POLICE BHAVAN KALABURAGI

POLICE BHAVAN KALABURAGI

04 December 2015

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ
ಕಮಲಾಪೂರ ಠಾಣೆ : ದಿನಾಂಕ 23.11.2015 ರಂದು ರಾತ್ರಿ 8 ಗಂಟೆಯವರೆಗೆ ನಾನು ವ್ಯಾಪಾರ ಮಾಡಿ ಅಂಗಡಿ ಬಂದ ಮಾಡಿಕೊಂಡು ರಾತ್ರಿ 8:30 ಗಂಟೆಯ ಸುಮಾರಿಗೆ ಮನಗೆ ಹೋಗಿ ನನ್ನ ಮೋಟಾರ ಸೈಕಲನ್ನು ಮನೆಯ ಹತ್ತಿರ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದು ಇರುತ್ತದೆ. ದಿನಾಂಕ 24.11.2015 ರಂದು ಬೆಳ್ಳಿಗ್ಗೆ 7 ಗಂಟೆಗೆ ನಾನು ಮನೆಯಿಂದ ಹೊರಗೆ ಬಂದು ನೋಡಲು ನಾನು ನಿಲ್ಲಿಸಿದ ನನ್ನ ಮೋಟಾರ ಸೈಕಲ ಇರಲಿಲ್ಲ. ನಂತರ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಯಾವುದೆ ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ. ದಿನಾಂಕ 24.11.2015 ರಿಂದ ಇಂದಿನವರೆಗೆ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆ ತಿರುಗಾಡಿ ನನಗೆ ಪರಿಚಯಸ್ಥರಲ್ಲ ವಿಚಾರಿಸಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ. ಸದರಿ ನನ್ನ ಮೊಟಾರ ಸೈಕಲ ನಂ ಕೆಎ 56 6436 ಅ:ಕಿ 49,000/- ರೂಪಾಯಿ ನೇದ್ದು ಇದ್ದು  ಚೆಸ್ಸಿ ನಂಬರ  MD2A11C21DWC00015  ಇಂಜನ ನಂಬರ  DHZWDC 00431  56 E 6436 ಕಲರ ಕಪ್ಪು ಬಣ್ಣ. ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಶಹನಾಜ್ ಗಂಡ ಸಾಹೇಬ ಪಟೇಲ್ ಇವರತನ್ನು ಈಗ ಸುಮಾರು 1 ವರೆ ವರ್ಷದ ಹಿಂದೆ ಜಾಕೀರ ಅಲಿ ಇವರ ಮಗನಾದ ಸಾಹೇಬ ಪಟೇಲ್ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಕೆಲವು ದಿವಸಗಳವರೆಗೆ ನನ್ನ ಗಂಡ ,ಅತ್ತೆ , ಮಾವ ನನ್ನೊಂದಿಗೆ ಚೆನ್ನಾಗಿದ್ದು, ನಂತರ ಒಂದು ತಿಂಗಳ ನಂತರ ನನ್ನ ಗಂಡ ದುಡಿಯಲು ಮೆಕ್ಕಾ ಮದೀನಾ ಕ್ಕೆ ಹೋಗಿದ್ದು, ಇರುತ್ತದೆ. ನನ್ನ ಮಾವ ನೀನು ನೋಡಲು ಚೆನ್ನಾಗಿಲ್ಲ ನನ್ನ ಮಗನಿಗೆ ತಕ್ಕ ಹೆಂಡತಿಯಲ್ಲ ನಿನಗೆ ತಲಾಖ ಕೊಟ್ಟು ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇನೆ. ಅಂತಾ ಅತ್ತೆ, ಮಾವ ಇಬ್ಬರೂ ಸೇರಿ ಮಾನಸಿಕ , ದೈಹಿಕ ಕಿರುಕುಳ ಕೊಡುತ್ತಿದ್ದರು. ನನ್ನ ಅತ್ತೆ ಮಾವ ನನಗೆ ತವರು ಮನೆಗೆ ಕಳುಹಿಸುತ್ತಿರಲಿಲ್ಲ. ನಾನು ದೊಡ್ಡವಳಾದಾಗಿನಿಂದ ನನಗೆ ಮುಟ್ಟು ಸರಿಯಾಗಿ ಬರುತ್ತಿಲ್ಲ. 2 ತಿಂಗಳಿಗೊಮ್ಮೆ , 3 ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದು, ಈಗ 15 ದಿವಸಗಳಿಂದ ನನ್ನ ಅತ್ತೆ ಮಾವ 2 ತಿಂಗಳಿಂದ ನಿನಗೆ ಮುಟ್ಟು ಬಂದಿರುವುದಿಲ್ಲ ನೀನು ಯಾರ ಜೋತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀ ಅದಕ್ಕೆ ನಿನಗೆ ಮುಟ್ಟು ಬಂದಿರುವುದಿಲ್ಲ. ಅಂತಾ ಬೈಯುತ್ತಿದ್ದರು ದಿನಾಂಕ 29-11-2015 ರಂದು ಮತ್ತೇ ಶೀಲದ ವಿಷಯದಲ್ಲಿಯೇ ನನ್ನ ಅತ್ತೆ ಮಾವ ಸಂಶಯ ಪಟ್ಟು ರಂಡಿ ನೀನು ಯಾರ ಜೋತೆ ಇದ್ದೀ ನೀನು ಗರ್ಭಿಣಿ ಇರುತ್ತೀ ಅದಕ್ಕೆ ನಿನಗೆ ಮುಟ್ಟು ಬರುತ್ತಿಲ್ಲ. ಅಂತಾ ಬೈದು ಮಧ್ಯಾಹ್ನ ನನ್ನ ಅತ್ತೆ ಮಾವ ನೀವು ಈ ರೀತಿ ಹಿಂಸೆ ಕೊಡುವುದು ಸಾಕಾಗಿದೆ ಅಂತಾ ಹೇಳಿದ್ದಕ್ಕೆ ನನ್ನ ಮಾವ ಜಾಕೀರ ಇತನು ರಂಡಿ ನೀನು ಏಕೆ ಸಾಯುತ್ತೀ ನಾವೇ ನಿನ್ನನ್ನು ಸಾಯಿಸುತ್ತೇವೆ ಅಂತಾ ಮನೆಯಲ್ಲಿರುವ ಸೀಮೆ ಎಣ್ಣೆಯನ್ನು ನನ್ನ ಮೈಮೇಲೆ ಹಾಕಿ ಬೆಂಕಿ ಹಚ್ಚಿದನು. ನನ್ನ ಅತ್ತೆ ಅಲ್ಲಿಯೇ ಇದ್ದರು ಬೆಂಕಿ ಆರಿಸದೇ ನನ್ನ ಮಾವನಿಗೆ ಕುಮ್ಮಕ್ಕು ನೀಡುತ್ತಿದ್ದಳು. ನಾನು ಚಿರಾಡಿದಾಗ ಅಕ್ಕ ಪಕ್ಕದವರು ಬಂದು ಬೆಂಕಿ ಆರಿಸಿ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಮದುವೆಯಾದಾಗಿನಿಂದ ವಿನಾಃ ಕಾರಣ ನನಗೆ ಮಾನಸಿಕ, ದೈಹಿಕ ಹಿಂಸೆ ಕೊಟ್ಟು ನನ್ನ ಶೀಲದ ಮೇಲೆ ಸಂಶಯ ಪಟ್ಟು ನನ್ನ ಮೈಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಮಾವ , ಅತ್ತೆ  ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 02.12.2015 ಸಾಯಂಕಾಲದ ವೇಳೆಯ ಸುಮಾರಿಗೆ ನಮ್ಮೂರ ಹಕೀಮಸಾಬ್‌ ದರ್ಗಾದ ಕಟ್ಟೆಯ ಮೇಲೆ ಅಂದಾಜು ವಯಾ 45 ರಿಂದ 50 ವಯಸ್ಸಿನ ಅಪರಿಚಿತ ಗಂಡು ಮನುಷ್ಯನು ಯಾವುದೋ ಒಂದು ರೋಗದಿಂದ ಬಳಲಿ ಅಸ್ವಸ್ಥನಾಗಿದ್ದರಿಂದ ಅವನಿಗೆ ಉಪಚಾರ ಸಲುವಾಗಿ 108 ಅಂಬ್ಯೂಲೇನ್ಸನಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಫರತಾಹಾಬದ್ ಹತ್ತಿರ ನಿನ್ನೆ ದಿನಾಂಕ 02.12.2015 ರಂದು ಸಾಯಂಕಾಲ 19:15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶಾಂತಯ್ಯ ತಂದೆ ಶರಣಯ್ಯ ಸ್ಥಾವರ ಮಠ ಸಾ|| ಗಂವ್ಹಾರ್ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.