POLICE BHAVAN KALABURAGI

POLICE BHAVAN KALABURAGI

27 October 2013

Gulbarga District Reported Crimes

ಅಪಘಾತ ಪ್ರಕರಣಗಳು :
ಚಿಂಚೋಳಿ ಠಾಣೆ : ಶ್ರೀ ವಿಜಯಕುಮಾರ ತಂಧೆ ಯಲ್ಲಪ್ಪ ಮೋಮ್ಲಾ ಸಾ: ಕುಂಚಾವರಂ ತಾ: ಚಿಂಚೊಳಿ ದಿನಾಂಕ01.10.2013 ರಂಧು ನಾನು ಶ್ರೀನಿವಾಸ ತಂದೆ ಯಲ್ಲಪ್ಪ ಮು: ಕುಂಚಾವರಂ ಇಬ್ಬರು ಕೂಡಿ ತಮ್ಮ ದ್ವಿಚಕ್ರ ಮೋಟಾರ ಸೈಕಲ್ ನಂ  ಎ ಪಿ-09 ಬಿ-0984 ವಾಹನದ ಮೇಲೆ ಕುಳಿತುಕೊಂಡು ಸುಲೇಪೇಟ ಗ್ರಾಮಕ್ಕೆ ಹೋಗುತ್ತಿರುವಾಗ ಸುಮಾರು 03.40 ಪಿ ಎಮ್ ಕ್ಕೆ ಚಿಂಚೊಳಿಯ ದೊಡ್ಡ ಸೇತುವೆ ಧಾಟಿ ಮುಂದೆ ನಿಧಾನವಾಗಿ ಹೋಗುತ್ತಿದ್ದೆವು. ಆ ಸಮಯದಲ್ಲಿ ಹಿಂದಿನಿಂದ ಪ್ಯಾಶನ್ ಪ್ರೋ ದ್ವಿಚಕ್ರವಾಹನದ ಸಂಖ್ಯೆ ಕೆಎ-32ಇಬಿ-2451 ವಾಹನವು ಮಲ್ಲಪ್ಪ ನಿಮಾಹೋಸಳ್ಳಿ ಇತನು ನಡೆಸುತ್ತಿದ್ದನು ಸದರಿ ವಾಹನದ ಹಿಂದೆ ಮಾರುತಿ ತಂಧೆ ಮೋಗಲಪ್ಪ ನಿಮಾಹೊಸಳ್ಲಿ ಇತನು ಕುಳಿತಿದ್ದನು . ಸದರಿ ವಾಹನವು ಮಲ್ಲಪ್ಪ ಇವನು ಅತೀ ವೇಗವಾಗಿ ಮತ್ತು ನಿಷ್ಕಾಳಿಜಿತನದಿಂದ ಚಲಿಸುತ್ತಾ ಬಂದು ನಮ್ಮ ಫ್ಯಾಶನ ಪ್ಲಸ್ ಮೋಟಾರ ಸೈಕಲ್ ನಂ ಎಪಿ-09, ಬಿಇ-094 ಕ್ಕೆ ಡಿಕ್ಕಿ ಪಡಿಸಿದ್ದರಿಂದ ನಾನು ಮತ್ತು ನನ್ನ  ವಾಹನದ ಮೇಲೆ ಕುಳಿತಿದ್ದ ಶ್ರೀನಿವಾಸ ತಂಧೆ ಯಲ್ಲಪ್ಪ ಇಬ್ಬರು ಬಿದ್ದೆವು ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ನನ್ನ ಬಲಗಾಲಿಗೆ ಭಾರಿ ಪ್ರಮಾಣದ ಗಾಯವಾಗಿ ಮೂಳೆ ಮುರಿದಿರುತ್ತದೆ. ಮತ್ತು ಎಡಗಡೆ ಭುಜದ ಹತ್ತೀರ ಮತ್ತು ದೇಹದ ಇತರೆ ಭಾಗಗಳಲ್ಲಿ ದೋಡ್ಡ ಪ್ರಮಾಣವಾಗಿ ಗಾಯಾಗಳಾಗಿರುತ್ತವೆ.. ಸದರಿ ಶ್ರೀನಿವಾಸ ಇತನಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀ ಮಹಿಬೂಬ ತಂದೆ ದೌಲಸಾಬ ಮೊಮಿನ ಉ:ಡಿಪೋ ನಂ. 1 ರಲ್ಲಿ ಚಾಲಕ ಬ್ಯಾಡ್ಜ ನಂ.14948 ಜಾ:ಮುಸ್ಲಿಂ ಸಾ:ವಡಗೇರಾ ರವರು ದಿನಾಂಕ: 26-10-2013 ರಂದು 2 ಗಂಟೆಗೆ  ಡಿಪೊ ನಂ. 1 ಕ್ಕೆ ಕರ್ತವ್ಯಕ್ಕೆ ಬಂದಿರುತ್ತೆನೆ.ಅಲ್ಲಿ ನನಗೆ ಗುಲಬರ್ಗಾದಿಂದ ಬಿಜಾಪೂರಕ್ಕೆ ಹೊಗುವ ಬಸ್‌ ನಂ. ಕೆಎ 32 ಎಫ್‌ 1748 ನೇದ್ದಕ್ಕೆ  ಚಾಲಕನಾಗಿ ಕರ್ತವ್ಯಕ್ಕೆ  ನೇಮಿಸಿದ್ದು. ನನ್ನಂತೆ ಸದರಿ ಬಸ್ಸಿಗೆ ಕಂಡೆಕ್ಟರ ಅಂತಾ ಸಾಯಬಣ್ಣಾ ವಾಲಿ ಬ್ಯಾಡ್ಜ ನಂ.2599 ಇವರನ್ನು  ನೇಮಿಸಿದ್ದು ಇರುತ್ತದೆ. ನಾವಿಬ್ಬರು ಕೂಡಿಕೊಂಡು ಸದರಿ ಬಸ್‌ನ್ನು  ಕೇಂದ್ರ ಬಸ್‌ ನಿಲ್ದಾಣ ಗುಲಬರ್ಗಾದಿಂದ ಸಾಯಂಕಾಲ 4:30 ಗಂಟೆಗೆ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿದ್ದು ಇರುತ್ತದೆ. ಸದರಿ ಬಸ್ಸಿನಲ್ಲಿ ಸುಮಾರು 30-40 ಪ್ರಯಾಣಿಕರು ಇದ್ದಿರುತ್ತಾರೆ. ಸದರಿ ಬಸ್‌ನ್ನು ನಾನು ಚಲಾಯಿಸುತ್ತಿದ್ದು  ಸಾಯಂಕಾಲ 5:15 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಫರಹಾಬಾದ ಸಮೀಪ ಕೆರ ಅಂಗಳದ ಹತ್ತಿರ ಹೋಗುತ್ತಿದ್ದಾಗ ನಮ್ಮ ಬಸ್ಸಿನ ಹಿಂದಗಡೆ ಗುಲಬರ್ಗಾ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು  ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಬಸ್ಸಿಗೆ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ಬಸ್ಸಲ್ಲಿದ್ದ ಪ್ರಯಾಣಿಕರಾದ  1) ಮಹಾದೇವಿ ಹಡಪದ ಇವರಿಗೆ ತಲೆಗೆ ಮತ್ತು ಬಲಗೈಗೆ ಒಳಪೆಟ್ಟಾಗಿದ್ದು, 2) ಸುಬದ್ರವ್ವ ಚಿವುಟೆ ಇವರಿಗೆ ಬಲಗಾಲಿನ ಕಪಗಂಡಕ್ಕೆ ಮತ್ತು ಹೆಡಕಿಗೆ ಒಳಪೆಟ್ಟಾಗಿರುತ್ತದೆ. ಸದರಿಯವರು ಫರಹತಾಬಾದ ಮತ್ತು ಜೇವರ್ಗಿಯ ಆಸ್ಪತ್ರೆಗೆ ಉಪಚಾರ ಕುರಿತು ಹೋಗಿರುತ್ತಾರೆ. ನನಗೆ ಮತ್ತು ನಿರ್ವಾಹಕ ಸಾಯಬಣ್ಣ ಹಾಗೂ ಬಸ್ಸಿನಲ್ಲಿದ್ದ ಇತರೆ ಪ್ರಯಾಣಿಕರಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲ. ನಮ್ಮ ಬಸ್ಸಿಗೆ ಅಪಘಾತ ಪಡಿಸಿ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಲಾರಿ ಚಾಲಕನು ಓಡಿ ಹೋಗಿರುತ್ತಾನೆ. ಸದರಿ ಲಾರಿ ನಂ: ಎಮ್‌ಹೆಚ್‌-32 ಬಿ-9088 ನೇದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 20-10-2013 ರಂದು  ಶ್ರೀ ವಿಶ್ವನಾಥ ಪವಾರ ಸಾ|| ಮಹಾಗಾಂವ ತಾಂಡ ರವರು  ತಾಂಡಾದಿಂದ ಭೂಸಣಗಿ ಗ್ರಾಮಕ್ಕೆ ಕ್ರಿಕೇಟ ಆಡಲು ಹೋಗುವ ಸಂಬಂದ ತಮ್ಮ ತಾಂಡಾದ ಗೂ ಪ್ರಕಾಶ ತಂ ಶಿವರಾಮ ಚವಾಣ ಇವರು ತಮ್ಮ ತಾಂಡದವನೆಯಾದ ಸಂಜು ತಂದ ಶಂಕರ  ಚವಾಣ ಇತನ ಹತ್ತಿರ ಇದ್ದ ಮೋಟಾರ ಸೈಕಲ ಹೀರೊ ಪ್ರೊ. ನಂ ಕೆ,ಎ, 32 ಇಡಿ, 5219 ನೇದ್ದನ್ನು ತೆಗೆದುಕೊಂಡು ಭೂಸಣಗಿಗೆ ತಾಂಡಾದಿಂದ ಹೊರಟು ಅಲ್ಲಿ ಕ್ರಕೇಟ ಆಡಿ ಮತ್ತು ಸಾಯಂಕಾಲ 7,00 ಪಿ,ಎಮ್,ಕ್ಕೆ ಮಹಾಗಾಂವ ಕ್ರಾಸಿಗೆ ಬಂದು ಚಾಹ ಕುಡಿದು ಎಲ್ಲಾ ಹುಡುಗರು ಟಂಟಂ ಹಿಡಿದುಕೊಂಡು ತಾಂಡಗೆ ಹೋಗಿದ್ದು ತಾನು ಪ್ರಕಾಶ ತಂದಿದ್ದ ಸದರ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತಿದ್ದು ಪ್ರಕಾಶ ಇತನು ಮೋಟಾರ ಸೈಕಲ ಚಲಾಯಿಸುತ್ತಿದ್ದು 7.45 ಪಿ,ಎಮ್,ಕ್ಕೆ ಮಹಾಗಾಂವ ಕ್ರಾಸದಿಂದ ತಾಂಡಾ ಕಡೆಗೆ ಹೊರಟಿದ್ದು 8.00 ಪಿ,ಎಮ್,ಕ್ಕೆ ಮಹಾಗಾಂವ ಗ್ರಾಮದ ಪ್ರೌಡ ಶಾಲೆ ದಾಟಿ ಸ್ವಲ್ಪ ಮುಂದೆ ಇದ್ದ ಬ್ರಿಡ್ಜ ಹತ್ತಿರ ಹೋಗುತ್ತಿದ್ದಾಗ ಪ್ರಕಾಶ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಸ್ಕೀಡ್ ಮಾಡಿ ಆ ಬ್ರಿಡ್ಜಗೆ ಡಿಕ್ಕಿ ಹೊಡೆದಿದ್ದರಿಂದ ತನಗೆ  ಮತ್ತು ಪ್ರಕಾಶನಿಗೆ ಭಾರಿಗಾಯಗಳಾಗಿದ್ದು ಪ್ರಕಾಶ ಈ ಬಗ್ಗೆ ಮಹಾಗಾಂವ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕಾಶ ಇತನಿಗೆ ಹೆಚ್ಚಿನ ಉಪಚಾರ ಕುರಿತು ಸೊಲ್ಲಾಪೂರ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 24-10-2013 ರಂದು ಬೆಳಗಿನ ಜಾವ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ.