POLICE BHAVAN KALABURAGI

POLICE BHAVAN KALABURAGI

27 January 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ನಾಗಪ್ಪಾ ತಂದೆ ರೇವಣಸಿದ್ದಪ್ಪಾ ಹಾದಿಮನಿ  ಸಾ : ಹದನೂರ ತಾ: ಸುರಪೂರ ಜಿ:ಯಾದಗಿರ  ರವರ ಮಗ ರೇವಣಸಿದ್ದಪ್ಪಾ ಈತನು ದಿನಾಂಕ: 25-01-2014 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಗುಲಬರ್ಗಾಕ್ಕೆ ಹೋಗಿ ಐಟಿಐ ಕಾಲೇಜದಲ್ಲಿ ಸರ್ಟಿಫಿಕೇಟ ತರಲು ಹೋಗುತ್ತೇನೆ ಅಂತಾ ನಮ್ಮ ಮೊಟಾರ ಸೈಕಲ ನಂ: ಕೆಎ-33 ಎಲ್-8040 ನೇದ್ದರಲ್ಲಿ ಹೋಗಿರುತ್ತಾನೆ. ನಾನು ರಾತ್ರಿ 6-30 ಗಂಟೆಯ ಸುಮಾರಿಗೆ ಮನೆಯಲ್ಲಿ ಇದ್ದಾಗ ಫರಹತಾಬಾದ  ಪೊಲೀಸರು ನನ್ನ ಮೊಬೈಲಿಗೆ ಫೊನ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮಗ ರೇವಣಸಿದ್ದಪ್ಪಾ ಈತನು ರಾಷ್ಟ್ರೀಯ ಹೆದ್ದಾರಿ 218 ರ ರಸ್ತೆ ಗುಲಬರ್ಗಾ ಜೇವರ್ಗಿ ರಸ್ತೆಯ ಸರಡಗಿ(ಬಿ)ಯ ಖಣಿಯ ಹತ್ತಿರ ಸಾಯಂಕಾಲ 5-30 ಗಂಟೆಯ ಸುಮಾರಿಗೆ ನಿಮ್ಮ ಮಗನ ಮೊಟಾರ ಸೈಕಲ ನಂ: ಕೆಎ-33 ಎಲ್- 8040 ನೇದ್ದಕ್ಕೆ ಎದುರಿನಿಂದ  ಒಬ್ಬ ಮೊಟಾರ ಸೈಕಲ ನಂ: ಕೆಎ-32 ಇಎ-9808 ಸವಾರನು ತನ್ನ ಮೊಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಮಗನಿಗೆ ತಲೆಗೆ ಭಾರಿ ರಕ್ತಗಾಯವಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತ ಹೊಂದಿರುತ್ತಾನೆ. ಅಲ್ಲದೆ ಅಪಘಾತ ಪಡಿಸಿದ ಮೊಟಾರ ಸೈಕಲ ನಂ: ಕೆಎ-32 ಇಎ-9808 ನೇದ್ದರ ಸವಾರನಾದ ಗುಂಡಪ್ಪ ಈತನಿಗೆ ಕೂಡಾ ಬಲಗಾಲ ಹಿಂಬಡಿಗೆ ಭಾರಿ ರಕ್ತಗಾಯವಾಗಿದ್ದಲ್ಲದೆ ಹಣೆ ಮತ್ತು ಕಪಾಳಕ್ಕೆ ಗಾಯವಾಗಿದ್ದು ಅವನಿಗೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಜಗನಾಥ ತಂದೆ ಸಿದ್ರಾಮಪ್ಪ ದಮ್ಮೂರ ಸಾ : ಪ್ಲಾಟ ನಂ. 280 ರೇವಣಸಿದ್ದೇಶ್ವರ ಕಾಲನಿ ಗುಲಬರ್ಗಾ  ರವರಿಗೆ  ದಿನಾಂಕ 26-01-14 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ  ನಮ್ಮ ತಂದೆ ಸಿದ್ರಾಮಪ್ಪ ತಂದೆ ಶಾಂತಪ್ಪ ದಮ್ಮೂರ  ಇವರ ಮೋಬಾಯಿಲ ಪೋನನಿಂದ ಯಾರೋ ನನಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ, ಈ ಮೋಬಾಯಿಲ ಹೊಂದಿದವರು ಎನಾಗಬೇಕು ಅಂತಾ ಕೇಳಲು ನಮ್ಮ ತಂದೆಯಾಗಬೇಕು ಅಂತಾ ತಿಳಿಸಿದಾಗ, ಅವರು ನಿಮ್ಮ ತಂದೆ ಸಿದ್ರಾಮಪ್ಪ ಇವರಿಗೆ ಎರಲೈನ್ಸ  ದಾಬಾ ಹತ್ತಿರ ಎಕ್ಸಿಡೆಂಟ ಆಗಿದೆ ಎಂದು ತಿಳಿಸಿದರು. ಅವರಿಗೆ ನಾನು ಮಂತ್ರಾಲಯಕ್ಕೆ ಹೋಗಿದ್ದೆನೆ. ನಮ್ಮ ಸಂಬಂಧಿಕರಿಗೆ  ಸ್ಥಳಕ್ಕೆ ಕಳುಹಿಸುತ್ತೇನೆ ಎಂದು ತಿಳಿಸಿದನು. ನಂತರ ಸೋಮನಾಥ ಎವಲೇ ಮತ್ತು ಮನೆ ಎದುರುಗಡೆ ಇರುವ ಮಲ್ಲಿನಾಥ ಜಂಗಿನ ಮಠ ಇವರಿಗೆ ನಮ್ಮ ತಂದೆ ಸಿದ್ರಾಮಪ್ಪ ಇವರಿಗೆ  ಎರಲೈನ್ಸ  ದಾಬಾ ಹತ್ತಿರ ಎಕ್ಸಿಡೆಂಟ ಆದ ವಿಷಯ ತಿಳಿಸಿ ಅವರಿಗೆ ಸ್ಥಳಕ್ಕೆ ಹೋಗಿರಿ ಮತ್ತು ಅವರಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಕರೆದುಕೊಂಡು ಹೋಗಿರಿ ಎಂದು ತಿಳಿಸಿದನು ಇಬ್ಬರು ಹೋಗಿ ನಿಮ್ಮ ತಂದೆ ಸಿದ್ರಾಮಪ್ಪ ಇವರಿಗೆ ಎಡ ಹಣ ತಲೆಯ ಮೇಲೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಅವರಿಗೆ ಯಾವುದೋ ಒಂದು ಆಟೋದಲ್ಲಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿರುತ್ತೇವೆ.  ಈ  ಎಕ್ಸಿಡೆಂಟ್ (ಘಟನೆ) ಬಗ್ಗೆ ವಿಚಾರಣೆ ಮಾಡಲಾಗಿ ಎರಲೈನ್ಸ ದಾಬಾದ ಎದುರುಗಡೆ ಇರುವ ಪ್ರಕಾಶ ಪಾನ ಅಂಗಡಿಯವನು ತಿಳಿಸಿದ್ದೆನೆಂದೆರೆ, ನಿಮ್ಮ ಸಿದ್ರಾಮಪ್ಪ ದಮ್ಮೂರು ಇವರು ಮಾಸಾಪತಿ ದರ್ಗಾ ರೋಡ ಕಡೆಯಿಂದ ರೋಡ ಕ್ರಾಸ ಮಾಡಿ ಎರಲೈನ್ಸ ದಾಬಾದ ಎದುರಿನ ರೋಡಿನ ಬದಿಯಲ್ಲಿ ಬಂದಾಗ, ಆಗ ಗಂಜ ರೋಡ ಕಡೆಯಿಂದ  ಹಿರೋ ಹೊಂಡಾ ಸಿಡಿ 100 ಕೆಎ 03 ಕ್ಯೂ 451 ಚಾಲಕ ತನ್ನ ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬಂದು  ನಿಮ್ಮ ತಂದೆಗೆ ಡಿಕ್ಕಿ ಪಡಿಸಿದ್ದರಿಂದ ಅವರು ರೋಡಿಗೆ ಬಿದ್ದಿದ್ದರಿಂದ, ಅವರ ಎಡ ಹಣೆ ತಲೆಯ ಮೇಲೆ  ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಘಟನೆ ನಡೆದಾಗ ಮಧ್ಯಾಹ್ನ 12-00 ಗಂಟೆ ಸಮಯ ಆಗಿರಬಹುದು ಎಂದು  ಕೇಳಿ ಗೊತ್ತಾಗಿರುತ್ತದೆ ಎಂದು ತಿಳಿಸಿದನು.  ಇಂದು ಸಂಜೆ 7-30 ಗಂಟೆ ಸುಮಾರಿಗೆ ಮಂತ್ರಾಲಯದಿಂದ ಗುಲಬರ್ಗಾಕ್ಕೆ ಬಂದು ನೇರವಾಗಿ ಬಸವೇಶ್ವರ ಆಸ್ಪತ್ರೆಗೆ ಹೋಗಲು ನಮ್ಮ ತಂದೆ ಸಿದ್ರಾಮಪ್ಪ ಇವರು  ಸಂಜೆ 7-00 ಗಂಟೆಗೆ ರಸ್ತೆ ಅಪಘಾತದಿಂದ ಆದ ಗಾಯಗಳಿಂದ ಉಪಚಾರ ಹೊಂದುತ್ತಾ ಮೃತಪಟ್ಟಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಶಾಂತಬಾಯಿ ಗಂಡ ರಾಮಚಂದ್ರ ಶಖಾಪೂರೆ ಸಾ|| ಮನೆ ನಂ 9-947/5, ಕೈಲಾಸ ನಗರ,  ಗುಲಬರ್ಗಾ ಇವರು ದಿನಾಂಕ 23/01/2014 ರಂದು ನನ್ನ ತಾಯಿ ಆರೋಗ್ಯ ಸರಿ ಇಲ್ಲದ ಕಾರಣ ಮನೆಯವರೆಲ್ಲರೂ ಮನೆಗೆ ಬೀಗ ಹಾಕಿಕೊಂಡು ಖಜೂರಿ ಗ್ರಾಮಕ್ಕೆ ಹೋಗಿರುತ್ತೇವೆ ದಿನಾಂಕ 25/01/2014 ರಂದು ಮಧ್ಯಾಹ್ನ 03-00 ಗಂಟೆಗೆ ಗುಲಬರ್ಗಾಕ್ಕೆ ಬಂದು ಮನೆಗೆ ಹೋಗಿ ನೋಡಲಾಗಿ ಮನೆಗೆ ಹಾಕಿದ ಬಾಗಿಲು ಕೊಂಡಿ ಖುಲ್ಲಾ ಆಗಿದ್ದು ನಾನು ಬಾಗಿಲು ಒತ್ತಲು ಬಾಗಿಲು ತೆರೆದಿದ್ದು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲು ಮನೆಯಲ್ಲಿನ ಸಾಮಾನುಗಳು ಚಲ್ಲಾಪಿಲ್ಲಿ ಆಗಿ ಬಿದ್ದಿದ್ದು ಮನೆಯಲ್ಲಿದ್ದ  ಅಲಮಾರಿ ಮುರಿದಿದ್ದು ಅದರಲ್ಲಿ ಕೆಲವು ಬಂಗಾರದ ಆಭರಣಗಳು ನಗದು ಹಣ ಹೀಗೆ ಒಟ್ಟು 1,65,000/- ರೂ. ಬೆಲೆ ಬಾಳುವ ಸಾಮಾನುಗಳು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಡಾ : ಅಕ್ಷಯ ತಂದೆ  ಡಾ : ಸುರೇಶ ಚಿಂಚೋಳಿ ಸಾ: ಚಿಂಚೋಳಿ ಲೇ ಔಟ್ ಆಳಂದ ರಸ್ತೆ ಗುಲಬರ್ಗಾ ರವರ ತಂದೆ ತಾಯಿಯವರಾದ ಡಾ : ಸುರೇಶ ಚಿಂಚೋಳಿ. ತಾಯಿ ಮಾಧುರಿ ಚಿಂಚೋಳಿ ಇವರು ದಿನಾಂಕ 18-01-2014 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಸಿಂಗಾಪೂರ ಪ್ರವಾಸ ಕುರಿತು ಹೊಗುವಾಗ ನಾನು ನನ್ನ ಡಾ : ತರಬೆತಿ ಕುರಿತು ಬೆಳಗಾಂವಕ್ಕೆ ಹೊಗುವಾಗ ನಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮೊಹನ ತಂದೆ ಶ್ರೀಶೈಲ್ ವಿಶ್ವಕರ್ಮ ಇವರಿಗೆ ನಮ್ಮ ಮನೆಯ ಕಿಲಿ ಕೈ ಕೊಟ್ಟು ತಾವು ದಿನಾಲು ರಾತ್ರಿ  ನಮ್ಮ ಮನೆಗೆ ಬಂದು ಮನೆಯಲ್ಲಿ ಇರಬೆಕು ಅಂತ ಹೇಳಿ ಹೊಗಿರುತ್ತೆವೆ. ದಿನಾಂಕ 25-1-2014 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಮೋಹನ ವಿಶ್ವಕರ್ಮ ಇವರು ನನಗೆ ಮೊಬಾಯಿ ಫೊನ್ ಮೂಲಕ ಸಂಪರ್ಕಿಸಿ ತಿಳಿಸಿದನೆಂರೆ ನಾನು ನಿನ್ನೆ ದಿನಾಂಕ 24-1-2014ರಂದು ರಾತ್ರಿ 10 ಗಂಟೆಗೆ ಮನೆಗೆ ಬಂದು ರಾತ್ರಿ ಮನೆಯಲ್ಲಿ ಮಲಗಿಕೊಂಡು ಇಂದು ದಿನಾಂಕ 25-1-2014 ರಂದು ಬೆಳಿಗ್ಗೆ 4 ಗಂಟೆಯ ಸುಮಾರಿಗೆ ನಾನು ನಿಮ್ಮ ಮನೆಗೆ ಬಿಗ ಹಾಕಿ ಹೊಗಿದ್ದು ಮರಳಿ ಇಂದು  ದಿನಾಂಕ 25-1-2014 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಿಮ್ಮ ಮನೆಗೆ ಹೊಗಿ ನೇಡಲು  ಮನೆಯ ಬಾಗಿಲ ಕೊಂಡಿ ಮುರಿದಿದ್ದು ಇದ್ದು ನಾನು ಒಳಗೆ ಹೊಗಿ ನೊಡಲು ಮನೆಯಲ್ಲಿದ್ದ  ಎಲ್ಲಾ ಸಾಮಾನುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ ಅಂಥಾ ತಿಳಿಸಿದ ಮೇರೆಗೆ ನಾನು ಬೆಳಗಾಂವ ದಿಂದ ಇಂದು ದಿನಾಂಕ 26-1-2014 ರಂದು ಗುಲಬರ್ಗಾಕ್ಕೆ  ಬಂದು ನಮ್ಮ ಮನೆಗೆ ಹೊಗಿ ನೋಡಲು ಮನೆಯ ಬಾಗಿಲ ಕೊಂಡಿ ಮುರಿದಿದ್ದು ಇದ್ದು ನಾನು ಒಳಗೆ ಹೊಗಿ ನೋಡಲು ಮನೆಯಲ್ಲಿದ್ದ ಎರಡು ಅಲಮಾರಗಳ ಬಿಗ ಮುರಿದು ಅದರಲ್ಲಿದ್ದ ಎಲ್ಲಾ ಬಟ್ಟೆಬರೆಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಮತ್ತು ಮನೆಯಲ್ಲಿದ್ದ  ಒಂದು ಸ್ಯಾಮಸಂಗ ಕಂಪನಿಯ  L.E.D. 64 ಇಂಚ ಉಳ್ಳ ಟಿವಿ ಅ:ಕಿ: 2 ಲಕ್ಷ 50 ಸಾವಿರುಪಾಯಿ  2) ಒಂದು IBERRY AUXUS ಕಂಪನಿಯ ಟ್ಯಾಬ್ಲೇಟ್ ಪಿಸಿ ಅ:ಕಿ: 15000/- 3) ಒಂದು ಬೊಸ್ ಕಂಪನಿಯ ಹೆಡ್ಡ್ ಫೊನ್ ಅ:ಕಿ: 5000/-ರೂ ಬೆಲೆಬಾಳುವ ಸಾಮಾನುಗಳು ಯಾರೊ ಅಪರಿಚಿತ ಕಳ್ಳರು  ದಿನಾಂಕ 25-01-2014 ರಂದು ಬೆಳಗಿನ ಜಾವ 4 ಗಂಟೆಯಿಂದ ಸಾಯಂಕಾಲ 4 ಗಂಟೆಯ ಅವಧಿಯಲ್ಲಿ  ನಮ್ಮ ಮನೆಯ ಬಾಗಿಲಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ ಕಳವು ಮಾಡಿಕೊಂಡು ಹೋಗಿದ್ದು. ಅಲ್ಲಿದೆ ಮನೆಯಲ್ಲಿ ಇಟ್ಟಿದ ಕಾರಿನ ಚ್ಯಾವಿ ತೆಗೆದುಕೊಂಡು ನಮ್ಮ ಮನೆಯ ಆವರಣದಲ್ಲಿ ನಿಲ್ಲಿಸಿದ ನಮ್ಮ ಕಾರ ನಂ ಕೆಎ 32 ಎನ್ 4004 ನೆದ್ದನ್ನು ಚಾಲು ಮಾಡಿ ಕೊಂಡು ಹೋಗುತ್ತಿರುವಾಗಅಲ್ಲೆ ನಮ್ಮ ಮನೆಯ ಮುಂದೆ ಇದ್ದ ಖುಲ್ಲಾ ಚರಂಡಿಯಲ್ಲಿ  ಕಾರಿನ ಟೈರ ಸಿಕ್ಕಿಬಿದ್ದಿದ್ದರಿಂದ ಅಲ್ಲಿಯೇ ಬಿಟ್ಟು  ಅದರ ಚಾವಿ ತೆಗೆದುಕೊಂಡು ಹೊಗಿರುತ್ತಾರೆ. ಹೀಗೆ ಒಟ್ಟು 2 ಲಕ್ಷ 70 ಸಾವಿರ ರೂಪಾಯಿ ಬೆಲೆಬಾಳುವ ಸಾಮಾನುಗಳು ಕಳುವು ಮಾಡಿಕೊಂಡು ಹೋಗಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.