POLICE BHAVAN KALABURAGI

POLICE BHAVAN KALABURAGI

22 December 2014

Kalaburagi District Reported Crimes

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ತಂದೆ ಕಾಶಿನಾಥ ಪಾಟೀಲ (ಬೇಳಕೊಟಾ) ಸಾ. ದೇವರ ದಾಸೀಮಯ್ಯ ನಗರ ಡಬರಾಬಾದ ಕ್ರಾಸ್ ರಿಂಗ ರಸ್ತೆ ಕಲಬುರಗಿ ದಿನಾಂಕ 21-12-2014 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಮ್ಮ ಬಡಾವಣೆಯ ಮಹೇಶ ತಂದೆ ಅನಿಲ ಬನಗುಂಡಿ ಈತನು ಬಂದು ನಮ್ಮ ತಂದೆಯವರಾದ ಕಾಶಿನಾಥ ತಾಯಿ ಸೋಭಾ ಇವರಿಗೆ ಜಗಳ ತೆಗೆದು ನಮಗೆ ನೀವು ಎರಡು ಲಕ್ಷ ರೂಪಾಯಿ ಕೊಡಬೇಕಾಗಿದ್ದು ಕೊಡಬೆಕು ಅಂತ ಅವಾಚ್ಯ ಶಬ್ಧಗಳಿಂದ ಬೈದು ಹೋಗಿರುತ್ತಾನೆ ಈ ವಿಷಯ ಸಾಯಂಕಾಲ ನಾನು ಮತ್ತು ನನ್ನ ಅಣ್ಣ ಮನೆಗೆ ಬಂದಾಗ ನಮಗೆ ನಮ್ಮ ತಂದೆ ತಾಯಿಯವರು ತಿಳಿಸಿದರು ಆಗ ನಾನು ಮತ್ತು ನನ್ನ ತಂದೆಯವರು ಇಬ್ಬರು ಕೂಡಿ ಕೊಂಡು ಮಹೇಶ ಈತನ ಮನೆಗೆ ಹೋಗಿ ನಿನಗೆ ಯಾರು ಹಣ ಕೊಡಬೇಕು ಅಂತ ಕೇಳಿದಾಗ ಅವರು ನಮಗೆ ಭೊಷಡಿ ಮಕ್ಕಳೆ ನನ್ನ ಹಣ ಕೊಡದೆ ನನಗೆ ಕೇಳಲು ಮನೆಗಬಂದಿರಿ ಅಂತ ಅವಾಚ್ಯ ಶಬ್ಧಗಳಿಂದ ಬೈದು ಕೈಯಲ್ಲಿದ್ದ ಮಚ್ಚಿನಿಂದ ನನ್ನ ತಂದೆಯವರ ಎಡಗಲ್ಲದ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ಆಗ ಜಗಳ ಬಿಡಿಸಲು ಹೊದಾಗ ನನಗೂ ಕೂಡ ತಲೆಯ ಹಿಂಬಾಗದಲ್ಲಿ ಅದೆ ಮಚ್ಚಿನಿಂದ ಹೊಡೆದು ರಕ್ತಗಾಯ ಪಡಿಸಿದನು. ನಾನು ಚೀರಾಡುವದನ್ನು ನೋಡಿ ನನ್ನ ಅಣ್ಣ ನಾಗರಾಜ ಈತನು ಬಂದಿದ್ದು ಈತನ ಜೊತೆಗೆ ಕೂಡ ಜಗಳಕ್ಕೆ ಬಿದ್ದು ಹೊಡೆಯಲು ಪ್ರಯತ್ನಿಸಿದಾಗ ನಾವು ಕೂಡ ಬಡಿಗೆ ಮತ್ತು ರಾಡಿನಿಂದ ಹೊಡೆದಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ.ಹುಸೆನ ಬಾಷಾ ತಂದೆ ರಾಜಾಬಾಯಿ ಮುಜಾವರ ಸಾ; ಸರಸಂಬಾ ತಾ: ಆಳಂದ  ರವರು ದಿನಾಂಕ 21-12-2014 ರಂದು ಎಳ್ಳ ಅಮವಾಸೆಯು ಹಬ್ಬದ ಪ್ರಯುಕ್ತ ಸಂಬದಿಕರಾದ ಮಿರಜಾಬಿ ಗಂಡ ಮಹ್ಮದ ರಫಿಕ ಮಾಡ್ಯಾಳೆ. ಲಾಲಭಾಷಾ ತಂದೆ ಇಸ್ಮಾಯಿಲ ಸಾಬ ಮಾಡ್ಯಾಳೆ ರವರಿಗೆ ನನ್ನ ಹೋಲಕ್ಕೆ ಉಟಕ್ಕೆ ಕರೆದು ಕೋಂಡು ಬಂದಿದ್ದು ನಂತರ ನಾನು ಬಳ್ಳೊಳ್ಳಿ ಬಿತ್ತಿದ  ಹೋಲದಲ್ಲಿ ಬೋರ ಮೋಟರ ಚಾಲು ಮಾಡಿ ನಿರು ತುಂಬಿ ಕೋಳ್ಳಲು ನನ್ನ ಸಂಬಂದಿ ಮಿರಜಾಬಿ , ಲಾಲ ಭಾಷಾ ರವರಿಗೆ ಕುಗಿದಾಗ ನೀರಿನ ಹತ್ತಿರ ಬರುತ್ತಿರುವಾಗ ನಮ್ಮ ಅಣತಮ್ಮಕಿಯವರಾದ 1] ದಾವುಲ ತಂದೆ ನಬಿಸಾಬ ಮುಜಾವರ 2] ಸೈಫನ ತಂದೆ ನಬಿಸಾಬ ಮುಜಾವರ 3] ಶಫಿಯಾ ತದೆ ನಬಿಸಾಬ ಮುಜಾವರ ಇವರೆಲ್ಲರು ಕೂಡಿಕೊಂಡು ನನ್ನ ಹೋಲ ಸರ್ವೆನಂ- 111 ನೆದ್ದರಲ್ಲಿ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ  ಬೈದು ಕಪಾಳ ಮೇಲೆ ಬೆನ್ನಿನ ಮೆಲೆ ಹೋಡೆಯುತ್ತಿರುವಾಗ ಅಲ್ಲಿಯೆ ಇದ್ದ ನನ್ನ ಸಂಭಂದಿ ಮಿರಿಜಬಿ ಮಾಡ್ಯಾಳೆ ಇವಳು ಬಿಡಿಸಲು ಬಂದಾಗ ದಾವುಲ ಮಜಾವರ ಇತನು ಮಿರಜಾಬಿ ಇವಳ  ಮೈ ಮೇಲೆ ಹೋಗಿ ಸೀರೆ ಹಿಡಿದು ಜಗ್ಗಿ ಆಕೆಯ ಕಪಾಳದ ಮೇಲೆ ಬೆನ್ನಿನ ಮೇಲೆ ಹೊಡೆದಿದ್ದು ಮತ್ತು ಶಫಿಯಾ ಮುಜಾವರ ಇವಳು ಮಿರಿಜಾಬಿ ಇವಳ ಎಡಗೈ ರಟ್ಟೆಯ ಮೇಲೆ ಹಲ್ಲಿನಿಂದ ಕಚ್ಚಿರುತ್ತಾಳೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಆನಂದ ತಂದೆ ನಿಂಬೆಣ್ಣ ಚಂದನಕೇರಿ ಸಾ|| ವೈಜಾಪೂರ ಇವರು ಊಟ ತರಲು ಮನೆಗೆ ಬರುವಾಗ ಶಾಲೆಯ ಹತ್ತಿರ ದಿನಾಂಕ 21-12-2014 ರಂದು ವ್ಯಕ್ತಿಗಳು ಸುಮಾರು 15 ರಿಂದ 20 ಜನರು ದ್ವೀಚಕ್ರ ವಾಹನದ ಮೇಲೆ ಬಂದು ಅವರು ನಿನ್ನ ಹೆಸರು ಏನು ಆಮೆಲೆ ಜಾತಿ ಯಾವುದು ಎಂದು ಕೇಳಿದಾಗ ನಾನು ಎಸ್.ಸಿ ಹೊಲೆಯ ಎಂದು ಹೇಳಿದಾಗ ನನ್ನನ್ನು ಹೊಲೆಯ ಮಗನೆ ನಿನ್ನ ಜೀವ ತೆಗೆಯುತ್ತೇನೆಂದು ಹಲ್ಲೆ ನಡೆಸಿದರು, ಹಾಗೆಯೇ ಹೊಡೆಯುತ್ತಾ ಊರಿನೊಳಗೆ ಹನುಮಾನ ಮಂದಿರ ಹತ್ತಿರ ಒಯ್ದು ಮತ್ತೆ ಹೊಡೆಯಲಾರಂಭಿಸಿದರು ಅದರಲ್ಲೊಬ್ಬ ನನ್ನನ್ನು ಮರಗಮ್ಮ ದೇವಸ್ಥಾನದ ಕಡೆಗೆ ಹೊಡೆಯುತ್ತಾ ಎಳೆದೊಯ್ದು ದೇವಸ್ಥಾನದ ಹತ್ತಿರ ಕರ್ಕಶವಾಗಿ ಚೀರಾಡುತ್ತಾ ಈ ಹೊಲಗೇರಿಯಲ್ಲಿ ಹೊಡೆದರೆ ಯಾರೆ ಬಂದರು ಅವರನ್ನು ಜೀವಂತ ಸುಡುತ್ತೇವೆಂದು ಚೀರಾಡುತ್ತಾ ನನ್ನನ್ನು ಹೊಡೆಯುವಾಗ ನನ್ನ ಮನೆಯ ಪಕ್ಕದವರಾದ ಶ್ರೀಕಾಂತ ತಂದೆ ಬಾಬುರಾವ ಗಾಯಕವಾಡ ಮತ್ತು ಭೀಮಶಾ ತಂದೆ ಶರಣಪ್ಪ ಹಾದಿಮನಿ ಏನಾಗಿದೆ ಎಂದು ಕೇಳಿದಾಗ ಅವರಿಗೆ ಕೂಡ ಜಾತಿ ನಿಂದನೆಯಿಂದ ಬೈದು ಹೊಡೆದರು ನಮ್ಮ ತಾಯಂದಿರು ಬಿಡಿಸಲು ಬಂದರೆ ಅವರಿಗೂ ಸಹ ಹೊಲೆಯ ರಂಡೇರೆ ಇವರಿಗೆ ಜೀವಂತವಾಗಿ ಕಂಬಾಲ ಹಳ್ಳಿಯಲ್ಲಿ ಸುಟ್ಟಂಗ ಸುಡುತ್ತೇವೆಂದು ಹೊಡೆಯುತ್ತಾ ಎಲ್ಲಾ ಗಲ್ಲಿಗಳಲ್ಲಿ ಚೀರಾಡುತ್ತಿದ್ದರು ಅಷ್ಟರಲ್ಲಿ ನಮ್ಮ ಕೇರಿಯಲ್ಲಿನ ಶಿವಾನಂದ ಸಾಗರ ರವರು ಪೊಲೀಸರಿಗೆ ಮಾಹಿತಿ ತಿಳಿಸಿದರು, ಜಗಳದ ಸಪ್ಪಳ ಕೇಳಿ ಓಡಿ ಹೊರಟವರಲ್ಲಿ ಮೂರು ಜನರನ್ನು ಹಿಡಿದು ಅವರ ಹೆಸರನ್ನು ವಿಚಾರಿಸಲಾಗಿ 01] ಕಿರಣಕುಮಾರ ತಂದೆ ರಾಜಶೇಖರ ಮಲಶೇಟ್ಟಿ ಸಾ|| ದುತ್ತರಗಾಂವ, 02] ಮಲ್ಲಿಕಾರ್ಜುನ ತಂದೆ ಶ್ರೀಮಂತ ಮರಬ ಸಾ|| ಕಡಗಂಚಿ,  03] ಸೂರ್ಯಕಾಂತ ತಂದೆ ಶ್ರೀಮಂತ ಭೇರಜಿ ಸಾ|| ದುತ್ತರಗಾಂವ ಅಂತ ತಿಳಿಸಿದ್ದು  ಆಗ ನಾವೆಲ್ಲ ಸೇರಿ ಅವರನ್ನು ವಿಚಾರಿಸುತ್ತಿದ್ದಾಗ ನಮ್ಮಿಂದ ಕಸಿದುಕೊಂಡು ಕಡಗಂಚಿ ಹಳ್ಳ ಹಿಡಿದು ಓಡಿ ಹೋದರು, ಅವರು ತಂದಿದ್ದ ದ್ವೀಚಕ್ರ ವಾಹನಗಳಾದ ಪ್ಯಾಶನ ಪ್ರೋ ಕೆ.ಎ 32, ಇಎಪ 9581 ಮತ್ತು ಬಜಾಜ ಸಿ.ಟಿ 100 ಎಮ.ಹೆಚ್ 43, ಎಸ್ 1994 ಇವುಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ.  ನಮಗೆ ಜಾತಿ ನಿಂದನೆ ಮಾಡಿ ಅಸಭ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಪುಷ್ಪಾ ಗಂಡ ನಾಗಪ್ಪ ತುಳೇರ ಸಾ:ತುಳೇರಗಲ್ಲಿ, ಸಣ್ಣ ಅಗಸಿ, ಸೇಡಂ ಇವರ ಗಂಡ ನಾಗಪ್ಪ ತಂದೆ ಪ್ರಕಾಶಬಾಬು ತುಳೇರ ಇವರು  ದಿನಾಂಕ:13-12-2014 ರಂದು ಬೆಳಗ್ಗೆ 10-30 ಗಂಟೆ ಸುಮಾರಿಗೆ ನನ್ನ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವದಾಗಿ ಹೇಳಿ ಮನೆಯಿಂದ ಹೋದವರು ಇಲ್ಲಿಯವರೆಗೆ ಹಿಂದಿರುಗಿ ಬಂದಿರುವದಿಲ್ಲ. ನನ್ನ ಗಂಡ ವ್ಯವಸಾಯ ಮಾಡಿಕೊಂಡಿದ್ದು, ಕುಡಿತದ ಚಟ ಹಚ್ಚಿಕೊಂಡಿದ್ದು ಇರುತ್ತದೆ. ನಾವು ನಮ್ಮ ಸಂಭಂದಿಕರು, ನನ್ನ ಗಂಡನ ಸ್ನೇಹತರಲ್ಲಿ ಹಾಗೂ ಎಲ್ಲಾ ಕಡೆ ವಿಚಾರಿಸಿದರು ಸುಳಿವು ಸಿಕ್ಕಿರುವದಿಲ್ಲ. ಕಾರಣ ಕಾಣೆಯಾದ ನನ್ನ ಗಂಡನ್ನು ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.