POLICE BHAVAN KALABURAGI

POLICE BHAVAN KALABURAGI

09 April 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ದಿನಾಂಕ 08/04/2015 ರಂದು ಪ್ರಕರಣದಲ್ಲಿ ಮೃತನಾದ ರಾಜಕುಮಾರ ಈತನು ತನ್ನ ಟಂ ಟಂ ಆಟೋ ನಂ. ಏಂ 32 - ಅ 1807 ನೇದ್ದರಲ್ಲಿ ಕಲಬುರಗಿಯಿಂದ ಬೀದರಕ್ಕೆ ಕರ್ಲ ಆನ್ ಗಾದಿಗಳ ಬಾಡಿಗೆಯನ್ನು ತೆಗೆದುಕೊಂಡು ಹೋಗಿ, ಮರಳಿ ಕಲಬುರಗಿಗೆ ಬರುವಾಗ, ರಾತ್ರಿ 00:30 ಗಂಟೆ ಸುಮಾರಿಗೆ ಕಮಲಾಪೂರ ದಾಟಿ ಪೆಟ್ರೋಲ್ ಬಂಕಿನ ಮುಂದೆ ಇರುವ ಈಳಿಗೇರ ಹೊಡ್ಡಿನ ಹತ್ತಿರ ಎದುರುಗಡೆಯಿಂದ ಯಾವುದೊ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಆಲಕ್ಷತನದಿಂದ ನಡೆಸಿ ಅಪಘಾತ ಪಡಿಸಿದಕ್ಕೆ, ರಾಜಕುಮಾರ ಕೋರಿ ಈತನು ಭಾರಿ ಗಾಯಗೊಂಡು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ಕರೂಣಾಬಾಯಿ ಗಂಡ ರಾಜಕುಮಾರ ಕೋರಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಹ್ಮದ ಬದ್ರೋದ್ದೀನ ತಂದೆ ಸಯ್ಯದ ಇಮಾಮ ಸಾ: ಖಾಜಾ ಕಾಲೋನಿ ಕಲಬುರಗಿ ರವರು ದಿನಾಂಕ 09-04-2015 ರಂದು ಮದ್ಯಾಹ್ನ 12-45 ಗಂಟೆ ಸುಮಾರಿಗೆ ತನ್ನ ಮೋ/ಸೈಕಲ ನಂಬರ ಕೆಎ-32 ವಾಯಿ-1662 ನೇದ್ದನ್ನು ಎಸ್.ವಿ.ಪಿ ಸರ್ಕಲ ದಿಂದ ಜಗತ ಸರ್ಕಲ ಕಡೆಗೆ ಹೋಗುವಾಗ  ಗೋಲ್ಡ ಹಬ್ಬ ಎದುರಿನ ರೋಡ ಮೇಲೆ ಕಾರ ನಂಬರ ಕೆಎ-32 ಎನ್-919 ರ ಚಾಲಕನು ಜಗತ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಒಮ್ಮಲೇ ಅಲಕ್ಷತನದಿಂದ ರಿವರ್ಸ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೊಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಕುತ್ತಿಗೆ ಹಿಂದಿನ ಭಾಗದಲ್ಲಿ ಭಾರಿಪೆಟ್ಟು, ಬಲ ಮುಂಗೈಯಿಂದ ರಿಸ್ಟವರಿಗೆ, ಎಡ ಮುಂಗೈಯಿಂದ ರಿಸ್ಟವರಿಗೆ ಗುಪ್ತಪೆಟ್ಟು ಮಾಡಿ ಕಾರ ಸಮೇತ ಚಾಲಕನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.