POLICE BHAVAN KALABURAGI

23 April 2012
GULBARGA DIST
GULBARGA DIST
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಪಾರ್ವತಿ ಗಂಡ ದೇವಿಂದ್ರಪ್ಪ ರಾಮಕೋಟಿ ವ: 48 ವರ್ಷ ಸಾ: ಶರಣಸಿರಸಗಿ ತಾ: ಜಿ: ಗುಲಬರ್ಗಾ ರವರು ನಾನು ಮತ್ತು ನನ್ನ ತಾಯಿ ದಿ: 21-04-2012 ರಂದು ಮಧ್ಯಾಹ್ನ 1-30 ಗಂಟೆಗೆ ಸುಮಾರಿಗೆ ಇಬ್ಬರೂ ಕೂಡಿಕೊಂಡು ಅಮವಾಸ್ಯೆ ಇರುವ ಪ್ರಯುಕ್ತ ರಾಣಜೀಪೇರ ದರ್ಗಾಕ್ಕೆ ಹೋಗುವ ಕುರಿತು ದರ್ಗಾದ ಕ್ರಾಸ ಹತ್ತಿರ ನಿಂತಾಗ ಆಳಂದ ರಸ್ತೆಯ ಕಡೆಯಿಂದ ಮೋಟಾರ ಸೈಕಲ ನಂ ಕೆಎ 32 ವಾಯ-4824 ನೇದ್ದರ ಸವಾರನು ತನ್ನ ಮೋಟಾರ ಸೈಕಲ ನೇದ್ದನ್ನು ವೇಗದಿಂದ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಈ ಮೊದಲು ದೂರು ಸಲ್ಲಿಸಿದ್ದರು, ನಂತರ ದಿನಾಂಕ 22/4/2012 ರಂದು ಮಧ್ಯಾಹ್ನ 3.15 ಪಿಎಮ ಸುಮಾರಿಗೆ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೇ ಅಶ್ವೀನಿ ಆಸ್ಪತ್ರೆಯಲ್ಲಿ ಸುಗಲಭಾಯಿ ಯವರು ಮೃತಪಟ್ಟಿರುತ್ತಾಳೆ ಅಂತಾ ಮೃತಳ ಮಗ ಮಲ್ಲಿಕಾರ್ಜುನ ರವರ ಹೇಳಿಕೆ ಮೇಲಿಂದ ಕಲಂ 304 (ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.