POLICE BHAVAN KALABURAGI

POLICE BHAVAN KALABURAGI

27 September 2012

GULBARGA DISTRICT REPORTED CRIME


ನಕಲಿ ದಾಖಲೆ ಸಲ್ಲಿಸಿ ಪಾಸಪೋರ್ಟ ಪಡೆಯುತ್ತಿದ್ದ ಆರೋಪಿತರ ಬಗ್ಗೆ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ರೇಶ್ಮಾ ಗಂಡ ಮಹ್ಮದ ರಫೀಕ ವ|| 32 ವರ್ಷ, ಸಾ|| ನಬಿ ಮೊಹಲ್ಲಾ ಎಮ್.ಎಸ್.ಕೆ ಮಿಲ್ ಗುಲಬರ್ಗಾ ಇವರು ವಿದೇಶಕ್ಕೆ ಹೋಗುವ ಕುರಿತು ಪಾಸಪೋರ್ಟ ಸಲುವಾಗಿ ಅರ್ಜಿ ಸಂಖ್ಯೆ 4272/12 ದಿನಾಂಕ 30-04-2012 ರಂದು ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿದಾರಳು ತಮ್ಮ ದಾಖಲಾತಿಗಳೊಂದಿಗೆ ಠಾಣೆಗೆ ದಿನಾಂಕ 01-06-2012 ರಂದು ಇಬ್ಬರು ಸಾಕ್ಷಿದಾರರೊಂದಿಗೆ ಠಾಣೆಗೆ ದಾಖಲಾತಿಗಳನ್ನು ಸಲ್ಲಿಸಿದ್ದು, ಹಾಗು ಇಬ್ಬರ ಸಾಕ್ಷಿ ಜನರ ಹೇಳಿಕೆ ಆಧಾರದ ಮೇಲೆ ಸದರಿಯವರ ಗುಣ ನಡತೆ ಹಾಗು ದಾಖಲಾತಿಗಳು ಸರಿಯಿದ್ದ ಬಗ್ಗೆ ವರದಿ ಸಲ್ಲಿಸಿದ್ದು ಇರುತ್ತದೆ. ನಂತರ ಅವರ ಬಗ್ಗೆ ಕೂಲಂಕೂಶವಾಗಿ ವಿಚಾರಣೆ ಮಾಡಿದ ನಂತರ ರೇಷ್ಮಾ ಇವಳು ನಕಲಿ ದಾಖಲಾತಿಗಳು ಸೃಷ್ಟಿಸಿ ಪಾಸಪೋರ್ಟ ಕುರಿತು ಅರ್ಜಿ ಸಲ್ಲಿಸಿದ್ದು, ಮತ್ತೆ ಮೂಲ ದಾಖಲಾತಿಗಳೊಂದಿಗೆ ಠಾಣೆಗೆ ಹಾಜರಾಗಲು ತಿಳಿಸಿದ ಮೇರೆಗೆ, ರೇಷ್ಮಾ ಇವಳನ್ನು ವಿಚಾರಿಸಲು ಸದರಿ ಪಾಸಪೋರ್ಟನ್ನು ಫರ್ಜಾನ ಬೇಗಂ ಹಾಗು ಅವಳ ಗಂಡ ಮತ್ತು ಗಫೂರ ಪಟೇಲ್ ಎಂಬುವವರು ತನ್ನ ಕಡೆಯಿಂದ ಹಣ ತೆಗೆದುಕೊಂಡು ನಕಲಿ ದಾಖಲಾತಿ ಸೃಷ್ಟಿಸಿ ಪಾಸಪೋರ್ಟ ಕೊಡಿಸಿದ್ದು ಇರುತ್ತದೆ ಅಂತ ತಿಳಿಸಿರುತ್ತಾಳೆ.ಸದರಿಯವಳು ಈ ಮುಂಚೆ ಹಾಜರುಪಡಿಸಿದ್ದ ರೇಷನ ಕಾರ್ಡ ನಂ 415669 ನೇದ್ದನ್ನು ಪರಿಶೀಲಿಸಲು ಸದರಿ ರೇಷನ ಕಾರ್ಡ ತಿದ್ದುಪಡಿ ಮಾಡಿದ್ದರ ಬಗ್ಗೆ ವಿಚಾರಿಸಲು ಆತನ ಹೆಸರು ಸಮೀರ ಅಂತ ಇದ್ದು, ಅವನು ಪೇಂಟರ್ ಕೆಲಸ ಮಾಡಿಕೊಂಡಿರುತ್ತಾನೆ ಅವನಿಗೂ  ಮತ್ತು ನನಗೆ ಯಾವ ಸಂಬಂಧ ಇರುವದಿಲ್ಲಾ ಅಂತ ತಿಳಿಸಿರುತ್ತಾಳೆ. ಕಾರಣ ರೇಷನ ಕಾರ್ಡ ಪರಿಶೀಲನೆ ಕುರಿತು ಮಾನ್ಯ ಸಹಾಯಕ ನಿರ್ದೇಶಕರು ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಗುಲಬರ್ಗಾ ರವರಿಗೆ ರೇಷನ ಕಾರ್ಡ ಸಂಖ್ಯೆ 415669 ನೇದ್ದನ್ನು ಪರಿಶೀಲಿಸಿ ಸದರಿ ಕಾರ್ಡ ಮೂಲದ್ದಾಗಿರುತ್ತದೆ ಅಥವಾ ಖೊಟ್ಟಿಯಾಗಿರುತ್ತದೆ ಎಂಬ ಬಗ್ಗೆ ಪರಿಶೀಲಿಸಿ, ಸ್ಪಷ್ಟ ಅಭಿಪ್ರಾಯ ವರದಿಗಾಗಿ ಕೋರಿಕೊಂಡಿದ್ದರಿಂದ ಸದರಿಯವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ರೇಷ್ಮಾ ಇವಳಿಗೆ ಪಾಸಪೋರ್ಟ ಸಂಖ್ಯೆ ಕೆ 3238346 ನೇದ್ದನ್ನು ಕೊಡಿಸಿದ ಫರ್ಜಾನ ಬೇಗಂ ಹಾಗು ಅವಳ ಗಂಡ ಮಹ್ಮದ ಯುನೂಸ್ ಮತ್ತು ಗಫೂರ ಪಟೇಲ್ ಇವರುಗಳು ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ಮೋಸ ಮಾಡಿದ್ದು ಕಂಡು ಬಂದಿರುವದರಿಂದ ಸದರಿಯವರ ವಿರುದ್ಧ ಪಿ.ಎಸ.ಐ ರಾಘವೇಂದ್ರ ನಗರ ಠಾಣೆ ರವರು ಠಾಣೆ  ಗುನ್ನೆ ನಂ: 70/2012 ಕಲಂ 420 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.


GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ ನಂದು ತಂದೆ ದೇಸು ರಾಠೋಡ ಸಾಃ ಕೌನಳ್ಳಿ ತಾಂಡಾ ನಾನು ದಿನಾಂಕ:25-09-2012 ರಂದು ಸಾಯಾಂಕಾಲ 6-00  ಗಂಟೆ ಸುಮಾರಿಗೆ ನಮ್ಮ  ಮನೆಯಲ್ಲಿ ದೇವರ ಕಾರ್ಯಕ್ರಮಕ್ಕಾಗಿ ಪೂಜೆ ಸಾಮಾನು ತೆಗೆದುಕೊಂಡು ಮನೆಗೆ ಬರುತ್ತಿರುವಾಗ ಮನೆಯ ಮುಂದಿನ ರಸ್ತೆಯ ಮೇಲೆ ಹರಿಶ್ಚಂದ್ರ ತಂದೆ ರೂಪ್ಲಾ ಪವಾರ ಸಂಗಡ 6 ಜನರು ಸಾ|| ಎಲ್ಲರೂ ಕೌನಳ್ಳಿ ತಾಂಡಾ ತಾಃಜಿಃಗುಲಬರ್ಗಾರವರು ಗುಂಪು ಕಟ್ಟಿಕೂಂಡು ಬಂದು ಮೊನ್ನೆ ನಮ್ಮ ಅಪ್ಪನ ಸಂಗಡ ತಕರಾರು ಮಾಡಿದೆ ನಿನ್ನಗೆ ಎಷ್ಟು ಸೂಕ್ಕು ಇದೆ ಅಂತಾ ಅವಾಚ್ಯವಾಗಿ ಬೈದು ನನ್ನ ತಂದೆಗೆ ಮತ್ತು ನನ್ನ ತಮ್ಮನಿಗೆ  ಹೊಡೆಬಡೆ ಮಾಡಿ, ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 103/2012 ಕಲಂ. 143,147, 148, 341, 323, 324, 504, 506, ಸಂ.149 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ ಹರಿಶ್ಚಂದ್ರ ತಂದೆ ರೂಪ್ಲಾ ಪವಾರ ಸಾಃ ಕೌನಳ್ಳಿ ತಾಂಡಾ ನಾನು ಮತ್ತು ನನ್ನ ಮಗ ಅಶೋಕ ಇಬ್ಬರು ಕೂಡಿಕೊಂಡು ದಿನಾಂಕ: 25-09-2012 ರಂದು ಸಾಯಾಂಕಾಲ 6-00 ಗಂಟೆ ಸುಮಾರಿಗೆ ಸೇವಲಾಲ ದೇವರ ಗುಡಿ ಮುಂದೆ ಕುಳಿತಾಗ ನಂದು ರಾಠೋಡ ಈತನು ತಕರಾರು ಮಾಡಿದ್ದು, ನಂತರ ನಾನು ಮನೆಗೆ ಕಡೆಗೆ ಹೋಗುತ್ತಿರುವಾಗ ದೇಸು ತಂದೆ ಭೋಜು ರಾಠೋಡ ಸಂಗಡ 4 ಜನರು ಸಾಃಎಲ್ಲರೂ ಕೌನಳ್ಳಿ ತಾಂಡಾ ತಾಃಜಿಃ ಗುಲಬರ್ಗಾ ರವರು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಗುಂಪು ಕಟ್ಟಿಕೂಂಡು ಬಂದು ನಿಮಗೆ ಸೂಕ್ಕು ಬಂದಿದೆ  ಅಂತಾ ಅವಾಚ್ಯ ಶಬ್ದಗಳಿಂದ ಬೈದು  ನನಗೆ ನನ್ನ ಮಗನಿಗೆ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 104/2012 ಕಲಂ. 143,147, 148, 341, 323, 324, 504, 506, ಸಂ.149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ: 25/09/2012 ರಂದು ರಾತ್ರಿ 7 ಗಂಟೆಯಿಂದ ದಿನಾಂಕ: 26/7/2012 ರ ಮುಂಜಾನೆ 7-00  ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಪನೂರ ಇಂಡಸ್ಟ್ರೀಯಲ್‌ ಏರಿಯಾದಲ್ಲಿರುವ ಟ್ರಾನಕಾಂ ಸಿಸ್ಟಮ  ಕ್ಯೂ 44 ಕೆಎಸ್‌‌ಐಡಿಸಿ ಎಸ್ಟೇಟ ಗುಲ್ಬರ್ಗಾದ ಬೀಗ ಮುರಿದು 1- Motor 1HP-2 Nos. RS=6000=00, 2- Hilti Beaker TE-706-4 Nos- RS- 80,000=00 3- Hilti Dri9lling Machine TE-1-4 Nos. Rs 16,000/- 4- Hot Press-2Nos. RS 2000=00 IN All worth Rs 1,04,000/- ಕಿಮ್ಮತ್ತಿನದ್ದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಾಜಶೇಖರ ತಂದೆ ಈರಣ್ಣಾ ಸಾ:ಕೆಹೆಚ್‌‌ಬಿ ಕಾಲೋನಿ ರಾಜಾಪೂರ ರೋಡ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 308/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ:ಶ್ರೀಮತಿ ಜಮುನಾಬಾಯಿ ಗಂಡ ದೇವಿದಾಸ ಪವ್ಹಾರ ಸಾಃ ಬೆಡಸೂರ ಎಮ್. ತಾಂಡಾ ಹಾ||ವ|| ಇಂದಿರಾ  ನಗರ ಸೇಡಂ ರವರು  ನನ್ನ ಗಂಡನಾದ ದೇವಿದಾನ ಇತನು ದಿನಾಂಕಃ 24/09/2012 ರಂದು ಬೆಳಿಗ್ಗೆ 7:30 ಗಂಟೆಯ ಸುಮಾರಿಗೆ ಪೇಪರ್ ಜೀಪ ನಂ. ಕೆಎ-39 6347 ನೇದ್ದರ ವಾಹನದಲ್ಲಿ ಕುಳಿತುಕೊಂಡು ಸುಲೇಪೇಟ ದಿಂದ ತಮ್ಮೂರ ಕಡೆಗೆ ಹೋಗುತ್ತಿರುವಾಗ ಸದರಿ ಜೀಪ ಚಾಲಕ ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮೇಲೆ ಜಂಪ ಮಾಡಿಸಿದ್ದರಿಂದ ಜೀಪನಲ್ಲಿ ಕುಳಿತ ದೇವಿದಾಸ ಇತನು ಕೆಳಗೆ ಬಿದ್ದು ತಲೆಗೆ ಭಾರಿ ಗುಪ್ತಗಾಯ, ಮುಖಕ್ಕೆ ತೆರಚಿದ ಗಾಯ ಮತ್ತು ಟೊಂಕಕ್ಕೆ ಗುಪ್ತಗಾಯವಾಗಿದ್ದು ಉಪಚಾರ ಕುರಿತು ಸಾರ್ವಜನಿಕ ಆಸ್ಪತ್ರೆ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೆ ದಿನಾಂಕಃ 26/09/2012 ರಂದು ಮದ್ಯಾಹ್ನ 3:00 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 78/2012 ಕಲಂ. 279, 304 [ಎ] ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.