POLICE BHAVAN KALABURAGI

POLICE BHAVAN KALABURAGI

28 November 2013

Gulbarga District Reported Crimes

ಸುಲಿಗೆ ಪ್ರಕರಣ : 
ಬ್ರಹ್ಮಪೂರ ಠಾಣೆ : ಶ್ರೀ. ರಘುರಾಜ ತಂದೆ ನಾಗಪ್ಪ ಮಡಿವಾಳ ಸಾ|| ಗಣೇಶ ನಗರ ಜಿ.ಡಿ.ಎ ಕಾಲೋನಿ ಬಾರೆಹಿಲ್ಸ್ ಗುಲಬರ್ಗಾ ರವರು ದಿನಾಂಕ: 26-11-2013 ರಂದು 4:00 ಪಿ.ಎಮ್.ಸುಮಾರಿಗೆ ತಹಸೀಲ ಕಾರ್ಯಾಲಯದಿಂದ ಹೊರಗಡೆ ಬರುತ್ತಿರುವಾಗ ಎದರುನಿಂದ ಇಬ್ಬರೂ ಹಿರೋ ಹೊಂಡಾ ಸೈಕಲ್ ಮೋಟರ ಸೈಕಲ ಮೇಲೆ ಬಂದವರೆ ಏ ಭೋಸಡಿ ಮಗನೆ ನಿಲ್ಲು ಅಂತಾ ಬೈದಾಗ ಅವರಿಗೆ ಯಾಕೆ ಬೈಯುತ್ತಿರಿ ಅಂತಾ ಕೇಳಿದಾಗ ಅವರಿಬ್ಬರೂ ನನಗೆ ಗಟ್ಟಿಯಾಗಿ ಹಿಡಿದು ಒಬ್ಬನು ಚಾಕು ತೋರಿಸಿ ನನ್ನ ಪ್ಯಾಟಿನ ಜೇಬಿನಲ್ಲಿದ್ದ ಹಣ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಚಿರಾಡಲು ಅಲ್ಲಿಯ ತಸೀಲ ಕಾರ್ಯಾಲಯದ ಹತ್ತಿರ ನಿಂತ ಮೈನೋದ್ದೀನ ಮತ್ತು ಧನರಾಜ ಅನ್ನುವವರು ಬರುವದನ್ನು ನೋಡಿ ಬಿಟ್ಟು ಓಡಿ ಹೊಗಿರುತ್ತಾರೆ. ಅವರನ್ನು ನಾವು 3 ಜನ ಕೂಡಿಕೊಂಡು ಹುಡಕಾಡಿದರು ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಚೆನ್ನಮ್ಮ ಗಂಡ ಸಂತೋಷ ಕಿಣ್ಣಿ ಸಾ:ರಾಜಾಪೂರ ತಾ:ಚಿತ್ತಾಪೂರ, ಹಾ.ವ:ಬಟಗೆರಾ(ಕೆ) ಗ್ರಾಮ, ತಾ:ಸೇಡಂ ಇವರನ್ನು 10 ವರ್ಷಗಳ ಹಿಂದೆ ರಾಜಾಪೂರ ಗ್ರಾಮದ ಸಂತೋಷ ಕಿಣ್ಣಿ ಇವರಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಬಳಿಕ ಒಂದು ವರ್ಷ ಅಲ್ಲಿಯೇ ಇದ್ದು ನಂತರ ತವರು ಮನೆ ಬಟಗೆರಾ(ಕೆ) ಗೇಟಗೆ ಬಂದು ವಾಸವಾಗಿದ್ದು ಇರುತ್ತದೆ. ಇಲ್ಲಿ ನನ್ನ ಗಂಡ ಕುಡಿತ ಚಟ ಹಚ್ಚಿಕೊಂಡು, ವಾಸವದತ್ತಾ ಸಿಮೆಂಟ್ ಕಂಪನಿಯಲ್ಲಿ ಕೆಲಸದಿಂದಲೂ ತೆಗಿಸಲ್ಪಟ್ಟು ನಿರುದ್ಯೋಗಿಯಾಗಿ, ವಿಪರೀತ ಸಾಲ ಮಾಡಿಕೊಂಡಿದ್ದರು, ನಮ್ಮ ತಂದೆಯವರು ಸಾಲ ತೀರಿಸಿದ್ದರು, ನನ್ನ ಗಂಡ, ನನಗೆ ಕೆಲಸ ಇಲ್ಲ ನಾನು ನಿರುದ್ಯೋಗಿ ಇದ್ದೇನೆ ಅಂತ ಅಂದಾಡುತ್ತಿದ್ದರು. ಹೀಗಿದ್ದು ದಿನಾಂಕ :27-11-2013 ರಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ನಾನು ನನ್ನ ಅಣ್ಣ ತಮ್ಮಕ್ಕಿಯವರ ಮನೆಗೆ ಹೋದಾಗ ನನ್ನ ಗಂಡ ಒಬ್ಬನೇ ಮನೆಯಲ್ಲಿ ಇದ್ದರು. ಮರಳಿ ಸಾಯಂಕಾಲ 05-30 ಕ್ಕೆ ಮನೆಗೆ ಬಂದಾಗ ನನ್ನ ಗಂಡ ಮನೆಯ ಬಾಗಿಲು ಮುಚ್ಚಿಕೊಂಡಿದ್ದರು, ನಾನು ಎಷ್ಟು ಕೂಗಿದರೂ ಬಾಗಿಲು ತೆರೆಯಲಿಲ್ಲ ನಂತರ ನಮ್ಮ ಅಣ್ಣಂದಿರಾದ ನಾಗೇಶ ಮತ್ತು ಶಂಕರ ಇವರಿಗೆ ಕರೆಯಿಸಿ ಬಾಗಿಲು, ಕಿಡಕಿ ಮುರಿದು ಒಳಗೆ ನೋಡಲು ನನ್ನ ಗಂಡ ಸಂತೋXಷ ಇವರು ಕೆಲಸವಿಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಸೀರೆಯಿಂದ ಫ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ರೇಣುಕಾ ಗಂಡ ಶಿವಪುತ್ರ ಸಾಮನೆ ನಂ 161 ಎ ಗ್ರಾಮೀಣ ಲೈನ ರವರು ಪತಿಯಾದ ಶಿವಪುತ್ರ ರವರು ದಿನಾಂಕ 27-11-2013 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂಬರ ಕೆಎ-37 ಹೆಚ್-8167 ರ ಮೇಲೆ ಹೋಗುವಾಗ ಸರಕಾರಿ ಕನ್ಯಾ ಕಾಲೇಜು ಮತ್ತು ಹಳೆ ಡಿ.ಪಿ.ಓ ಮಧ್ಯದ ರೋಡಿನಲ್ಲಿ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ-32 ಆರ್-3872 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಪೆಟ್ಟುಗೊಳಿಸಿ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.