POLICE BHAVAN KALABURAGI

POLICE BHAVAN KALABURAGI

14 August 2012

Gulbarga District reported crimes

ಅಪಘಾತ ಪ್ರಕರಣಗಳು :ಗ್ರಾಮೀಣ ಠಾಣೆ :ದಿನಾಂಕ:12/8/12 ರಂದು ಮದ್ಯಾಹ್ನ 4:30 ಗಂಟೆಯ ಸುಮಾರಿಗೆ ಶ್ರೀ ಲಕ್ಷ್ಮಿಕಾಂತ ತಂದೆ ಭೀಮಶ್ಯಾ ಬಿಸಗೊಂಡ ಸಾ: ಪಟ್ಟಣ್ಣ ತಾ: ಜಿ: ಗುಲಬರ್ಗಾ ರವರು ಸೂರ್ಯಪಾನ ಎಣ್ಣೆ ಹಾಗೂ ಹಿಂಡಿ ತೆಗೆಯುವ ಕುರಿತು ರಸ್ತೆ ಪಕ್ಕದಲ್ಲಿಯ ಎಣ್ಣೆ ಗಾಣದ ಮುಂದಿನ ರಸ್ತೆಯ ಎಡಬದಿಯಲ್ಲಿ ತನ್ನ ಮೋ ಸೈಕಲ ನಂ ಕೆಎ 32 ಎಬಿ 2016 ನೇದ್ದು ಹಚ್ಚಿ ಪಕ್ಕದಲ್ಲಿ ನಿಂತಾಗ, ಗುಲ್ಬರ್ಗಾ ಕಡೆಯಿಂದ ಕಾರ ನಂ ಎಮ್ಹೆಚ್‌ 12 ಡಿಎಸ್‌ 2117 ನೇದ್ದರ ಚಾಲಕ ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು  ಬಂದು ಡಿಕ್ಕಿ ಪಡೆಸಿದ್ದರಿಂದ ತಲೆಯ ಹಿಂದೆ ಹಣೆಯ ಮೇಲೆ ಬಲಗಣ್ಣಿನ ಕೆಳಗೆ ಮೂಗಿನ ಮೇಲೆ ಗದ್ದದ ಮೇಲೆ ಬಾರಿ ರಕ್ತಗಾ &ಗುಪ್ತಗಾಯಗಳಾಗಿ ಮೋಳಕಾಲಿನ ಮೇಲೆ ಬಾರಿ ಗುಪ್ತಗಾಯವಾಗಿದ್ದು ಇರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 263/12 ಕಲಂ 279 338 ಐಪಿಸಿ ಸಂ/ 187 ಐಎಮವಿ ಎಕ್ಟ್‌‌‌ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮಳಖೇಡ ಠಾಣೆ :ದಿನಾಂಕ 12/08/2012ರಂದು ಶ್ರೀ ನಸಿರೋದ್ದಿನ್ ತಂದೆ ಅಜೀಜ್ ಮೀಯಾ ಸಿಪಿಸಿ 602 ಮಳಖೇಡ ಪೊಲೀಸ್ ಠಾಣೆ ತಮ್ಮ ಕರ್ತವ್ಯ ಮುಗಿಸಿಕೊಂಡು ಮಳಖೇಡ ಗ್ರಾಮದಿಂದ ಸೇಡಂ ಕ್ಕೆ ತಮ್ಮ ದ್ವೀ ಚಕ್ರ ವಾಹನ ನಂ ಕೆ.ಎ-32 ಕ್ಯೂ-2309 ನೇದ್ದರ ಮೇಲೆ ಹೋಗುತ್ತಿದ್ದಾಗ ಹೂಡಾ (ಕೆ) ಗ್ರಾಮದ ಗೇಟ ದಾಟಿ ಗುಲಬರ್ಗಾ ಸೇಡಂ ರೊಡಿನ ಮೇಲೆ ಹೋಗುತ್ತಿದ್ದಾಗ ಗೂಡ್ಸ ಆಟೋ ನಂ ಕೆ.ಎ-32 ಎ-5437 ನೇದ್ದರ ಚಾಲಕ ಮುತ್ತಪ್ಪ ತಂದೆ ಬೀರಪ್ಪ ಸಾತೋರ ಇತನು ತನ್ನ ಆಟೋವನ್ನು ನಿಷ್ಕಾಳಜೀತನದಿಂದ ನಡೆಸಿ ಡಿಕ್ಕಿ ಪಡಿಸಿ ಭಾರಿ ರಕ್ತ ಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆ ಗುನ್ನ ನಂ.52/2012 ಕಲಂ 279.338 ಐಪಿಸಿ ನೇದ್ದರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ 13-08-2012 ರಂದು ಬೆಳಗ್ಗೆ 10-15 ಗಂಟೆಗೆ ಶ್ರೀ ಚಂದ್ರಶೇಖರ ತಿಗಡಿ ಪಿ.ಎಸ್.ಐ ರವರು ಠಾಣೆಗೆ ಬಂದು ಒಂದು ಲಿಖೀತ ವರದಿ ನೀಡಿದರ ಸಾರಾಂಶವೆನೆಂದರೆ ಇಂದು ದಿನಾಂಕ 13-08-12 ರಂದು ನಾನು ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಪೆಟ್ರೊಲಿಂಗ ಮಾಡುತ್ತಾ ರೈಲ್ವೆ ಸ್ಟೇಷನ ಕಡೆಗೆ ಹೋಗಿ ಮರಳಿ ಎಸ್.ವಿ.ಪಿ.ಸರ್ಕಲ್ ಕಡೆಗೆ ಬರುತ್ತಿದ್ದಾಗ ರಾಜಾಸ್ಥಾನಿ ಲಾಡ್ಜ ಎದುರು ರೋಡಿನ ಮೇಲೆ ಬೆಳಗ್ಗೆ 9-45 ಗಂಟೆಗೆ ಒಂದು ಲಾರಿ ನಂ: ಜಿಕ್ಯೂಎ 7014 ರ ಚಾಲಕ ತನ್ನ ಲಾರಿಯನ್ನು ರೋಡಿನ ಮಧ್ಯದಲ್ಲಿ ನಿಲ್ಲಿಸಿದ್ದು ನಾನು ಸದರ ಲಾರಿಯ ಹತ್ತಿರ ಹೋಗಿ ವಿಚಾರಿಸಲು ಲಾರಿಯಲ್ಲಿ ಯಾರು ಇರಲಿಲ್ಲಾ. ಅಷ್ಠರಲ್ಲಿ ಲಾರಿ ಚಾಲಕ ತನ್ನ ಲಾರಿ ಹತ್ತಿರ ಬಂದಾಗ ಆತನ ಹೆಸರು ವಿಚಾರಿಸಲು ಹಸನ ತಂದೆ ಖಾಜಾ ಮೈನೋದ್ದಿನ ಸಾ:ಅಪ್ಪರಗಲ್ಲಿ ಹಮಾಲವಾಡಿ ಗುಲಬರ್ಗಾ ಸಾ:ಅಪ್ಪರಗಲ್ಲಿ ಹಮಾಲವಾಡಿ ಗುಲಬರ್ಗಾ ಅಂತಾ ಹೇಳಿದನು. ಸದರಿಯವನು ವಾಹನ ಚಾಲನಾ ಪರವಾನಿಗೆ ಪತ್ರ ಹೊಂದದೆ ಮತ್ತು ತನ್ನ ವಾಹನವನ್ನು ಸಾರ್ವಜನಿಕರ ವಾಹನ ತಿರಗಾಡುವ ರೋಡಿನ ಮೇಲೆ ತನ್ನ ಲಾರಿ ಅಡ್ಡ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯುಂಟುಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಅಶೋಕ ನಗರ ಠಾಣೆ :ದಿನಾಂಕ 12/08/2012 ರಂದು 8-30 ಪಿ.ಎಂ.ಕ್ಕೆ ಪಿರ್ಯಾದಿ ಮೀರಾ ತಂದೆ ಭೀಮಶ್ಯಾ ನಾಯ್ಕೋಡಿ ಸಾ|| ಹೂವಿನಳ್ಳಿ ತಾ|| ಅಫಜಲಪೂರ ಹಾ.ವ|| ಕಾಂಬ್ಳೆ ಬಿಲ್ಡಿಂಗ ವಿದ್ಯಾನಗರ ಗುಲಬರ್ಗಾ ಇವರು 4 ತಿಂಗಳಿಂದ ಗುಲಬರ್ಗಾದ ಓಂಕಾರ ಡಿಸ್ಟೂಬ್ಯೂಟರದಲ್ಲಿ ಕಂಪ್ಯೂಟರ ಕೆಲಸಮಾಡಿಕೊಂಡಿದ್ದು ವಿದ್ಯಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು.ತನ್ನ ಮನೆಯ ಪಕ್ಕದ ರೂಂ ನಲ್ಲಿ ನಿರ್ಮಲ @ಅಂಬಿಕಾ ಸಾ||ಶಹಾಬಾದ ಎನ್ನುವವಳು ಕೂಡಾ ಬಾಡಿಗೆಯಿಂದ ಇದ್ದು ನರ್ಸ ಕೆಲಸ ಮಾಡಿಕೊಂಡಿರುವದಾಗಿ ಹೇಳಿದ್ದಳು.ಆದರೆ ಎಂದು ನರ್ಸ ಡ್ರಸ್ ಹಾಕಿಕೊಂಡು ಹೋಗಿರುವದು ನೋಡಿರುವದಿಲ್ಲ. ಹೀಗಿದ್ದು ದಿನಾಂಕ : 08/08/2012 ರಂದು ಸಾಯಂಕಾಲ 7 ಪಿ.ಎಂ ಸುಮಾರಿಗೆ ನಾನು ವಿದ್ಯಾನಗರದ ಬಾಡಿಗೆ ರೂಂನಲ್ಲಿ ಇರುವಾಗ ಪಕ್ಕದ ರೂಂನವಳಾದ ನಿರ್ಮಲಾ @ಅಂಬಿಕಾ ಎನ್ನುವವಳು ನಾನು ಫೋಟೊ ತೆಗೆದುಕೊಳ್ಳುವದಿದೆ ನಿನ್ನಲ್ಲಿಯ ಬಂಗಾರದ ಚೈನು ಮತ್ತು ಕಿವಿಯಲ್ಲಿಯ ಬಂಗಾರದ ಹೂವುಗಳನ್ನು ಕೊಡು ಅಂತಾ ಕೇಳಿದಕ್ಕೆ ನಾನು ಮರಳಿಕೊಡುತ್ತಾಳೆಂದು ನಂಬಿ ಕೊಟ್ಟಿರುತ್ತೆನೆ ಆದರೆ ನಿರ್ಮಲಾ @ಅಂಬಿಕಾ ಇವಳು ಮರಳಿ ಕೊಡದೆ ಮೋಸ ಮಾಡಿ ಒಟ್ಟು ಅ.ಕಿ. 24,000=00 ರೂ ಬೆಲೆ ಬಾಳುವ ಬಂಗಾರದ ಚೈನು ಮತ್ತು ಕಿವಿ ಹೂಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಇಂತಹ ಮೊಸ ಮಾಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಸೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದ ಪ್ರಕರಣಗಳು :
ಗ್ರಾಮೀಣ ಠಾಣೆ :ದಿನಾಂಕ:12/8/12ರಂದು ಸಾಯಂಕಾಲ ಡಬರಾಬಾದ ಗ್ರಾಮದ ಸೀಮಾಂತರದಲ್ಲಿ ಬರುವ ಮಹಾಂತೇಶ ಪಾಟೀಲ ಇವರ ಹೊಲದಲ್ಲಿ ಇಸ್ಪೇಟ ಜೂಜಾಟವಾಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸದರಿ ಇಸ್ಪೇಟ ಜೂಜಾಟ ದಾಳಿ ಕುರಿತು ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1. ಬಸವರಾಜ ತಂ/ ವೀರಭದ್ರಪ್ಪ ಚಿಂಚೋಳಿ ಸಾ: ಬಸವೇಶ್ವರ ಕಾಲನಿ ಗುಲ್ಬರ್ಗಾ 2. ವಿಠಲರಾವ ಕಲ್ಯಾಣರಾವ ಅವರಾದಸಾ: ರೋಜಾ (ಕೆ) ಗುಲಬರ್ಗಾ 3.ಚಂದ್ರಶೇಖರ ತಂ/ ಯಂಕಣ್ಣ ಉಚ್ಛಾ ಸಾ: ಜಗತ ಗುಲಬರ್ಗಾ 4. ಶಿವುಕುಮಾರ ತಂ/ ಅಪ್ಪರಾವ ಸಾ: ಜಗತ ಗುಲಬರ್ಗಾ 5. ಮಹೇಶ ತಂ/ ರೇವಣಸಿದ್ದಪ್ಪ ಮೋಟಗೋಳ ಸಾ: ರೋಜಾ(ಕೆ) ಗುಲ್ಬರ್ಗಾ 6.ವಿಜಯಕುಮಾರ ತಂ/ ಶಿವಶರಣಪ್ಪ ಬೆಣ್ಣೂರ ಸಾ: ರೋಜಾ(ಕೆ) ಗುಲಬರ್ಗಾ 7. ದಸ್ತಗಿರಿ ತಂ/ ಮಶಾಕಸಾಬ ಬಸವಪಟ್ಟಣ್ಣ ಸಾ: ರೋಜಾ (ಕೆ) ಗುಲ್ಬರ್ಗಾ 7 ಜನ ಆಪಾದಿತರನ್ನು ಹಿಡಿದು ಅವರಿಂದ ನಗದು ಹಣ 8540/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಅವರ ಮೇಲೆ ಗ್ರಾಮೀಣ ಠಾಣೆ ಗುನ್ನೆ ನಂ 262/12 ಕಲಂ 87 ಕೆಪಿ ಎಕ್ಟ್‌ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಶಾಹಾಬಾದ ನಗರ ಠಾಣೆ :ದಿನಾಂಕ: 11/08/2012 ರಂದು, ಹಳೆ ಶಹಾಬಾಧ ಗ್ರಾಮದ ಶಾಂತಪ್ಪಾ ಅಸಗಿ ಇವರ ಮನೆಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ ಬಾಹರ ಎಂಬ ಇಸ್ಪೀಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ದೈವ ಲೀಲೆ ಆಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ಶಾಹಾಬಾದ ನಗರ ಠಾಣೆ ಮತ್ತು ಸಿಬ್ಬಂದಿಜನರು ಹಾಗೂ ಪಂಚರ ಜೋತೆಗೆ ಮೇಲೆ ತೋರಿಸಿದ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1.ಶಾಂತಪ್ಪಾ ತಂದೆ ಶರಣಪ್ಪಾ ಅಸಗಿ 2. ಬಶೀರ ತಂದೆ ಲಾಡ್ಲೆಸಾಬ ಅಳ್ಳಿ 3. ಶಾಂತಪ್ಪಾ ತಂದೆ ದೇವಿಂದ್ರಪ್ಪಾ ಮಾಡ್ಯಾಳ 4. ಕಾಂತಪ್ಪಾ ತಂದೆ ಅಯ್ಯಪ್ಪಾ ಕುಂಬಾರ 5. ಸಿದ್ದಪ್ಪಾ ತಂದೆ ಮಲ್ಲಪ್ಪಾ ಜೈನಾಪುರ 6. ಬಸಯ್ಯ ತಂದೆ ಕರಣಯ್ಯ ಹಿರೆಮಠ ಸಾ: ಎಲ್ಲರು ಹಳೆ ಶಹಾಬಾದ ಇವರನ್ನು ದಸ್ತಗೀರ ಮಾಡಿಕೊಂಡು ಅವರಿಂದ ಒಟ್ಟು 4035/-ರೂ ನಗದು ಹಣ ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಕೊಂಡು ಸದರಿಯವರ ವಿರುದ್ದ ಶಾಹಾಬಾದ ನಗರ ಠಾಣೆ ಗುನ್ನೆ ನಂ 103/2012 ಕಲಂ:87 ಕೆಪಿ ಆಕ್ಟ್‌ ಪ್ರಕರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :ಚಿತ್ತಾಪೂರ ಠಾಣೆ :ಶ್ರೀ ಚವಾಣ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪೂರ ಇವರು ದಿನಾಂಕ 10/08/12 ರಂದು ಮಧ್ಯಾಹ್ನ 3-45 ಗಂಟೆ ಸುಮಾರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾಗಾಪುರದ ಮುಖ್ಯ ಗುರುಗಳಾದ ಶ್ರೀಮತಿ ವಿಜಯಲಕ್ಷ್ಮಿ ರವರ ಪತಿಯಾದ ಸಿದ್ದಣ್ಣ ಬಿರಾದಾರ ಕುಡಿದ ಅಮಲಿನಲ್ಲಿ ಕಛೇರಿಯಲ್ಲಿ ಬಂಧು ಕರ್ತವ್ಯಕ್ಕೆ ಅಡೆ ತಡೆ ಮಾಡಿ ಎಲ್ಲರಿಗೆ ಮನಬಂದಂತೆ ಬೈದು ಕಛೇರಿ ಗೇಟ ಹಿಡಿದು ಎಳೆದಾಡಿ ಮನಬಂದಂತೆ ಮಾತಾಡಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆ ಗುನ್ನೆ ನಂ 74/2012ಕಲಂ 353,504,506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.