POLICE BHAVAN KALABURAGI

POLICE BHAVAN KALABURAGI

20 June 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ರಹೀಸಾ ಫಾತಿಮಾ ಗಂಡ ಶೌಖತ ಪಟೇಲ ಸಾ|| ವಿದ್ಯಾನಗರ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶ ಏನೆಂದರೆ ಬಂಗಾರದ ಹಣ ಮತ್ತು ವಿದ್ಯಾಬ್ಯಾಸಕ್ಕಾಗಿ ಖಾನಾಪೂರದ ನನ್ನ ಸಂಬಂಧಿಕರಾದ ಮುನ್ನಿ ಬೇಗಂ ಇವರ ಹತ್ತಿರ 80,000/-ರೂ ಮತ್ತು ದಿನ ಬಳಕೆಯ ಬಂಗಾರದ ಆಭರಣಗಳು ಇದ್ದು ನನಗೆ ನನ್ನ ಸಂಬಂಧಿಕರ ಹತ್ತಿರ ಮನೆ ಬಳಕೆಯ ಆಭರಣಗಳು ಇದ್ದು ನನಗೆ ನನ್ನ ಸಂಬಂಧಿಕರ ಹತ್ತಿರ ಹೈದ್ರಾಬಾದಕ್ಕೆ ಹೋಗುವದಿದ್ದು ನಾನು ಹಣ ಮತ್ತು ಬಂಗಾರ ನನ್ನ ಮನೆಯ ಅಲಮಾರದ ಲಾಕರದಲ್ಲಿ ಇಟ್ಟಿದ್ದು ಮೈಮೇಲೆ ಹಾಕಿಕೊಂಡು ಹೋಗದೇ ರೇಲ್ವೆದಲ್ಲಿ ಯಾರಾದರೂ ಕಳುವ ಮಾಡಬಹುದೆಂಬ ಹೆದರಿಕೆಯಿಂದ ಮನೆಯಲ್ಲಿಯೆ ಸುರಕ್ಷಿತವಾಗಿ ಇರುತ್ತವೆ ಅಂತಾ ಲಾಕರದಲ್ಲಿಟ್ಟು, ದಿನಾಂಕ 16/06/2012 ರಂದು ನನ್ನ ಕುಟುಂಬದವರೊಂದಿಗೆ ಮನೆಗೆ ಬೀಗ ಹಾಕಿ ನಾವೇಲ್ಲರೂ ಹೈದ್ರಾಬಾದಕ್ಕೆ ಹೋಗಿರುತ್ತೇವೆ.ದಿನಾಂಕ:19/06/2012 ರಂದು ಹೈದ್ರಾಬಾದದಿಂದ ಮರಳಿ ಗುಲಬರ್ಗಾದ ನನ್ನ ಮನೆಗೆ ರಾತ್ರಿ ಬಂದು ನೋಡಲಾಗಿ ಮನೆಯ ಕಂಪೌಂಡ ಗೇಟಿಗೆ ಹಾಕಿದ ಬೀಗ ಹಾಗೇಯೆ ಇದ್ದು, ಯಾರೋ ಕಳ್ಳರು ಕಂಪೌಂಡ ಹಾರಿ ಮನೆ ಒಳಗಿನ ಮೂರನೆಯ ರೂಮಿನ ಬಾಗಿಲದ ಕೀಲಿ ಮುರಿದು ಅಲಮಾರಿಯಲ್ಲಿಟ್ಟ ಬಂಗಾರದ ಮಂಗಳಸೂತ್ರ ಮತ್ತು ಬಂಗಾರದ ಆಭರಣ ಒಟ್ಟು 16 ತೋಲಿ, ನಗದು ಹಣ 80,000/- ರೂ, ಹೀಗೆ ಒಟ್ಟು4, 79,500/- ಬೇಲೆ ಬಾಳುವವು ಯಾರೋ ಕಳ್ಳರು ಮನೆಯಲ್ಲಿ ಯಾರು ಇಲ್ಲದ್ದ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀಮತಿ ರಹೀಸಾ ಫಾತಿಮಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:53/2012 ಕಲಂ. 454,457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ: ಶ್ರೀ, ಅಬ್ದುಲ ಸಲಾಂ ತಂದೆ ಉಸ್ಮಾನ ಅಲಿ ಸಾ: ಖಾರಿ ಬೌಲಿ ಮೊಮಿನಪೂರ ಗುಲಬರ್ಗಾ ರವರು ನಾನು ದಿನಾಂಕ:12-06-2012 ರಂದು ನನ್ನ ಹೀರೊ ಹೊಂಡಾ ಫ್ಯಾಶನ ಪ್ರೋ ಮೊಟಾರ ಸೈಕಲ ನಂ:ಕೆಎ 32 ವಾಯ್-8083 ಅಃಕಿಃ35,000/-ರೂ. ನೇದ್ದರ  ಮೇಲೆ ಶಹಾಬಾದ, ಭಂಕೂರ ಗ್ರಾಮಕ್ಕೆ ಹೋಗಿ ಅಲ್ಲಿಂದ ನಂದೂರ ಮೂಲಕ ಗುಲಬರ್ಗಾಕ್ಕೆ ಹೋರಟಾಗ ನಂದೂರ (ಕೆ) ಗ್ರಾಮ  ದಾಟಿ ಐ.ಓ.ಸಿ ಸಮೀಪ ರಸ್ತೆ ಕಾಮಗಾರಿ ನಡೆದಿದ್ದರಿಂದ ನಿಧಾನವಾಗಿ  ಫೂಲ್ ಸಮೀಪ ಬರುತ್ತಿರುವಾಗ ಅಂದಾಜು 7-30 ಗಂಟೆ ಸುಮಾರಿಗೆ ಒಬ್ಬನು ರಸ್ತೆಯ ಬದಿಯಲ್ಲಿ ನಿಂತು ನನ್ನ ಮೋಟಾರ ಸೈಕಲ್ ಗೆ ಕೈ ಮಾಡಿದ್ದರಿಂದ ನಾನು ಮೋಟಾರ ಸೈಕಲ್ ನಿಲ್ಲಿಸಿದೇನು. ಅವನು ನಾನು ಗುಲಬರ್ಗಾಕ್ಕೆ ಬರುತ್ತೇನೆ ಅಂತಾ ಕೇಳಿಕೊಂಡಿದ್ದರಿಂದ ನಾನು ಮೋಟಾರ ಸೈಕಲ ನಿಲ್ಲಿಸಿದೆನು, ನನಗೆ  ಮೂತ್ರ ವಿಸರ್ಜನೆ ಬಂದಿದ್ದರಿಂದ ನಾನು ಮೋಟಾರ ಸೈಕಲ ನಿಲ್ಲಿಸಿದ್ದೆನು. ನನಗೆ ಕೈ ಮಾಡಿ ನಿಲ್ಲಿಸಿದ ಅಪರಿಚಿತ ವ್ಯಕ್ತಿ ನನ್ನ ಮೋಟಾರ ಸೈಕಲ್ ಚಾವಿ ಅದಕ್ಕೆ ಇರುವದರಿಂದ  ಅವನು ನನ್ನ ಮೋಟಾರ ಸೈಕಲ್ ಚಾಲು ಮಾಡಿಕೊಂಡು ಗುಲಬರ್ಗಾ ಕಡೆಗೆ ಕತ್ತಲಲ್ಲಿ ಮೋಟಾರ ಸಮೇತ ಹೋರಟು ಹೋಗಿರುತ್ತಾನೆ . ಸದರಿ ಮೋಟಾರ ಸೈಕಲ ಚೆಸ್ಸಿ ನಂ:MBLHS 10EWBGF27757 & ಇಂಜನ ನಂ: HA10EDBF55424  ಕಪ್ಪು ಬಣ್ಣದ್ದು ಇದ್ದು, ಮೋಟಾರ ಸೈಕಲ ಪತ್ತೆ ಮಾಡಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 146/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಅಮ್ಜದಖಾನ ತಂದೆ ಜಫರುಲ್ಲಾಖಾನ ಸಾ:ಇಸ್ಲಾಮಾಬಾದ  ಕಾಲೋನಿ ಗುಲಬರ್ಗಾರವರು ನಾನು ದಿನಾಂಕ:19-6-2012 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ ನಂ ಕೆಎ:32-ಎಕ್ಸ:4221 ನೇದ್ದು, ಲಾಲಗೇರಿ ಕ್ರಾಸ್ ಹತ್ತಿರ ಇರುವ ಅರವಿಂದ ಮೆಡಿಕಲ್ ಅಂಗಡಿಯ ಮುಂದೆ ನಿಲ್ಲಿಸಿ ಚಹಾ ಕುಡಿಯುತ್ತಿದ್ದಾಗ ಟಾಟಾ ಎ.ಸಿ ವಾಹನ ನಂ ಕೆಎ:32- ಬಿ:5187 ನೇದ್ದರ ಚಾಲಕನು ತನ್ನ ವಾಹನವನ್ನು ಶರಣಬಸವೇಶ್ವರ ಗುಡಿಯ ಕಡೆಯಿಂದ ಅತೀವೇಗ ಮತ್ತು ಆಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕಕ್ಕೆ ನಿಲ್ಲಿಸಿದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:34/2012 ಕಲಂ 279,ಐ.ಪಿ.ಸಿ  ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತೆನೆ.
ಕೊಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ಜಿತೇಂದ್ರ ತಂದೆ ಯಾದಯ್ಯ ಗುತ್ತೆದಾರ ಮು: ಅಂಬಲಗಾ ಗ್ರಾಮ ತಾ:ಆಳಂದ ಜಿಲ್ಲಾ ಗುಲಬರ್ಗಾರವರು ನನ್ನ ತಮ್ಮ ಮಿಥನ ಈತನಿಗೆ ಯಾರೋ ದುಷ್ಕರ್ಮಿಗಳು ದಿನಾಂಕ 17-06-12 ರಂದು ಬೆಳಿಗ್ಗೆ 8-00 ಗಂಟೆಯಿಂದ ದಿನಾಂಕ 19-06-2012  ಸಾಯಂಕಾಲ 6-00 ಗಂಟೆಯ ಮಧ್ಯದ ಅವಧಿಯಲ್ಲಿ ತಾವರಗೇರಾ ಕ್ರಾಸ ಹತ್ತಿರವಿರುವ ಬಸವಣ್ಣ ಗುಡಿಯ ಹತ್ತಿರ  ಯಾವದೋ ದುರುದ್ದೇಶದಿಂದ ಹರಿತವಾದ ಆಯುಧದಿಂದ ನಡು ತಲೆಯಲ್ಲಿ  ಹಾಗೂ ಎಡ ತಲೆಗೆ ಮತ್ತು ಬಲ ಹುಬ್ಬಿನ ಮೇಲೆ ಹೊಡೆದು ಕೊಲೆ ಮಾಡಿರುತ್ತಾರೆ.  ಕೊಲೆ ಮಾಡಿದವರ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:210/2012 ಕಲಂ 302 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.