POLICE BHAVAN KALABURAGI

POLICE BHAVAN KALABURAGI

02 June 2014

Gulbarga District Reported Crimes

ಮಾಂಗಲ್ಯ ಸರ ಕಿತ್ಉಕೊಂಡು ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಶೋಭಾ ಗಂಡ ವಿರುಪಾಕ್ಷಪ್ಪ ಕಡಕೊಳ ಸಾಃ ಮನೆ ನಂ.4-601/74/3/ಎ, ಬಸವೇಶ್ವರ  ಕಾಲೋನಿ ಗುಲಬರ್ಗಾ ಇವರು ದಿನಾಂಕ 02/06/2014 ರಂದು 07:15 ಎ.ಎಂ.ಕ್ಕೆ  ಸುಮಾರಿಗೆ ಹಾಲು ತರಲು ಅಂತಾ ಒಬ್ಬಳೆ ಬಸವೇಶ್ವರ ಕಾಲೋನಿಯ ಶಿವ ಮಂದಿರಕ್ಕೆ ಹೋಗುವ ಕ್ರಾಸ್ ಹತ್ತಿರ ನಡೆದುಕೊಂಡು ಹೋಗಿ ಹಾಲು ತೆಗೆದುಕೊಂಡು ಮರಳಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ಕಾಮರೆಡ್ಡಿ ಇವರ ಮನೆಯ ಹತ್ತಿರ ರೋಡಿನ ಮೇಲೆ ನನ್ನ ಎದುರುಗಡೆಯಿಂದ ಅಂದಾಜು ಸಮಯ 07:30 ಎ.ಎಂ. ಸುಮಾರಿಗೆ ಒಂದು ಮೋಟರ ಸೈಕಲ ಮೇಲೆ ಇಬ್ಬರು ಅಪರಿಚಿತ ಸವಾರರು ಬಂದವರೆ ನನ್ನ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ ಐದುವರೆ ತೋಲೆ ಬಂಗಾರದ ಮಂಗಳಸೂತ್ರ ಅಃಕಿಃ 1,35,000/- ರೂ ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಅದೆ ಮೋಟರ ಸೈಕಲ ಮೇಲೆ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀ ಅಮೀರ ತಂದೆ ಮಕ್ತುಮ ಮುಲ್ಲಾ ಸಾ: ತಡೋಳಾ ಇವರ ಅಣ್ಣನಾದ ನಬಿಲಾಲ ತಂದೆ ಮಹ್ಮದ
ಹನೀಫ ಮುಲ್ಲಾ ಇವರ ಮೊಮ್ಮಗಳಾದ ಕುಮಾರಿ ಶಫಿಯಾ ತಂದೆ ಶಾಜೀದ ಧರೆವಾಲೆ ಸಾ: ಹೊಸೂರ
ತಾ:ಅಫಜಲಪೂರ ಜಿ: ಗುಲಬರ್ಗಾ ಹಾ:ವ: ತಡವಳ ತಾ;ಅಕ್ಕಲಕೋಟ ಇವಳ ಜವಳದ ಕಾರ್ಯಕ್ರಮದ ನಿಮಿತ್ಯ ಗುಲಬರ್ಗಾದ ಖಾಜಾ ಬಂದೆನವಾಜ ದರ್ಗಾಕ್ಕೆ ಹೋಗುವ ಕುರಿತು ಮೈಸಲಗಿ ಗ್ರಾಮದ ಕಮಲಾಕರ ಬರಗುಡಿ ಇವರ ಪಿಕ್‌ಅಪ್‌ ವಾಹನ ನಂ ಎಮ್‌ಎಚ್‌ 13 ಎಎನ್‌ 5817 ನೇದ್ದು ಮುಗಿಸಿ ಸದರಿ ವಾಹನದಲ್ಲಿ ಇಂದು ದಿನಾಂಕ 02/06/2014 ರಂದು ಬೆಳಗಿನ ಜಾವ 01:30 ಗಂಟೆ ಸುಮಾರಿಗೆ ನಮ್ಮೂರಿನ ನಾನು ಹಾಗು ನನ್ನಂತೆ ನಮ್ಮ ಸಂಬಂದಿಕರಾದ 1) ಸುಲೆಮಾನ ತಂದೆ ನಬಿಲಾಲ ಮುಲ್ಲಾ 2) ಬಾಶಾ ತಂದೆ ಮದರ  ಮುಲ್ಲಾ 3) ನಬಿಲಾಲ ತಂದೆ ಮಹ್ಮದ ಹನೀಫ ಮುಲ್ಲಾ 4) ಚಾಂದಬೀ ಗಂಡ ಬಾಷಾ ಮುಲ್ಲಾ 5) ಜನತ್‌ಬೀ ಗಂಡ ಖಾಜಾಬಾಯಿ ಶೇಖ 6) ಗುಂಡು ತಂದೆ ಬಾಬು ಮುಲ್ಲಾ 7) ರಜಾಕ ತಂದೆ ಮಹ್ಮದ ಹನೀಫ ಮುಲ್ಲಾ 8) ನೂರಜಾ ಗಂಡ ರಜಾಕ ಮುಲ್ಲಾ 9) ಸಿಂದರ ತಂದೆ ಮಹ್ಮದ ಹನೀಫ್‌ ಮುಲ್ಲಾ 10) ಪರವಿನ ತಂದೆ ಸಿಕಂದರ ಮುಲ್ಲಾ 11) ಶಕೀಲ ತಂದೆ ಸಿಕಂದರ ಮುಲ್ಲಾ 12) ಸಮೀರ ತಂದೆ ಸಿಕಂದರ ಮುಲ್ಲಾ 13) ಮಹಿಮೂನಬಿ ಗಂಡ ನಬಿಲಾಲ ಮುಲ್ಲಾ 14) ಬಿಸ್ಮಿಲ್ಲಾ ಗಂಡ ರಮಜಾನ ಮುಲ್ಲಾ 15) ಆಯಶಾ ತಂದೆ ಸಿಕಂದರ ಮುಲ್ಲಾ 16) ಹಜರತ ಬೀ ಗಂಡ ಬುರಾನ ಮುಲ್ಲಾ 17) ರಮಜಾನ ತಂದೆ ದಾದುಮಿಯಾ ಮುಲ್ಲಾ  18) ಮೋಶಿನ ತಂದೆ ಸಿಕಂದರ ಮುಲ್ಲಾ 19) ಹುಸೇನ ತಂದೆ ಮದರಸಾಬ ಮುಲ್ಲಾ 20) ರಿಯಾನಾ 21) ಮುಮತಾಜ ಗಂಡ ಮಹಿಬೂಬ ಲವಣಿ 22) ಅಮೀನಾಬಿ ಗಂಡ ಮಹ್ಮದ ಹನೀಪ್ ಮುಲ್ಲಾ 23) ತನುಜಾ ತಂದೆ ಖಾಸಿಂಸಾಬ ಹಾಗು ಇತರರು ಕೂಡಿ ಗುಲಬರ್ಗಾಕ್ಕೆ ಹೊಗುವ ಕುರಿತು ಬೆಳಗಿನ ಜಾವ 01:30 ಗಂಟೆ ಸುಮಾರಿಗೆ ಅಲ್ಲಿಂದ ಹೊರಟು ಆಳಂದ ಮುಖಾಂತರ ಸಿಡ್ಸ ಪಾರಂ ದಾಟಿ ಕೊಡಲ ಹಂಗರಗಾ ಗ್ರಾಮ ಅಂದಾಜು 2 ಕೀಮೀ ದೂರ ಇರುವಾಗ ಬೆಳಗಿನ ಜಾವ 04:35 ಗಂಟೆ ಸುಮಾರಿಗೆ ರೋಡಿನ ಮೇಲೆ ಹೊಗುವಾಗ ನಮ್ಮ ಪಿಕ್‌ಅಪ್‌ ವಾಹನ ಚಾಲಕ ತನ್ನ ವಾಹನವನ್ನು ರೋಡಿನ ಎಡಬದಿಯಿಂದ ಸವಕಾಶವಾಗಿ ನಡೆಸಿಕೊಂಡು ಹೊಗುವಾಗ ಎದುರಿನಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಂದು ಕೆಎಸ್‌ಆರ್‌ಟಿಸಿ ಬಸ್‌ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದು ನಾವು ಕುಳಿತು ಹೊರಟ ಪಿಕ್‌ವಾಹನಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಅಫಘಾತ ಮಾಡಿದ ಪರಿಣಾಮ ನಮ್ಮ ವಾಹನ ಆಳಂದಕ್ಕೆ ಮುಖಮಾಡಿ ಮಗ್ಗಲಲ್ಲಿ ನಿಂತಿದ್ದು ಡಿಕ್ಕಿ ಪಡಿಸಿದ ಬಸ್ಸು ರೋಡಿನ ಎಡಗಡೆ ತಗ್ಗಿನಲ್ಲಿ ಮುಖ ಕೆಳಮಾಡಿ ನಿಂತಿದ್ದು ನಾನು ಪಿಕ್‌ಅಪ್‌ ವಾಹನದಿಂದ ಜಿಗಿದು ಕೆಳಗೆ ಬಿದ್ದೆನು. ನನಗೆ ಬಲಗಾಲಿಗೆ ಟೊಂಕಕ್ಕೆ ರಕ್ತಗಾಯವಾಗಿದ್ದು ಪಿಕ್‌ಅಪ್‌ದಲ್ಲಿ ಇದ್ದ ನಮ್ಮ ಜನರಿಗೆ ನೋಡಲಾಗಿ ಅವರಲ್ಲಿ 1) ನಬಿಲಾಲ ತಂದೆ ಮಹ್ಮದ ಹನೀಪ ಮುಲ್ಲಾ 2) ಬಾಷಾ ತಂದೆ ಮದರಸಾಬ ಮುಲ್ಲಾ 3)ನೂರಜಾ ಗಂಡ ರಜಾಕ್‌ ಮುಲ್ಲಾ 4) ಪರವಿನ ಗಂಡ ಸಿಕಂದರ ಮುಲ್ಲಾ 5) ಸಮೀರ ತಂದೆ ಸಿಕಂದರ ಮುಲ್ಲಾ 6) ಮಹಿಮೂನ ಬೀ ಗಂಡ ನಬಿಸಾಬ ಮುಲ್ಲಾ 7) ರಮಜಾನ ತಂದೆ ದಾದುಮಿಯಾ ಮುಲ್ಲಾ 8) ಮೋಸಿನ್‌ ತಂದೆ ಸಿಕಿಂದರ ಮುಲ್ಲಾ 9) ಹುಸೇನ ತಂದೆ ಮದರಸಾಬ ಮುಲ್ಲಾ 10) ರಿಯಾನ್‌ ಗಂಡ ಜಾವೀದ ಶೇಖ 11) ಮಮತಾಜ ಗಂಡ ಮಹಿಬೂಬ ಲಾವಣಿ 12) ಬಾವಾಶಾ ತಂದೆ ಖಾಜಾಬಾಯಿ ಮುಲ್ಲಾ ಮತ್ತು 13) ನಮ್ಮ ಪಿಕ್ಅಪ್‌ ವಾಹನದ ಚಾಲಕನಾದ ಕಮಲಾಕರ್‌ ಬರಗುಡೆ ಇತನಿಗೂ ಭಾರಿಗಾಯ ಹೊಂದಿ ಸದರಿ 13 ಜನರು ಭಾರಿ ಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರು ತ್ತಾರೆ. ಹಾಗು ನಮ್ಮ ವಾಹನದಲ್ಲಿ ಕುಳಿತಿದ್ದ ಇನ್ನುಳಿದವರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು ಅದರಲ್ಲಿ ಕೆಲವರಿಗೆ ಆಳಂದ ಸರಕಾರಿ ಆಸ್ಪತ್ರೆಗೆ ಹಾಗು ಕೆಲವರಿಗೆ ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ನರಸಯ್ಯ ತಂದೆ ನಾಗಯ್ಯ ಗುತ್ತೇದಾರ ಸಾ: ಗಡಿಕೇಶ್ವರ ತಾ:ಚಿಂಚೋಳಿ ಜಿ:ಗುಲಬರ್ಗಾ ರವರು  ದಿನಂಕ:02-06-2014 ರಂದು 8 ಎ.ಎಮಕ್ಕೆ ನಮ್ಮೂರಿನಿಂದ ನನ್ನ ಮಗನಾದ ರಮೇಶ ಇತನು ನಮ್ಮ ದ್ವಿಚಕ್ರ ವಾಹನ ನಂ. ಕೆಎ-32-ಕ್ಯೂ-8732 ನೇದ್ದರ ಮೇಲೆ ನಮ್ಮೂರಿನಿಂದ ನನ್ನ ಕಣ್ಣಿನ ಡ್ರೆಸಿಂಗ್ ಮಾಡಿಸಿಕೊಂಡು ಬರಲು ಗುಲಬರ್ಗಾದ ಬರೂಕಾ ಆಸ್ಪತ್ರೆಗೆ 10-00 ಎ.ಎಮಕ್ಕೆ ಬಂದು ಅಲ್ಲಿಯ ವೈದ್ಯಾಧೀಕಾರಿಯವರಿಂದ ನನ್ನ ಕಣ್ಣಿನ ಡ್ರೇಸಿಂಗ ಮಾಡಿಸಿಕೊಂಡು ಅಂದಾಜು 11 ,ಎಮದ ಸುಮಾರಿಗೆ ಅಲ್ಲಿಂದ ನಮ್ಮೂರಿಗೆ ಹೊರಟೇವು. ಮೊಟಾರ ಸೈಕಲನ್ನು ನನ್ನ ಮಗ ರಮೇಶನು ಚಲಾಯಿಸುತ್ತಿದ್ದು, ನಾನು ಹಿಂದೆ ಕುಳಿತಿದ್ದು. ಜೇವರ್ಗಿ ರೋಡ ಕೇಂದ್ರಿಯ ವಿದ್ಯಾಲಯ ಕ್ರಾಸ ಹತ್ತಿರ ಗುಲಬರ್ಗಾ ಕಡೆಗೆ ಹೊರಟಾಗ ಗುಲಬರ್ಗಾ ಕಡೆಯಿಂದ ಕೆ.ಎಸ.ಆರ್.ಟಿ.ಸಿ ಬಸ್ ಚಾಲಕನು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮಮೊಟಾರ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಹಿಂದೆ ಕುಳಿತ ನಾನು ಹಾರಿ ಪಕ್ಕದಲ್ಲಿ ಬಿದ್ದೇನು. ನನ್ನ ಮಗ ಬಸ್ಸಿನ ಮುಂದಿನ ಗಾಲಿಯಲ್ಲಿ ಸಿಲ್ಕಿಕೊಂಡು ಮೊಟಾರ ಸೈಕಲ ಸಮೇತ ಮುಂದೆ ಹೋಯಿತು. ಅಷ್ಟರಲ್ಲಿಯೇ ನನ್ನ ತಮ್ಮನಾದ ನಾಗಯ್ಯ ಕಾಶಪ್ಪ ಗುತ್ತೇದಾರ ಇವರು ಬಂದು ನೋಡಿ ನನಗೆ ಎಬ್ಬಿಸಿ ಕುಳಿಸಿದರು. ನಾನು ಮತ್ತು ನನ್ನ ತಮ್ಮ ಇಬ್ಬರು ಹೋಗಿ ನೋಡಲು ನನ್ನ ಮಗನಿಗೆ ಬಲಗಾಲ ಪಾದದ ಹತ್ತಿರ ಭಾರಿ ರಕ್ತಗಾಯವಾಗಿ ಮುರಿದು ಹೋಗಿದ್ದು. ಬಲಗೈ ಪೂರ್ತಿ ಮುರಿದಿದ್ದು. ಎಡಗೈಗೆ ತರಚಿದ ಗಾಯ. ಬಲಗಣ್ಣಿನ ಹತ್ತಿರ ರಕ್ತಗಾಯ, ಮೆಲಕಿನಿಂದ ಕಿವಿಯವರೆಗೆ ಚಪ್ಪಟ್ಟೆಯಾಗಿರುತ್ತದೆ. ನನಗೆ ಟೊಕ್ಕಕ್ಕೆ ಒಳಪೆಟ್ಟಾಗಿರುತ್ತದೆ. ಸದ್ರಿ ಬಸ ನಂ. ನೋಡಲು ಕೆಎ-33-ಎಫ-212 ನೇದ್ದು ಇದ್ದು. ಸದ್ರಿ ಬಸ್ಸನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು. ನನ್ನ ಮಗನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 01-06-2014 ರಂದು ರಾತ್ರಿ 9-30 ಗಂಟೆಗೆ ಶ್ರೀ ಮಲ್ಲಿಕಾರ್ಜುನ  ತಂದೆ ನಿಂಗಣ್ಣಾ ಬನ್ನಿ ಸಾ: ಮನೆ ನಂ 10-368 ರಾಮ ಮಂದಿರ ಗೋವಾ ಹೋಟಲ ಹತ್ತಿರ ಬ್ರಹ್ಮಪೂರ  ಗುಲಬರ್ಗಾ ರವರು ತನ್ನ ಕೆಲಸದ ಸಂಬಂದ ಹೋಗಿ ವಾಪಸ್ಸ  ಲಾಲಗೇರಿ ಕ್ರಾಸ ಮುಖಾಂತರವಾಗಿ  ಗೋವಾ ಹೋಟಲ ಕಡೆಗೆ ನಡೆದುಕೊಂಡು ಹೋಗುವಾಗ ಲಾಲಗೇರಿ ಕ್ರಾಸ್ ಸಮೀಪವಿರುವ  ಮುಕ್ತಾಂಬಿಕಾ ಡಿಗ್ರಿ ಕಾಲೇಜ ಎದುರು ರೋಡ ಮೇಲೆ  ಮೋಟಾರ ಸೈಕಲ ನಂ ಕೆಎ-32 ಕೆ-8920 ರ ಸವಾರ ಎದರಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀಮತಿ ಹೀರಾಬಾಯಿ ಗಂಡ ಬಂದು ರಾಠೋಡ ಸಾ|| ಭಂಕೂರ ಇವರ ಮಗ  ದೇವರಾಮ ವ||20 ವರ್ಷ ಈತನು ದಿನಾಂಕ 25.05.2014 ರಂದು ಮಧ್ಯಾಹ್ನ 5.00ಪಿ.ಎಮ್. ಗಂಟೆಯ ಸುಮಾರಿಗೆ ಮನೆಯಿಂದ ಹೊರಗಡೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ. ಸಂಬಂಧಿಕರಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಟಕಲ ಠಾಣೆ : ಶ್ರೀ ಮಾಣಿಕ ತಂದೆ ಶರಣಪ್ಪಾ ಸಾ ಪಸ್ತಾಪೂರ ತಾ : ಚಿಂಚೋಳಿ ಜಿ : ಗುಲಬರ್ಗಾ ರವರ ಮಗನಾದ ಚಂದ್ರಕಾಂತ ಇವನು ದಿನಾಂಕ 22-05-2014 ರಂದು 10 ಎಎಮ್ ಸುಮಾರಿಗೆ ಪಸ್ತಾಪೂರದಿಂದ ಹುಮನಾಬಾದಕ್ಕೆ ಬರುತ್ತೆನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ಬಂದಿರುವುದಿಲ್ಲಾ . ಸಂಬಂಧಿಕರಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Glbarga District Reported Crimes

ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಬಸಪ್ಪಾ ತಂದೆ ಬಿಮಪ್ಪಾ ಬಜಂತ್ರಿ ಪಿ.ಐ ಸ್ಟೇಷನ್ ಬಜಾರ ಪೊಲೀಸ್ ಠಾಣೆ ರವರು. ದಿನಾಂಕ. 18.05.2014 ರಂದು ಶ್ರೀ ಗಣೇಶ ತಂದೆ ರಾಮಚಂದ್ರ ಇವರ ದೂರಿನ ಮೇರೆಗೆ ಠಾಣೆ ಗುನ್ನೆ ನಂ. 87/2014 ಕಲಂ. 420, 384, 387, 448, 323, 504, 506 ಸಂ. 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣವು ಗುರುಶಾಂತ ಪಟ್ಟೆದಾರ ಇವರ ವಿರುದ್ದ ಇರುತ್ತದೆ. ಸದರಿಯವನು ತನಿಖೆಗೆ ಸಹಕರಿಸುತ್ತಿಲ್ಲ. ದಿನಾಂಕ. 31.05.2014 ರಂದು 6.30 ಪಿ.ಎಂಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಕಛೇರಿ ಸ್ಟೇಪ ಹತ್ತಿರ ಗುರುಶಾಂತ ಪಟ್ಟೆದಾರ ಇವನು ನನ್ನನ್ನು ನೋಡಿ ನಿನಗೆ ಸಸ್ಪೆಂಡ ಮಾಡುತ್ತೇನೆ ಅಂತಾ ಒದರಾಡಿದನು. ಮತ್ತು ಇಂದು ದಿನಾಂಕ. 01.06.2014 ರಂದು 12.20 ಪಿ.ಎಂಕ್ಕೆ ನಾನು ಮತ್ತು ಪಿ.ಎಸ್.ಐ (ಅವಿ) ಮತ್ತು ಸಿಬ್ಬಂದಿಯವರಾದ ಅಶೋಕ ಪಿಸಿ-625, ಶಿವರಾಜ ಪಿಸಿ-277, ಚನ್ನಮಲ್ಲಪ್ಪಾ ಪಿಸಿ-241, ಹಾಜಿಮಲಂಗ ಪಿಸಿ-640, ಶಿವಾನಂದ ಪಿಸಿ-1240, ಅಕ್ಬರ ಪಿಸಿ-784 ಕೂಡಿ ಡಿ.ಎಸ್.ಪಿ ಆಫಿಸಿನಿಂದ ಠಾಣೆಗೆ ಬರುವಾಗ ತಾಲ್ಲುಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಲಯದ ಎದುರಿಗೆ ಸದರಿ ಗುರುಶಾಂತ ಪಟ್ಟೆದಾರ ಇವನು ನನ್ನ ಜೀಪನ್ನು ತಡೆದು ನಿಲ್ಲಿಸಿ ಏ ನಿನ್ನ ಒಂದು ವಾರದಲ್ಲಿ ಸಸ್ಪೆಂಡ ಮಾಡುತ್ತೇನೆ ನಾನು ಸಿ.ಎಂ ಮತ್ತು ಹೆಚ್.ಎಂ ಗೆ ಬೇಟಿಯಾಗಿ ಬಂದಿದ್ದೆನೆ ನಿನ್ನನ್ನು ನೋಡುತ್ತೇನೆ ಅಂತ ಅಂದವನೆ ತನ್ನ ಹತ್ತಿರ ಇದ್ದ ಪಿಸ್ತೂಲಿನಿಂದ ನನಗೆ ತೊರಿಸಿ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದನು. ಮತ್ತು ಅವ್ಯಾಚ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡತಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-06-2014 ಸರಕಾರಿ ಪ್ರೌಡ ಶಾಲೆ ಲಕ್ಷ್ಮಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೋಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 5 ಜನ ಆರೋಪಿತರನ್ನು ಹಿಡಿದು ವಿಚಾರಿಸಲು 1.ಬಸವರಾಜ ತಂದೆ ಶಿವಶರಣಪ್ಪ ಅಗಸಿ 2. ಶರಣಬಸು ತಂದೆ ಶಿವಯೋಗೆಪ್ಪ ನಂದಗೇರಿ ಸಾ : ಇಬ್ಬರು ಸೊನ್ನ 3.ಸಿದ್ದಪ್ಪ ತಂದೆ ದುಂಡಪ್ಪ ಕೋರಳ್ಳಿ 4. ರವಿ ತಂದೆ ಸಿದ್ದಣ್ಣ ಬಿರಾದ 5. ರಾಜು ತಂದೆ ಚನ್ನಬಸಪ್ಪ ಹಳ್ಳೆಪ್ಪಗೋಳ ಸಾ : ಎಲ್ಲರು ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರಿಂದ ನಗದು ಹಣ 8910/- ರೂ ಹಾಗು 52 ಇಸ್ಪೀಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಶಬಾನಾಬೇಗಂ ಗಂಡ ಜಮೀಲ್‌ ಅಹ್ಮದ  ಸಾ:ಮದೀನಾ ಕಾಲೊನಿ  ಗುಲಬರ್ಗಾ ಇವರು ಮಗಳಾದ  ವ:7 ವರ್ಷ ಇವಳು ಆಲ ಅಮೀನ್ ಉರ್ದು ಶಾಲೆಯಲ್ಲಿ 2 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಾಳೆ.  ನನಗೆ ಆರಾಮ ಇಲ್ಲದ ಪ್ರಯುಕ್ತ ದಿನಾಂಕ:30/05/2014 ರಂದು ಮುರಗೇಶ ಪಸ್ತಾಪುರ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆಯಾಗಿ ಉಪಚಾರ ಪಡೆದು ಇಂದು ದಿನಾಂಕ:31/05/2014 ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಸಾಯಂಕಾಲ 4.30 ಗಂಟೆ ಸುಮಾರಿಗೆ ಮನೆಗೆ ಬಂದು ಮನೆಯಲ್ಲಿ ಇದ್ದಿರುತ್ತೇನೆ. ಇಂದು ದಿನಾಂಕ:01/06/2014 ರಂದು ನನ್ನ ಗಂಡನು ರವಿವಾರ ರಜೆ ಇರುವದರಿಂದ ಕೆಲಸಕ್ಕೆ ಹೋಗದೆ ನೀಲೂರ ದರ್ಗಾಕ್ಕೆ  ಹೋಗಿರುತ್ತಾನೆ. ಮನೆಯಲ್ಲಿ ನಾನು ನನ್ನ ಮಕ್ಕಳು ಇದ್ದು ನನ್ನ ಮಗಳು ನನ್ನ ಭಾವನಾದ ನಜೀರ ಅಹ್ಮದ ಇವರ ಅಂಗಡಿ ಹತ್ತಿರ ಆಟ ಆಡಲು ಹೋಗಿದ್ದಳು. ರಾತ್ರಿ 7.00 ಗಂಟೆ ಸುಮಾರಿಗೆ ಮನೆಗೆ ಬಂದು ಮನೆಯಲ್ಲಿ ಕುರ್ಚಿಯ ಮೇಲೆ ಕುಳಿತು ಗುಪ್ತಾಂಗ ಒರೆಸುತ್ತಾ ಅಳುತಿದ್ದಳು ಆಗ ನಾನು ನನ್ನ ಮಗಳಿಗೆ ವಿಚಾರಿಸಲು ಅವಳು ಹೇಳಿದ್ದೇನೆಂದರೆ ನಮ್ಮ ದೊಡ್ಡಪ್ಪನಾದ ನಜೀರ ಅಹ್ಮದ ಇವರ ಅಂಗಡಿಯಲ್ಲಿ ಕುಳಿತು ಕೊಂಡಿದ್ದ  ಜಾಕೀರ ಹುಸೇನ್ ಇವನು ನನಗೆ ಹೆಗಲ ಮೇಲೆ ಕೂಡಿಸಿಕೊಂಡು ಹೋಗಿ ದೊಡ್ಡಪ್ಪನ ಗೋದಾಮ ಒಳಗಡೆ ಜೋಳದ ಚೀಲದ ಮೇಲೆ ಮಲಗಿಸಿ ನನ್ನ ಬಾಯಿ ಒತ್ತಿ ಹಿಡಿದು ಎದೆಯ ಮೇಲೆ ಕೈ ಆಡಿಸಿ ಅವನ ಶಿಶ್ನವನ್ನು ತೆಗೆದು ನನ್ನ ಯೋನಿಯ ಮೇಲೆ ಆಡಿಸಿ ಸಂಭೋಗ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.