POLICE BHAVAN KALABURAGI

POLICE BHAVAN KALABURAGI

04 November 2013

Gulbarga District Reported Crimes

ಇಸ್ಪೀಟ ಜುಜಾಟ ನಿರತ  ವ್ಯಕ್ತಿಗಳ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 03-11-2013 ರಂದು 04:00 ಪಿ.ಎಂ ಕ್ಕೆ ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಆದರ್ಶ ನಗರದಲ್ಲಿರುವ ಸರಕಾರಿ ಪ್ರೌಡ ಶಾಲೆಯ ಕಂಪೌಂಡ ಆವರಣದಲ್ಲಿ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಹಣಕ್ಕೆ ಪಣ ಹಚ್ಚಿ ಆಡುತ್ತಿದ್ದ ಬಗ್ಗೆ  ಖಚಿತವಾದ ಬಾತ್ಮಿ ಬಂದ ಮೇರೆಗೆ  ನಾನು ಮತ್ತುಸಿಬ್ಬಂದಿಯವರೊಂದಿಗೆ ದಾಳಿ ಮಾಡಿ  1. ಮಲ್ಲಣ್ಣಗೌಡ ತಂದೆ ತೇಜರಾಜ ಪಾಟೀಲ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ 2. ಶಿವಶಂಕರ ತಂದೆ ಹಣಮಂತರಾವ ಪಾಟೀಲ ಸಾಃ ಜನತಾ ಲೇಔಟ ಗುಲಬರ್ಗಾ 3. ಗುಂಡಪ್ಪಾ ತಂದೆ ತಿಪ್ಪಣ್ಣಾ ಹರಳಯ್ಯ  ಸಾಃ ಆದರ್ಶ ನಗರ ಗುಲಬರ್ಗಾ 4. ವಿರೇಶ ತಂದೆ ಪರಮಾನಂದ ವಾಲಶೆಟ್ಟಿ  ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ 5. ಕುಮಾರ ತಂದೆ ಶಂಕರ ಕಟ್ಟಿಮನಿ ಸಾಃ ಆದರ್ಶ ನಗರ ಗುಲಬರ್ಗಾ ಎಂಬುವರನ್ನು ಹಿಡಿದು ಅವರಿಂದ ಹಾಗು ಸ್ಥಳದಲ್ಲಿ ಹೀಗೆ ಒಟ್ಟು 5475/- ರೂ.  ಹಾಗು 52 ಇಸ್ಪೇಟ್ ಎಲೆಗಳನ್ನು  ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು 05 ಜನ ಆಪಾದಿತರನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಆರೋಪಿತರು, ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:- 2/11/13 ರಂದು ರಾತ್ರಿ  10:45 ಗಂಟೆ ಸುಮಾರಿಗೆ ಶರಣಬಸಪ್ಪಾ ತಂದೆ ಮಾಣಿಕಪ್ಪಾ ಮೂಕಿ ಸಾ:ನ್ಯೂ ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾ ರವರು  ಬಾಲಕಿಶೋರ ವೈನ ಶಾಪ ಹತ್ತಿರ  ಆಳಂದ ರೋಡ ಹತ್ತಿರ  ತನ್ನ ಸ್ನೇಹಿತರಾದ ನಾಗು , ಈಶ್ವರ ಮೂರು ಜನರು ಕೂಡಿಕೊಂಡು ನಡೆದುಕೊಂಡು ಹೋಗುತ್ತಿರುವಾಗ ಅದೇವೇಳೆಗೆ  1. ಶಿವಕುಮಾರ ತಂದೆ ಶರಣಪ್ಪ ಗುತ್ತೆದಾರ 2. ಅನೀಲ ತಂದೆ ಶರಣಪ್ಪ ಗುತ್ತೆದಾರ 3. ವಿರೇಶ ಸ್ವಾಮಿ 4. ಮಹೇಶ 5. ಮರೆಪ್ಪ ತಂದೆ ಸುಭಾಶ ಬ್ಯಾರಲ ಸಾ;ಎಲ್ಲರೂ ಗುಲಬರ್ಗಾ  ಇವರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ನಮ್ಮ ತಮ್ಮ ಈಶ್ವರ ಇತನು ಪೈನಾಸ್ಸದಲ್ಲಿ ಕೊಡಿಸಿದ ಸಾಲದ ಹಣವನ್ನು ಮರಳಿ ಕೊಡುವ ವಿಷಯದಲ್ಲಿ ಈ ಮೊದಲು ಶಿವಕುಮಾರನೊಂದಿಗೆ ತಕರಾರು ಆಗಿದ್ದು ಅದೇ ವೈಮನಸ್ಸನಿಂದ ಕೊಲೆ ಮಾಡುವ ಉದ್ದೇಶದಿಂದ ಮೇಲ್ಕಂಡ ಆಪಾದಿತರು ಅಕ್ರಮಕೂಟ ರಚಿಸಿಕೊಂಡು ಬಂದು ರಸ್ತೆ ಮೇಲೆ ಹೋಗುತ್ತಿದ್ದ ನನಗೆ ತಡೆದು ನಿಲ್ಲಿಸಿ  ಜಗಳ ತೆಗೆದು ಚಾಕುವಿನಿಂದ ಮತ್ತು ಬಡಿಗೆಯಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ ಮಾರಣಾಂತಿಕ ವಾಗಿ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀಮತಿ ರೇಷ್ಮಾ ಗಂಡ ಚಂದಪ್ಪ ಕೊಡತೆ ಸಾಃ ಕಿಣ್ಣಿ ಅಬ್ಬಾಸ ತಾ:ಆಳಂದ. ಇವರು ದಿನಾಂಕ 01-11-2013 ರಂದು ಗಂಡನಿಗೂ ಮತ್ತು ಸುಧಾಕರನಿಗೂ ಕೂಲಿ ಮಾಡುವ ವಿಷಯದಲ್ಲಿ ಜಗಳ ಆಗಿದ್ದು ದಿನಾಂಕ 02-11-2013 ರಂದು ರಾತ್ರಿ 08:00 ಗಂಟೆಯ ಸುಮಾರಿಗೆ  ನಾನು ನನ್ನ ಗಂಡ ಚಂದಪ್ಪ ಇಬ್ಬರೂ ಕೂಡಿಕೊಂಡು ಕೂಲಿ ಕೆಲಸ ಮಾಡಿ ಮನೆಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಸುಧಾಕರ ತಂದೆ ಲಕ್ಷ್ಮಣ ಕೊಡತೆ ಇತನು ನನ್ನ ಗಂಡನಿಗೆ ಲೇ ಬೊಸಡಿ ಮಗನೆ ನೀನು ಕೂಲಿ ವಿಷಯದಲ್ಲಿ ನನ್ನೊಂದಿಗೆ ತಕರಾರು ಮಾಡಿದ್ದು ಬಾ ಮಗನೇ ನೀನಗೆ ನೊಡಿಯೇ ಬಿಡುತ್ತೆನೆ ಅಂತಾ  ನನ್ನ ಗಂಡನ ಎದೆಯ ಮೇಲಿನ ಅಂಗ್ಗಿ ಹಿಡಿದು  ಕೈ ಮುಷ್ಠಿ ಮಾಡಿ ಎದೆಯ ಮೇಲೆ,ಬೇನ್ನಿನ ಮೇಲೆ ಹೊಡೆದಿರುತ್ತಾನೆ ಆಗ ನಾನು ನನ್ನ ಗಂಡನಿಗೆ ಹೊಡೆಯುವುದನ್ನು ಬಿಡಿಸಲು ಹೋದಾಗ ನನಗೂ ಏ ರಂಡೀ ನೀನು ಬರುತ್ತಿಯಾ ಅಂತಾ ಕೈ ಹಿಡಿದು ನುಕಿಸಿ ಕೊಟ್ಟು ಅಲ್ಲಿಯೇ ಬಿದ್ದ ಒಂದು ಹಿಡಿಗಾತ್ರದ ಕಲ್ಲಿನಿಂದ ನನ್ನ ಎಡ ಹಣೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಸುಧಾಕರನ ಹೆಂಡತಿಯಾದ ಶರಣಮ್ಮ ಗಂಡ ಸುದಾಕರ ಕೊಡತೆ ಇವಳು ಬಂದು ಕೂದಲು ಹಿಡಿದು ನೆಲಕ್ಕೆ ನನಗೆ ಕುಕ್ಕಿದಳು. ಆಗ ನನ್ನ ಗಂಡ ಬಿಡಿಸಲು ಬಂದಾಗ ಸುಧಾಕರ ಈತನು ನನ್ನ ಗಂಡನಿಗೆ ತಡೆದು ನಿಲ್ಲಿಸಿ ಇವತ್ತು ಉಳಿದಿರಿ ಮಕ್ಕಳ್ಯಾ ನಿಮಗೆ ನಾಳೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಮತ್ತು ಸುಧಾಕರ ಇತನು ನನ್ನ ಸೀರೆ ಹಿಡಿದು ಜಗ್ಗಿ ಅವಮಾನ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.