POLICE BHAVAN KALABURAGI

POLICE BHAVAN KALABURAGI

20 February 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಸುಲೇಪೇಟ ಠಾಣೆ: ಶ್ರೀಹಣಮಂತಪ್ಪಾ ತಂದೆ ಶರಣಪ್ಪಾ ರಿಬ್ಬನಪಳ್ಳಿ ಸಾ|| ಶಿರೋಳ್ಳಿ ರವರು ನನ್ನ ಅಣ್ಣನಾದ ಸಾಬಣ್ಣಾ ತಂದೆ ಶರಣಪ್ಪಾ ರಿಬ್ಬನಪಲ್ಲಿ ಮತ್ತು ಅವನ ಮಗನಾದ ಜಗಪ್ಪಾ ರಿಬ್ಬನಪಲ್ಲಿ ಇಬ್ಬರು ಕೂಡಿಕೊಂಡು ದಿನಾಂಕ 15.02.2012 ರಂದು ರಾತ್ರಿ 10.30 ಸುಮಾರಿಗೆ ನನ್ನ ಮನೆಗೆ ಬಂದು ನಮ್ಮ ಹಳೆಯ ಮನೆ ಖರೀದಿ ತೆಗೆದುಕೊ ಅಂದರ ಯ್ಯಾಕೆ ತೆಗೆದುಕೊಳ್ಳುತ್ತಿಲ್ಲಾ ಅಂತ ಹಳೆಯ ವೈಶಮ್ಯ ದಿಂದ ಜಗಳ ತೆಗದು ಅವಾಚ್ಯ ಶಬ್ದಗಳಿಂದ ಬೈದು ಕೊಡಲಿ ಕಾವಿನಿಂದ ಬಲ ಭುಜದ ಮೇಲೆ ಹೊಡೆದು ಗುಪ್ತಗಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 18/2012 ಕಲಂ. 324,504ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ: ಶ್ರೀ.ಅರುಣಕುಮಾರ ತಂದೆ ಕುಪೇಂದ್ರ ಚೇಂಗಟಾ ಸಾ: ಕಮಲಾಪೂರ ತಾ||ಜಿ|| ಗುಲಬರ್ಗಾರವರು ನನ್ನ ತಾಯಿಯ ತಾಯಿ ಅಂದರೆ ಅಜ್ಜಿ ಪಾರ್ವತಿಬಾಯಿ ಗಂಡ ಶಂಕರರಾವ ಕೋನಪ್ಪ ವ: 72 ವರ್ಷ ಸಾ;ಹೆಬ್ಬಾಳ ತಾ:ಚಿತ್ತಾಪೂರ ಇವರು ತನ್ನ ಮೈಯಲ್ಲಿ ಆರಾಮ ಇಲ್ಲದ್ದರಿಂದ ನಮ್ಮ ಹತ್ತಿರ ಕಮಲಾಪೂರದಲ್ಲಿ ಬಂದು ಉಳಿದುಕೊಂಡಿದ್ದು, ಅವಳಿಗೆ ಹೆಚ್ಚಿಗೆ ಆರಾಮ ತಪ್ಪಿ ಮಾನಸಿಕ ಅಸ್ವಸ್ಥಳಾಗಿದ್ದು, ಆಗಾಗ ಚಿರಾಡುವುದು, ಮನೆ ಬಿಟ್ಟು ಹೋಗುವುದು ಮಾಡುತ್ತಿರುತ್ತಾಳೆ. ದಿನಾಂಕ: 19/02/2012 ರಂದು ಸಹ ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನಮ್ಮ ಅಜ್ಜಿ ಪಾರ್ವತಿಬಾಯಿ ಇವಳು ಇದ್ದಕ್ಕಿದ್ದಂತೆಯೇ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೋಗಿದ್ದಾಳೆ, ನಾನು ಮತ್ತು ನನ್ನ ಪರಿಚಯದವರಾದ ಕನ್ನಪ್ಪ ಕೋರೆ ಕೂಡಿಕೊಂಡು ಕಮಲಾಪೂರ ಬಸ್ ನಿಲ್ದಾಣದ ಹತ್ತಿರ ಬಂದಾಗ ಪೆಟ್ರೊಲ ಪಂಪ ಹತ್ತಿರ ಯಾರಿಗೋ ರಸ್ತೆ ಅಪಘಾತವಾಗಿದ್ದು, ಅಂತಾ ಜನರು ಮಾತನಾಡುತ್ತಿರುವುದನ್ನು ಕೇಳಿ ಹೋಗಿ ನಾನು ನೋಡಲು ನಮ್ಮ ಅಜ್ಜಿ ಪಾರ್ವತಿಬಾಯಿಯೇ ಇದ್ದು, ಅವಳ ಬಲ ಹಣೆಗೆ, ಎಡ ಕಪಾಳಕ್ಕೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಮೈ ಕೈ ಗಳಿಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 16/2012 ಕಲಂ 279.304 [ಎ] ಐಪಿಸಿ ಸಂಗಡ 187 ಐಎಂವ್ಹಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.