POLICE BHAVAN KALABURAGI

POLICE BHAVAN KALABURAGI

25 May 2011

GULBARGA DISTRICT REPORTED CRIMES

ನಿಂದನೆ ಪ್ರಕರಣ ;

ಬ್ರಹ್ಮಪೂರ ಠಾಣೆ ;
ಶ್ರೀ ದತ್ತಾತ್ರೇಯ ತಂದೆ ರಾಮಚಂದ್ರ ಮತ್ತು ಹಣಮವ್ವ ಗಂಡ ಮಾಹಾದೇವಪ್ಪಾ ದೊಡ್ಡಮನಿ ಗೋವಾ ಹೋಟೆಲ ಹತ್ತಿರ ಹೋಟೆಲ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವಾಗ ಸಿಲೆದಿನಾಂಕ 24-05-2011 ರಂದು ರಾತ್ರಿ ಪಕ್ಕದ ಗ್ಯರೇಜ ನವರಾದ ಅಬ್ದುಲ ಗಫೂರ ತಂದೆ ಅಬ್ದುಲ ಜಬ್ಬಾರ ಮಹ್ಮದ ಹಮೀದ ಹುಸೇನ ಮತ್ತು ಇವರ ಅಣ್ಣನ ಮಗ ಮತ್ತು ಮುರಲಿಧರ ರತ್ನಗೀರಿ ಇವರು ಕೊಡಿಕೊಂಡು ಗ್ಯಾರೆಜನಲ್ಲಿ ಸೀಲೆಂಡರನಿಂದ ಬೇರೆ ವಾನಗಳಿಗೆ ಹಾಕುತ್ತಿದ್ದು ಗ್ಯಾಸದ ದುರ್ವಾಸನೆ ಬರುತ್ತಿದ್ದು ಇಲ್ಲಿ ಗ್ಯಾಸ ತುಂಬಬೇಡರಿ ವಾಸನೆ ಬರತ್ತಾಇದೆ ಅಂತಾ ಹೇಳಲು ಹೋದ ನಾನು ಮತ್ತು ನನ್ನ ಅತ್ತೆ ಹಣಮವ್ವ ಇಬ್ಬರ ಜೋತೆಗೆ ಜಗಳಕ್ಕೆ ಬಿದ್ದು ಹೊಡೆಬಡೆಮಾಡಿ ಅವಾಚ್ಯಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ ;     

ಗ್ರಾಮೀಣ ಠಾಣೆ ;ಶ್ರೀ ಮಹ್ಮದ ನಿಜಾಮೋದ್ದೀನ ತಂದೆ ಸುಲೇಮಾನಸಾಬ ತೇಲಿ ಸಾ:ಮೇ:ಪೀರ ಇಂಡಸ್ಟ್ರಿಜ್‌ ಪ್ಲಾಟನಂ 18(ಎ) 18(ಬಿ) & 17 ಕೆಐಡಿಬಿ ಇಂಡಸ್ಟ್ರಿ ಯಲ್‌ ಏರಿಯಾ 2 ನೇ ಹಂತ ಗುಲಬರ್ಗಾ ಇವರು ದಿನಾಂಕ 13-05-2011 ರಂದು ತನ್ನ ಮಗನ ಮದುವೆ ಇರುವದರಿಂದ ರಾಜಸ್ತಾನಕ್ಕೆ ಹೋಗುವಾಗ ತಮ್ಮ ಪ್ಯಾಕ್ಟರಿ ಬಂದ ಮಾಡಿಕೊಂಡು ಹೋಗಿದ್ದು ಈ ವೇಳೆಯಲ್ಲಿ ನಮ್ಮ ಮುನಿಮನಾದ ಗೌಸ ಇತನು ದಿನಾಂಕ 22-05-2011 ರಂದು ಪೋನ ಮಾಡಿ ಪ್ಯಾಕ್ಟರಿಯ ಹಿಂದಿನ ಗೋಡೆ ಸ್ವಲ್ಪ ಒಡೆದು ಪ್ಯಾಕ್ಟರಿಯಲ್ಲಿಯ ತೋಗರಿ ಬೆಳೆ ಕಳುವು ಮಾಡಿಕೊಂಡು ಹೋಗಿ ರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ರಾಜಸ್ತಾನದಿಂದ ದಿನಾಂಕ 23-05-2011 ರಂದು ಮದ್ಯಾಹ್ನ ಗುಲಬರ್ಗಾಕ್ಕೆ ಬಂದು ನನ್ನ ಪ್ಯಾಕ್ಟ್‌ರಿ ಹತ್ತಿರ ಹೋಗಿ ಮುನಿಮನಾದ ಗೌಸ ಇತನೊಂದಿಗೆ ಪ್ಯಾಕ್ಟರಿಯ ಶೆಟರ್‌ ತೆಗೆದು ನೋಡಲಾಗಿ ಪ್ಯಾಕ್ಟ್‌ರಿಯ ಹಿಂದಿನ ಗೋಡೆ ಸ್ವಲ್ಪ ಒಡೆದು ಪ್ಯಾಕ್ಟ್‌ರಿಯಲ್ಲಿಯ ಸುಮಾರು 2,24,000/- ರೂಪಾಯಿ ಕಿಮ್ಮತ್ತಿನ 50 ಕೆಜಿಯ ತೋಗರಿ ಬ್ಯಾಳಿಯ 80 ಬ್ಯಾಗಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ ;

ಆಳಂದ ಠಾಣೆ ;ಶ್ರೀಮತಿ ಪೂಜಾ ಗಂಡ ರಮೇಶ ಲೋಹರ ಸಾ; ರೇವಣಸಿದ್ದೇಶ್ವರ ಕಾಲೂನಿ ಆಳಂದ ರವರ ದಿನಾಂಕ 24-05-2011 ರಂದು ಕರ್ನಾಟಕ ಮೆಡಿಕಲದ ಆಸೀಫ ಹಾಗೂ ಆತನ ತಮ್ಮ ಯುನುಸ ಮತ್ತು ಸಂಗಡ 4-5 ಜನರು ಕುಡಿಕೊಂಡು ನಮ್ಮ ಮೆಡಿಕಲ್ ಅಂಗಡಿಗೆ ಬಂದು ವಿ:ನಾಕಾರಣ ಜಗಳ ತೆಗೆದು ಅಂಗಡಿಯಲ್ಲಿ ಕೆಲಸ ಮಾಡುವ ಕಾಸಿನಾಥ ಮತ್ತು ಹಣಮಂತ ಹಾಗು ನನ್ನ ಗಂಡನಾದ ರಮೇಶ ಇವರಿಗೆ ಕೊಲೆ ಮಾಡುವ ಉದ್ಧೇಶದಿಂದ ಚಾಕುವಿನಿಂದ ಕಬ್ಬಿಣದ ರಾಡಿನಿಂದ ಹೊಡೆದು ಗಾಯಗಳಿಸಿ ಅಂಡಿಯ ಕೌಂಟರ ಗ್ಲಾಸ ಮತ್ತು ಔಸಧ ಬಾಟಲಗಳನ್ನು ಒಡೆದು ಹಾಳುಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.