POLICE BHAVAN KALABURAGI

POLICE BHAVAN KALABURAGI

17 April 2016

Kalaburagi District Reported Crimes

ಕಿರುಕಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಕಾಳಗಿ ಠಾಣೆ : ಶ್ರೀಮತಿ ಚಂಗಾಬಾಯಿ  ಗಂಡ ರಾಮು ಚವ್ಹಾಣ ಸಾಃ ಕೋರವಾರತಾಂಡಾ ತಾಃ ಚಿತ್ತಾಪೂರ ಜಿಃ ಕಲಬುರಗಿ  ರವರ ಮೂರನೇ ಮಗಳಾದ ಕವಿತಾ ಇವಳಿಗೆ 18 ವರ್ಷಗಳ ಹಿಂದೆ ನಮ್ಮ ತಾಂಡಾದ ಮಾಣಿಕ ಜಾಧವ ಎಂಬುವನಿಗೆ ಲಗ್ನಮಾಡಿಕೊಟ್ಟಿದ್ದು ಅವಳಿಗೆ 5 ಮಕ್ಕಳಾಗಿದ್ದು ನನ್ನ ಅಳಿಯ ಲಗ್ನವಾದಾಗಿನಿದ್ದ ನನ್ನ ಮಗಳಿಗೆ ನಿನು ಸರಿಯಾಗಿ ಇಲ್ಲಾ ನಿನಗೆ ಅಡಿಗೆ ಮಾಡಲು ಬರುವುದಿಲ್ಲಾ ಹಾಗೆ ಹೀಗೆ ಅಂತಾ ಜಗಳ ತೆಗೆದು ಹೊಡೆಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದು ಈ ಬಗ್ಗೆ ಕೆಲವು ಬಾಗಿ ನಾನು ನನ್ನ ಗಂಡ ಹಾಗೂ ನನ್ನ ಮಗ ಕೂಡಿ ನನ್ನ ಅಳಿಯನಿಗೆ ಈ ತರಹ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುವುದು ಸರಿ ಅಲ್ಲಾ ಸಂಸಾರ ಕಟ್ಟಿ ಹೋಗುತ್ತದೆ ಅಂತಾ ಬುದ್ದಿ ಮಾತು ಹೇಳುತ್ತಾ ಬಂದಿದರು ಅದೆ ರೀತಿ ಹೊಡೆಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ಮಾಡುತ್ತಾ ಬಂದು ಇಂದು ದಿನಾಂಕ-16/04/2016 ರಂದು 4-30 ಪ.ಎಮ್ ಸುಮಾರಿಗೆ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿ ಹೋಗಿದರಿಂದ ನನ್ನ ಮಗಳು ಸದರಿಯವನ ಕಾಟ ತಾಳಲಾರದೆ ಮನೆಯಲ್ಲಿದ್ದ ಕ್ರಮಿನಾಶಕ ಔಷಧಿ ಸೇಮನೆ ಮಾಡಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿಸ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ಶ್ರೀ ಗಾಜರೇ ನೀಲಪ್ಪ ತಂ ಚಂದ್ರಶ್ಯಾ ಸಾ:ಭೋದನ ಇವರು ದಿನಾಂಕ: 15/04/2016 ರಂದು ಮುಂಜಾನೆ 7-00 ಗಂಟೆಗೆ ನಾನು ನಮ್ಮ  ಮನೆಯಲ್ಲಿದ್ದಾಗ ನಮ್ಮ ಶಾಲಾ ವಿಧ್ಯಾರ್ಥಿಯಾದ ಶರಣಬಸಪ್ಪ ತಂ ಸೂರ್ಯಕಾಂತ ವಾಲೆ, ಮು:ಮುನ್ನಹಳ್ಳಿ ಈತನು ಫೋನ್ ಮಾಡಿ ನಮ್ಮ ಶಾಲೆಯ ಕಂಪ್ಯೂಟರ್ ಕೋಣೆಯ ಕೊಂಡಿ ಮುರಿದು ಬಾಗಿಲು ತೆರೆದಿರುತ್ತವೆ. ಅಂತಾ ನನಗೆ ತಿಳಿಸಿದ ಮೇರೆಗೆ ವಿಷಯವನ್ನು ನಮ್ಮ ಶಾಲೆ ಎಲ್ಲಾ ಶಿಕ್ಷಕರಿಗೆ ತಿಳಿಸಿ ನಾನು ಮುಂಜಾನೆ 9-00 ಗಂಟೆಗೆ ಬಂದು ನೋಡಲಾಗಿ ನಮ್ಮ ಶಾಲೆಯ ಕಂಪ್ಯೂಟರ್ ಕೋಣೆಯ TUBULAR BATTERIES ಕೊಂಡಿ ಮುರಿದು ಮಾಗಿಲು ತರೆದಿದ್ದು ನಾನು ಹಾಗೂ ನಮ್ಮ ಶಿಕ್ಷಕರಾದ ಸುಭಾಷ ಎನ್ ನಡಗೇರಿ ಹಾಗೂ ಶಾಲಾ ಅಧ್ಯಕ್ಷರಾದ ಶಾಂತಕುಮಾರ ವೇದಶೆಟ್ಟಿ ಎಲ್ಲರೂ ಕೂಡಿ ಒಳಗೆ ಹೋಗಿ ನೋಡಲಾಗಿ ಶಾಲಾ ವಿಧ್ಯಾರ್ಥಿಗಳ ಭೋದನೆಗಾಗಿ ವದಗಿಸಿರುವ ಕಂಪ್ಯೂಟರಗಳ 16 ಬ್ಯಾಕಪ್ ಬ್ಯಾಟರಿಗಳು ಮತ್ತು ಒಂದು ಸ್ಟ್ಯಾಂಡ್ ಕಳುವು ಮಾಡಿಕೊಂಡು ಹೊಗಿದ್ದಾರೆ, ಕಳವುವಾದ 16 ಬ್ಯಾಟರಿಗಳು 2011ನೇ ಸಾಲಿನಲ್ಲಿ EDUCOMP ರವರು ಸರಬರಾಜು ಮಾಡಿದ SOUTHER MARK HIPUER XL TT 10012 V 100 AH PP 10 TUBULAR BATTERIES,ಕಂಪನಿಗಳಿದ್ದು ಬ್ಯಾಟರಿಗಳು ಅಂದಾಜು 24500 /- ರೂಪಾಯಿ ಆಗಿರಭಹುದಾಗಿದೆ ಘಟನೆ ದಿನಾಂಕ: 14/04/2016 ರಾತ್ರಿ 10 ಗಂಟೆಯಿಂದ ದಿನಾಂಕ: 15/04/2016 ಮುಂಜಾನೆ 6-00 ಗಂಟೆಯ ಮಧ್ಯ ಅವಧಿಯಲ್ಲಿ ಆಗಿರಭಹುದು ಕಳುವಾಗಿರುವ ಬ್ಯಾಟರಿಗಳು ಪತ್ತೆ ಹಚ್ಚಿಕೊಡಲು ವಿನಂತಿ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.
ಸಾಲಬಾದೆಯಿಂದ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀ ಭೀಮರಾಯ ಮೇಳಕುಂದಿ ಸಾ|| ಚಿನಮಳ್ಳಿ ಇವರ ಕಿರಿಯ ಮಗನಾದ ಸಿದ್ದಪ್ಪ ಮೇಳಕುಂದಿ ಈತನ ಹೆಸರಿನಿಂದ ಚಿನಮಳ್ಳಿ ಸೀಮಾಂತರದ ಹೊಲ ಸರ್ವೆ ನಂ 150 ನೇದ್ದರಲ್ಲಿ 05 ಎಕರೆ 20 ಗುಂಟೆ ಹೊಲವಿರುತ್ತದೆ, ಸದರಿ ಹೊಲದ ಮೇಲೆ ಸುಮಾರು 5-6 ವರ್ಷಗಳ ಹಿಂದೆ ಸಾಗನೂರ ಗ್ರಾಮದ ಎಸ್.ಬಿ.ಹೆಚ್ ಬ್ಯಾಂಕಿನಲ್ಲಿ 2.50.000/- ರೂಪಾಯಿ ಹಾಗೂ ಹಸರಗುಂಡಗಿ ಗ್ರಾಮದ ವಿ.ಎಸ್.ಎಸ್.ಎನ್. ಸೊಸೈಟಿಯಲ್ಲಿ 23.000/- ಸಾವಿರ ರೂಪಾಯಿ ಹೀಗೆ ಒಟ್ಟು 2.73.000/- ರೂಪಾಯಿಗಳನ್ನು ಬೆಳೆ ಸಾಲವಾಗಿ ಪಡೆದುಕೊಂಡಿದ್ದು ಇರುತ್ತದೆ, ಈಗ ಸುಮಾರು 02 ವರ್ಷಗಳಿಂದ ಮಳೆ ಸರಿಯಾಗಿ ಆಗದೆ ಇರುವದರಿಂದ ಹೊಲ ಬೆಳೆಯದೆ ಇದ್ದ ಕಾರಣ ಆಗಾಗ ನನ್ನ ಮಗನು ನಾನು ಮಾಡಿದ ಸಾಲವನ್ನು ಹೇಗೆ ತಿರಿಸಲಿ ಅಂತ ನನ್ನ ಮುಂದೆ ಮತ್ತು ನನ್ನ ಮಕ್ಕಳ ಮುಂದೆ ಹೇಳುತ್ತಿದ್ದನು ಆಗ ನನ್ನ ಮಗನಿಗೆ ನಾನು ಸಾಲದ ಬಗ್ಗೆ ಚಿಂತೆ ಮಾಡಬೇಡ ಹೊಲ ಸರಿಯಾಗಿ ಬೆಳೆದ ಮೇಲೆ ಬ್ಯಾಂಕಿನ ಸಾಲ ಕಟ್ಟೋಣ ಅಂತ ಸಮದಾನ ಹೇಳುತ್ತಿದ್ದೇನು. ಹೀಗಿದ್ದು ನಿನ್ನೆ ದಿನಾಂಕ 15-04-2016 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನನ್ನ ಮಗನಾದ ಸಿದ್ದಪ್ಪ ಈತನು ನಾನು ಹೊಲಕ್ಕೆ ಹೋಗಿ ಬರುತ್ತೇನೆ, ಅಂತ ಹೇಳಿ ಮನೆಯಿಂದ ಬಂದಿರುತ್ತಾನೆ ಇಂದು ದಿ:16-04-2016 ರಂದು ಬೆಳಿಗ್ಗೆ 8-00 ಗಂಟೆಯಾದರು ನನ್ನ ಮಗ ಮರಳಿ ಮನೆಗೆ ಬಾರದೆ ಇರುವದರಿಮದ ಗಾಬರಿಯಾಗಿ ನಾನು ಮತ್ತು ನನ್ನ ಮಕ್ಕಳು ಮತ್ತು ನನ್ನ ಅಣ್ಣನ ಮಗನಾದ ಶ್ರೀಶೈಲ ತಂದೆ ಮಲಕಣ್ಣ,ಮತ್ತು ನನ್ನ ತಮ್ಮನ ಮಗನಾದ ನಾಗರಾಜ ತಂದೆ ಚನ್ನಬಸಪ್ಪ ಮೇಳಕುಂದಿ ಎಲ್ಲರೂ ಕೂಡಿಕೊಂಡು ಹೊಲಕ್ಕೆ ಬಂದು ನನ್ನ ಮಗನನ್ನು ಹುಡುಕಾಡಿದರು ಸಿಕ್ಕಿರುವದಿಲ್ಲ ನಂತರ ಹೊಳೆಯ ದಂಡೆಯ ಕಡೆಗೆ ಬಂದು ಹುಡುಕುತ್ತಿರುವಾಗ ಇಂದು ದಿನಾಂಕ 16-04-2016 ರಂದು ಮುಂಜಾನೆ 10-00 ಗಂಟೆಗೆ ನನ್ನ ಮಗನ ಶವವು ಭೀಮಾ ನದಿಯಲ್ಲಿ ದೊರೆತಿದ್ದು ಇರುತ್ತದೆ, ಕಾರಣ ನನ್ನ ಮಗನು ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಅಂತ ಸಾಲದ ಬಾದೆಯಿಂದ ಮನನೊಂದು ದಿ: 15-04-2016 ರಂದು ರಾತ್ರಿ 10-00 ಗಂಟೆಯಿಂದ ದಿ: 16-04-2016 ರಂದು ಮುಂಜಾನೆ 10-00 ಗಂಟೆಯ ಮದ್ಯದ ಅವದಿಯಲ್ಲಿ ಸಾಲದ ಬಾದೆಯಿಂದ ಮನನೊಂದು ಭೀಮಾ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿ ರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಂಬರಾಯ ತಂದೆ ಮಲ್ಲಪ್ಪಾ ಮುದ್ದಡಗಿ ಸಾ : ಆಲ್ಗೂಡ ತಾ;ಜಿ;ಕಲಬುರಗಿ ಇವರ  ಮಗಳು ಶ್ರೀಮತಿ ಮಹಾದೇವಿ  ಗಂಡ ಶರಣಪ್ಪಾ ಲೇಂಗಟಿಕರ ವಯ;24 ವರ್ಷ ಇವಳು ಲಂಗಾ ಬಟ್ಟೆ ತರುತ್ತೇನೆ ಅಂತಾ ಹೇಳಿ ಆಲ್ಗೂಡದಿಂದ ತಾರಫೈಲ್ ಕಲಬುರಗಿಗೆ  ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದವಳು ಮರಳಿ ಮನಗೆ ಬಂದಿರುದಿಲ್ಲಾ ಕಾಣೆಯಾಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.