POLICE BHAVAN KALABURAGI

POLICE BHAVAN KALABURAGI

06 September 2016

Kalaburagi District Reported Crimes

ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ಪ್ರಭಾರಿ ಆರೋಗ್ಯ ನಿರೀಕ್ಷಕರು ಮಹಾನಗರ ಪಾಲಿಕೆ ಕಲಬುರಗಿ ಇವರು ದಿನಾಂಕ:04/09/2016 ರಂದು ಶ್ರೀ ಬಾಬುರಾವ ಪರಿಸರ ಅಭಿಯಂತರರು ವಾಟ್ಸ ಆಪ್‌‌‌ ಮುಖಾಂತರ ನೀಡಿರುವ ಆದೇಶದಂತೆ ದಿನಾಂಕ:05/09/2016 ರಂದು ಬೆಳಗ್ಗೆ 12.30 ಗಂಟೆಗೆ ನಗರದ ವಾರ್ಡ ನಂ.37 ರಲ್ಲಿ ಎಂ.ಎಸ್‌‌.ಕೆ.ಮೀಲ್‌ ಖದೀರ ಚೌಕ ರಸ್ತೆಯಲ್ಲಿರುವ ಅಂಗಡಿಗಳಲ್ಲಿ ನಾನು ಮತ್ತು ಬಸವರಾಜ ಪ್ರಭಾರಿ ಆರೋಗ್ಯ ನಿರೀಕ್ಷಕರು ಕಲಬುರಗಿ ಮಹಾನಗರ ಪಾಲಿಕೆ ಹಾಗೂ ನನ್ನ ಸಿಬ್ಬಂದಿಯವರೊಂದಿಗೆ ಕಾನೂನು ಬಾಹಿರವಾಗಿ ಪ್ಲಾಸ್ಟಿಕ ಮಾರಾಟ ಮಾಡುತ್ತಿರುವ ಅಂಗಡಿಗಳಲ್ಲಿನ ಪ್ಲಾಸ್ಟೀಕ ಜಪ್ತಿ ಮಾಡುತ್ತಿರುವಾಗ ಜಲೀಲ ಕ್ಲಾಥ್‌ ಸ್ಟೋರ ಹಾಗೂ ನೂರ ಫೂಟ್‌‌ವೇರ ಅಂಗಡಿಯ ಮಾಲಿಕರು ನನಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದರು. ಹಾಗೂ ಇವರ ಜೊತೆಗೆ ಸ್ಥಳದಲ್ಲಿಯೇ ಇದ್ದ 5-6 ಜನ ಸೇರಿ ನನ್ನ ಮೇಲೆ ಮರಣಾಂತಿಕ ಹಲ್ಲೆ ಮಾಡಿರುತ್ತಾರೆ. ಈ ಹಲ್ಲೆಯಿಂದಾಗಿ ನನಗೆ ನನ್ನ ಕುತ್ತಿಗೆಗೆ ಹಾಗೂ ಎಡ ಕೈಗಳ ಮೇಲೆ ರಕ್ತಗಾಯವಾಗಿರುತ್ತದೆ. ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಕುನಾರಿ ವಿದ್ಯಾವತಿ ತಂದೆ ಚಂದಪ್ಪಾ ಪಟ್ಟೇದಾರ ಸಾ: ಅವರಾದ (ಕೆ) ತಾ: ಕಲಬುರಗಿ  ಇವರಿಗೆ  ಸುಮಾರು 3 ವರ್ಷಗಳ ಹಿಂದೆ ಜೇವರ್ಗಿ ತಾಲ್ಲೂಕಿನ ಮದರಿ ಗ್ರಾಮದ ಶಿವು ತಂದೆ ಬಸವರಾಜ ಬುಕ್ಕನವರ ಈತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ನಾನು ನನ್ನ ಗಂಡನ ಮನೆಯಲ್ಲಿ 15 ದಿನಗಳವರೆಗೆ ಇದ್ದು ಮರಳಿ ತವರು ಮನೆಗೆ ಬಂದು ನನ್ನ ತವರು ಮನೆಯಲ್ಲಿಯೇ ಉಳಿದುಕೊಂಡೇನು. ನಾವು ಆರ್ಥಿಕವಾಗಿ ಬಹಳ ಬಡವರಾಗಿದ್ದರಿಂದ ಸುಮಾರು 5-6 ವರ್ಷಗಳಿಂದ ನಮ್ಮೂರಿನ ಶಂಕರ ತಂದೆ ಕುಪೇಂದ್ರ ಸಾಹು ರವರ ಹೊಲದಲ್ಲಿ  ಕೂಲಿ ಕೆಲಸ ಮಾಡುತ್ತಾ ಬಂದಿರುತ್ತೇನೆ.  ಹೀಗೆ ನಾನು ಕೂಲಿ ಕೆಲಸ ಮಾಡುತ್ತಿರುವಾಗ 4 ವರ್ಷಗಳಿಂದ  ಸದರಿ ಶಂಕರ ಈತನು ನನ್ನನ್ನು ಮದುವೆಯಾಗುವದಾಗಿ ತಿಳೀಸಿದನು ಅದಕ್ಕೆ ನಾನು ಪರಿಶಿಷ್ಟ್ ಜಾತಿಗೆ ಸೇರಿದ್ದೇನೆ  ನೀವು ಲಿಂಗಾಯತ ಜಾತಿಗೆ ಸೇರಿದ್ದಿರಿ ನಮಿಬ್ಬರ ಮದುವೆ ಸಾದ್ಯವಿಲ್ಲ ಎಂದು ಹೇಳಿರುತ್ತೆನೆ. ಅದಕ್ಕೆ ಅವನು ನನಗೆ ಯಾವುದೇ ಜಾತಿ ಬೇದ ಇಲ್ಲ ನಾನು ನಿನಗೆ ಮದುವೆಯಾಗತ್ತೇನೆ ಅಂತಾ ಹೇಳಿದನು. ನಂತರ ಒಂದು ದಿವಸ ನಾನು ಅವರ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ನನಗೆ ಶಂಕರ ಈತನು ನಿನಗೆ ಬಿಟ್ಟು ಇರಲು ಆಗುತ್ತಿಲ್ಲ ನನ್ನನ್ನು ನಂಬಿ ಎಂದು ಪರಿಪರಿಯಾಗಿ ಬೇಡಿಕೊಂಡನು. ಅದೇ ಸಮಯದಲ್ಲಿ ಹೊಲದಲ್ಲಿ ಯಾರು ಇಲ್ಲದನ್ನು ನೋಡಿ ನಾನು ಬೇಡ ಅಂತಾ ಅಂದರು ಸಹಿತ ಒತ್ತಾಯಪೂರ್ವಕವಾಗಿ ನನ್ನ ಮೇಲೆ ಲೈಂಗಿಕ ಅತ್ಯಾಚಾರ ವೇಸಗಿರುತ್ತಾನೆ. ಇದೇ ರೀತಿ ನಾನು ಅವರ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ನಾನು ನಿನಗೆ ಮದುವೆಯಾಗುತ್ತೇನೆ ಅಂತಾ ನಂಬಿಸಿ ನನ್ನ ಮೇಲೆ ಲೈಂಗಿಕವಾಗಿ ಬಲತ್ಕಾರ ಮಾಡುತ್ತಾ ಬಂದಿರುತ್ತಾನೆ. ನಾನು ಶಂಕರನಿಗೆ ಎಷ್ಟು ದಿನ ಹೀಗೆ ಇರೋಣ ಮದುವೆ ಆಗೋಣ ಅಂತಾ ಕೇಳಿದಾಗ ಆತನು ಇಂದು ನಾಳೆ ಅನ್ನುತ್ತಾ ಮುಂದಕ್ಕೆ ಹಾಕುತ್ತಾ ಬಂದಿರುತ್ತಾನೆ. ಈಗ ಸುಮಾರು 3 ತಿಂಗಳ ಹಿಂದೆ ಅಂದರೆ ದಿನಾಂಕ: 10/06/2016 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನನಗೆ ಯಾರು ಇಲ್ಲದ ಸಮಯದಲ್ಲಿ ತನ್ನ ಮನೆಗೆ ಕರೆಯಿಸಿ ಇನ್ನೂ 8 ದಿನಗಳಲ್ಲಿ ಮದುವೆಯಾಗುವದಾಗಿ ನಂಬಿಸಿ ಒತ್ತಾಯ ಪೂರ್ವಕವಾಗಿ ನನ್ನ ಮೇಲೆ  ಜಬರಿ ಸಂಭೋಗ ಮಾಡಿರುತ್ತಾನೆ. ಅದರ ಪರಿಣಾಮವಾಗಿ ನಾನು ಈಗ 3 ತಿಂಗಳ ಗರ್ಭಿಣಿ ಆಗಿರುತ್ತೆನೆ .  ನಂತರ ಅವನಿಗೆ ನಾನು ಈಗ ಗರ್ಭಿಣಿ ಯಾಗಿದ್ದೇನೆ ಮದುವೆ ಮಾಡಿಕೊ ಅಂತಾ ಹೇಳಿದಾಗ  ಅವನು ನನಗೆ ನಾನು ಲಿಂಗಾಯತ ಸಮಾಜದವನಿದ್ದು ನನಗೆ ಸಮಾಜದಲ್ಲಿ ಗೌರವ ಇದೇ  ನೀನು ಹೊಲೇಯ ಜಾತಿಗೆ ಸೇರಿದ್ದಿ ನಾನು ನಿನಗೆ ಮದುವೆ ಆಗುವದಿಲ್ಲಾ ಅಂತಾ ನಿರಾಕರಿಸಿರುತ್ತಾನೆ. ಇದಕ್ಕೆ ಶಂಕರನ ಅಣ್ಣನಾದ ಮಲ್ಲಿಕಾರ್ಜುನ ತಂದೆ ಕುಪೇಂದ್ರ ಸಾಹು, ಶರಣಗೌಡ ತಂದೆ ಕುಪೇಂದ್ರ  ಸಾಹು ಮತ್ತು ಶರಣಮ್ಮ ಗಂಡ ದಿ: ಕುಪೇಂದ್ರ ಸಾಹು ರವರು ಇದಕ್ಕೆ ಪ್ರಚೋದನೆ ನೀಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.