POLICE BHAVAN KALABURAGI

POLICE BHAVAN KALABURAGI

11 March 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಬಸವರಾಜ ತಂದೆ ಚಂದ್ರಪ್ಪ ಹುಡೇದ ಉ : ಬ್ಯಾಂಕ ಉದ್ಯೋಗಿ ಸಾ: ಮನೆ ನಂ 1-867, 22ಸಿ/2 ಚಂದ್ರ ಕಿರಣ ಮಹಾವೀರ ನಗರ ಗುಲಬರ್ಗಾರವರು ನಾನು ದಿನಾಂಕ 24/02/2012 ರಂದು ಬೆಳಿಗ್ಗೆ 10:00 ಗಂಟೆಗೆ ಸಂಗಮ ಬಾರ & ರೆಸ್ಟೋರೆಂಟ ಮುಂದುಗಡೆ ನನ್ನ ಸ್ಕೂಟಿ ನಂ ಕೆಎ-32/ಕೆ-7283 ನೇದ್ದು ನಿಲ್ಲಿಸಿ ಕೆನರಾ ಬ್ಯಾಂಕಿನಲ್ಲಿ ನನ್ನ ಕರ್ತವ್ಯ ಮುಗಿಸಿಕೊಂಡು ಮರಳಿ ಬಂದು ನೋಡಲಾಗಿ ನಿಲ್ಲಿಸಿದ ಸ್ಥಳದಲ್ಲಿ ನನ್ನ ವಾಹನ ಇರಲಿಲ್ಲ, ಸದರಿ ಸ್ಕೂಟಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶಸ ಮೇಲಿಂದ ಠಾಣೆ ಗುನ್ನೆ ನಂ 26/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕೊಲೆ ಪ್ರಕರಣ:
ಮಹಿಳಾ ಪೊಲೀಸ ಠಾಣೆ:
ಶ್ರೀ ಬಾಬುರಾವ ತಂದೆ ಸಿದ್ರಾಮಪ್ಪಾ ಮೇತ್ರೆ ಸಾ: ಕಲ್ಲೂರ ರೋಡ ಭವನಿ ಗುಡಿ ಹತ್ತಿರ ಹುಮನಾಬಾದ ಜಿಬೀದರ,ನನ್ನ ಮೂರನೇ ಮಗಳಾದ ಸುಧಾ ಇವಳನ್ನು ಗುಲಬರ್ಗಾದ ವಿಜಯನಗರ ಕಾಲೋನಿಯ ಉಲ್ಲಾಸ ತಂದೆ ಶರಣಪ್ಪ ತಾಳಮಡಗಿ ಇವರೊಂದಿಗೆ ದಿನಾಂಕ 20.05.2009 ರಂದು ಮದುವೆ ಮಾಡಿಕೊಟ್ಟಿದ್ದು, ಮದುವೆಯ ಕಾಲಕ್ಕೆ 2 ತೊಲೆ ಬಂಗಾರ 20 ಸಾವಿರ ನಗದು ಹಣ ಕೊಟ್ಟಿದ್ದು, ಮದುವೆಯಾದ ಮೇಲೆ ಮಗಳು ಗಂಡನ ಮನೆಯಲ್ಲಿ ನಡೆಯಲು ಹೋಗಿದ್ದು, 6 ತಿಂಗಳ ಹಿಂದೆ ಮಗಳ ಗಂಡನ ಮನೆಯಲ್ಲಿ ಅಲಮಾರಿಯಲ್ಲಿಟ್ಟಿದ ಬಂಗಾರ ಹೋಗಿದೆ ಅಂತಾ ಅವರ ಅತ್ತೆ ಸುದ್ದಿ ಹಬ್ಬಿಸಿ ಮಗಳಿಗೆ ತೊಂದರೆ ಕೊಡಲು ಪ್ರಾರಂಬಿಸಿದ್ದು ಅತ್ತೆ, ಮಾವ ಮಗನಿಗೆ ಖರ್ಚ ಮಾಡಿ ಓದಿಸಿದೇವೆ ಲಗ್ನದ ಸಾಲ ಇದೆ ಅಂತಾ ಮಗಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದರು,ದಿನಾಂಕ 10.03.2012 ರಂದು ನನ್ನ ಮಗಳಿಗೆ ಎರಡೂ ಮಾತ್ರೆಗಳನ್ನು ಕೊಟ್ಟು ನಂತರ ಅವಳು ಮಲಗಿದ್ದಾಗ ಮೈ ಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಸುಟ್ಟು ಸಾಯಿಸಿರುತ್ತಾರೆ, ಆದಕಾರಣ ಮಗಳ ಗಂಡ, ಅತ್ತೆ, ಮಾವ ಇವರ ಮೇಲೆ ಕಾನೂನು ಕ್ರಮ ಕೈ ಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 26/2012 ಕಲಂ 498 (ಎ), 302, 304 (ಬಿ) ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:
ಶ್ರೀ ಚನ್ನಬಸಪ್ಪ ತಂದೆ ಶರಣಪ್ಪ ದುಕಾನ ಸಾಹಂದ್ರಕಿ ರವರು ನನಗೆ ಹಿರಿಯರ ಆಸ್ತಿ ಸರ್ವೆ ನಂ-451 ನೇದ್ದರಲ್ಲಿ 2 ಎಕರೆ 25 ಗುಂಟೆ ಜಮಿನು ನನ್ನ ಪಾಲಿಗೆ ಬಂದಿದ್ದು, 4 ವರ್ಷಗಳ ಹಿಂದೆ 1 ಎಕರೆ ಮಾರಾಟ ಮಾಡಿ 1 ಎಕರೆ 25 ಗುಂಟೆ ಜಮೀನು ಉಳಿಸಿಕೊಂಡಿರುತ್ತೆನೆ. ಮೊಮ್ಮಗನಾದ ಶೇಖಪ್ಪ ತಂದೆ ಶಿವಣ್ಣ ದುಕಾನ ಇತನು ನೀನಗೆ ಕೇವಲ ಹೆಣ್ಣು ಮಕ್ಕಳ ಸಂತಾನ ಇದ್ದು ನನಗೆ 1 ಎಕರೆ ಹೊಲ ಕೊಡು ಅಂತಾ ಕೇಳುತ್ತಾ ಬಂದಿದ್ದು ಇದೆ ವಿಷಯದಲ್ಲಿ ನನ್ನ ಮೇಲೆ ವೈಮಸ್ಸು ಇಟ್ಟುಕೊಂಡಿದ್ದರಿಂದ ಊರ ಹಿರಿಯರು ಇದರ ಬಗ್ಗೆ ಪಂಚಾಯತ ಮಾಡಿರುತ್ತಾರೆ. ದಿನಾಂಕ: 10-3-12 ರಂದು ಮದ್ಯಾಹ್ನ ಹೊಲದಲ್ಲಿ ಗಳ್ಯಾ ಹೊಡೆದು ಮರಳಿ ಮನೆಗೆ ಬರುತ್ತಿರುವಾಗ ಶ್ರೀನಿವಾಸ ಕುಲ್ಕರ್ಣಿ ರವರ ಹೊಲದ ಪಕ್ಕದಲ್ಲಿ ನಾನು ಬರುವದು ನನಗೆ ಕಾಯುತ್ತಾ ಶೇಖಪ್ಪ ದುಕಾನ ಇವನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಎಡ ಹಣೆಯ ಮೇಲೆ ಬಲವಾಗಿ ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ 54/2012 ಕಲಂ 341, 504, 506,307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ನಾಗಮ್ಮಾ ಗಂಡ ಕಲ್ಯಾಣಿ ಬನಹಟ್ಟಿ ಸಾ: ಕಣ್ಣಿ ಗ್ರಾಮ ತಾ:ಜಿ: ಗುಲಬರ್ಗಾ ಸಧ್ಯ ಅಂಬೇಡ್ಕರ ನಗರ ಶರಣಸಿರಸಗಿ ಗ್ರಾಮ ರವರು ದಿನಾಂಕ:06-03-2012 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಶೈಲೇಶ ತಂದೆ ಸುರೇಶ ಕಾಂಬಳೆ ಸಾ: ಘಾಟಗೇ ಲೇಔಟ್ ಗುಲಬರ್ಗಾ, ಪಿಂಟೂ @ ವೆಂಕಟೇಶ ತಂದೆ ಹಣಮಂತರಾಯ ಭಾವಿಕಟ್ಟಿ ಸಾ: ಹಳೆ ಜೇವರ್ಗಿ ರೋಡ ಸಂಪಗಿ ನಗರ ಗುಲಬರ್ಗಾ ಇವರು ಬಜಾಜ ಪಲ್ಸರ ಕೆಎ 32 ಇಎ 3193 ನೇದ್ದರ ನನ್ನ ಮನೆ ಮುಂದೆ ಬಂದು ನಿನ್ನ ಗಂಡ ಕಲ್ಯಾಣಿ ಎಲ್ಲಿದ್ದಾನೆ ನಮಗೆ ಕೊಡಬೇಕಾದ 2000/- ರೂ. ಕೊಡುತ್ತಿಲ್ಲಾ ಅಂತಾ ಕೇಳಿದನು, ಅದಕ್ಕೆ ನಾನು ನನ್ನ ಗಂಡ ಬಾಂಬೆಗೆ ಹೋಗಿದ್ದಾನೆ ಯುಗಾದಿಗೆ ವಾಪಸ್ಸು ಬರುತ್ತಾನೆ ಅವರು ಬಂದು ನಂತರ ಕೊಡುತ್ತಾರೆ ಅಂದಿದ್ದಕ್ಕೆ ನನಗೆ ಮತ್ತು ನನ್ನ ತಮ್ಮ ಅನಿಲ ಇಬ್ಬರಿಗೂ ಅವಾಚ್ಯವಾಗಿ ಬೈದು ತಲೆಯ ಕೂದಲು ಹಿಡಿದು ಜಗ್ಗಾಡಿ ಮಾನ ಭಂಗ ಉದ್ದೇಶದಿಂದ ಕೈ ಹಿಡಿದು ಜಗ್ಗಿ, ಕೈಯಿಂದ ಹೊಡೆ ಬಡಿ ಮಾಡಿ ಜೀವ ಭಯ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 80/2012 ಕಲಂ 504, 341,323, 354, 506 ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.