POLICE BHAVAN KALABURAGI

POLICE BHAVAN KALABURAGI

28 December 2012

GULBARGA DISTRICT REPORTED CRIMES


ದರೋಡೆ ಪ್ರಕರಣ:
ಕುಂಚಾವರಂ ಪೊಲೀಸ್ ಠಾಣೆ:ಪೆಂಟಮ್ಮ ಗಂಡ ಮಾಣೆಪ್ಪ ಕಾಮಣಿ ಕಂತುಲಾ ವಯ:65 ಜಾ:ಉ|| ಹೊಲ ಮನೆಕೆಲಸ  ಕುರುಬುರ ಸಾ:ಲಚಮಸಾಗರ ರವರು ನಾನು ದಿನಾಂಕ:27-12-2012 ರಂದು ಸಾಯಂಕಾಲ 4-00 ಗಂಟೆಗೆ ಕುಂಚಾವರಂದಿಂದ ಲಚಮಸಾಗರ ಗ್ರಾಮಕ್ಕೆ ನಡೆದುಕೊಂಡು ಬರುತ್ತಿರುವಾಗ ದ್ವಿಚಕ್ರದ ಮೇಲೆ ಬಂದ ಮೂರು ಜನರು ನನ್ನ ಕಪಾಳಕ್ಕೆ ಹೊಡೆದು, ನನ್ನ ಕೊರಳಲ್ಲಿಯ ಒಂದು ತೊಲೆ ಬಂಗಾರದ ಸಣ್ಣ ಗುಂಡಿನ ಸರವನ್ನು ಕಿತ್ತುಕೊಂಡು ವಾಹನದ ಮೇಲೆ ಕುಂಚಾವರಂ ಮಾರ್ಗವಾಗಿ ಹೋಗುತ್ತಿರುವಾಗ ಸಾರ್ವಜನಿಕರು ಮತ್ತು ಪೊಲೀಸ್ ರು ಬೆನ್ನು ಹತ್ತಿ ಹಿಡಿದಿರುತ್ತಾರೆ. ಸದರಿ ಪೆಂಟಮ್ಮ ರವರು  ನೀಡಿದ ಹೇಳಿಕೆ ಸಾರಂಶದ ಮೇಲಿಂದ ಸದರಿ ಆರೋಪಿತರಾದ ಪೃಥ್ವಿರಾಜ ತಂದೆ ನಿಂಗೋಜಿ, ಇರ್ಪಾನ್ ತಂದೆ ಖಲೀಲಮಿಯಾ, ಮತ್ತು ಇಬ್ರಾಹಿಂ ತಂದೆ ರಿಹಾದ ಖಾನ ಸಾ|| ಮೂರು ಜನರು ರಂಜೋಳ ಗ್ರಾಮ ಆಂದ್ರ ಪ್ರದೇಶ ರವರನ್ನು ಮತ್ತು ಕೃತ್ಯಕ್ಕೆ ಬಳಸಿದ ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಂಡು ಠಾಣೆ ಗುನ್ನೆ ನಂ:52/2012 ಕಲಂ,394 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಗೋವಿಂದ ತಂದೆ ಖುಬ್ಯಾ ನಾಯಕ   ಸಾ: ಬಟಗೇರಾ (ಕೆ) ಗೇಟ ತಾ:ಸೇಡಂ ಜಿ:ಗುಲಬರ್ಗಾರವರು  ನಾನು ಮತ್ತು  ನಮ್ಮ ಊರಿನವರಾದ ಮೇಗು ತಂದೆ ಕಾಶ್ಯಾ ನಾಯಕ, ಸಂತೋಷ ತಂದೆ ಲಷ್ಕರ ರವರು ದಿನಾಂಕ 21-12-12 ರಂದು ರಾತ್ರಿ 9-15 ಗಂಟೆ ಸುಮಾರಿಗೆ ಪುನಾಕ್ಕೆ ಹೋಗುವ ಸಲುವಾಗಿ ನಮ್ಮೂರಿನಿಂದ ಗುಲಬರ್ಗಾಕ್ಕೆ ಬಂದು ರಾಮಮಂದಿರ ರಿಂಗ ರೋಡ ಹತ್ತಿರ ಬಸ್ಸಿನಿಂದ ಇಳಿದು ಹಳೇ ಜೇವರ್ಗಿ ರೋಡ ರೈಲ್ವೆ ಅಂಡರ ಬ್ರೀಡ್ಜ ಮುಖಾಂತರ ರೈಲ್ವೆ ಸ್ಟೇಷನಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಟೋರಿಕ್ಷಾ ನಂಬರ ಕೆಎ-32/ಎ-4863 ಚಾಲಕ  ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ನನಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಹೋರಟು ಹೋಗಿರುತ್ತಾನೆ ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 127/12  ಕಲಂ: 279,338 ಐ.ಪಿ.ಸಿ ಸಂ 187 ಐ,ಎಮ್,ವಿ ಆಕ್ಟ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ್ ಠಾಣೆ: ಶ್ರೀ ಸುಭಾಸ ತಂದೆ ಭೋಜಪ್ಪ ರಾಗಾ ಉ|| ಪ್ರಾಚಾರ್ಯರು ಮಾತೋಶ್ರಿ ನೀಲಾಂಬಿಕಾ ಎಸ್. ಪಾಟೀಲ ಪಬ್ಲೀಕ ಶಾಲೆ ಬೂಸನೂರ, ಸಾ||ಬೀದರ, ಹಾ||||ಮುನ್ನೋಳ್ಳಿ ನಿವಾಸ ತಿಮ್ಮಾಪೂರ ಸರ್ಕಲ ಹತ್ತಿರ ಗುಲಬರ್ಗಾ ರವರು ನಾವು ದಿನಾಂಕ:26/12/2012 ರಂದು  1600 ಗಂಟೆಗೆ ಶಾಲೆಯ ಅವಧಿ  ಮುಗಿದ ನಂತರ ಶಾಲಾ ಮಕ್ಕಳಿಗೆ ವಾಹನದಲ್ಲಿ ಕಳುಹಿಸಿದ ನಂತರ ಶಾಲೆಯ ಎಲ್ಲಾ ಎಂಟು ಕೊಣೆಗಳಿಗ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ:27/12/2012 ರಂದು ಬೆಳಿಗ್ಗೆ 9-30 ಗಂಟೆಗೆ ಶಾಲೆಗೆ ಬಂದಾಗ ಎಲ್ಲಾ ಕೊಣೆಗಳ ಬೀಗ ಮುರಿದಿದ್ದು ಕಂಡು ಬಂದಿದ್ದು ಕಛೇರಿ ಕೊಣೆಯೊಳಗೆ ನೋಡಲಾಗಿ,ಮೈಕ –02, ಎಂಪ್ಲಿಫಾಯರ-01, ಅ||ಕಿ|| 21,000/- ಡಿಸೇಲ 25 ಲೀಟರ ಅ||ಕಿ||1050/- ನೀರಿನ ಪ್ಲಾಸ್ಟೀಕ ಪೈಪ 200 ಮೀಟರ ಉದ್ದಅ||ಕಿ|| 2,000/- ನೇದ್ದವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತ ಅರ್ಜಿಯ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.:114/2012 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT


:: ಪತ್ರಿಕಾ ಪ್ರಕಟಣೆ::

        ಜಿಲ್ಲಾ ಪೊಲೀಸ್ ಅಧಿಕಾರಿಗಳು, ಸೈಬರ್ ಕೆಫೆ ಮಾಲೀಕರು ಸೈಬರ್ ಕೆಫೆ ಸುರಕ್ಷತೆಯ ಬಗ್ಗೆ ಪರಸ್ಪರ ಚರ್ಚೆಯ ಅವಧಿಯನ್ನು ನಡೆಸುತ್ತಾರೆ. ಏಪ್ರಿಲ್ 11, 2011 ರಂದು, ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೈಬರ್ ಕೆಫೆಗಳಿಗೆ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಮುಖ್ಯವಾಗಿ ಸೈಬರ್ ಕೆಫೆಯು ತನ್ನ ವ್ಯವಹಾರವನ್ನು ನಡೆಸುವುದು ಹೇಗೆ ಎಂಬ ಬಗ್ಗೆ ಒತ್ತಿ ಹೇಳುತ್ತವೆ. ಸೈಬರ್ ಕೆಫೆಗಳು ಈ ಮಾರ್ಗ ಸೂಚಿಗಳನ್ನು 100% ರಷ್ಟು ಪಾಲನೆ ಮಾಡುವುದು ಕಡ್ಡಾಯವಾಗಿದೆ.

1.             ಪ್ರತಿ ಸೈಬರ್ ಕೆಫೆ ಗ್ರಾಹಕರ ವಿವರಗಳನ್ನು ಹೊಂದಿರುವ ಕೆಫೆ ಲಾಗ್ ರಿಜಿಸ್ಟ ರ್ ನ ಡಿಜಿಟಲ್ ಮತ್ತು ಸುರಕ್ಷಿತ ದಾಸ್ತಾನಿಗಾಗಿ ಐಟಿ ಕಾಯ್ದೆಯ ಮಾರ್ಗಸೂಚಿಗಳು ಶಿಫಾರಸು  ಮಾಡುತ್ತವೆ.
2.             ಈ ಎಲ್ಲ ಮಾಹಿತಿಯನ್ನೂ ಸೈಬರ್ ಕೆಫೆಯು ಒಂದು ವರ್ಷದ ಕನಿಷ್ಟ ಅವಧಿಗೆ ಶೇಖರಣೆ ಮಾಡುವುದು ಅಗತ್ಯವಾಗುತ್ತದೆ.
3.             ಅಂತೆಯೇ ಪ್ರತಿ ಸೈಬರ್ ಕೆಫೆ ಈ ಮಾಸಿಕ ಕೆಫೆ ಲಾಗ್ ರಿಜಿಸ್ಟರ್ ವರದಿಯನ್ನು ನಗರ ಕಾನೂನುಜಾರಿ ಪ್ರಾಧಿಕಾರಕ್ಕೆ ಮುಂದಿನ ತಿಂಗಳಿನ 5ನೇ ದಿನದ ವೇಳೆಗೆ ಸಲ್ಲಿಸುವುದು  ಅಗತ್ಯ

ಮೇಲೆ ಹೇಳಲಾಗಿರುವ ಡಿಜಿಟಲ್ ಡೇಟಾ ಸ್ಟೋರೇಜ್ ಮತ್ತು ಸೈಬರ್ ಕ್ರೈಮ್ ವಿಷಯಗಳ ಮೇಲೆ ಗುಲಬರ್ಗಾ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸೈಬರ್ ಕೆಫೆ ಮಾಲೀಕರು ಪರಸ್ಪರ ಚರ್ಚಾ ಅವಧಿಯಲ್ಲಿ ಪಾಲ್ಗೊಂಡರು.
ಭಾರತದ ಅತಿದೊಡ್ಡ ಸೈಬರ್ ಕೆಫೆ ಸಲ್ಯೂಷನ್ ಮತ್ತು ಸೆಕ್ಯೂರಿಟಿ ಕಂಪನಿಯಾಗಿರುವ ಐಡಿಯಾಕ್ಟ ಇನೊವೇಷನ್ಸ ಪ್ರೈ ಲಿ. ತನ್ನ ಉಚಿತ ಸೈಬರ್ ಕೆಫೆ ಮ್ಯಾನೆಜೆಮೆಂಟ್ ಮತ್ತು ಸೆಕ್ಯೂರಿಟಿ ಸಲ್ಯೂಷನ್ ಐಕೆಪೇ ಮ್ಯಾನೆಜರ್ ಸಾಪ್ಟವೇರ ಅನ್ನು ಗುಲಬರ್ಗಾ ಸೈಬರ್ ಕೆಫೆಗಳಲ್ಲಿ ಪ್ರಾರಂಬಿಸಿದೆ.
ಉದ್ದೇಶವೆಂದರೆ ಗುಲಬರ್ಗಾ ಜಿಲ್ಲೆಯಲ್ಲಿ ಸೈಬರ್ ಭದ್ರತೆ ಮತ್ತು ನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳುವುದು. ಇದು ಸೈಬರ್ ಕ್ರೈಮ್ ತೊಡೆದುಹಾಕುವ ಪ್ರಯತ್ನವಾಗಿದ್ದು ಸೈಬರ್ ಕೆಫೆಗಳು ದುರ್ಬಳಕೆಯ ಸಾಮಾನ್ಯ ಗುರಿಗಳಾಗಿರುತ್ತವೆ ಮತ್ತು ಇವುಗಳನ್ನು ಚೆನ್ನಾಗಿ ನಿಯಂತ್ರಣ ಮಾಡುವುದು ಅಗತ್ಯವಾಗುತ್ತದೆ.
ಗುಲಬರ್ಗಾ 27ನೇ ಡಿಸೆಂಬರ್, 2012. ಗುಲಬರ್ಗಾ ಜಿಲ್ಲಾ ಪೊಲೀಸರು ಮತ್ತು ಐಡಿಯಾಕ್ಟ್ಸ್ ಇನ್ನೊವೇಷನ್ಸ ಪ್ರೈ ಲಿ. ಜಂಟಿಯಾಗಿ ಗುಲಬರ್ಗಾ ಜಿಲ್ಲೆಯ 125 ಸಂಖ್ಯೆಯ ಸೈಬರ್ ಕೆಫೆ ಮಾಲೀಕರನ್ನು ಉದ್ದೇಶಿಸಿ ಜಂಟಿಯಾಗಿ ಮಾತನಾಡಿದರು ಹಾಗೂ ಈ ಚರ್ಚಾಕೂಟದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮಕ್ಕೆ ಗುಲಬರ್ಗಾ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಶ್ರೀ ಎನ್.ಸತೀಷಕುಮಾರ ಐ.ಪಿ.ಎಸ್.,  ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಮತ್ತು ಪೊಲೀಸ್ ಅಧಿಕಾರಿಗಳು, ಐಡಿಯಾಕ್ಟ್ಸ್ ಇನೊವೇಷನ್ಸ ಪ್ರತಿನಿಧಿಗಳು ಮತ್ತು ಗುಲಬರ್ಗಾ ಜಿಲ್ಲೆಯ 125 ಸಂಖ್ಯೆಯ ಸೈಬರ್ ಕೆಫೆ ಮಾಲೀಕರು ಹಾಜರಿದ್ದರು.
ಗುಲಬರ್ಗಾ ಜಿಲ್ಲೆಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್., ಇವರ ಪ್ರಕಾರ ಇಂದಿನವರೆಗೂ ಹೆಚ್ಚಿನ ಸೈಬರ್ ಕೆಫೆಗಳು ಭೌತಿಕ ರಿಜಿಸ್ಟರ್ ಗಳಲ್ಲಿ ಕೆಫೆ ಸಂದರ್ಶಕರ ವಿವರಗಳನ್ನು ಸಂಗ್ರಹಿಸಿಸುತ್ತವಾದರೂ ಇದು ಸೂಕ್ತವಲ್ಲದ ಮಾಹಿತಿ ನಿರ್ವಹಣೆಯಾಗಿದೆ, ಅಷ್ಟೆ ಅಲ್ಲ. ಅಗತ್ಯವಿರುವಾಗ ಇಂಥ ಮಾಹಿತಿಯನ್ನು ಮರಳಿ ಪಡೆಯವುದೂ ಕಷ್ಟಕರವಾಗಿದ್ದು, ಕೆಫೆಗಳಿಗೆ ತುಂಬ ಸಂಕಷ್ಟದ ವಿಷಯವಾಗಿ ಪರಿಣಮಿಸುತ್ತದೆ. ಸೈಬರ್ ಕೆಫೆಗಳನ್ನು ಸಮಾಜ ವಿರೋಧಿ ಶಕ್ತಿಗಳು ಬಳಕೆ ಮಾಡಿದ ಉದಾಹರಣೆಗಳಿದ್ದು ಅವುಗಳಿಗೆ ಸುರಕ್ಷತೆ ನೀಡುವುದು ಮಹತ್ವದ್ದಾಗಿದೆ. ಐಕೆಫೆ ಮ್ಯಾನೇಜರ್ ಸಾಪ್ಟವೇರ್  ಎಂಬುದು ಐಡಿಯಾಕ್ಟ್ಸ್ ಇನೊವೇಷನ್ಸ ಮಹತ್ವದ ಉಪಕ್ರಮವಾಗಿದ್ದು, ಸೈಬರ್ ಕೆಫೆಗಳು ಸ್ಮೂತ್ ಆಗಿ, ಸುಭದ್ರವಾಗಿ ಮತ್ತು ಸುರಕ್ಷಿತವಾಗಿ ವ್ಯವಹಾರವನ್ನು ನಡೆಸಲು ಹಾಗೂ ರಾಷ್ಟ್ರೀಯ ಭದ್ರತೆಗೆ ನೆರವಾಗಲು ಸಹಾಯ ಮಾಡುತ್ತದೆ. ಐಕೆಫೆ ಮ್ಯಾನೆಜರ್ ಸಾಫ್ಟ್ವೇರ್, ಕೇಂದ್ರ ಸರ್ಕಾರವು 11ನೇ ಏಪ್ರಿಲ್ 2011 ರಂದು ಕೇಂದ್ರ ಸರ್ಕಾರವರು ಹೊರಡಿಸಿದ ಅಧಿಸೂಚನೆಯ ಐಟಿ ಕಾಯ್ದೆಯ ಅನ್ವಯ ಹೊಸ ಮಾಹಿತಿ ತಂತ್ರಜ್ಞಾನ ಕಾಯ್ದೆ 2011ರ (ಸೈಬರ್ ಕೆಫೆಗೆ ಮಾರ್ಗಸೂಚಿಗಳು) ನಿಯಮಗಳಿಗೆ ಹೊಂದಿಕೊಂಡಿದೆ. ಐಡಿಯಾಕ್ಟ್ಸ್ ಇನೊವೇಷನ್ಸ ಒಬ್ಬ ಜವಾಬ್ದಾರಿಯುತ ಕಾರ್ಪೊರೇಟ ಸದಸ್ಯರಾಗಿ ದೇಶಾದ್ಯಂತ ಸೈಬರ್ ಅಪರಾಧವನ್ನು ನಿಯಂತ್ರಿಸುವ ರಚನಾತ್ಮಕ ಕ್ರವುವನ್ನು ಕೈಗೊಂಡಿರುತ್ತಾರೆ. ಐಕೆಫೆ ಮ್ಯಾನೆಜರ್ ಸಾಪ್ಟವೇರ್ ಅನ್ನು ಪ್ರಾರಂಭಿಸಿದ್ದರಿಂದಾಗಿ ಈಗ ಎಲ್ಲ ಸಂಬಂಧಿಸಿದ ಕೆಫೆ ಸಂದರ್ಶಕ ವಿವರಗಳನ್ನು ಐಟಿ ಕಾಯ್ದೆಯ ಅಡಿಯಲ್ಲಿ ಅಗತ್ಯವಾದಂತೆ ಯಾವುದೇ ಬಂಡವಾಳವೂ ಇಲ್ಲದೇ ಉಚಿತವಾಗಿ ದಾಖಲಿಸುವುದು ಸಾಧ್ಯವಾಗುತ್ತದೆ. ನಾವು ಐಡಿಯಾಕ್ಟ್ಸ್ ಇನೊವೇಷನ್ಸ ಜೊತೆ ಸಹಯೋಗ ಹೊಂದಲು ಹರ್ಷಿಸುತ್ತೆವೆ. ಮತ್ತು ಗುಲಬರ್ಗಾ ಜಿಲ್ಲೆಯ ಎಲ್ಲ ಸೈಬರ್ ಕೆಫೆಗಳಲ್ಲಿ ಇದರ ಬಳಕೆಯನ್ನು ಪ್ರೋತ್ಸಾಹಿಸುತ್ತೇವೆ.
ಐಡಿಯಾಕ್ಟ್ಸ್ ಇನೊವೇಷನ್ಸ ಕಾರ್ಯನಿರ್ವಹಣಾ ವ್ಯವಸ್ಥಾಪಕ ಡಾ|| ಮತೀನುಲ್ಲ ಖಾನ್ ಹೇಳಿದರು. ಸೈಬರ್ ಕೆಫೆಗಳು ದೇಶದ ಇಂಟರನೇಟ್ ಬಳಕೆಯಲ್ಲಿ ಸುಮಾರು 47% ರಷ್ಟು ಪಾಲು ಪಡೆದಿವೆ. ಅವು ಇಂಟರನೇಟ್ ಬಳಕೆಯ ಅತಿದೊಡ್ಡ ಮೂಲಗಳಾಗಿರುವದರಿಂದ ಅವುಗಳ ಡಿಜಿಟಲ್ ನಿರ್ವಹಣೆ ಹಾಗೂ ಸುರಕ್ಷತೆ ಮಹತ್ವದ್ದಾಗಿದೆ. ಕೆಫೆ ಮಾಲೀಕರು ಇಂದು ಕೆಫೆ ನಿರ್ವಹಣೆಗಾಗಿ ಮತ್ತು ಸಂದರ್ಶಕ ಮಾಹಿತಿ ಸಂಗ್ರಹಣೆಗಾಗಿ ಕಾರ್ಯಗತಗೊಳ್ಳುವ ಪರಿಹಾರಗಳನ್ನು ಹೊಂದಿಲ್ಲ. ನಮ್ಮ ಉತ್ಪನ್ನ ಐಡಿಯಾಕ್ಟ ಇನೊವೇಷನ್ಸ ಸಾಪ್ಟವೇರ್ ಸೈಬರ್ ಕೆಫೆಗಳಿಗೆ ಕೆಳಗಿನ ಗುಣಲಕ್ಷಣಗಳನ್ನು ಒದಗಿಸುತ್ತದೆ:
v  ಬಳಕೆ ಮಾಡಲು ಸುಲಭ, ಇದು ಅಕೌಂಟಿಂಗ್, ಟರ್ಮಿನಲ್  ಮ್ಯಾನೇಜ್ ಮೆಂಟ್ ಮತ್ತು ಬಳಕೆದಾರರ   ಡೇಟಾ ಸಂಗ್ರಹಣೆಯಂಥ ಎಲ್ಲ  ಆಯಾಮಗಳಿಗೆ ಸಹಾಯ ಮಾಡುತ್ತದೆ, ಈ  ಮೂಲಕ   ಬಳಕೆದಾರರಿಗೆ ಅನುಕೂಲಕರವಾದ ಪರಿಸರವನ್ನು ಒದಗಿಸುತ್ತದೆ.
v  ಸಾಪ್ಟವೇರಿನ ಭದ್ರತಾ ಗುಣಲಕ್ಷಣಗಳು ಐಟಿ ಕಾಯ್ದೆಯ ಅಗತ್ಯಗಳ ಅನುಸಾರ ಇರುತ್ತವೆ ಮತ್ತು ಇದು ಕೆಫೆ ಮಾಲೀಕರಿಗೆ ಕಾನೂನುಜಾರಿ ಏಜೆನ್ಸಿಗಳಿಗೆ ಗರಿಷ್ಟ ಮಾಹಿತಿಯನ್ನು ನೀಡುವುದಕ್ಕೆ ಸಹಾಯ ಮಾಡುತ್ತವೆ, ಇದರಲ್ಲಿ ಡಿಜಿಟಲ್ ಫೋಟೊ ಕ್ಯಾಪ್ಚರ್, ಹೆಸರು, ವಿಳಾಸ ಮತ್ತು ಫೋಟೊ ಐಡಿಯಂಥ ಮಾಹಿತಿ ಸೇರಿದೆ.
v  ಇದು ದೀರ್ಘಕಾಲಿಕ ಅವಧಿಗೆ ವಿವರಗಳನ್ನು ಆಕ್ಟೀವ್ ಮಾಡಲು ಸಹಾಯ ಮಾಡುತ್ತದೆ. ನೋಂದಾಯಿತ ಬಳಕೆದಾರರು ತಮ್ಮ ಬಳಕೆದಾರ ಹೆಸರನ್ನು ಭಾರತದಲ್ಲಿನ ಎಲ್ಲ ಪಾಲುದಾರ ಕೆಫೆಗಳಲ್ಲಿ ಸತತವಾಗಿ ಮಾಹಿತಿಯನ್ನು ಒದಗಿಸದೇ ಬಳಕೆ ಮಾಡಬಹುದು.

ಐಡಿಯಾಕ್ಟ್ಸ್ ಇನೊವೇಷನ್ಸ ಐಕೆಫೆ ಮ್ಯಾನೆಜರ್ ಸಾಪ್ಟವೇರ್ ಅನ್ನು ಪ್ರಾರಂಭಿಸುವ ಮೂಲಕ ಗುಲಬರ್ಗಾ ಜಿಲ್ಲೆಯ ಸೈಬರ್ ಕೆಫೆಗಳು ಈ ಸಾಪ್ಟವೇರ್ ಅನ್ನು ಶುಲ್ಕರಹಿತವಾಗಿ ಪಡೆಯಬಹುದು ಮತ್ತು ಬಳಕೆದಾರರ ಅನುಭವವನ್ನು ಸುಧಾರಿಸಬಹುದು ಮತ್ತು ಅವರ ಕೆಫೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಮೂಲಕ ರಾಷ್ಟ್ರೀಯ ಸುರಕ್ಷತೆಗೆ ಸಹಾಯ ಮಾಡಬಹುದು
ಹೇಳಿಕೆಗಳಿಗಾಗಿ ಸಂಪರ್ಕಿಸಿ:
-------------------------------------------------------------
ಡಾ||ಮತೀನುಲ್ಲ ಖಾನ್, ಮ್ಯಾನೇಜರ್ ಅಪರೇಷನ್ಸ, ಐಡಿಯಾಕ್ಟ್ಸ್ ಇನೊವೇಷನ್ಸ:9886889660:matheenulla@ideacts.com

RECRUITMENT OF CONSTABLES (GD) IN CAPFS AND RIFLEMAN (GD) IN ASSAM RIFLES-2013


:: ಪತ್ರಿಕಾ ಪ್ರಕಟಣೆ.::
ಸಿಬ್ಬಂದಿ ನೇಮಕಾತಿ ಅಯೋಗ
ಕರ್ನಾಟಕ-ಕೇರಳ ವಲಯ

ಸಿಎಪಿಎಫ್ಎಸ್ ನ  ಕಾನ್ಸ್ ಟೇಬಲಗಳು (ಜಿಡಿ) ಬಿಎಸ್ಎಫ್, ಸಿಐಎಸ್ಎಫ್, ಸಿಆರ್ ಪಿಎಫ್, ಎಸ್ಎಸ್ ಬಿ, ಮತ್ತು ಐಟಿಬಿಪಿ ಮತ್ತು ಅಸ್ಸಾಂ ರೈಫಲ್ ನ  ರೈಫಲ್ ಮನ್ (ಜಿಡಿ)-2013 ಗಳನ್ನು ನೇಮಕ ಮಾಡಿಕೊಳ್ಳುವುದರ ಬಗ್ಗೆ .

     ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಸೀಮಾ ದಳ ಮತ್ತು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆ ಮತ್ತು ಅಸ್ಸಾಂ ರೈಫಲ್ ನ ರೈಫಲ್ ಮನ್ ಗಳ ನೇಮಕಾತಿಗೆ ಸಿಬ್ಬಂದಿ ನೇಮಕಾತಿ ಆಯೋಗ ದೇಶದಾಧ್ಯಂತ ಸ್ಪರ್ಧಾತ್ಮಕ ಪರೀಕ್ಷೆಯನ್ನು    12-05-2013 ರಂದು ನಡೆಸಲಿದೆ. ಈ ಹುದ್ದೆಯ ವೇತನ ಶ್ರೇಣಿ ರೂ. 5200-20200 ಜೊತೆಗೆ ಗ್ರೇಡ್ ಪೇ ರೂ. 2000. ನೇಮಕಾತಿಯು ದೈಹಿಕ ದೇಹದಾಢ್ಯತೆ (ಪಿಎಸ್ ಟಿ), ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ) ನಡೆಸಲಾಗುತ್ತದೆ. ಪಿಎಸ್ ಟಿ ಮತ್ತು ಪಿಇಟಿ ಪರೀಕ್ಷೆಗಳಲ್ಲಿ ಪಾಸಾದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
    ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಣೆಗಳು 2012 ಡಿಸೆಂಬರ್ 15-21 ರ ಎಂಪ್ಲಾಯ್ ಮೆಂಟ ನ್ಯೂಸ್ ನ ಸಂಚಿಕೆಯಲ್ಲಿ ದೊರೆಯುತ್ತದೆ. ಜೊತೆಗೆ ಈ ವಿವರಗಳು http://ssckkr.kar.nic.in and http://ssc.nic.in ದೊರೆಯುತ್ತವೆ. ಈ ಮಾಹಿತಿಯನ್ನು ಅಭ್ಯರ್ಥಿಗಳು ಡೌನ್ ಲೋಡ್ ಮಾಡಿಕೊಂಡು ಪೇಪರ್ ಅರ್ಜಿಯನ್ನು ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು http://ssconline.nic.in or http://ssconline2.gov.in ವೆಬ್ ಸೈಟಗಳನ್ನು ನೋಡಬಹುದು. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲ ಅರ್ಹತೆಗಳು ತಮಗಿವೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ನಂತರ ಒಬ್ಬ ಅಭ್ಯರ್ಥಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಅಭ್ಯರ್ಥಿಯು ಮೆರಿಟ್ ಮತ್ತು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಸಿಎಪಿಎಫ್ ನ ಯಾವ ವಿಭಾಗಕ್ಕೆ ನಿಯೋಜಿಸಬೇಕು ಎಂಬ ಪ್ರಕ್ರಿಯೆ ನಡೆಯುತ್ತದೆ. ಮಹಿಳಾ ಅಭ್ಯಥಿಗಳಿಗೆ ಅವರಿಗೆ ನಿಗದಿಪಡಿಸಿದ ಹುದ್ದೆಗಳಿಗೆ ನೇಮಿಸಲಾಗುತ್ತದೆ.
1. ಖಾಲಿ ಇರುವ ಹುದ್ದೆಗಳು: ಒಟ್ಟು 22000 (ಅಂದಾಜು) ಕೊನೆಗೆ ಹುದ್ದೆಗಳ    ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ.. ಕರ್ನಾಟಕಕ್ಕೆ 600 ಹುದ್ದೆಗಳು ಮತ್ತು    ಕೇರಳಕ್ಕೆ  350 ಹುದ್ದೆಗಳು    
2. 11.01.2013 ರಲ್ಲಿ ಇರುವಂತೆ ವಿದ್ಯಾರ್ಹತೆ: ಮೆಟ್ರಿಕ್ಯುಲೇಶನ್ ಅಥವಾ    ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾನಿಲಯದಿಂದ 10 ನೇ ತರಗತಿ    ಪಾಸಾಗಿರಬೇಕು.
3. 01.01.2013 ಕ್ಕೆ ವಯಸ್ಸು 18-23 ಅಭ್ಯರ್ಥಿ 02.01.1990 ಕ್ಕಿಂತ ಮುಂಚೆ ಮತ್ತು     1.1.1995 ರ ನಂತರ  ಜನಿಸಿರಬಾರದು (ಎಸ್ ಸಿ/ಎಸ್ ಟಿ/ಒಬಿಸಿ/ಮಾಜಿ- ಎಸ್/ಇಲಾಖೆ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಸಡಿಲಿಕೆ ಇರುವುದರ ಬಗ್ಗೆ ನೋಟೀಸಿನ ಪ್ಯಾರಾ 4 ನ್ನು ನೋಡಬಹದುದು)  
4. ಪೀ : ಪೇಪರಿನಲ್ಲಿ ಅರ್ಜಿ ಸಲ್ಲಿಸುವವರು ಕೇಂದ್ರ ನೇಮಕಾತಿ ಫೀ ಸ್ಟಾಂಪ್     ಮುಖಾಂತರ  50  ರೂಪಾಯಿ ಸಲ್ಲಿಸಬೇಕು.( (crpf). ಆನ್ ಲೈನಿನಲ್ಲಿ ಅರ್ಜಿ     ಸಲ್ಲಿಸುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖಾಂತರ ಸಲ್ಲಿಸಬೇಕು.(ಎಲ್ಲಾ ಮಹಿಳೆಯರು ಎಸ್ ಸಿ/ಎಸ್ ಟಿ/ಮಾಜಿ-ಎಸ್ ಅಭ್ಯರ್ತಿಗಳಿಗೆ ಫೀ ರಿಯಾಯಿತಿ ಇದೆ. ಮೇಲೆ ತಿಳಿಸಿದಂತೆ ಫೀ ಕಟ್ಟದೆ ಬೇರೆ ರೀತಿಯಲ್ಲಿ ಕಟ್ಟಿದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಮತ್ತು ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
5. ಪರೀಕ್ಷೆಗಳ ವಿವರ: ದೇಹ ದಾಢ್ಯತೆ ಪರೀಕ್ಷೆ. (PST)    ಎತ್ತರ- ಪುರುಷ:170 ಸೆ.ಮೀ, ಮಹಿಳೆ: 157 ಸೆ.ಮೀ. ಎದೆ- ಪುರುಷ-ಉಬ್ಬಿಸದೆ: 80 ಸೆ.ಮೀ. ಉಬ್ಬಿಸಿ ಕನಿಷ್ಠ 5 ಸೆ.ಮೀ.  ತೂಕ: ವೈದ್ಯಕೀಯ ನಿಭಂದನೆಯಂತೆ ಪುರುಷ ಮತ್ತು ಮಹಿಳೆಗೆ ಎತ್ತರ ಮತ್ತು ವಯಸ್ಸಿಗನುಗುಣವಾಗಿ. ದೈಹಿಕ ಕ್ಷಮತೆ ಪರೀಕ್ಷೆ(PET) ಓಟ- ಪುರುಷ:24 ನಿಮಿಷದಲ್ಲಿ 5 ಕಿ.ಮಿ. ಮಹಿಳೆಗೆ  8.3 ನಿಮಿಷದಲ್ಲಿ 1.6 ಕಿ.ಮೀ. ಲಿಖಿತ ಪರೀಕ್ಷೆ: ಪಿಇಟಿ, ಲಿಖಿತ ಪರೀಕ್ಷೆಗಳಲ್ಲಿ ಪಾಸಾದ ಅಭ್ಯಥರ್ಿಗಳಿಗೆ  ಆಬ್ಜಕ್ಟೀವ್ ಮಾದರಿಯ ಬಹು ಆಯ್ಕೆಯ 100 ಅಂಕಗಳ ಎರಡು ಗಂಟೆಗಳ ಅವಧಿಯ ಒಂದು ಪತ್ರಿಕೆ. (ಎ-ಸಾಮಾನ್ಯ ಜ್ಞಾನ ಮತ್ತು  ರೀಜನಿಂಗ್ ಗೆ 25  ಅಂಕ, ಬಿ- ಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆ 25 ಅಂಕ, ಸಿ-ಪ್ರಾಥಮಿಕ ಗಣಿತ 25 ಅಂಕ, ಡಿ-ಇಂಗ್ಲಷ್/ಹಿಂದಿಗೆ 25 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. ಎ,ಬಿ ಮತ್ತು ಸಿ ಭಾಗಗಳ ಪ್ರಶ್ನೆಗಳು ಇಂಗ್ಲೀಷ್/ಹಿಂದಿ ಜೊತೆಗೆ ಮೂರು ಭಾಷೆಗಳಲ್ಲಿರುತ್ತವೆ. ಕರ್ನಾಟಕದಲ್ಲಿ ಕನ್ನಡ ಮತ್ತು ಕೇರಳದಲ್ಲಿ ಮಲಯಾಳಂ. ಆಯೋಗ ನಿಗದಿ ಪಡಿಸಿದ ಕಟ್ ಆಫ್ ಅಂಕಗಳಿಗಿಂತ ಹೆಚ್ಚಿಗೆ ಪಡೆದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
6. ಕರ್ನಾಟಕ ವಲಯದಲ್ಲಿ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಧಾರವಾಡ, ಗುಲ್ಬರ್ಗ, ಮಂಗಳೂರು, ತಿರುವನಂತಪುರ, ಕೋಚಿ, ಕೋಝಿಕೋಡ್ ಮತ್ತು ತ್ರಿಸ್ಸೂರ್. ಇತರೆ ವಲಯಗಳ ಪರೀಕ್ಷಾ ಕೇದ್ರಗಳ ವಿವಿರಗಳನ್ನು ನೋಟೀಸಿನ ಪ್ಯಾರಾ 7 ನ್ನು ನೋಡಬಹುದು.
7. ಅರ್ಜಿಗಳನ್ನು ಸ್ವೀಕರಿಸಲು ಕಡೆಯ ದಿನ: ಆಫ್ ಲೈನ್ ಪೇಪರ್ ಅರ್ಜಿ ಸಲ್ಲಿಸಲು 11.01.2013. ಆನ್ ಲೈನ್ ಅರ್ಜಿಗೆ: ಪಾರ್ಟ-1 ಕ್ಕೆ  01.01.2013 . ಪಾರ್ಟ-2 ಕ್ಕೆ 11.01.2013 ಕ್ಕೆ . ಸೂಚನೆ: (ಕೊನೆ ಗಳಿಗೆಯ ಸರ್ವರ್ ಮೇಲಿನ ಒತ್ತಡದಿಂದ ಆಗಬಹುದಾದ ಸಮಸ್ಯೆಯನ್ನು ಎದುರಿಸುವ  ಬದಲು ಕೊನೆ ದಿನಾಂಕಕ್ಕೆ ಕಾಯದೆ ಆದಷ್ಟು ಮೊದಲು ಅರ್ಜಿ ಸಲ್ಲಿಸಬೇಕು.)     
8. ಕಾನ್ಸಟೇಬಲ್ (ಜೆಡಿ) ಹುದ್ದೆಗೆ ಪೇರ್ ಅರ್ಜಿಗಳನ್ನು : ವಲಯ ನಿರ್ದೇಶಕರು (ಕೆಕೆಅರ್) ಸಿಬ್ಬಂದಿ ನೇಮಕ ಆಯೋಗ, 1 ನೇ ಮಹಡಿ, ಇ ವಿಂಗ್, ಕೇಂದ್ರೀಯ ಸದನ,ಕೋರಮಂಗಲ,ಬೆಂಗಳೂರು- 560034. ನಿಗದಿ ಪಡಿಸಿದ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಹಲವು ಅರ್ಜಿಗಳನ್ನು ಸಲ್ಲಿಸದರೆ ತಿರಸ್ಕರಿಸಲಾಗುತ್ತದೆ.
9. ತಾತ್ಕಾಲಿಕ ವೇಳಾ ಪಟ್ಟಿ :ಪಿಎಸ್ ಟಿ/ ಪಿಇಟಿ: ಫ್ರೆಬ್ರುವರಿ-ಮಾರ್ಚ 2013  ಲಿಖಿತ ಪರೀಕ್ಷೆ :ಮೇ 12,  2013 ವೈದ್ಯಕೀಯ ಪರೀಕ್ಷೆ: ಜೂನ್-ಆಗಸ್ಟ್  2013. 
10.ಸಹಾಯಕ್ಕೆ ಹೆಲ್ಪಲೈನ್:       ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪಗಳಿಗೆ: 09483862020  &   08025502520 (ಬೆಳಿಗ್ಗೆ  10 ರಿಂದ ಸಂಜೆ 5 ಗಂಟೆ ವರೆಗೆ, ಸೋಮವಾರದಿಂದ ಶುಕ್ರವಾರದ ವರೆಗೆ.)     

Recruitment Notification of CASFs Constables (GD) & Assam Rifleman (GD)-2013 in Assam Rifles-2013

ಸಿಬ್ಬಂದಿ ನೇಮಕಾತಿ ಆಯೋಗ
                    ಸಿಬ್ಬಂದಿ ನೇಮಕಾತಿ ಆಯೋಗ
      (ಕರ್ನಾಟಕ ಕೇರಳ ವಲಯ) ಬೆಂಗಳೂರು
ಪತ್ರಿಕಾ ಪ್ರಕಟಣೆ
ಸಿಎಪಿಎಫ್ಎಸ್ ನ ಕಾನ್ಸಟೇಬಲಗಳು (ಜೆಡಿ) ಮತ್ತು ಆಸ್ಸಾಂ ರೈಪಲ್ಸ್ ನ ರೈಫಲ್ ಮನ್ (ಜೆಡ)-2013 ಗಳನ್ನು ನೇಮಕ ಮಾಡಿಕೊಳ್ಳುವದರ ಬಗ್ಗೆ ಪತ್ರಿಕಾ ಪ್ರಕಟಣೆ.

ಸಿಬ್ಬಂದಿ ನೇಮಕಾತಿ ಆಯೋಗವು ಭಾರತ ಸರ್ಕಾರದ ಸಚಿವಾಲಯಗಳು/ ಇಲಾಖೆಗಳು, ಅವುಗಳಿಗೆ ಹೊಂದಿಕೊಂಡಿರುವ ಅಧೀನ ಕಛೇರಿಗಳು,ಸಿ &ಎಜಿ ಮತ್ತು ಅದರ ಅಕೌಂಟೆಂಟ್ ಜನರಲ್ ಕಛೇರಿಗಳು,ಚುನಾವಣಾ ಆಯೋಗ ಮತ್ತು ಕೇಂದ್ರ ವಿಚಕ್ಷಣಾ ಆಯೋಗಳಿಗೆ ಗ್ರೂಪ್ಬಿ( ನಾನ್ ಗೆಜೆಟೆಡ್) ಮತ್ತು ಗ್ರೂಪ್ಸಿ(ನಾನ್ ಗೆಜೆಟೆಡ್) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತದೆ
ಸಿಬ್ಬಂದಿ ನೇಮಕಾತಿ ಆಯೋಗದ ಮುಖ್ಯ ಕಚೇರಿ ದೆಹಲಿಯಲ್ಲಿದೆ. ಪ್ರಸಕ್ತ  ಶ್ರೀ ಎನ್.ಕೆ.ರಘುಪತಿಅವರು ಅದರ ಅಧ್ಯಕ್ಷರಾಗಿದ್ದಾರೆ. ಆಯೋಗವು ಏಳು ವಲಯ ಮತ್ತು ಎರಡು ಉಪ ವಲಯಗಳ ಕಚೇರಿಗಳನ್ನು ಹೊಂದಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ಕಚೇರಿಗಳು ದೇಶದ ವಿವಿಧ ಭಾಗಗಳಲ್ಲಿರುವ ಪರೀಕ್ಷಾ ಕೇಂದ್ರಗಳ ಜಾಲದ ಮುಖಾಂತರ ಆಯೋಗವು ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತದೆ.
ಬೆಂಗಳೂರಿನ ವಲಯ ಕಚೇರಿಯನ್ನು (ಕರ್ನಾಟಕ ಕೇರಳ ವಲಯ) 1990 ರಲ್ಲಿ ಸ್ಥಾಪಿಸಲಾಯಿತು. ಕರ್ನಾಟಕಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷ ದ್ವೀಪ ಈ ಕಚೇರಿಯ ವ್ಯಾಪ್ತಿಗೊಳಪಟ್ಟಿವೆ.
ಆಯೋಗದ ಪರೀಕ್ಷೆಗಳು ಕರ್ನಾಟಕಕ ಮತ್ತು ಕೇರಳದ ಕೆಳಕಂಡ ಕೇಂದ್ರಗಳಲ್ಲಿ ನಡೆಯುತ್ತವೆ.
(ಎ)               (ಬಿ)
ಕರ್ನಾಟಕ             ಕೇರಳ
ಬೆಂಗಳೂರು           ತಿರುವನಂತಪುರ
ಧಾರವಾಡ             ಕೋಚಿ
ಮಂಗಳೂರು         ತ್ರಿಶೂರು
ಗುಲ್ಬರ್ಗ              ಕೋಝಿಕೋಡ್
ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಸಿಎಪಿಎಫ್ ನ (ಬಿಎಸ್ಎಫ್ಸಿಐಎಸ್ಎಫ್ಸಿ,ಅರ್,ಪಿ.ಎಫಐಟಿಬಿಪಿಎಸ್ಎಸ್ ಬಿ) ಕಾನ್ಸಟೇಬಲಗಳು (ಜನರಲ್ ಡ್ಯೂಟಿ) ಮತ್ತು ರೈಫಲ್ಮನ್(ಜಿಡಿ) ಅಸ್ಸಾಂ ರೈಫಲ್ಸ್-2013ಗೆ ನೇಮಕ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ವೇತನ ಶ್ರೇಣಿ ರೂ.5200-20200 ಇದ್ದು ಜೊತೆಗೆ ರೂ.2000 ಗ್ರೇಡ್ ಪೇ ಇರುತ್ತದೆ. ವಯೋಮಿತಿ 18-23 ವರ್ಷಗಳು. ಹೆಚ್ಚು ಕಡಿಮೆ 22,000 ಹುದ್ದೆಗಳಿದ್ದುನಿರ್ಧಿಷ್ಟವಾದ ಸಂಖ್ಯೆಯನ್ನು ನಂತರ ಖಚಿತಪಡಿಸಲಾಗುತ್ತದೆ. ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಮೆಟ್ರಿಕ್ಯುಲೇಷನ್.
ಈ ನೇಮಕ್ಕೆ ಸಂಬಂಧಿಸಿದ ಪ್ರಕಟಣೆಯನ್ನುಪ್ಲಾಯಮೆಂಟ್ನ್ಯೂಸ್/ ರೋಜ್ಗಾರ್ ಸಮಾಚಾರ್ ನ ಡಿಸೆಂಬರ್ 15-21 ರ ಸಂಚಿಕೆಯಲ್ಲಿ ಆಯೋಗವು ಪ್ರಕಟಿಸುತ್ತದೆ ಮತ್ತು ಅರ್ಜಿ ಸಲ್ಲಿಸಲು 11.01.2013 ಕೊನೆ ದಿನ. ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಹುದ್ದೆಗಳಿಗೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ವಾಸ ವಿರುವ ಅಭ್ಯರ್ಥಿಗಳು ಮಾತ್ರ ಅರ್ಹರು. ದೈಹಿಕಾರ್ಹತೆ/ದೈಹಿಕ ದಕ್ಷತೆಯ ಪರೀಕ್ಷೆ 2013 ರ ಫೆಬ್ರುವರಿ-ಮಾರ್ಚ ತಿಂಗಳುಗಳಲ್ಲಿ ನಡೆಯುತ್ತದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಲಿಖಿತ ಪರೀಕ್ಷೆಯನ್ನು 12.05.2013 ರಂದು ನಡೆಸಲಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ ಪರೀಕ್ಷೆಯ ಪಾರ್ಟ್-ಎಬಿ ಮತ್ತು ಸಿ ಪ್ರಶ್ನೆಗಳು ಮೂರು ಭಾಷೆಗಳಲ್ಲಿದ್ದುಕರ್ನಾಟಕದಲ್ಲಿ ಕನ್ನಡ ಮತ್ತು ಕೇರಳದಲ್ಲಿ ಮಲಯಾಳಂ ನಲ್ಲಿರುತ್ತವೆ. ವಿವಿಧ ಸಿಎಪಿಎಫ್ ಗಳಿಗೆ ಅರ್ಹತೆ-ಕಂ-ಆಧ್ಯತೆ ಆಧಾರದ ಮೇಲೆ ಅಲಾಟ್ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರಗಳು ಯಾವ ವಲಯ ಮತ್ತು ಉಪ ವಲಯಗಳ ಸಿಬ್ಬಂದಿ ನೇಮಕಾತಿ ಆಯೋಗದ ವ್ಯಾಪಿಗೊಳಪಡುತ್ತವೆಯೋ ಅಲ್ಲಿಗೆ ನೇಮಕಾತಿ ಅರ್ಜಿಗಳನ್ನು ಅಭ್ಯರ್ಥಿಗಳು ಕಳಿಸಿಕೊಡಬೇಕು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇದ್ರಗಳಲ್ಲಿ ಪರೀಕ್ಷೆ ಬರೆಯಲಿಚ್ಛಿಸುವವರು,

ರೀಜನ್ ಡೈರೆಕ್ಟರ್
ಸಿಬ್ಬಂದಿ ನೇಮಕಾತಿ ಆಯೋಗ(ಕೆಕೆಆರ್)
1 ನೇ ಮಹಡಿಇ ವಿಂಗ್
ಕೇಂದ್ರೀಯ ಸದನ
ಕೋರಮಂಗಲ
ಬೆಂಗಳೂರು-560034

ಇಲ್ಲಿಗೆ ಕಳಿಸಿಕೊಡಬೇಕು.

 ಆನ್ ಲೈನ್ಮುಖಾಂತರ ಅರ್ಜಿ ಸಲ್ಲಿಸುವವರುhttp://ssconline.nic.in or http://ssconline2.gov.in ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ  ಸಲ್ಲಿಸುವವರಿಗೆ ಪಾರ್ಟ-1 ರಿಜಿಸ್ಟ್ರೇಷನ ಗೆ 09-01-2013 ಕೊನೆ ದಿನ. ಪಾರ್ಟ-2 ಕ್ಕೆ ಅರ್ಜಿ ಸಲ್ಲಿಸಲು 11.01.2013 ಕೊನೆ ದಿನ. ಕೊನೆ ದಿನ ಹತ್ತಿರವಾದಂತೆ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದಅಭ್ಯರ್ಥಿಗಳು ತಮ್ಮ ಹಿತದೃಷ್ಟಿಯಿಂದ ಕೊನೆಯ ದಿನದ ವರೆಗೆ ಕಾಯದೆ ಅದಷ್ಟು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳ ಮಾರ್ಗ ದರ್ಶನಕ್ಕೆ ಈ ಕೆಳ ಕಂಡ ಹೆಲ್ಪ್ ಲೈನಗಳು ಬೆಳಿಗ್ಗೆ 10 ರಿಂದ  ಸಂಜೆ 5 ಗಂಟೆ ವರೆಗೆ ಕಾರ್ಯ ನಿರ್ವಹಿಸುತ್ತವೆ. ಹೆಲ್ಪ್ ಲೈನ್ : 9483862020,    080 25502520.
ನೇಮಕಾತಿಯ ಮುಖ್ಯಾಂಶಗಳು ಈ ರೀತಿ ಇವೆ.
ಸಿಪಿಒ ದ ರಾಜ್ಯ/ಕೇಂದ್ರಾಡಳಿತಗಳಿಗೆ ಅಲಾಟ್ ಮಾಡಿದ ಖಾಲಿ ಹುದ್ದೆಗಳನ್ನು ಅಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಆದ್ದರಿಂದ ಇದು ದೇಶ ಸೇವೆ ಮಾಡುವುದರ ಜೊತೆಗೆ ಸರ್ಕಾರದ ಖಾತರಿ ಉದ್ಯೋಗದ ಅತ್ಯುತ್ತಮ ಅವಕಾಶವನ್ನು ಕರ್ನಾಟಕಕೇರಳ ಮತ್ತು ಲಕ್ಷ ದ್ವೀಪಗಳ ಯುವಕರಿಗೆ ಒದಗಿಸಿಕೊಡುತ್ತದೆ.
ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಗಡಿ ಜಿಲ್ಲೆಗಳು ಮತ್ತು ನಕ್ಸಲೈಟ್/ಉಗ್ರವಾದಿ ಪೀಡಿತ ಪ್ರದೇಶಗಳಿಗೆ ಪ್ರತ್ಯೇಕ ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಆಯ್ಕೆಯು ದೇಹದಾಢ್ಯತೆ(ಪಿಎಸ್ ಟಿ) / ದೈಹಿಕ ಕ್ಷಮತೆ(ಪಿಇಟಿ) ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪಾಸಾದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಲಿಖಿತ ಪರೀಕ್ಷೆಯು ಮುಗಿಯುವ ವೇಳೆಗೆ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿ ಅಂತಿಮಗೊಳಿಸಲಾಗುತ್ತದೆ.
ಲಿಖಿತ ಪರೀಕ್ಷೆಯು ಮೆಟ್ರಿಕ್ಯುಲೇಷನ್ ಮಟ್ಟದಲ್ಲಿದ್ದುಸಮಾನ್ಯ ಜ್ಞಾನ ಮತ್ತು ತಾರ್ಕಿಕ ಜ್ಞಾನಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆಪ್ರಾಥಮಿಕ ಗಣಿತ ಮತ್ತು ಇಂಗ್ಲಿಷ್ ಅಥವಾ ಹಿಂದಿ ವಿಷಯಗಳಿಗೆ ಸಂಬಂಧಿಸಿರುತ್ತದೆ.
ಒಬ್ಬ ಅಭ್ಯರ್ಥಿ ಒಂದು ಅರ್ಜಿ ಮಾತ್ರ ಸಲ್ಲಿಸಬಹುದು. ಅರ್ಜಿಯಲ್ಲಿ ಯಾವ ವಿಭಾಗದಲ್ಲಿ ಸೇವೆ ಸಲ್ಲಿಸಲು (ಆದ್ಯತೆ ಮೇರೆಗೆ) ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಎಲ್ಲ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ.
ಎಸ್ ಸಿ/ಎಸ್ ಟಿ/ಒಬಿಸಿ ವರ್ಗಗ ಮೀಸಲಾತಿಯ ಸೌಲಭ್ಯವನ್ನು ಪಡೆಯುವವರು ಆ ವರ್ಗಗಳಿಗೆ ನೀಡುವ ದಾಖಲೆ ಪತ್ರವನ್ನು ನಿಗದಿತ ನಮೂನೆಯಲ್ಲಿ ದಾಖಲೆ ಪತ್ರಗಳನ್ನು ಸಲ್ಲಿಸುವಾಗ ಸಲ್ಲಿಸಬೇಕು.
ಹೆಚ್ಚಿನ ವಿವರಗಳು ಮತ್ತು ಅರ್ಜಿ ನಮೂನೆಗಳು ಸಿಬ್ಬಂದಿ ನೇಮಕಾತಿ ಆಯೋಗದ ವೆಬ್ ಸೈಟ್ http://ssc.nic.in  ಮತ್ತು ಆಯೋಗದ (ಕೆಕೆಆರ್) ವೆಬ್ ಸೈಟ್ http://ssckkr.kar.nic.in  ಗಳಲ್ಲಿ 15.12.2012 ರ ನಂತರ ದೊರೆಯುತ್ತವೆ.

GULBARGA DISTRICT REPORTED CRIMES


ಕೊಲೆಗೆ ಪ್ರಯತ್ನ:
ಬ್ರಹ್ಮಪೂರ ಪೊಲೀಸ್ ಠಾಣೆ: ಪ್ರದೀಪ ತಂದೆ ರತನಸಿಂಗ ರಿಡ್ಲಾನ ವಯ|| 21 ವರ್ಷ ಜಾ||ವಾಲ್ಮಿಕಿ ಸಾ|| ಗಾಜಿಪೂರ ಗುಲಬರ್ಗಾ ರವರು ನಾನು ದಿನಾಂಕ:27/12/2012 ರಂದು ಮದ್ಯಾಹ್ನ 12-30 ಗಂಟೆಗೆ ನಮ್ಮ ಬಡಾವಣೆಯ ಸಚೀನ ತಂದೆ  ಭಗವಾನದಾಸ ಸೌದಾಗರ, ರೋಹಿತ ತಂದೆ ಸತೀಶ ಕೂಡಿಕೊಂಡು ಸಿಟಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿರುವಾಗ ಬಾಂಬೆ ಸಂಜು, ಸತೀಶ, ಮೂಗ ಮಲ್ಯಾ, ಚನ್ನು, ದಾದು, ಬಟರ ನವಾಬ, ದಂಡೋತಿ ಸುರೇಶ, ಹಾಗೂ ಇತರರು ಸೇರಿಕೊಂಡು ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯವಾಗಿ ಬೈದು ನನ್ನನ್ನು ಬಸವ ನಗರದ ನೀರಿನ ಟ್ಯಾಂಕಿನ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಬಾಂಬೆ ಸಂಜು, ಇತನು ತನ್ನ ಮನೆಯಿಂದ ಹಾಕಿ ಸ್ಟಿಕ ತಗೆದುಕೊಂಡು ಬಂದು ನಿನಗೆ ಕೋಲೆ ಮಾಡಿಯೆ ಬಿಡುತ್ತೇನೆ ಅಂತಾ ಅನ್ನುತ್ತಾ ತಲೆಯ ಮೇಲೆ ಹೋಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಸತೀಶ ಇವನು ಕೂಡಾ ಅಲ್ಲೆ ಬಿದ್ದ ಬಡಿಗೆ ತಗೆದುಕೊಂಡು ನನ್ನ ಹೊಟ್ಟೆಯ ಬಲ ಮಗ್ಗಲಲ್ಲಿ ಮತ್ತು ಬಲಗಾಲಿನ ಮೊಳಕಾಲ ಕೆಳಗೆ ಹೊಡೆದಿರುತ್ತಾನೆ ಮೂಗ ಮಲ್ಯಾ ಮತ್ತು ಚನ್ನು ಕೈಮುಷ್ಠಿ ಮಾಡಿ ಬಾಯಿ ಮೇಲೆ ಮತ್ತು ಎರಡು ಗಲ್ಲದ ಮೇಲೆ ಹೊಡೆದಿದ್ದು ಅಲ್ಲದೆ ಉಳಿದ ಜನರು ಸಹ ಖಲಾಸ ಮಾಡಬಿಡು ಅಂತಾ ಪ್ರಚೋದನೆ ಮಾಡುತ್ತಿದ್ದರು ಸದರಿ ಜಗಳವನ್ನು ಸಚೀನ ಮತ್ತು ರೋಹಿತ ನೋಡಿ ಬಿಡಿಸಿರುತ್ತಾರೆ. ಇಲ್ಲದಿದ್ದರೆ ಅವರು ನನಗೆ ಕೊಲೆ ಮಾಡಿಯೆ ಬಿಡುತ್ತಿದ್ದರು,ನಾನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿದ್ದು ಇರುತ್ತದೆ.ನನಗೆ ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:142/2012 ಕಲಂ: 143,147,148,323,324,307,114,504,506 ಸಂಗಡ 149 ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಒಂದೆ ಕುಟುಂಬದ ಮೂವರ ದುರ್ಮರಣ:
ನರೋಣಾ ಪೊಲೀಸ್ ಠಾಣೆ: ಶ್ರೀ, ವೆಂಕಟರತ್ನಂ ತಂದೆ ವೆಂಕಟ ಶಾಸ್ತ್ರಿ ವಯ:74 ವರ್ಷ ಸಾ: ಹಬಿಸಿಗುಡ್ಡ ಕಾಕಟ ನಗರ ಜಿ:ರಂಗಾರಡ್ಡಿ ರಾ|| ಆಂದ್ರಪ್ರದೇಶ ರವರು ನಾನು ಮತ್ತು ನನ್ನ ಹೆಂಡತಿ ಮಹಾಲಕ್ಷ್ಮಿ, ಮಗ ಸುರೇಶ, ಸೊಸೆಯಾದ ರಮಾ ಹಾಗೂ ಮಮ್ಮೊಕ್ಕಳಾದ ಸುಷ್ಮಾ ಮತ್ತು ಸ್ವೇತಾ ಹೀಗೆ ಎಲ್ಲರು ಕೂಡಿಕೊಂಡು ದಿನಾಂಕ:24/12/2012 ರಂದು ಬೆಳ್ಳಿಗ್ಗೆ ನಮ್ಮೂರಿನಿಂದ ಶಿರಡಿಗೆ ಹೋಗಿ ಅಲ್ಲಿಂದ ದಿನಾಂಕ:27/12/2012 ರಂದು ತುಳಜಾಪುರ ದೇವಿ ದರ್ಶನ ಮಾಡಿಕೊಂಡು ಗಾಣಗಾಪೂರ ದತ್ತ ದರ್ಶನಕ್ಕೆ ಹೋಗಲು ಆಳಂದ ಗುಲಬರ್ಗಾ ಮಾರ್ಗವಾಗಿ ಹೋಗುತ್ತಿದ್ದು, ನನ್ನ ಮಗ ಸುರೇಶ  ಕಾರ ಚಲಾಯಿಸತ್ತಿದ್ದನು. ಕಡಗಂಚಿ ಸಮೀಪ ಎದುರುಗಡೆಯಿಂದ ಎಮ್.ಎಚ.-20 / ಸಿಟಿ-256 ನೇದ್ದರ ಲಾರಿ ಚಾಲಕನು ಅತೀ ವೇಗ ಮತ್ತು ನಿಷ್ಕಾಲಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಬಂದು ಡಿಕ್ಕಿಪಡಿಸಿದನು. ಡಿಕ್ಕಿ ಪಡಿಸಿದ ರಭಸಕ್ಕೆ ಸುರೇಶ ಇತನು ಸ್ಥಳದಲ್ಲಿಯೇ ಮೃತಪಟಟಿದ್ದು, ಸೊಸೆ ಉಪಚಾರ ಕುರಿತು ಬರುತ್ತಿರುವಾಗ ದಾರಿಯಲ್ಲಿ ಮೃತ ಪಟ್ಟಿದ್ದು, ಅಲ್ಲದೇ ನನ್ನ ಹೆಂಡತಿ ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ. ಉಳಿದವರಿಗೆ ಗಾಯಗಳಾಗಿರುತ್ತವೆ ಸದರಿ ಲಾರಿ ಚಾಲಕನ ವಿರುದ್ದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:139/2012 ಕಲಂ 279 337 304[ಎ] ಐಪಿಸಿ ಮತ್ತು 187 ಐಎಂವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.