POLICE BHAVAN KALABURAGI

POLICE BHAVAN KALABURAGI

12 September 2014

Gulbarga District Reported Crimes

ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಆನಂದಕುಮಾರ ತಂದೆ ಶಿವಯೋಗಪ್ಪ ದೊಡ್ಡಮನಿ ಉ:ಪಿ.ಡಿಓ ಬಬಲಾದ (ಐಕೆ ಗ್ರಾ.ಪಂ) ಸಾ:ಹೀರಾಪುರ ತಾ:ಜಿ:ಗುಲಬರ್ಗಾ ರವರು ದಿನಾಂಕ 11-09-2014 ರಂದು ಕಗ್ಗನಮಡ್ಡಿ ಗ್ರಾಮದಲ್ಲಿ ಡಾ : ಬಿ.ಆರ್. ಅಂಬೇಡ್ಕರ ಸಮುದಾಯ ಭವನದ ಮುಂದುಗಡೆ ಇರುವ ಪಂಚಾಯತಿಗೆ ಸಂಂಧ ಪಟ್ಟ ಜಾಗೆಯನ್ನು ಅತೀಕ್ರಮಿಸಿದ್ದರಿಂದ ತೆರವು ಗೋಳಿಸುವ ಕುರಿತು ಪೊಲೀಸ ರಕ್ಷಣೆಯಲ್ಲಿ ಹೋದಾಗ 1) ಯಶವಂತ ತಂದೆ ಬಂಡೆಪ್ಪ ತಳಕೇರಿ 2) ದಶರಥ ತಂದೆ ಬಂಡೆಪ್ಪ ತಳಕೇರಿ 3) ಅಂಬಿಕಾ ಗಂಡ ಯಶವಂತ ತಳಕೇರಿ 4) ಅಂಬಾರಾಯ ತಂದೆ ಶಿವಪ್ಪ ನಾಯ್ಕಮನ ಸಾ:ಎಲ್ಲರೂ ಕಗ್ಗಿನ ಮಡ್ಡಿ ತಾ:ಜಿ:ಗುಲಬರ್ಗಾ ಇವರುಗಳು ತಕರಾರು ತೆಗೆದು ಜಗಳವಾಡಿ ತಡೆದು ನಿಲ್ಲಿಸಿ ಅವಾಶ್ಚ ಶಬ್ದಗಳಿಂದ ಬೈಯ್ದು ಸರಕಾರಿ ಕೆಲಸ ನಿರ್ವಹಿಸದಂತೆ ಅಡೆ ತಡೆ ಉಂಟು ಮಾಡಿ ಮಚ್ಚಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ದೀಪಕ ತಂದೆ ಧೂಳಪ್ಪಾ ಸುಂಟನೂರೆ ಸಾಃ ಬಸವಕಲ್ಯಾಣ ಬೀದರ ಹಾವಃ ಡಾಕ್ಟರ ಫಾರೂಖ್ ಇವರ ಅಪಾರ್ಟಮೆಂಟ್ಸ್ ನಲ್ಲಿ ಬಾಡಿಗೆ ಆರ್.ಟಿ.ಓ ಕ್ರಾಸ್ ಸಾಯಿ ನಗರ ಗುಲಬರ್ಗಾ ಇವರು ದಿನಾಂಕಃ 11/09/2014 ರಂದು 11:45 ಎ.ಎಂ. ಕ್ಕೆ ನಾನು ಮತ್ತು ನನ್ನ ಹೆಂಡತಿ ಮತ್ತು ನನ್ನ ಹೆಂಡತಿಯ ಕಾಕಿ ನಾವೆಲ್ಲರೂ ಕೂಡಿಕೊಂಡು ಮನೆಗೆ ಬೀಗ ಹಾಕಿಕೊಂಡು ನಾನು ನನ್ನ ಕರ್ತವ್ಯ ಕುರಿತು ಸರಕಾರಿ ಆಸ್ಪತ್ರೆಗೆ ಹೋಗಿರುತ್ತೇನೆ. ನನ್ನ ಹೆಂಡತಿ ಮತ್ತು ಕಾಕಿ ರವರು ಸುಪರ ಮಾರ್ಕೆಟಗೆ ಹೋಗಿರುತ್ತಾರೆ ನಂತರ 01:30 ಪಿ.ಎಂ. ಸುಮಾರಿಗೆ ಮನೆಯ ಮಾಲಿಕರಾದ ಡಾಕ್ಟರ ಫಾರೂಖ್ ಇವರು ಫೋನ್ ಮಾಡಿ ತಿಳಿಸಿದ್ದೇನೆಂದರೇ, ಮನೆಯ ಬಾಗಿಲಿನ ಕೀಲಿಕೊಂಡಿ ಮುರಿದಿದ್ದು ಮನೆ ಕಳ್ಳತನ ಆಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಅಳಿಯ ಹಾಗು ಹೆಂಡತಿಗೂ ಕೂಡ ಫೋನ್ ಮಾಡಿ ಮನೆಗೆ ಬಂದು ನೋಡಲು ಮನೆಯ ಬಾಗಿಲಿನ ಕೀಲಿ ಕೊಂಡಿ ಮುರಿದಿದ್ದು ಮನೆಯೊಳಗೆ ಹೋಗಿ ಡ್ರೆಸ್ಸಿಂಗ್ ಟೇಬಲಿನ ಡ್ರಾ ಚೆಕ್ ಮಾಡಿ ನೋಡಲಾಗಿ ಬಂಗಾರದ ಆಭರಣಗಳು  ಒಟ್ಟು ಅಃಕಿಃ 1,87,000/- ರೂ. ಬೆಲೆ ಬಾಳುವ ಬಂಗಾರ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಶಹೆನಾಜ್ ಪರ್ವೀನ ಗಂಡ ಮಹ್ಮದ ಅಲಿ ಸಾಃ ಪ್ಲಾಟ ನಂ. 110, ಬಾರೆಹಿಲ್ಸ್ ಗಣೇಶ ನಗರ ಗುಲಬರ್ಗಾ ಇವರು ದಿನಾಂಕಃ 11/09/2014 ರಂದು 09:00 ಎ.ಎಂ. ಕ್ಕೆ ತಮ್ಮ ಮನೆಗೆ ಕೀಲಿ ಹಾಕಿಕೊಂಡು ಮಹಾಗಾಂವ್ ಗ್ರಾಮದ ಶಾಲೆಗೆ ಹೋಗಿದ್ದು ಕರ್ತವ್ಯ ಮುಗಿಸಿಕೊಂಡು ಮರಳಿ 05:00 ಪಿ.ಎಂ. ಕ್ಕೆ ಬಂದು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದಿದ್ದು ಮನೆಯ ಬೆಡರೂಮಿನಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಲೆಮಾರಿ ತೆರೆದಿದ್ದು ಅಲೆಮಾರಿಯಲ್ಲಿದ್ದ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ವಾಚ್ ಗಳು, ಸ್ಯಾಮಸಂಗ್ ಮೊಬೈಲ್ ಹಾಗು ನಗದು ಹಣ 25,000/- ರೂ.ಹೀಗೆ ಒಟ್ಟು ಅಃಕಿಃ 11,12,000/- ರೂ. ಬೆಲೆ ಬಾಳುವ ಬಂಗಾರ & ಬೆಳ್ಳಿಯ ಆಭರಣಗಳನ್ನು ಯಾರೋ ಕಳ್ಳರು ಇಂದು 09:00 ಎ.ಎಂ. ದಿಂದ 05:00 ಪಿ.ಎಂ. ಅವಧಿಯಲ್ಲಿ ಮನೆಯ ಬಾಗಿಲಿನ ಕೀಲಿ ಮುರಿದು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಸೈಯದ್ ಆಸ್ಪಕ ಅಹಮ್ಮದ್ ತಂದೆ ಸೈಯದ್ ಅಹಮ್ಮದ್ ಸಾ: ನ್ಯಾಮತಿ ತಾ: ಹೊನ್ನಾಳಿ ಜಿ: ದಾವಣಗೆರೆ ಹಾ:: ಮನೆ ನಂ ಬಿ2 104 ಹೈಕೋರ್ಟ ವಸತಿ ಗೃಹ ಗುಲ್ಬರ್ಗಾ ಇವರು ದಿನಾಂಕ: 11/09/2014 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿ ಮತ್ತು ಆತನ ಹೆಂಡತಿ ರುಕ್ಸಾನಾ ಬೇಗಂ ಇವರು ತಮ್ಮ ಕೆಲಸಕ್ಕೆ ಹೋಗಿದ್ದು ಫಿರ್ಯಾದಿದಾರನ  ಹೆಂಡತಿ ಮಧ್ಯಾಹ್ನ 2-30 ಪಿಎಮ್ ದ ಸುಮಾರಿಗೆ ಕೆಲಸದಿಂದ ಮರಳಿ ಮನೆಗೆ ಬಂದು ನೋಡಲಾಗಿ  ಮನೆಯ ಬಾಗಿಲು ಮುರಿದಿದ್ದು ಒಳಗೆ ಹೋಗಿ ನೋಡಲು ಬೆಡರೂಮ ನಲ್ಲಿದ್ದ ಅಲಮಾರಿ ಲಾಕರ್ ಮುರಿದಿದ್ದು ಅಲಮಾರಿಯಲ್ಲಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಅ.ಕಿ.  2,10,200/-ರೂ  ಕಿಮ್ಮತ್ತಿನ ಬೆಳ್ಳಿ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.