POLICE BHAVAN KALABURAGI

POLICE BHAVAN KALABURAGI

22 March 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 17/03/2019 ರಂದು ರಾಷ್ಟ್ರೀಯ ಹೇದ್ದಾರಿ 218ರ ಸೀತನೂರ ಕ್ರಾಸ ಹತ್ತಿರ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಇಸಿ-9817 ನೇದ್ದರ ಚಾಲಕನು ತನ್ನಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಂದೆಯಾದ ವಜೀರ ಪಟೇಲ ಇತನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-32 ಡಬ್ಲ್ಯೂ-9346 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಸದರಿ ವಜೀರ ಪಟೇಲ ಇತನಿಗೆ ತಲೆಗೆ  ಭಾರಿ ರಕ್ತಗಾಯ, ಎದೆಗೆ ಭಾರಿ ಗುಪ್ತಗಾಯ, ಎಡಗಾಲಿನ ತೊಡೆಗೆ ಭಾರಿ ಗುಪ್ತಗಾಯಗಳಾಗಿದ್ದು, ಅಪಘಾತಪಡಿಸಿದ ಮೋಟಾರ ಸೈಕಲ ಮೇಲಿದ್ದ ಧರ್ಮರಾಜ ಇತನಿಗೆ ತಲೆಗೆ ಭಾರಿ ಗುಪ್ತಗಾಯ, ಬಲಗಣ್ಣಿಗೆ ಭಾರಿ ರಕ್ತಗಾಯ ಕಿವಿಯಿಂದ & ಮೂಗಿನಿಂದ ರಕ್ತಸೋರುತ್ತಿದ್ದು, ಇನ್ನೂಳಿದವರಿಗೂ ಗಾಯಗಳಾಗಿರುತ್ತವೆ. ಕಾರಣ ಸದರಿ ಮೋಟಾರ ಸೈಕಲ ನಂ ಕೆಎ-32 ಇಸಿ-9817 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕೆಂದು ಶ್ರೀ ಸಲೀಮ ಪಟೇಲ ತಂದೆ ವಜೀರ ಪಟೇಲ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಸ್ತೆ ಅಪಘಾತದಲ್ಲಿ ದುಃಖಪತಗೊಂಡು ಉಪಚಾರ ಕುರಿತು ಸೇರಿಯಾದ ವಜೀರ ಪಟೇಲ ತಂದೆ ನಬಿ ಪಟೇಲ  ರವರು ರಾಷ್ಟ್ರೀಯ ಹೇದ್ದಾರಿ 218ರ ಸೀತನೂರ ಕ್ರಾಸ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನನ್ನ ತಂದೆ ವಜೀರ ಪಟೇಲ ಇವರಿಗೆ ಭಾರಿ ರಕ್ತಗಾಯ & ಭಾರಿ ಗುಪ್ತಗಾಯಗಳಾಗಿದ್ದು, ಉಪಚಾರ ಕುರಿತು ಸನ್ ರೈಜ್ ಆಸ್ಪತ್ರೆಗೆ ಸೇರಿಯಾಗಿದ್ದು, ಉಪಚಾರ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 20/03/2019 ರಂದು 2.17 ಪಿ.ಎಮಕ್ಕೆ ಮೃತಪಟ್ಟಿರುತ್ತಾರೆ. ಅಂತಾ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅಬ್ದುಲ ಯಾಸಿನ್ ತಂಧೆ ಹಾಷಮ್ ಪೀರ ಸಾ: ಆಲ್ ಅಮೀನ್ ಶಾಲೆ ಹತ್ತಿರ ಗಾಲಿಬ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ ರವರು  ದಿನಾಂಕ 21.03.2019 ರಂದು ಮಧ್ಯಾನ 12:30 ಗಂಟೆಯ ಸುಮಾರಿಗೆ ನಾನು ನನ್ನ ತಂಗಿಯಾದ ಉಮ್ಮೇಫೈಜಾ ಇವಳಿಗೆ ಶಾಲೆಯಿಂದ ಕರೆದುಕೊಂಡು ಬರಲು ಶಟ್ಟಿ ಚಿತ್ರ ಮಂದಿರ ಹತ್ತಿರ ಇದ್ದಾಗ ನನ್ನ ಗೆಳೆಯ ಆರೀಫ್ ಇತನು ನನಗೆ ಪೋನ ಮಾಡಿ  ನಾನು ಗಾಲಿಬ ಕಾಲೋನಿಯಲ್ಲಿರುವಾಗ ನಮ್ಮ ಬಡಾವಣೆಯ ಹುಡಗರಾದ ನಾಗು @ ನಾಗ್ಯಾ, ವಿಶಾಲ ಮೂಕ ಬಾಬು ಮತ್ತು ವಿಜಯ ಇವರು ನಮ್ಮ ಜನಾಂಗದ ಹುಗುಡನಿಗೆ ಬಣ್ಣ ಹಾಕತ್ತಿದ್ದರು ಆಗ ನಾನು ಅವರ ಹತ್ತಿರ ಹೋಗಿ ಅವರು ಬಣ್ಣ ಆಡುವದಿಲ್ಲ ಅವನಿಗೆ ಬಣ್ಣ ಹೊಡೆಯುವದು ಬೇಡ ಅಂತ ಹೇಳಿದಾಗ ಅವರು ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿರುತ್ತಾರೆ. ಕೂಡಲೆ ಇಲ್ಲಿಗೆ ಬಾ ಅಂತ ನನಗೆ ಪೋನ ಮಾಡಿ ಕರೆದಿದ್ದು ಕೂಡಲೆ ನಾನು ನನ್ನ ತಂಗಿಯನ್ನು ನಮ್ಮ ಮನೆಗೆ ಬಿಟ್ಟು ಆಲ್ ಅಮೀನ ಚೌಕ ಹತ್ತಿರ ಹೋಗಿದ್ದು ಅಲ್ಲಿ ಆರೀಫ್, ಅಕ್ಬರ, ಶೋಯೇಬ, ಮಕಸೂದ, ತಬರೇಜ ಜೋದಿನ್, ಮತ್ತು ಜೀಲಾನ ಕೂಡಿಕೊಂಡು ಆಲ್ ಅಮೀನ ಚೌಕದ ಹತ್ತಿರ ಕುಳಿತು ಕೊಂಡಿದ್ದರು ನಾನು ಅಲ್ಲಿಗೆ ಹೋಗಿದ್ದು ಜಗಳ ಬಗ್ಗೆ ನಾನು ಆರೀಫ್ನಿಗೆ ವಿಚಾರಿಸುತ್ತಿರುವಾಗ ಸುಮಾರು ಮಧ್ಯಾನ 1 ಗಂಟೆಯ ಸುಮಾರಿಗೆ 1. ವಿಜಯ, 2. ನಾಗು @ ನಾಗ್ಯಾ, 3. ರವಿ, 4. ವಿಶ್ಯಾಲ 5. ಮೂಕ ಬಾಬು ಹಾಗೂ ಇನ್ನೂ 6-7 ಜನರು ಕೂಡಿಕೊಂಡು ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈಯುತ್ತಾ ಆರೀಫ್ ಸೂಳೆ ಮಗನದು ಬಹಾಳ ಆಯಿತು ಇವನಿಗೆ ಹೊಡೆದು ಸಾಯಿಸಿ ಬೀಡುರಿ ಅಂತ ಅವರು ಕೂಗಾಡುತ್ತಾ ಆರೀಫ್ನಿಗೆ ಕೊಲೆ ಮಾಡುವ ಉದ್ದೇಶದಿಂದ ತಮ್ಮ ಕೈಯಲ್ಲಿದ್ದ ಕಟ್ಟಿಗೆ ಮತ್ತು ಕಲ್ಲುಗಳಿಂದ ಆರೀಫ್ನಿಗೆ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಎದೆಗೆ, ಮತ್ತು ಕಾಲಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಅಲ್ಲದೆ ನನಗೆ ಅಕ್ಬರನಿಗೆ ಮತ್ತು ಜೀಲಾ ಇತನಿಗೆ ಕಟ್ಟಿಗೆಯಿಂದ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಆರೀಫ್ನಿಗೆ ಭಾರಿ ರಕ್ತಗಾಯವಾಗಿದನ್ನು ನೋಡಿ ಅವರು ಅಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಅಬ್ದುಲ್ ಖಾಲೀದ ತಂದೆ ಅಬ್ದುಲ್ ಸಮಿ ಸಿದ್ದಿಕಿ ಸಾ|| ರೇವಣಸಿದ್ದೇಶ್ವರ್ ಕಾಲೋನಿ ಆಳಂದ ರವರ ಪತ್ನಿ ನಾಜಿಯಾ ಬೇಗಂ ಇವಳಿಗೆ ಆರಾಮವಿಲ್ಲದೆ ಇದ್ದ ಕಾರಣ ನಾವು ಅವಳಿಗೆ ದಿನಾಂಕ 16/03/2019 ರಂದು ಕಲಬುರಗಿಯ ಬಾಬಾ ಹೌಸ್ ಖಾಸಗಿ ಆಸ್ಪತ್ರೆ ಸೇರಿಕೆಯನ್ನು ಮಾಡಿರುತ್ತೆವೆ, ನನ್ನ ಮಕ್ಕಳಿಗೆ ನಮ್ಮ ತಂದೆ ತಾಯಿಯವರು ವಾಸವಾಗಿರುವ ರಜವಿ ರೋಡಿನ ಹತ್ತಿರ ಇರುವ ಮನೆಯಲ್ಲಿ ಬಿಟ್ಟು ಕಲಬುರಗಿಗೆ ಹೋಗಿ ದಿನಾಂಕ 19/03/2019 ರಂದು ಸಾಯಂಕಾಲ 06-00 ಗಂಟೆಗೆ ಮರಳಿ ಬಂದು ನಮ್ಮ ಮನೆಯಲ್ಲಿರುವ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮನೆಯ ಹಿಂದಿನ & ಮುಂದಿನ ಬಾಗಿಲುಗಳಿಗೆ ಬೀಗ ಹಾಕಿ ನಮ್ಮ ತಂದೆ ತಾಯಿಯವರ ಹತ್ತಿರ ಹೋಗಿರುತ್ತೆವೆದಿನಾಂಕಃ 20/03/2019 ರಂದು ಬೆಳಿಗ್ಗೆ 07-00 ಗಂಟೆಗೆ ನಮ್ಮ ಮನೆಯ ಬಾಗಿಲು ತೆಗೆದು ಒಳಗಡೆ ಹೋಗಿ ನೋಡಲು ಅಡುಗೆ ಕೋಣೆಯ ಬಾಗಿಲು ತೆರೆದಿದ್ದು ಮನೆಯಲ್ಲಿದ ಅಲಮಾರಿಯಲ್ಲಿನ ಬಟ್ಟೆಗಳು ಹಾಗೂ ಇತರೇ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಆಗ ಗಾಬರಿಯಾಗಿ ಅಲಮಾರಿಯಲ್ಲಿ ಲಾಕರ ತೆರೆದಿದ್ದು ಲಾಕರಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು  ಒಟ್ಟು 24,000/-ರೂಪಾಯಿಯ ಬೆಲೆಬಾಳುವ ಬಂಗಾರದ ಆಭರಣಗಳನ್ನು ನಿನ್ನೆ ದಿನಾಂಕ:19/03/2019 ರಂದು ರಾತ್ರಿ 10:30 ಪಿ.ಎಮ್.ದಿಂದ ಇಂದಿನ ಬೇಳಗಿನ ಜಾವ 06:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಹಿಂದಿನ ಕಂಪೌಂಡ ಗೋಡೆಯ ಮೇಲಿನಿಂದ ಮನೆಯ ಒಳಗೆ ನುಗ್ಗಿ ಅಡುಗೆ ಮನೆಯ ಬಾಗಿಲಿಗೆ ಜೋರಾಗಿ ಒತ್ತಿದರಿಂದ  ಒಳಕೊಂಡಿ ಮುರಿದು ಬಾಗಿಲು ತೆರೆದಿದ್ದು ಆಗ ಮನೆಯೊಳಗೆ ಇಟ್ಟಿದ ಅಲಮಾರಿಯನ್ನು ಮುರಿದು ಅದರಲ್ಲಿ ಇಟ್ಟಿದ ಈ ಎಲ್ಲಾ ಮೇಲ್ಕಂಡ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಇರ್ಫಾನ ಅಹ್ಮದ ತಂದೆ ವಾಹೇದ ಅಲಿ ಸಾ|| ಪ್ಲ್ಯಾಟ್ ನಂ; 4 ಸುಕೂನ್ ಅಪಾರ್ಟಮೆಂಟ ಅಭಾವ್ ಫೂಟಜೋನ ಎಮ್ ಜಿ ರೋಡ ಕಲಬುರಗಿ ರವರು ದಿನಾಂಕ; 18/03/2019 ರಂದು ಸಂಗಮೇಶ್ವರ ಕಾಲೋನಿಯ ಎಸ್‌‌.ಬಿ.ಐ  ಬ್ಯಾಂಕ ಹತ್ತಿರದ ನ್ಯೂ ಇಂಡಿಯಾ ಇನ್ಸುರೆನ್ಸ ಆಫೀಸ್ ಕೇಳಗಡೆ ನನ್ನ ಹಿರೋ ಪ್ಯಾಷನ್ ಎಕ್ಸ್ ಫ್ರೂ ಮೊಟಾರ ಸೈಕಲ್ ನಂ; KA32 EC9957 CHASSIS.NO.MBLJA12ACDGA05232 ENGINE NO.JA12ABDGA06356 ||ಕಿ|| 25,000/-ರೂ ನೇದ್ದನ್ನು ನಿಲುಗಡೆಮಾಡಿ ರಾಹುಲ್ ಗಾಂದಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ 3;30 ಪಿ.ಎಂಕ್ಕೆ  ಮರಳಿ ಬಂದು ನೋಡಲಾಗಿ ಸದರಿ ನನ್ನ ಮೊಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ನನ್ನ ಮೊಟಾರ ಸೈಕಲ್ ಕಳ್ಳತನಮಾಡಿಕೊಂಡು ಹೊಗಿರುತ್ತಾರೆ. ನಾನು ಇಲ್ಲಿಯವರೆಗೆ ಹುಡುಕಾಡಿದರೂ ನನ್ನ ಮೊಟಾರ ಸೈಕಲ್ ಸಿಕ್ಕಿರುವದಿಲ್ಲ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.