POLICE BHAVAN KALABURAGI

POLICE BHAVAN KALABURAGI

14 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 11-03-2018 ರಂದು  ನನ್ನ ಅಣ್ಣ ನಭಿಲಾಲ ಮತ್ತು ನಮ್ಮ ಓಣಿಯ ಗೌಸೋದ್ದಿನ್ ತಂದೆ ಇಸ್ಮಾಯಿಲ್ ಭಾಗವಾನ ಹಾಗೂ ರೀಯಾನ ಬೇಗಂ ಗಂಡ ಇಸ್ಮಾಯಿಲ್ ಭಾಗವಾನ ರವರೇಲ್ಲರೂ ಭೋಗನಳ್ಳಿ ಗ್ರಾಮದ ಆಸೀಫ್ ತಂದೆ ಜೈನೋದ್ದಿನ್ ಗಿರಣಿ ಎಂಬಾತನು ನಡೆಸುವ ಕಾರ ನಂ ಕೆಎ-05-ಎಮ್.ಸಿ-6064 ನೇದ್ದರಲ್ಲಿ ಮಾಶಾಳ ಗ್ರಾಮಕ್ಕೆ ದೇವರು ಕೇಳಲು ಮನೆಯಿಂದ ಆಸೀಪ್ ಗಿರಣಿ ಎಂಬಾತನೊಂದಿಗೆ ಹೋಗಿದ್ದು ಕಾರನ್ನು ಆಸೀಫನೆ ನಡೆಸಿಕೊಂಡು ಹೋಗಿರುತ್ತಾನೆ. ಬೆಳಿಗ್ಗೆ 09:40 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮಾತೋಳಿ ಗ್ರಾಮದ ಯಾರೋ ಒಬ್ಬರು ನನ್ನ ಮೋಬಾಯಿಲ್ ಫೋನ್ ಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಕಲಬುರಗಿ-ಅಫಜಲಪೂರ ರೋಡಿನ ಮೇಲೆ ಮಾತೋಳಿ ಗ್ರಾಮ ದಾಟಿ ಸ್ವಲ್ಪ ಮುಂದೆ ಹೋದ ನಂತರ ನಿಮ್ಮ ಅಣ್ಣ ನಭಿಲಾಲ ಮತ್ತು ಗೌಸೋದ್ದಿನ್ ಭಾಗವಾನ ಹಾಗೂ ರೀಯಾನಾ ಬೇಗಂ ರವರು ಕುಳಿತು ಹೊರಟಿದ್ದ ಕಾರ ನಂ ಕೆಎ-05-ಎಮ್.ಸಿ-6064 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರೋಡಿನ ಪಕ್ಕದ ದಕ್ಷಿಣ ದಿಕ್ಕಿನಲ್ಲಿರುವ ತಗ್ಗಿನಲ್ಲಿ ಪಲ್ಟಿ ಯಾಗಿ ಬಿದ್ದಿರುತ್ತದೆ. ಘಟನೆ ಸಂಭವಿಸಿದ ನಂತರ ಕಾರಿನ ಚಾಲಕನು ಓಡಿ ಹೋಗಿರುತ್ತಾನೆ. ಸದರಿ ಘಟನೆಯಲ್ಲಿ ನಿಮ್ಮ ಅಣ್ಣ ನಭಿಲಾಲನ ಎದೆಗೆ,  ಭಾರಿ ಒಳ ಪೆಟ್ಟಾಗಿದ್ದರಿಂದ ಪ್ರಜ್ಞಾಹಿನ ಸ್ಥಿತಿಯಲ್ಲಿ ಇರುತ್ತಾನೆ. ಗೌಸೋದ್ದಿನ್ ಭಾಗವಾನ ಮತ್ತು ರೀಯಾನಾ ಬೇಗಂ ರವರಿಗೆ ಕೈ, ಕಾಲುಗಳಿಗೆ ಮತ್ತು ಶರೀರದ  ಕೆಲವು ಭಾಗಗಳಲ್ಲಿ ಭಾರಿ ರಕ್ತಗಾಯ ಮತ್ತು ಒಳ ಪೆಟ್ಟುಗಳು ಆಗಿರುತ್ತವೆ ಅಂತಾ ತಿಳಿಸಿದನು ಕೂಡಲೇ ನಾನು ನಮ್ಮೂರಿನಿಂದ ಹೊರಟು ಘಟನೆ ಸ್ಥಳಕ್ಕೆ ಬಂದಿದ್ದು ನಾನು ಬರುವಷ್ಟರಲ್ಲಿ ಯಾರೋ ವ್ಯಕ್ತಿಗಳು 108 ವಾಹನಕ್ಕೆ ಫೋನ್ ಮಾಡಿದ್ದರಿಂದ ಸ್ಥಳಕ್ಕೆ 108 ವಾಹನ ಬಂದು ನಿಂತಿದ್ದರಿಂದ ನಾನು ಮತ್ತು ಘಟನೆ ಸ್ಥಳದಲ್ಲಿ ನೆರದ ಜನರೆಲ್ಲರೂ ನನ್ನ ಅಣ್ಣ ಮತ್ತು ಗೌಸೋದ್ದಿನ್ ಹಾಗೂ ರೀಯಾನಾ ಬೇಗಂ ರವರಿಗೆ 108 ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಕಲಬುರಗಿ ಕರೆದುಕೊಂಡು  ಹೋಗಿ ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋದಾಗ ನನ್ನ ಅಣ್ಣನನ್ನು ಪರೀಕ್ಷಿಸಿದ ವೈಧ್ಯರು ಸದರಿಯವನು ಆಗಲೇ ಮಾರ್ಗ ಮಧ್ಯದಲ್ಲಿ ಸುಮಾರು ½ ಗಂಟೆಯ ಹಿಂದೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಅಂತಾ ಶ್ರೀ ಅಸ್ಪಾಕ ತಂದೆ ಮದರಸಾಬ ಖುರೇಸಿ ಸಾ: ಅತನೂರ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ:12/03/2018 ರಂದು 06-00 ಪಿಎಂ ಸುಮಾರಿಗೆ ಗಾಯಾಳು ಶಂಕರ ಬಾಚಾ ಇವರು ಕಲಬುರಗಿ ಹುಮನಾಬಾದ ರೋಡಿನ ಶರಣಪ್ಪಾ ಹೊಟೇಲ ಹತ್ತಿರ ಸಾಕ್ಷಿದಾರನಾದ ಶಿವಕುಮಾರ ಗೊಬ್ಬುರವಾಡಿ ಇವರು ಬರುವದನ್ನು ಕಾಯುತ್ತಾ ನಿಂತಾಗ ಕಲಬುರಗಿ ಕಡೆಯಿಂದ ಬೊಲೇರೊ ಜೀಪ ನಂ. ಕೆಎ:29 ಎಂ: 4415 ನೇದ್ದರ ಚಾಲಕತನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗಾಯಾಳು ಶಂಕರ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ಶಂಕರನಿಗೆ ಎದೆಗೆ ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ರಾಜಕುಮಾರ ತಂದೆ ಶಂಕರ ಬಾಚಾ ಸಾ: ಮಹಾಗಾಂವ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ರಫೀಕ ತಂದೆ ಬುಡೆನ ಸಾಬ ಖುರೇಷಿ ಸಾ: ಶಾಸ್ತ್ರಿ ಚೌಕ ಶಹಾಬಾದ ರವರು ದಿನಾಂಕ: 12/03/2018 ರಂದು ರಾತ್ರಿ 8-30 ಗಂಟೆಗೆ ತಾನು ದಾಬಾ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಹೊರಗಡೆ ನಿಂತಾಗ ನಮ್ಮ ಓಣಿಯ ಪ್ರಧಿಪ ತಂದೆ ದೇವಿದಾಗ ಪವಾರ , ನೇತಾಜಿ , ಜೈನತ ಸಂಗಡ 5-6 ಜನರು ಕೈಯಿಲ್ಲಿ ಬಡಿಗೆ ರಾಡು ಹಿಡಿದುಕೊಂಡು ಬಂದವರೆ ನನಗೆ ಏ ರಂಡಿ ಮಗನೆ ಓಣಿಯಲ್ಲಿ ನಿಂತುಕೊಂಡು ನಮಗೆ ದಿಟ್ಟಿಸಿ ನೋಡತಿ ರಂಡಿ ಮಗನೆ ಅಂತಾ ಬೈದು  ನನಗೆ ಜಗಳ ತೆಗೆದು ಎದೆಯ ಮೇಲಿನ ಅಂಗಿ ಹಿಡಿದು ರಾಂಡಕೆ ಬಚ್ಚೆ ಹಮಾರೆ ಸಾಮನೆ ಆಕಡತೇ ಬೋಸಡಿಕೆ ಅಂತಾ ಬೈಯ್ದು ಕಾಲಿನಿಂದ ಹೊಟ್ಟೆಗೆ ಒದ್ದು ಗುಪ್ತ ಪೆಟ್ಟು ಮಾಡಿದರು ಆಗ ನಾನು ಹೆದರಿ ಮನೆ ಒಳಗೆ ಓಡಿ ಹೋದರು ಕೂಡ ನನ್ನ ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ ಬಂದು ನನಗೆ ಹಿಡಿದುಕೊಂಡು ಮನೆಯ ಹೊರಗೆ ಎಳೆದುಕೊಂಡು ಬಂದು ನನಗೆ ಕೊಲೆ ಮಾಡುವ ಉದ್ದೇಶದಿಂದ ಪ್ರದೀಪ ಇತನು ತನ್ನ ಕೈಯಲ್ಲಿದ್ದ ರಾಡಿನಿಂದ ನ್ನ ತಲೆಗೆ ಹೊಡೆದು ಭಾರಿ ರಕ್ತಗಾಯಾ ಮಾಡಿದನು ಮತ್ತು ಜಗಳ ಬಿಡಿಸಲು ಬಂದ ನನ್ನ ತಮ್ಮ ಅನ್ವರನಿಗೂ ಮೈ ಕೈಗೆ ಹೊಡೆದು ಗುಪ್ತ ಗಾಯಾ ಮಾಡಿರುತ್ತಾರೆ ಜಗಳದಲ್ಲಿ ನನಗೆ ಬಲಕೈಗೆ ಒಳಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.