POLICE BHAVAN KALABURAGI

POLICE BHAVAN KALABURAGI

05 June 2012

GULBARGA DIST REPORTED CRIMES


ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ: 4/06/2012 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಶಂಕರವಾಡಿ ಗ್ರಾಮದ ದಸ್ತಗಿರ ಇವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಆಡುತ್ತಿದ್ದಾರೆ, ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶರಣಪ್ಪಾ ಹಿಪ್ಪರಗಿ  ಪಿ.ಐ  ಶಹಾಬಾದ ರವರು ತಮ್ಮ ಸಿಬ್ಭಂದಿಯವರಾದ ಗುಂಡಪ್ಪಾ, ಪರಶುರಾಮ,ಬಸವರಾಜ,ಮತ್ತು ಜೀಪ ಚಾಲಕ ಹಣಮಂತರಾಯ ಎಹಚ.ಸಿ ರವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಸಂಜು ತಂದೆ ಶಿವಯೋಗಿ ಬಾಗೋಡಿ ಸಾ: ಶಂಕರವಾಡಿ. ರಾಜು ತಂದೆ ಶರಣಪ್ಪಾ ಪರೀಟ ಸಾ: ಶಂಕರವಾಡಿ,ಶಂಕರ ತಂದೆ ಸಿದ್ದಣ್ಣಾ ಉಡಗಿ ಸಾ: ಶಂಕರವಾಡಿ,ನಾಗರಾಜ ತಂದೆ ಬಸಣ್ಣಾ ಚಿತ್ತಾಫೂರ ಸಾ: ಶಂಕರವಾಡಿ, ರವರಿಂದ  ಒಟ್ಟು 530/-ರೂ ನಗದು ಹಣ  ಮತ್ತು ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 78/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸಂತೋಷ ತಂದೆ ಶಂಕರರಾವ ಮಾಲಿ ಪಾಟೀಲ್  ಸಾ: ಹೇರೂರ ತಾ:ಚಿತ್ತಾಪೂರ ಜಿ: ಗುಲಬರ್ಗಾರವರು ದಿನಾಂಕ: 04-06-2012 ರಂದು 1-00 ಗಂಟೆಗೆ ಹುಮನಾಬಾದ ರೋಡ ತಾವರಗೇರಾ ಕ್ರಾಸ ಹತ್ತಿರ  ಜೀಪ ನಂ.ಕೆ.ಎ.21 ಎಂ. 1028 ನೇದ್ದರ ಚಾಲಕ ತನ್ನ ಜೀಪನ್ನು ಅತೀವೇಗ ಮತ್ತು ನಿಸ್ಕಾಳಜಿತನ ದಿಂದ ನಡೆಯಿಸಿ ಎದುರಿನಿಂದ ಬರುತ್ತಿದ್ದ ಮಾರುತಿ ಸುಜುಕಿ ಎಸ್.ಎಕ್ಸ 4 ನಂ ಕೆ.ಎ.38 ಎಂ.7111 ನೇದ್ದಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಾರನಲ್ಲಿದ ಒಬ್ಬನಿಗೆ ಹಾಗೂ ಜೀಪಿನಲ್ಲಿದ್ದ 7-8 ಜನರಿಗೆ ಸಾದಾ ಹಾಗೂ ಭಾರಿಗಾಯಗಳಾಗಿರುತ್ತವೆ ಜೀಪ ಚಾಲಕ ತನ್ನ ಜೀಪನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 183/12 ಕಲಂ 279,337,338,ಐಪಿಸಿ ಸಂಗಡ 187 ಐಎಂವಿ ಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಅಪಘಾತ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ: ದಿ:04/06/2012 ರಂದು ಮಧ್ಯಾಹ್ನ 12-30 ಗಂಟೆಗೆ ದಮ್ಮೂರ ಕ್ರಾಸ ಹತ್ತಿರ ರಸ್ತೆಯ ಮೇಲೆ ಶರಣಪ್ಪ ತಂದೆ ಚಂದ್ರಪ್ಪ ಪೂಜಾರಿ ಇತನು ಆರಫಾದಿನ ಟಂ ಟಂ ನಂಬರ ಕೆಎ 32 ಎ 8970 ನೇದ್ದರಲ್ಲಿ ಕಳಿತುಕೊಂಡು ಹೋಗುತ್ತಿರುವಾಗ ದಮ್ಮೂರ ಕ್ರಾಸ ಹತ್ತಿರ ಟಂ ಟಂ ಚಾಲಕ ಹಣಮಂತ ಇತನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿದ್ದರಿಂದ ಟಂಟಂ ಪಲ್ಟಿಯಾಗಿ ಬಿದ್ದಿದ್ದರಿಂದ ಭಾರಿಗಾಯವಾಗಿರುತ್ತವೆ ಅಂತಾ ಶ್ರೀ ರಮೇಶ ತಂದೆ ಮಾಣಿಕಪ್ಪ ಪೂಜಾರಿ ಸಾ:ದಮ್ಮೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:50/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.