POLICE BHAVAN KALABURAGI

POLICE BHAVAN KALABURAGI

01 April 2012

GULBARGA DIST REPORTED CRIMES

ಕೊಲೆಗೆ ಪ್ರಯತ್ನ:

ಮುಧೋಳ ಪೊಲೀಸ್ ಠಾಣೆ: ಶ್ರೀ ರುಮ್ಯಾನಾಯಕ ತಂದೆ ಜೆಗನ್ಯಾನಾಯಕ ಚವ್ಹಾಣ ಸಾ|| ಅಲ್ಲಿಪೂರ ತಾಂಡಾ ತಾ|| ಸೇಡಂ ರವರು ನನಗೆ ರವಿನಾಯಕ ಅಂತಾ ಮಗನಿದ್ದು ಈತನಿಗೆ ಸೇಣಿಬಾಯಿ ಎಂಬುವವಳೊದಿಗೆ 8-10 ವರ್ಷಗಳ ಹಿಂದೆ ಮದುವೆ ಮಾಡಿದ್ದು ಇವರಿಗೆ 3 ಜನ ಹೆಣ್ಣುಮಕ್ಕಳು ಒಂದು ಗಂಡು ಮಗು ಇರುತ್ತದೆ. ನನ್ನ ಮಗ ರವಿನಾಯಕ ಈತನು ಪುನಾಕ್ಕೆ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ನಾನು ಸೊಸೆಯಾದ ಸೇಣಿಬಾಯಿ ಹಾಗೂ ಮೊಮ್ಮಕ್ಕಳು ಇಂದು ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ನನ್ನ ಸೊಸೆ ಸೇಣಿಬಾಯಿ ಇವಳು ತನ್ನ ಕಿರಿಯ ಮಗಳಾದ ಸುಮಿತ್ರಾ 8 ತಿಂಗಳ ಹುಡುಗಿಗೆ ತೊಗರಿ ಬೆಳೆಗೆ ಹೊಡೆಯುವ ಔಷಧಿ ಕುಡಿಸಿ ಕೊಲೆ ಮಾಡಲು ಪ್ರಯತ್ನಿಸಿ, ತಾನು ಸಹ ಅದೇ ಔಷಧಿ ಕುಡಿದು ಸಾಯಲು ಪ್ರಯತ್ನಿಸಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:ನಂ. 32/2012 ಕಲಂ: 307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ದಿನಾಂಕ 31-03-12 ರಂದು ಸಾಯಂಕಾಲ ಉದನೂರ ರೋಡ ಕ್ರಾಸ್ ಹತ್ತಿರ ರಸ್ತೆ ಅಪಘಾತವಾಗಿದೆ ಅಂತಾ ಗೊತ್ತಾಗಿ ಹೋಗಿ ವಿಚಾರಿಸಲು ಶಂಕರ ಚವ್ವಾಣ ಇವರು ದಿನಾಂಕ:30-03-2012 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ಆರ್.ಪಿ.ಸರ್ಕಲ್ ದಿಂದ ರಾಮ ಮಂದಿರ ರೋಡಿನಲ್ಲಿ ಬರುವ ಉದನೂರು ಕ್ರಾಸ್ ಹತ್ತಿರ ಕಾರ ನಂ:ಕೆಎ 32 ಬಿ 1028 ನೇದ್ದರ ಚಾಲಕ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಕ್ರಾಸ್ ಮಾಡುತ್ತಿದ್ದ ನನ್ನ ಮೋ ಟಾರ ಸೈಕಲ್ ನಂ: ಕೆಎ 32 ಜೆ 5367 ನೇದ್ದಕ್ಕೆ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ಹೇಳಿದ್ದರಿಂದ ಶ್ರೀ ಶಂಕರ ತಂದೆ ಪಾಂಡು ಚವ್ವಾಣ ಸಾ: ಪ್ಲಾಟ ನಂ: 70 ಸಂತೋಷ ಕಾಲೋನಿ ಉದನೂರ ರೋಡ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 40/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಗ್ರಾಮೀಣ ಪೊಲೀಸ್ ಠಾಣೆ ಶ್ರೀಸಾಗರ ತಂದೆ ನಾಗಶೆಟ್ಟಿ ಮೂಲಗೆ ಸಾ: ರಾಮನಗರ ಕೇಂದ್ರ ಅಬಕಾರಿ ಕಚೇರಿಯ ಎದರುಗಡೆ ಗುಲಬರ್ಗಾರವರು ನಾನು ಮತ್ತು ನನ್ನ ಗೆಳೆಯರಿಬ್ಬರು ನಮ್ಮ ಓಣಿಯ ಸಣ್ಣ ಹುಡಗನಿಗೆ ದಿನಾಂಕ 30/3/2012 ರಂದು 5 ಗಂಟೆಯ ಸುಮಾರಿಗೆ ಹೊಡೆದಿದ್ದು, ದಿನಾಂಕ:31/3/2012 ರಂದು ಮಧ್ಯಾಹ್ನ 1:45 ಪಿಎಮ ಸುಮಾರಿಗೆ ಹುಡಗನ ಕಡೆಯವರಾದ ರಜನಿ ಕಪನೂರ,ಅನಿಲ ಕಪನೂರ,ಪಾಡು ಕಪನೂರ, ಮಂಜು ಕಪನೂರ, ಸಿದ್ದಾರೋಡ ಕಪನೂರ, ಶೇಖರ ಕಪನೂರ, ಕಾರ್ತಿಕ ಕಪನೂರ,ರವಿ ರಾಮ ನಗರ,ಮೌನೇಶ ರಾಮ ನಗರ ಎಲ್ಲರೂ ಬಂದು ನಮ್ಮ ಓಣಿಯ ಹುಡಗನಿಗೆ ನಿನ್ನೆ ಏಕೆ ಹೊಡೆ ದಿದ್ದಿರೀ ಮಕ್ಕಳೇ ಎಂದು ಗುಂಪು ಕಟ್ಟಿ ಕೊಂಡು ಬಂದು ಬಿಡಿಗೆಯಿಂದ ಬಾಟಲಿಯಿಂದ ಸ್ಟ್ಯಾಂಪ್ ಗಳಿಂದ ಹೊಡೆದು ಗಾಯಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 99/2012 ಕಲಂ 143 147 148 504 323 324 506 ಸಂ/ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ:ದೇವಿದಾಸ ತಂದೆ ಗೇಮು ರಾಠೋಡ ಸಾ|| ಮರಮಂಚಿ ತಾಂಡಾ ತಾ|| ಜಿ|| ಗುಲಬರ್ಗಾ ರವರು ನಾನು ದಿನಾಂಕ: 27/03/2012 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನಮ್ಮ ಹೊಲಕ್ಕೆ ಹೋಗಿ ಲಕ್ಷ್ಮೀ ದೇವರ ಗುಡಿಯಲ್ಲಿ ದೀಪ ಹಚ್ಚಿ ಮರಳಿ ನಮ್ಮ ಮನೆಯ ಕಡೆಗೆ ಬರುತ್ತಿದ್ದಾಗ ಬಾಬು ತಂದೆ ಮನ್ನು ರಾಠೋಡ ಇತರೆಲ್ಲರೂ ಕೂಡಿಕೊಂಡು ಬಂದವರೇ, ನಮ್ಮ ಮನೆ ಕಟ್ಟುವವರೆಗೆ ನಮ್ಮ ಕಲ್ಲುಗಳನ್ನು ನಿಮ್ಮ ಪ್ಲಾಟಿನಲ್ಲಿ ಹಾಕಿದ್ದಕ್ಕೆ ತಕರಾರು ಮಾಡುತ್ತಿ ಮಗನೇ ನೀನು ಈ ಊರಲ್ಲಿ ಹೇಗೆ ಬಾಳುತ್ತಿ ನಾವು ನೋಡುತ್ತೇವೆ ಅಂತಾ ಅವಾಚ್ಯವಾಗಿ ಬೈದು ಬೈಯುತ್ತಿದ್ದಾಗ, ನಮ್ಮ ಪ್ಲಾಟದಲ್ಲಿ ಹಾಕಿದ ಕಲ್ಲುಗಳನ್ನು ತೆಗೆಯಿರಿ ಅಂತಾ ಹೇಳಿದ್ದು ತಪ್ಪಾ ಅಂತಾ ಕೇಳುತ್ತಿದ್ದಾಗ ಜಯರಾಮ ರಾಠೋಡ, ಶಂಕರ ರಾಠೋಡ, ಬಾಬು ರಾಠೋಡ, ಗಣಪತಿ ರಾಠೋಡ ಎಲ್ಲರೂ ಕೂಡಿಕೊಂಡು ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:35/2012 ಕಲಂ 341, 323, 324, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.