POLICE BHAVAN KALABURAGI

POLICE BHAVAN KALABURAGI

02 January 2017

Kalaburagi District Reported Crimes

ಕಿರುಕಳ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ರೂಬಿನಾ ಗಂಡ ನಜೀರ್ ಭೋಸಗಾ ಸಾ:ಚಿಂಚನಸೂರ, ರವರ ತಂದೆ-ತಾಯಿಗೆ 6 ಜನ ಹೆಣ್ಣುಮಕ್ಕಳು ಒಬ್ಬನೆ ಗಂಡು ಮಗನಿದ್ದು, ಹೆಣ್ಣುಮಕ್ಕಳಲ್ಲಿ 5 ಜನರ ಮದುವೆಮಾಡಿ ಕೊಟ್ಟಿರುತ್ತಾರೆ. ಒಬ್ಬ ತಮ್ಮ ಹಾಗೂ ಒಬ್ಬಳು ತಂಗಿ ತಂದೆ-ತಾಯಿಯೊಂದಿಗೆ ವಾಸವಾಗಿರುತ್ತಾರೆ. ನನ್ನ ತವರೂರು ಚಿಂಚನಸೂರ ಗ್ರಾಮವೆ ಇದ್ದು, ನನಗೆ ಇದೆ ಊರಿನಲ್ಲಿ ದಿನಾಂಕ: 16-05-2016 ರಂದು ಇದೆ ಗ್ರಾಮದ ನಜೀರ್ ತಂದೆ ಬಾಸುಮಿಯಾ ಭೋಸಗಾ ಇವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆಮಾಡಿ ಕೊಟ್ಟಿರುತ್ತಾರೆ. ನನ್ನ ಮದುವೆಯಾಗಿ ಒಂದು ತಿಂಗಳ ವರೆಗೆ ನನ್ನ ಗಂಡನು ನನ್ನನ್ನು ಚನ್ನಾಗಿಯೇ ನೋಡಿಕೊಂಡಿದ್ದು ನಂತರದ ದಿನಗಳಲ್ಲಿ ನನ್ನ ಗಂಡನು ನನಗೆ ಮನೆಕೆಲಸದ ವಿಷಯವಾಗಿ ಹಾಗೂ ನಾನು ಬೇರೆ ಗಂಡಸರೊಂದಿಗೆ ಮಾತನಾಡಿದ್ದಕ್ಕೆ, ನನಗೆ ಅವರೊಂದಿಗೆ ಸಂಬಂಧ ಕಲ್ಪಿಸಿ ನನ್ನ ಮೇಲೆ ಸಂಶಯ ಪಡುತ್ತಾ ನನಗೆ ದಿನಾಲು ಕೈಯಿಂದ ಹೊಡೆಯುವುದು ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾ ಬಂದಿರುತ್ತಾರೆ. ಅದಕ್ಕೆ ಈಗ ಸುಮಾರು ಒಂದು ತಿಂಗಳ ಹಿಂದೆ ನನ್ನ ತಾಯಿ ಮಾಲನಬಿ ಹಾಗೂ ನಮ್ಮ ತಂದೆಯಾದ ಮೀರಾಸಾಬ ಇವರುಗಳು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ನನನ್ನು ಚನ್ನಾಗಿ ನೋಡಿಕೊಳ್ಳವಂತೆ ತಿಳಿಸಿ ಹೇಳಿದ್ದು ಆದರು ಸಹ ನನ್ನ ಗಂಡನು ಅವರ ಮಾತಿಗೆ ಬೇಲೆಕೊಡದೆ ನನ್ನನ್ನು ದಿನಾಲು ಕೈಯಿಂದ ಹೊಡೆಯುವುದು ಮತ್ತು ಬೈಯುವುದು ಮಾಡುತ್ತ ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ಕೊಡತ್ತಿದ್ದುದ್ದರಿಂದ ನಾನು ನನ್ನ ಗಂಡನ ಕಿರಕುಳ ಸಹಿಸದೆ ಬೇಸತ್ತು ದಿನಾಂಕ: 26-12-2016 ರಂದು ನನ್ನ ತವರು ಮನಗೆ ಬಂದು ವಾಸವಾಗಿರುತ್ತೇನೆ. ನಾನು ಈಗ ಸದ್ಯ 5 ತಿಂಗಳ ಗರ್ಭಿಣಿಯಾಗಿರುತ್ತೇನೆ. ದಿನಾಂಕ: 30-12-2016 ರಂದು ಸಂಜೆ ನಾನು ಮತ್ತು ನಮ್ಮ ತಂದೆ-ತಾಯಿ ಕೂಡಿ ನಮ್ಮ ಮನೆಯಲ್ಲಿ ಮಾತನಾಡುತ್ತಾ ಕೂಳಿತಿರುವಾಗ ನನ್ನ ಗಂಡನಾದ ನಜೀರ್ ತಂದೆ ಬಾಸುಮಿಯಾ ಭೋಸಗಾ ಇವರು ನಮ್ಮ ಮನೆಯ ಮುಂದೆ ಬಂದು ನನಗೆ ಬೋಸಡಿ ನೀನು ನನ್ನ ಮನೆಯಲ್ಲಿರುವುದು ಬಿಟ್ಟು ಇಲ್ಲೇಕೆ ಇದ್ದಿಯಾ ಎಂದು ಏರು ಧ್ವನಿಯಲ್ಲಿ ಚಿರಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಮತ್ತು ನನ್ನ ತಂದೆ-ತಾಯಿಯವರು ಹೀಗೆಕೆ ಬೈಯುತ್ತಿದ್ದಿಯಾ ಅಂತಾ ವಿಚಾರಿಸುತ್ತಿರುವಾಗ ನನ್ನ ಗಂಡನು ನನ್ನ ತಂದೆ-ತಾಯಿಗೆ ನಾನು  ನಿಮ್ಮ ಮಗಳಿಗೆ ಎಸ್ಟೆ ಹೊಡೆಬಡಿ ಮಾಡಿ ಕಿರಕುಳ ಕೊಟ್ಟರು ಸಹ ಅವಳು ಸಹಿಸಿಕೊಂಡು ಗಂಡನ ಮನೆಯಲಿಯೇ ಇರಬೇಕು. ಅದೆಲ್ಲಾ ಬಿಟ್ಟು ತವರು ಮನೆಗೆ ಏಕೆ ಬಂದಿದ್ದಾಳೆ ಎಂದು ಚಿರಾಡುತ್ತಾ ನನ್ನ ಕೂದಲು ಹಿಡಿದು ಎಳೆದಾಡಿ ಕೈಯಿಂದ ಕಪಾಳ ಮೇಲೆ ಮತ್ತು ಬೆನ್ನ ಮೇಲೆ ಹೊಡೆದು ಕಾಲಿನಿಂದ ಒದೆಯುತ್ತಿರುವಾಗ ನನ್ನ ತಂದೆ-ತಾಯಿ ಹಾಗೂ ನನ್ನ ತವರು ಮನೆಯ ಪಕ್ಕದ ಮನೆಯವರಾದ ಚಂದ್ರಕಾಂತ ತಂದೆ ರಾಮಪ್ಪಾ ಮಗಿ ಹಾಗೂ ಗುರು ತಂದೆ ಶಿವಯೋಗಿ ಮಗಿ ಇವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ನನ್ನ ಗಂಡನು ಮನೆಗೆ ಹೋಗುವಾಗ ನನಗೆ ನೀನೆನಾದರು ಇನ್ನುಮುಂದೆ ನಮ್ಮ ಊರಲ್ಲಿ ಕಂಡಿ ಅಂದರೆ ನೀನಗೆ ಜೀವ ಸಹಿತ ಬಿಡುವುದಿಲ್ಲ ಖಲಾಸ ಮಾಡುತ್ತೇನೆಂದು ಜೀವದ ಬೇದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಸರುಬಾಯಿ ಗಂಡ ಕಾಶಪ್ಪ ಭಜಂತ್ರಿ ಸಾ:ಜವಳಗಾ ಬಿ ಇವರು ಸುಮಾರು 12 ವರ್ಷದಿಂದ ಕಾಶಪ್ಪ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು ಒಂದು ಗಂಡು ಮೂರು ಹೆಣ್ಣುಮಕ್ಕಳಿದ್ದು ನನ್ನ ಗಂಡನು ಕೂಲಿಕೆಲಸ ಹಾಗೂ ಬ್ಯಾಂಡ್ ಬಾರಿಸುವುದು ಕೆಲಸ ಮಾಡುತ್ತಿದ್ದು, ನನ್ನ ಗಂಡನು ಆಗಾಗ ಸರಾಯಿ ಕುಡಿದು ಮನೆಗೆ ಬರುತ್ತಿದ್ದು ಬಗ್ಗೆ ನನ್ನ ಮಾವನಾದ ಗುಂಡಪ್ಪ ಅತ್ತೆಯಾದ ಲಕ್ಷ್ಮೀಬಾಯಿ ನನ್ನ ಮೈಧುನನಾದ ಲವುಕುಮಾರ ಎಲ್ಲರು ಕೂಡಿಕೊಂಡು ನನ್ನ ಗಂಡನಿಗೆ ನಾವು ಬಡವರು ಇದ್ದು ಸರಾಯಿ ಕುಡಿಬೇಡವೆಂದು ಹೇಳಿದರು ಕೂಡ ಆತನು ಸರಾಯಿ ಕುಡಿದುಕೊಂಡು ದಿನಾಲು ಮನೆಗೆ ಬರುತ್ತಿರುವುದು ಹೀಗೆ ಇದ್ದು, ದಿನಾಂಕ: 28-12-2016 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ನನ್ನ ಗಂಡನಾದ ಕಾಶಪ್ಪ ಈತನು ಮನೆಯಿಂದ ಹೊರಕಡಿಗೆ ಹೋಗುತ್ತೇನೆಂದು ಚಂಬು ತಗೆದುಕೊಂಡು ಹೋಗಿರುತ್ತಾನೆ. ಸಾಯಂಕಾಲ ಆಗಿದ್ದರು ಮನಗೆ ಬಂದಿರುವುದಿಲ್ಲ. ಬಗ್ಗೆ ನನ್ನ ಮಾವ ಗುಂಡಪ್ಪ ಅತ್ತೆಯಾದ ಲಕ್ಷ್ಮೀಬಾಯಿ ಮೈಧುನನಾದ ಲವುಕುಮಾರ ಇವರಿಗೆ ನನ್ನ ಗಂಡನು ಮಧ್ಯಾಹ್ನ ಹೊರಕಡಿಗೆ ಹೋಗುವುನೆಂದು ಹೇಳಿ ಹೋದವನು ಆದರೆ ರಾತ್ರಿಯಾದರು ಕೂಡ ಮನೆಗೆ ಬಂದಿರುವುದಿಲ್ಲ, ನಾವು ಎಲ್ಲರೂ ಕೂಡಿ ಅಲ್ಲಿ ಇಲ್ಲಿ ಹುಡಿಕಾಡಿದರು ಆತನು ಇರುವಿಕೆ ಬಗ್ಗೆ ಯಾವುದೇ ಮಾಹಿತಿ ಸಿಗಲ್ಲ, ದಿನಾಂಕ : 31-12-2016 ರಂದು ಸಾಯಂಕಾಲ ಗ್ರಾಮದ ಬಾಬು ತಂದೆ ಗುರುಲಿಂಗಪ್ಪ ನಡುಮನಿ ಇವರು ಬಂದು ತಿಳಿಸಿದ್ದು ಏನಂದರೆ, ನಿನ್ನ ಗಂಡನಾದ ಪರಸಪ್ಪ ಈತನು ಖ್ಯಾದಮ್ಮ ರಾಮಲಿಂಗಪ್ಪ ನಡುಮನಿ ಇವರ ಬಾವಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ಆತನ ಶವ ಕೂಡ ತೆಲಿರುತ್ತದೆ ಅಂತಾ ತಿಳಿಸಿದ್ದು ನಾವು ಎಲ್ಲರು ಗಾಭರಿಗೊಂಡು ಮಾವನಾದ ಗುಂಡಪ್ಪ ಅತ್ತೆಯಾದ ಲಕ್ಷ್ಮೀಬಾಯಿ ಮೈಧನನಾದ ಲವುಕುಮಾರ ಎಲ್ಲರು ಕೂಡಿ ಬಂದು ಹೋಗಿ ನೋಡಲಾಗಿ ನನ್ನ ಗಂಡ ಕಾಶಪ್ಪ ಇದ್ದು ನಮಗೆ ಏನು ದೋಚದೆ ಅಲ್ಲೆ ಇದ್ದು ನನ್ನ ಗಂಡನು ಕುಡಿಯುವ ಚಟದವನಿದ್ದು ಆತನು ಸರಾಯಿ ಕುಡಿದ ನಶೆಯಲ್ಲಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಸಂಜು ತಂದೆ ದಾದಾರಾಮ ಜಾದವ ಸಾಃ ಮುತ್ತಕೊಡ ತಾಂಡಾ ತಾಃ ಜೇವರಗಿ ಹಾಃವಃ ಪುನಾ ವರು ನಾನು ಕೂಲಿ ಕೆಲಸಕ್ಕಾಗಿ ಪುನಾಕ್ಕೆ ಹೋಗಿ ಅಲ್ಲಿಯೇ ವಾಸವಾಗಿರುತ್ತೆನೆ. ನನ್ನ ತಮ್ಮನಾದ ವಿನೋದ 14 ವರ್ಷ, ಇತನು ಜೇವರಗಿಯಲ್ಲಿ ಶಾಲೆ ಕಲಿಯುತ್ತಿದ್ದಾನೆ ಅವನು ಜೇವರಗಿ ಪಟ್ಟಣದ ಹೊರ ವಲಯದಲ್ಲಿರುವ ಬಾಲಕರ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಾಸವಾಗಿದ್ದುಕೊಂಡು ಶಾಲೆ ಕಲಿಯುತ್ತಿದ್ದಾನೆ, ದಿ.29.12.2016 ರಂದು ಸಾಯಂಕಾಲ ಜೇವರಗಿಯಿಂದ ನನ್ನ ತಮ್ಮನ ಗೆಳೆಯ ಆಕಾಶ ತಂದೆ ಧರ್ಮಣ್ಣ ನಾಟೀಕಾರ ಈತನು ಪೋನ ಮಾಡಿ ನೀಮ್ಮ ತಮ್ಮ ವಿನೋದನಿಗೆ ಜೇವರಗಿಯಲ್ಲಿ ಎಕ್ಸಿಡೆಂಟ್ ಆಗಿದೆ ಅವನಿಗೆ ಕಲಬುರಗಿ ಯುನೈಟೇಡ ಅಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರುತ್ತೆವೆ ಅಂತಾ ಹೇಳಿ ನನಗೆ ಬರಲು ತಿಳಿಸಿದನು. ವಿಷಯ ಗೊತ್ತಾದ ಕೂಡಲೆ ನಾನು ಪುನಾದಿಂದ ದಿ. 30.12.2016 ರಂದು ಮುಂಜಾನೆ ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ನನ್ನ ತಮ್ಮನಿಗೆ ನೋಡಲು ಅವನ ತಲೆಯ ಹಿಂಬಾಗದಲ್ಲಿ ಬಾರಿ ರಕ್ತಗಾಯವಾಗಿತ್ತು. ಅಲ್ಲದೆ ಎಡಗಡೆ ಭುಜದ ಹತ್ತಿರ ಗಾಯವಾಗಿತ್ತು ಅವನು ಮಾತನಾಡುವ ಸ್ಥಿತಿಯಲ್ಲಿ ಇದ್ದಿರಲಿಲ್ಲಾ ಅವನ ಆರೋಗ್ಯಸ್ಥಿತಿ ಗಂಬೀರವಾಗಿತ್ತು ಅಲ್ಲಿಯೇ ಆಕಾಶ ಮತ್ತು ನಮ್ಮ ಸಂಭಂದಿಕರಾದ ಸಂತೊಷ ಇದ್ದರು. ಆಕಾಶ ನಾಟೀಕಾರ ಈತನಿಗೆ ಕೇಳಲಾಗಿ ಅವನು ಹೇಳಿದ್ದೆನೆಂದರೆ ವಿನೊದ ನಮ್ಮ ಹಾಸ್ಟೇಲದಿಂದ ದಿ. 29.12.2016 ರಂದು ಮದ್ಯಾಹ್ನ ಸೈಕಲ ಮೇಲೆ ಕುಳಿತು ಜೇವರಗಿ ಕಡೆಗೆ ಹೋದನುಅವನು ಹೋದ ಸ್ವಲ್ಪ ಸಮಯದಲ್ಲಿ ಕೊಳಕೂರ ಕ್ರಾಸ್ ಹತ್ತಿರ ಜೇವರಗಿ-ಕಲಬುರಗಿ ರೋಡಿನಲ್ಲಿ ನಮ್ಮ ಹಾಸ್ಟೇಲ ಹುಡುಗನಿಗೆ ಎಕ್ಸಿಡೆಂಟ್ ಆಗಿರುತ್ತದೆ ಅಂತಾ ನನಗೆ ಗೊತ್ತಾಗಿ ಅಲ್ಲಿಗೇ ನಾನು ಹೋಗಿ ನೋಡಲಾಗಿ ವಿನೋದನ ತಲೆಯ ಹಿಂಬಾಗದಲ್ಲಿ ಮತ್ತು ಎಡ ಭುಜಕ್ಕೆ ಬಾರಿ ಗಾಯವಾಗಿದ್ದು ಇತ್ತು. ಅಲ್ಲಿಯೇ ಒಂದು ಬುಲೇರೊ ವಾಹನ ನಿಂತಿತ್ತು ಅದರ ನಂಬರ ನೋಡಲು ಅದರ ನಂ ಕೆಎ-32-ಸಿ-1169 ನೇದ್ದು ಇತ್ತು, ಅದರ ಚಾಲಕನಿಗೆ ಹೆಸರು ಕೇಳಲು ಅವನು ತನ್ನ ಹೆಸರು ಸಾಬಣ್ಣ ತಂದೆ ಮರೆಪ್ಪ ನಾಟಿಕಾರ ಸಾಃ ನಾಲವಾರ ಅಂತ ಹೇಳಿ ತನ್ನ ಬುಲೇರೋ ವಾಹನ ಬಿಟ್ಟು ಓಡಿ ಹೋದನು ಅವನಿಗೆ ನೋಡಿದಲ್ಲಿ ಗುರುತಿಸುತ್ತೆನೆ. ನಂತರ ಅಲ್ಲಿಯೇ ಇದ್ದ ನನ್ನ ಗೆಳೆಯ  ಅಭಿಲಾಶ ಸಾಃ ಮದರಿ ಇತನು  ಹೇಳಿದ್ದನೆಂದರೆ  ಬುಲೆರೋ ವಾಹನ ನಂ ಕೆಎ-32-ಸಿ-1169 ನೇದ್ದರ ಚಾಲಕನು ತನ್ನ ಬುಲೇರೋ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಜೇವರಗಿ ಕಡೆಯಿಂದ ನಡಯಿಸಿಕೊಂಡು ಬಂದು ವಿನೊದನ ಸೈಕಲಕ್ಕೆ ಎದುರಾಗಿ ಡಿಕ್ಕಿ ಪಡಿಸಿದಾಗ  ವಿನೋದನು ಸೈಕಲದೊಂದಿಗೆ ರೊಡಿನಲ್ಲಿ ಬಿದ್ದನು. ಘಟನೆ ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ಆಗಿರುತ್ತದೆ ಅಂತಾ ತಿಳಿಸಿದನು. ನಂತರ ನಾನು ವಿನೋದನಿಗೆ ಒಂದು ಅಪರಿಚಿತ ವಾಹನದಲ್ಲಿ  ಹಾಕಿಕೊಂಡು ಉಪಚಾರಕ್ಕಾಗಿ ಜೇವರಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಉಪಚಾರ ಕೊಡಿಸಿ ಅಲ್ಲಿಂದ  ಅವನಿಗೆ ಹೆಚ್ಚಿನ ಉಪಚಾರ ಕುರಿತು ಒಂದು ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಯುನೈಟೇಡ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೆನೆ ಅಂತಾ ಹೇಳಿದ್ದರಿಂದ  ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ