POLICE BHAVAN KALABURAGI

POLICE BHAVAN KALABURAGI

30 June 2014

Gulbarga District Reported Crimes

 ಆಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಶಾತಂತಪ್ಪಾ ತಂದೆ ಅಪ್ಪಾರಾಯ ಹರಸೂರು ಇವರ ಮಗನಾದ ಮಣಿಕಂಠ ಇವನು ದಿನಾಂಕ 28-06-2014 ರಂದು ತಮ್ಮ ತಂದೆಯ ಹೊಟಲಕ್ಕೆ ಹೋಗಿ ಅಲ್ಲಿಂದ  ಮಹಾದೇವ ಎಂಬುವವರ ದುಕಾನಕ್ಕೆ ಹೋಗಿ ತಿನ್ನಲು ತೆಗೆದುಕೊಂಡು ರೋಡ ದಾಟುವ ಸಂಬಂದ ನಿಂತ್ತಿದ್ದಾಗ ಅದೆ ವೇಳೆಗೆ ಗುಲಬರ್ಗಾ ಕಡೆಯಿಂದ ಕೆಂಪು ಬಣ್ಣದ ಟವೇರಾ ಕಾರ ನಂ ಕೆ,, 25 ಪಿ, 1579 ನೇದ್ದರ ಚಾಲಕನು ಶಾಮರಾವ ತಂದೆ ಮಾರುತಿ ವಾಗಮೋರೆ ಇತನು ತನ್ನ ವಶದಲ್ಲಿದ್ದ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕ್ಕ ನಿಂತ್ತಿದ್ದ ಮೃತನಿಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದಾಗ ಡ್ರೈವರ ಸೈಡಿನ ಕಾರಿನ ಟೈಯರ ಆತನ ಮೈಮೇಲ ಹೋಗಿದ್ದಾಗ ಆತನಿಗೆ ಹೊಟ್ಟೆ ಬೆನ್ನು ಮೊಳಕಾಲು ತುಟಿ ಮತ್ತು ಅಲ್ಲಲ್ಲಿ ಭಾರಿ ಒಳಪೆಟ್ಟಾಗಿ ಬೆಹುಶ ಆಗಿದ್ದು ನಂತರ ಮೃತನ ತಂದೆ ಹಾಗೂ ಇತರರು ಕೂಡಿ ಅದೆ ಕಾರಿನಲ್ಲಿ ಹಾಕಿಕೊಂಡು ಗುಲಬರ್ಗಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾಗ ರಾತ್ರಿ 7.20 ಪಿ,ಎಮ್,ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 29-06-14 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಶ್ರೀ ಚಂದ್ರಕಾಂತ ತಂದೆ ರೇವಪ್ಪ ಕಾಳಗಿ ಸಾ:ಮಕ್ತಂಪೂರ ಗುಲಬರ್ಗಾ ತನ್ನ ಹಿರೋ ಹೊಂಡಾ ಸ್ಪೆಂಡರ ಕೆಎ 32 ವಾಯ್ 7101 ನೇದ್ದರ ಮೇಲೆ ಹಿಪ್ಪರಗಾ (ಬಿ) ಗ್ರಾಮದಲ್ಲಿ ತನ್ನ ಸಂಬಂಧಿ ಗುರುಬಾಯಿ ನಿಂಗಶೆಟ್ಟಿ ಇವರ ಅಂತ್ಯಕ್ರಿಯೆ ಹಾಜರಾಗುವ ಕುರಿತು ಹೊರಟಿದ್ದು, ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನಾವದಗಿ ಗ್ರಾಮ ದಾಟಿ ಹನುಮಾನ ಗುಡಿ ಹತ್ತಿರ ತನ್ನ ಸೈಡ ಹಿಡಿದುಕೊಂಡು ಹೊರಟಾಗ ಎದುರುನಿಂದ ಟಾಟಾ ಎಸಿ ಕೆಎ 32 ಬಿ 7173 ಚಾಲಕ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ಮೋ.ಸೈಕಲಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ  ವಾಹನ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ; 28-06-2014 ರಂದು  ಶ್ರೀಮತಿ ಅನಂತಮತಿ ಗಂ ಅಪ್ಪರಾವ ಚವಜಿ ಸಾ : ತೆರದಾಳ ಹಾ :ವ:  ಬಸವನಗರ ಹುಮನಾಬಾದ ಇವರ ಮಗಳಾದ ಅಶ್ವಿನಿ ಇವಳ ಲಗ್ನವು ದಿನಾಂಕ 02-07-2014 ರಂದು ಚಿಕ್ಕಪಡಸಲಗಿ ಗ್ರಾಮದಲ್ಲಿ ಇದ್ದುದರಿಂದ ಇಂದು ಮದ್ಯಾನ 2.00 ಗಂಟೆ ಸೂಮಾರಿಗೆ ಹುಮನಾಬಾದದಿಂದ ತನ್ನ ಸ್ವಗ್ರಾಮವಾದ ತೆರದಾಳಕ್ಕೆ ತಮ್ಮ ಮನೆಯ ಮಾರುತಿ ಜೆನ್ ಅಸ್ಟಲೊ ಕಾರನಂ ಕೆ,, 39 ಎಮ್, 1290 ನೇದ್ದರಲ್ಲಿ ಕುಳಿತು ಪಿರ್ಯಾದಿ ಅವಳ ಮಗ ಆದೀತ್ಯ, ಮಗಳು ಅಶ್ವಿನಿ , ಹಾಗೂ ಗಂಡ ಅಪ್ಪರಾವ ತಂ ಬಾಬುರಾವ ಚವಜಿ ಇವರು ಹೊರಟಿದ್ದು ಅಪ್ಪರಾವ ಇವರು ಕಾರ ಚಲಾಯಿಸುತ್ತಿದ್ದು ಮದ್ಯಾನ 3.30 ಗಂಟೆಯ ಸುಮಾರಿಗೆ ದಸ್ತಾಪುರ ಕ್ರಾಸ ಹತ್ತಿರ ಬಂದಾಗ ಕಾರ ಚಲಾಯಿಸುತ್ತಿದ್ದ ತನ್ನ ಗಂಡ ಅಪ್ಪರಾವ ಇತನು ತನ್ನ ವಶದಲ್ಲಿದ್ದ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿರುವಾಗ ಕಾರಿನ ಮುಂದಿನ ಎಡಭಾಗದ ಟೈರ ಒಮ್ಮಿಂದೊಮ್ಮಲೆ ಬಸ್ಟ ಆಗಿದ್ದರಿಂದ ವೇಗದ ಆಯಾ ತಪ್ಪಿ ಕಾರ ರೋಡಿನ ಎಡಬಾಗದ ತೆಗ್ಗಿನಲ್ಲಿರುವ ಗೀಡಕ್ಕೆ ಡಿಕ್ಕಿ ಹೊಡೆದಿದ್ದು ಇದರಿಂದ ತನಗೆ ತಲೆಯ ಮೇಲೆ ಎಡಗಡೆ ಮತ್ತು ಬಲಕ್ಕೆ ಭಾರಿ ರಕ್ತಗಾಯವಾಗಿದ್ದು ಮಗಳು ಅಶ್ವಿನಿ ಇವಳಿಗೆ ಗದ್ದದ ಕೆಳಗೆ ತರಚೀದ ರಕ್ತಗಾಯವಾಗಿದ್ದು ಮತ್ತು ಎದೆಗೆ ಮತ್ತು ಹೊಟ್ಟೆಗೆ ಗುಪ್ತಗಾಯಗಳಾಗಿರುತ್ತವೆ ಮಗ ಆದಿತ್ಯನಿಗೆ ಬಲ ಕೆನ್ನೆಯ ಮೇಲೆ ಗುಪ್ತಗಾಯವಾಗಿರುತ್ತದೆ ತನ್ನ ಗಂಡನಿಗೆ ಎಡಗಾಲ ಮೊಳಕಾಲಮೇಲೆ ತರಚೀದ ರಕ್ತಗಾಯವಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 28-06-2014 ರಂದು 03-00 ಪಿ.ಎಮ್ ಕ್ಕೆ ನೇಹರು ಗಂಜ ಬಸ್ ನಿಲ್ದಾಣ ರೋಡಿನಲ್ಲಿ ಬರುವ ಚಂದ್ರಮೋಹನ ಹೋಟೆಲ ಎದರುಗಡೆ ರೋಡಿನ ಮೇಲೆ ಅಟೋರಿಕ್ಷಾ ನಂ. ಕೆ.ಎ 32 ಎ 963 ನೇದ್ದರ ಚಾಲಕನು ತನ್ನ ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಕಿರಣಾ ಬಜಾರ ಕಡೆಯಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ವಾಹನಕ್ಕೆ ಕಟ್ ಹೊಡೆದು ಪಲ್ಟಿ ಮಾಡಿದ್ದರಿಂದ ಅಟೋರಿಕ್ಷಾದಲ್ಲಿ ಕುಳಿತ ಶ್ರೀ ರಾಮಶೇಟ್ಟಿ ತಂದೆ ಧರ್ಮು ನಾಯಕ, ಸಾಃ ಅಣಕಲ ಕಿಂಡಿ ತಾಂಡಾ, ತಾಃ ಚಿತ್ತಾಪೂರ,  ರವರಿಗೆ ಎರಡು ಮೊಳಕಾಲಿಗೆ ತರಚಿದ ರಕ್ತಗಾಯವಾಗಿ ತೊಡೆಗೆ ಮತ್ತು ಎದೆಗೆ ಗುಪ್ತ ಪೆಟ್ಟಾಗಿದ್ದು ಆರೋಪಿತನ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.