್ದು ಇಲ್ಲಿಯವರೆಗೆ ನನ್ನ ತಂಗಿ ಸಿಕ್ಕಿರುವುದಿಲ್ಲಾ  ಅವಳು ಪಿಂಕ ಮತ್ತು ಗ್ರಿನ ಕಲರ ಡಿಸೈನ ವುಳ್ಳ ಡ್ರಸ್ ಧರಿಸಿರುತ್ತಾಳೆ.  ಕಾರಣ ಕಾಣೆಯಾದ ನನ್ನ ತಂಗಿಗೆ ಪತ್ತೆ ಹಚ್ಚಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಮಿರ್ಜಾ ಕರಿಂ ಬೇಗ ತಂದೆ ಮಿರ್ಜಾ ಯೂಸೂಫ ಬೇಗ ಸಾ : ಗುಲಬರ್ಗಾ ರವರು ದಿನಾಂಕ 19-12-2013 ರಂದು ರಾತ್ರಿ 8-30 ಗಂಟೆಗೆ ಹುಮನಾಬಾದ ಗುಲಬರ್ಗಾ ರಾಷ್ಟ್ರೀಯ ಹೆದ್ದರಿ 218 ಮೇಲೆ ಭೀಮಾಶಂಕರ ಚಿಕ್ಕಗೌಡ ಇವರ ಹೋಲದ ಹತ್ತಿರ ಬುಲೇರೋ ಜೀಪ ನಂ ಕೆಎ 56 ಎಮ್ 201 ನೇದ್ದರ ಚಾಲಕ ಮದರಸಾಬ ತಂದೆ ಖಾಜಾ ಹುಸೇನಿ ಸಾ : ಸಾತಖೇಡ ಹಾ.ವ. ಬುಲಂದ ಪರವೇಜ ಕಾಲನಿ  ಗುಲಬರ್ಗಾ ಇತನು ತನ್ನ ವಶದಲ್ಲಿ ಇದ್ದ ಜೀಪನ್ನು ಅತೀ ವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿಕೊಂಡು ಜೀಪಿನ ಹಿಂದಿನ ಟೈರ ಬಸ್ಟ ಆಗಿ ನಿಯಂತ್ರಣ ತಪ್ಪಿ ಪಲ್ಟಿಯಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀಮತಿ. ಅನ್ನಪೂರ್ಣಾ ಗಂಡ ದೀಪಕ ತಿವಾರಿ ಸಾ|| ಕಬಾಡೆಗಲ್ಲಿ ಶಾಹಾಬಜಾರ ಗುಲಬರ್ಗಾ ರವರು ದಿನಾಂಕ: 22-12-2013 ರಂದು ಮದ್ಯಾಹ್ನ 1400 ಗಂಟೆಯ ಸುಮಾರಿಗೆ ಮನೆಯಿಂದ ನಮ್ಮ ನಾದನಿಯಾದ ಸರಿತಾ ಗಂಡ ಅನೀಲಸಿಂಗ ಠಾಕೂರ ಇಬ್ಬರೂ ಕೂಡಿಕೊಂಡು ಅತ್ತಾರ ಕಂಪೌಂಡನಲ್ಲಿರುವ ಶ್ರೀ ಭವಾನಿಸಿಂಗ ಠಾಕೂರ ಇವರ ಮನೆಯ ಶಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವದರ ಸಲುವಾಗಿ ಅಟೋದಲ್ಲಿ ಕುಳಿತು ಹೋರಟು ತಿರಂದಾಜ ಟಾಕೀಜ ಬಿಗ್ ಬಜಾರ ಹಿಂದೆ ಅಟೋದಿಂದ ಇಳಿದು ನಡೆದು ಹೋಗುತ್ತಿರುವಾಗ ಯಾರೋ ಇಬ್ಬರೂ ನೀಲಿ ಕಲರದ ಮೋಟರ ಸೈಕಲ ಮೇಲೆ ಫಾಸ್ಟಾಗಿ ಬಂದವರೆ ಅವರ ಹತ್ತಿರ ನಿಲ್ಲಿಸಿ ಮೋಟರ ಸೈಕಲನ ಹಿಂದೆ ಮುಖಕ್ಕೆ ಬಟ್ಟಿ ಕಟ್ಟಿಕೊಂಡವನು ಫಿರ್ಯಾದಿದಾರರ ಕೊರಳಿಗೆ ಕೈಹಾಕಿ ಕೊರಳಲ್ಲಿ 45 ಗ್ರಾಂ ಬಂಗಾರದ ಮಂಗಳ ಸೂತ್ರ ಅ||ಕಿ|| 1,35,000/- ಬೆಲೆ ಬಾಳುವದನ್ನು ಕಸಿದು ಕೊಂಡು ಓಡಿ ಹೋಗಿದ್ದು ಅವರಿಬ್ಬರೂ 20-25 ವರ್ಷ ವಯಸ್ಸಿನವರಿದ್ದು  ಇಬ್ಬರೂ ಮುಖಕ್ಕೆ ಬಟ್ಟಿ ಕಟ್ಟಿಕೊಂಡಿದ್ದು ಅವರ ಮುಖ ಸರಿಯಾಗಿ ನೊಡಲು ಆಗಿರುವದಿಲ್ಲಾ. ಮೋಟರ ಸೈಕಲ ಹಿಂದೆ ಕುಳಿತವ ನೀಲಿ ಬಣ್ಣದ ಶರ್ಟ ಹಾಕಿ ಕೊಂಡಿದ್ದು ಅವರ ಮೋಟರ ಸೈಕಲ ನಂಬರ ಗಡಿಬಿಡಿಯಲ್ಲಿ ನೋಡಲು ಆಗಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.