POLICE BHAVAN KALABURAGI

POLICE BHAVAN KALABURAGI

29 April 2015

KALABURAGI DISTRICT REPORTED CRIMES

ಹಲ್ಲೆ ಮಾಡಿ ತಾಳಿ ಮತ್ತು ಲಾಕೇಟಸರ ಕಿತ್ತುಕೊಂಡು ಹೋದ ಪ್ರಕರಣ :
ಚೌಕ ಠಾಣೆ : ಕುಃ ರಿಹಾನಾ ತಂ ಮಹೇಬೂಬ ಪಟೇಲ ಸಾಃ ವಿಜಯ ನಗರ ಕಾಲೋನಿ ಕಲಬುರಗಿ ದಿನಾಂಕ 28.04.2015 ರಂದು ಮನೆಯ ಪಕ್ಕದಲ್ಲಿ ಆರೋಪಿ ಅಜ್ಜಿ ಫಿರ್ಯಾದಿಯ ಮನೆಯ ಮುಂದೆ ಬಂದು ಸಂಡಾಸಕ್ಕೆ ಕುಳಿತಿದ್ದು, ಆಗ ಫಿರ್ಯಾದಿದಾರಳು ಇಲ್ಲಿ ಸಂಡಾಸ ಕೂಡಬೇಡಿರಿ ಹೊಲಸು ಆಗುತ್ತದೆ ಅಂತ ಹೇಳಿದಾಗ ಸದರಿ ಅಜ್ಜಿ ಫಿರ್ಯಾದಿದಾರಳಿಗೆ ರಂಡಿ ಬೊಸಡಿ ಅಂತ ಅವಾಚ್ಯ ಶಬ್ದಗಳಿಂದ ಬೈದಿದ್ದು, ಮದ್ಯಾಹ್ನ 3 ಗಂಟೆಯ ಸುಮಾರಿಗೆ ಆರೋಪಿ ಪ್ರಕಾಶ ಮತ್ತು ಆತನ ಮನೆಯ 4 ಜನ ಸದಸ್ಯರು ಮತ್ತು ಅಜ್ಜಿ ಹಾಗೂ ಅವಳ ಮನೆಯ 4 ಜನ ಸದಸ್ಯರು ಹಾಗೂ ಇನ್ನೂ ಇತರರು ಕೂಡಿಕೊಂಡು ಫಿರ್ಯಾದಿ ಮನೆಗೆ ಬಂದು ಫಿರ್ಯಾಧಿಗೆ, ಫಿರ್ಯಾದಿ ತಾಯಿ, ಫಿರ್ಯಾದಿಯ ಅಕ್ಕ ತಂಗಿಯರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು, ಅಲ್ಲದೆ ಫಿರ್ಯಾದಿಯ ತಾಯಿ ಕೊರಳಲ್ಲಿದ್ದ 2-1/2 ತೊಲೆ ಬಂಗಾರದ ತಾಳಿಸರ, ಫಿರ್ಯಾದಿ ತಂಗಿಯಾದ ರೋಹಿನಾ ಇವಳ ಕೊರಳಲ್ಲಿದ್ದ ಒಂದು ತೊಲೆ ಬಂಗಾರದ ಚೈನ ಆರೋಪಿತರು ಕಿತ್ತುಕೊಂಡು ಹೋರುತ್ತಾರೆ ಅಂತಾಶ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ರತ್ನಮ ಗಂಡ ಭೀಮಪ್ಪಾ ಹರಿಜನ ಸಾ|| ಕನ್ನಾಳ  ತಾ|| ಲಿಂಗಸೂರ ಜಿ|| ರಾಯಚೂರ ಇವರ ಗಂಡನಾದ  ಭೀಮಪ್ಪಾ ತಂದೆ ದುರ್ಗಪ್ಪ ಹರಿಜನ್ ಸಾ: ಕನ್ನಾಳ ತಾ: ಲಿಂಗಸೂಗೂರು ಜ: ರಾಯಚೂರ ಇವರು ಬೆಂಗಳೂರದಲ್ಲಿ ಕೆಲಸಕ್ಕೆ ಹೋಗಿದ್ದು ಅಲ್ಲಿಯೇ ಕೆಲಸ ಮಾಡುತ್ತಿದ್ದನು. ಪ್ರತಿ ತಿಂಗಳ ನಮ್ಮೂರ ಪಿಗ್ಮಿ ಕಲೆಷನ್ ಮಾಡುವರಾದ ಅಂಬ್ರೆಷ ಕುಷ್ಠಗೇರ ಇವರ ಖಾತೆಗೆ ಯಾವಾಗದರು 1000 ರಿಂದ 1500/-ರೂಪಾಯಿ ಅವರ ಖಾತೆಗೆ ಜಮಾಯಿಸಿ ನನಗೆ ಕೊಡಲು ತಿಳಿಸಿದ್ದರಿಂದ ಸದರಿ ಅಂಬ್ರೆಷ ಇತನು ಆ ಹಣವನ್ನು ಬ್ಯಾಂಕ್ ನಿಂದ ತೆಗೆದುಕೊಂಡು ಬಂದು ನನಗೆ ಕೊಡುತ್ತಿದ್ದನು. ಆ ಹಣದಿಂದ ಅಲ್ಲದೆ ನಾನು ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರ ಹಣದಿಂದ ನನ್ನ ಮತ್ತು ನನ್ನ ಎರಡು ಮಕ್ಕಳ ಉಪಜೀವನ ನಡೆಸಿದ್ದು  ದಿನಾಂಕ:  27-04-2015 ರಂದು ಸಾಯಾಂಕಾಲ 4-00 ಗಂಟೆ ಸುಮಾರಿಗೆ ನಮ್ಮ ಮನೆಗೆ ಹಣ ತಂದು ಕೊಡುತಿದ್ದ ಪಿಗ್ಮಿ ಕಲೆಕ್ಷನ ಮಾಡುವ ಅಂಬ್ರೀಷ ಇತನು ಬೇರೆ ಊರಿನಿಂದ ನಮ್ಮ ಊರಿಗೆ ಪೋನ್ ಮಾಡಿ ಸದರಿ ಪೋನ್ ನನಗೆ ಕೊಡುವಂತೆ ತಿಳಿಸಿ ನನಗೆ ತಿಳಿಸಿದ್ದೇನಂದರೆ, ನಿನ್ನ ಯಜಮಾನರಿಗೆ ಏನೋ ತೊಂದರೆ ಆಗಿದೆ ಅಂತ ಪೋನ್ ಬಂದಿದೆ ಅವರಿಗೆ ಪೋನಿನಲ್ಲಿ ಮಾತನ್ನಾಡಿರಿ ಅಂತ ತಿಳಿಸಿದಾಗ ನಾನು ಸದರಿಯವರ ಪೋನಿಂದಲೆ ಕರೆ ಮಾಡಿ ತಿಳಿದುಕೊಳ್ಳಲಾಗಿ ಗೊತ್ತಾಗಿದೇನಂದರೆ ನನ್ನ ಗಂಡನಾದ ಭೀಮಪ್ಪ ತಂದೆ ದುರ್ಗಪ್ಪ ಹರಿಜನ ಸಾ: ಕನ್ನಾಳ ತಾ: ಲಿಂಗಸೂಗೂರು ಜ: ರಾಯಚೂರ ಇವರಿಗೆ ಯಾರೋ ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಾಮವಾರ ಗ್ರಾಮದ ಕ್ರಾಸ್ ದಿಂದ 1 ಕೀ.ಮಿ ಅಂತರದಲ್ಲಿ ಒಂದು ದೊಡ್ಡ ಗಾತ್ರದ ಕಲ್ಲನ್ನು ತಲೆಯ ಮೇಲೆ ಹಾಕಿ, ತಲೆಗೆ ಭಾರಿ ರಕ್ತ ಗಾಯಪಡಿಸಿ ಕೊಲೆ ಮಾಡಿ ಹೋಗಿರುತ್ತಾರೆ ಅಂತ ತಿಳಿಸಿದ್ದರಿಂದ, ನಾನು ಮತ್ತು ನನ್ನ ಸಂಭಂದಿಕರೊಂದಿಗೆ ಕೂಡಿಕೊಂಡು ಸೇಡಂ ಸರಕಾರಿ ಆಸ್ಪತ್ರೆಗೆ ಇಂದು ದಿನಾಂಕ: 28-04-2015 ರಂದು ಬೆಳಿಗ್ಗೆ 07-30 ಗಂಟೆಗೆ ಬಂದಿದ್ದು, ಬಂದ ನಂತರ ನನ್ನ ಗಂಡ ಶವವನ್ನು ನಾವೇಲ್ಲರೂ ನೋಡಿ ಗುರುತಿಸಿದ್ದು ಅವನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ನಿಜವಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.