POLICE BHAVAN KALABURAGI

POLICE BHAVAN KALABURAGI

04 May 2012

GULBARGA DIST REPORTED CRIME


ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಮಲ್ಲಿನಾಥ ತಂದೆ ನೀಲಪ್ಪ ತಡಕಲ್  ಸಾ|| ಎಮ್.ಎಸ್.ಐ ಕಾಲೇಜ ಅಂಟೆಂಡರ್ ಕ್ವಾರ್ಟರ್ಸ ಗುಲಬರ್ಗಾ ರವರು ನಾನು ದಿನಾಂಕ 01.05.2012 ರಂದು ಬೆಳಿಗ್ಗೆ ಮನೆಗೆ ಕೀಲಿ ಹಾಕಿಕೊಂಡು ಖಾಸಗಿ ಕೆಲಸದ ನಿಮಿತ್ಯ ಊರಿಗೆ ಹೋಗಿದ್ದು ದಿನಾಂಕ:02.05.2012 ರಂದು ಬೆಳಿಗ್ಗೆ 6-20 ಗಂಟೆಗೆ ಸುಮಾರಿಗೆ ನಮ್ಮ ಮನೆಯ ಪಕ್ಕದವರು ನನಗೆ  ಫೊನ ಮುಖಾಂತರ ತಿಳಿಸಿದ್ದೆನೆಂದರೆ,  ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರೂ ನಿಮ್ಮ  ಮನೆಯ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರಬಹುದು ಅಂತಾ ತಿಳಿಸಿದ್ದರಿಂದ ನಾನು ದಿನಾಂಕ:04.05.2012 ರಂದು ಬೆಳಗ್ಗೆ ಬಂದು ನೋಡಲಾಗಿ ಮನೆಯಲ್ಲಿಟ್ಟಿದ್ದ ಸಣ್ಣ ಕಲರ ಟಿವಿ, ಎಲ್.ಸಿ.ಡಿ, ಕ್ಯಾಮರಾ ಮತ್ತು  ನಗದು ಹಣ 10800/- ರೂ  ಹೀಗೆ ಒಟ್ಟು ಅಕಿ||23600/-ರೂ ಮೌಲ್ಯದ್ದು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 61/12 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

GULBARGA DIST REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಶಿವಶಂಕ್ರಯ್ಯ ತಂದೆ ಭೀಮಶ್ಯಾ ಪೊಲೀಸ್ ಪಾಟೀಲ ಸಾ: ಶಹಾಬಜಾರ ಶೇಖ ರೋಜಾ ಗುಲಬರ್ಗಾರವರು  ನಾನು ದಿ:03/05/2012 ರಂದು ಮಧ್ಯಾಹ್ನ 3:30 ಪಿಎಮ ಸುಮಾರಿಗೆ ಮೋಟಾರ ಸೈಕಲ ನಂ ಕೆಎ 32 ಕೆ 4852 ನೇದ್ದರ ಮೇಲೆ ಸುಂಟನೂರಕ್ಕೆ ಗ್ರಾಮಕ್ಕೆ ಹೋಗಿ ಮರಳಿ ಗುಲ್ಬರ್ಗಾಕ್ಕೆ ಕೆರೆಬೋಸಗಾ ಮಾರ್ಗವಾಗಿ ಬರುತ್ತಿರುವಾಗ ಟ್ರ್ಯಾಕ್ಟ್‌‌‌‌‌ರ ನಂಬರ ಕೆಎ 32 ಟಿ-5792 -5793 ನೇದ್ದರ ಚಾಲಕ ತನ್ನ  ಟ್ರ್ಯಾಕ್ಟ್‌‌ರ ನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು  ಡಿಕ್ಕಿ ಪಡಿಸಿ ಟ್ರಾಕ್ಟರ ಅಲ್ಲೇ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 133/2012 ಕಲಂ 279 337, ಐಪಿಸಿ ಸಂ/ 187 ಐಎಂವಿ ಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಕಲ್ಯಾಣಿ ತಂದೆ ಸಿದ್ದಪ್ಪ ಪೂಜಾರಿ ಸಾ:ಶಿವಾಜಿ ನಗರ ಗುಲಬರ್ಗಾರವರು ನಾನು ದಿನಾಂಕ: 3/5/12 ರಂದು ಸಾಯಂಕಾಲ 5:30 ಪಿಎಮ ಸುಮಾರಿಗೆ ಕಮಲಾಪೂರದಿಂದ ಗುಲಬರ್ಗಾಕ್ಕೆ ಸ್ವಾಮಿ ಸರ್ಮಥ ಗುಡ್ಡದ ಹತ್ತಿರದ ರಸ್ತೆಯಲ್ಲಿ ಬರುವಾಗ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ 29 ಕೆ 4830 ನೇದ್ದರ ಸವಾರ ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಪಡೆಸಿ ರಕ್ತಗಾಯ ಪಡಿಸಿರುತ್ತಾನೆ ಮತ್ತು ಆತನಿಗೆ ಭಾರಿ ರಕ್ತಗಾಯ & ಗುಪ್ತಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 134/2012 ಕಲಂ 279 337 338 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.