POLICE BHAVAN KALABURAGI

POLICE BHAVAN KALABURAGI

23 June 2015

Kalaburagi District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಲಕ್ಷ್ಮಿ ಗಂಡ ರಾಜು ಚವ್ಹಾಣ ಸಾ: ಅಂಬೇಡ್ಕರ ಆಶ್ರಯ ಕಾಲೋನಿ ಶಹಾ ಬಜಾರ ತಾಂಡಾ ಕಲಬುರಗಿ ಇವರ ಗಂಡ ರಾಜು ಇವನು  ದಿನಾಂಕ 21/06/2015 ರಂದು ಮದ್ಯಾಹ್ನ 1 ಗಂಟೆಗೆ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದನು. ಇದೆ ವೇಳೆಗೆ ನನ್ನ ಅಕ್ಕ ಸುನೀತಾ ಇವಳು ಕೂಡಾ ನಮಗೆ ಮಾತನಾಡಲು ಮನೆಗೆ ಬಂದಿದ್ದರು ನಾನು ಇಬ್ಬರಿಗೂ ಚಹಾ ಮಾಡಿಕೊಟ್ಟೇನು ನನ್ನ ಗಂಡ ರಾಜು ಇತನು ಚಹಾ ಕುಡಿಯುತ್ತಾ ಇದ್ದನು. ಅದೇ ಸಮಯಕ್ಕೆ ನಮ್ಮ ಓಣಿಯ 1) ಅಮರ ಹರಿಜನ 2) ವಿನೋದ ಹರಿಜನ 3) ಪ್ರಕಾಶ ಹರಿಜನ 4) ಸಂದೀಪ @ ವಿಶಾಲ @ ಹರೀ 5) ಸಚೀನ 6) ರಾಹುಲ ಎಲ್ಲರೂ ನಮ್ಮ ಓಣಿಯವರೆಯಾಗಿದ್ದು ಸದರಿಯವರು ನನ್ನ ಗಂಡ ರಾಜು ಇತನು ಚಹಾ ಕುಡಿಯುತ್ತಾ ಕುಳಿತ್ತಿದ್ದಾಗ ಮೇಲಿನ ಎಲ್ಲಾ ಜನರು ಒಮ್ಮೇಲೆ ನಮ್ಮ ಮನೆಯಲ್ಲಿ ಹೋಕ್ಕು ಏ ಮಗನೇ ನೀನು ಯಾವುದೂ ಊರಿನಿಂದ ಬಂದು ನಮಗೆ ಬೈಯುತ್ತಿ ಅಂತಾ ನನ್ನ ಗಂಡ ರಾಜು ಇತನ ಕೈ ಕಾಲು ಹಿಡಿದು ಎಳೆದುಕೊಂಡು ಹೊರಗಡೆ ತಂದು ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿದರು ಬೀಡಬೇಡಿರಿ ಈ ಮಗನಿಗೆ ಅನ್ನುತ್ತಿದ್ದರು ಆಗ ನನ್ನ ಅಕ್ಕ ಸುನೀತಾ ಮತ್ತು ನಾನು ನನ್ನ ಗಂಡನಿಗೆ ಹೊಡೆಯದಂತೆ ಅಡ್ಡ ನಿಂತೇವು ಆಗ ಬಡಿಗೆ, ಕಲ್ಲು, ರಾಡಿನಿಂದ ಹೊಡೆಬಡೆ ಮಾಡುತ್ತಾ ಅಮರ ಹರಿಜನ ಇವನು ತನ್ನ ಇನ್ನೋಳಿದ ಗೆಳೆಯರಿಗೆ ಇವನಿಗೆ ಇಲ್ಲಿ ಮುಗಿಸುವುದು ಬೇಡಾ ತಮ್ಮ ಮೋಟಾರ ಸೈಕಿಲ ಮೇಲೆ ಹಾಕಿರಿ ಅನ್ನುತ್ತಾ ತಮ್ಮ ವಾಹನದ ಮೇಲೆ ನನ್ನ ಗಂಡ ರಾಜು ಇತನಿಗೆ ಎತ್ತಿ ಹಾಕಿಕೊಂಡು ಒತ್ತಾಯದಿಂದ ಗಾಡಿಯ ಮೇಲೆ ಕೂಡಿಸಿಕೊಂಡಿದ್ದು ಹಿಂದೆ ಸಂದೀಪ ಇತನು ಕುಳಿತ್ತಿದ್ದನು. ನಾನು ಮತ್ತು ನನ್ನ ಅಕ್ಕ ಸುನೀತಾ ಒಯ್ಯ ಬೇಡಿರಿ ಅಂತಾ ಹೇಳಿದರು ಸಹ ನಮ್ಮ ಮಾತು ಕೇಳದೇ ಇವನಿಗೆ ದವಾಖಾನೆಗೆ ತೊರಿಸುತ್ತೇವೆ ಅಂತಾ ರಾಜು ಇತನಿಗೆ ಕುಡಿಸಿಕೊಂಡು ಹೋದರು. ಇವರು ನಮ್ಮ ಓಣಿಯವರೆ ಇರುವುದರಿಂದ ನಂತರ ಬಿಡಬಹುದೆಂದು ತಿಳಿದು ಪೋಲಿಸರಿಗೆ ದೂರು ಕೊಟ್ಟಿಲ್ಲಾ. ಬೆಳಿಗ್ಗೆ 9 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮ ಓಣಿಯ ಹುಡುಗರು ರಾಜು ( ಉತ್ತರ ಪ್ರದೇಶ) ಇತನನ್ನು ಕೊಲೆ ಮಾಡಿ ಖತ್ತರಿ ಸಮಾಜದ ಶಹಾಬಜಾರದ ಸ್ಮಶಾನ ಜಾಗೆಯಲ್ಲಿ ಒಗೆದು ಹೋಗಿರುತ್ತಾರೆ. ಎನ್ನುವ ವಿಷಯ ಗೊತ್ತಾಗಿದ್ದು ಮಾನ್ಯರೆ ನನ್ನ ಪತಿಯವರಾದ ರಾಜು ಉತ್ತರ ಪ್ರದೇಶ ಇತನಿಗೆ ನನ್ನ ಮನೆಯಿಂದ ಹೊಡೆದು ಎಳೆದುಕೊಂಡು ಹೋದ ನಮ್ಮ ಓಣಿಯವರಾದ 1) ಅಮರ ಹರಿಜನ 2) ವಿನೋದ ಹರಿಜನ 3) ಪ್ರಕಾಶ ಹರಿಜನ 4) ಸಂದೀಪ @ ವಿಶಾಲ @ ಹರೀ 5) ಸಚೀನ 6) ರಾಹುಲ ಮತ್ತು ಇತರೆ ಜನರು ಎಲ್ಲರೂ ಸೇರಿಕೊಂಡು ಕೊಲೆ ಮಾಡಿರುತ್ತಾರೆಂದು ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 21-06-2015 ರಂದು ರಾತ್ರಿ ನಮ್ಮ ತಮ್ಮ ಹಣಮಂತ ಇವನು ನಮ್ಮ ಮೋಟರ ಸೈಕಲ್ ನಂ  ಕೆ.ಎ-32/ಇ.ಬಿ-2859 ನೇದ್ದನ್ನು ತೆಗೆದುಕೊಂಡು ನಮ್ಮ ಹೊಲಕ್ಕೆ ಹೋಗಿರುತ್ತಾನೆ. ಅಂದಾಜ 10;15 ಪಿ.ಎಂ ಸುಮಾರಿಗೆ ನಮ್ಮೂರ ಯಲ್ಲಪ್ಪ ತಂದೆ ನಿಂಗಪ್ಪಾ ತಳವಾರ ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ಮತ್ತು ನಮ್ಮೂರ ಮಹಾದೇವ ಸುತಾರ ರವರು ಕೂಡಿ ನಮ್ಮ ಮೋಟಾರ ಸೈಕಲ ಮೇಲೆ ಅಫಜಲಪೂರದಿಂದ ಊರಿಗೆ ಬರುತ್ತಿದ್ದೇವು, ನಮ್ಮೂರ ಬಲಭೀಮ ಬಳೂಂಡಗಿ ರವರ ಹೊಲದ ಹತ್ತಿರ ಇದ್ದಾಗ ನಮ್ಮ ಮುಂದೆ ಒಂದು ಟ್ರ್ಯಾಕ್ಟರ್ ಹೋಗುತ್ತಿತ್ತು, ಅದರ ಚಾಲಕನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ರಸ್ತೆ ಪೂರ್ತಿ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದನು. ಅದೇ ಸಮಯಕ್ಕೆ ಆನೂರ ಗ್ರಾಮ ಕಡೆಯಿಂದ ಒಂದು ಮೋಟರ ಸೈಕಲ ಬರುತ್ತಿದ್ದು, ಸದರಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಎದುರು ಬರುತ್ತಿದ್ದ ಮೋಟರ ಸೈಕಲಗೆ ಒಮ್ಮೇಲೆ ಜೋರಾಗಿ ಡಿಕ್ಕಿ ಹೊಡೆದನು. ಆಗ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನಿಂದ ಇಳಿದು ಓಡಿ ಹೋದನು. ನಂತರ ನಾನು ಮತ್ತು ನನ್ನೊಂದಿಗೆ ಇದ್ದ ಮಹಾದೇವ ಸುತಾರ ರವರು ಕೂಡಿ ಮೋಟರ ಸೈಕಲ್ ಸವಾರನ ಹತ್ತಿರ ಹೋಗಿ ನೋಡಿದಾಗ ಅವನು ನಿಮ್ಮ ತಮ್ಮ ಹಣಮಂತ ಇದ್ದನು, ಅವನಿಗೆ ಬಲಗಡೆ ಮೊಳಕಾಲ ಮೇಲೆ ಭಾರಿ ಒಳಪೆಟ್ಟಾಗಿರುತ್ತದೆ, ಮತ್ತು ಬಲಗಾಲ ಬಟ್ಟಗಳಿಗೆ ಹಾಗು ಬಲಗೈ ಬಟ್ಟಗಳಿಗೆ ಮತ್ತು ಬಲ ಭುಜದ ಮೇಲೆ ತರಚಿದ ಗಾಯಗಳು ಆಗಿರುತ್ತವೆ. ಅಂತಾ ತಿಳಿಸಿರುತ್ತಾರೆ ಅಂತಾ ²æà ಗುರುದೇವ ತಂದೆ ಚನ್ನಪ್ಪ ಬಳೂಂಡಗಿ  ಸಾ|| ಆನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ:21/06/2015 ರಂದು ಬೆಳಗ್ಗಿನ ಜಾವ 06-00 ಗಂಟೆ ಸುಮಾರಿಗೆ ನಮ್ಮೂರಿನಲ್ಲಿ ಜನರು ಶಿವಲಿಂಗೇಶ್ವರ ದೇವರ ಮೂರ್ತಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮಾತಾಡುವುದನ್ನು ಕೇಳಿ ನಾನು ಹಾಗೂ ಗ್ರಾಮದ ಕೆಲವು ಜನರು ಕೂಡಿ ಶಿವಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ನೋಡಲಾಗಿ ದೇವಸ್ಥಾನದ ಗರ್ಭಗುಡಿಯ ಬಾಗಿಲ ಮುರಿದು ಶಿವಲಿಂಗೇಶ್ವರ ಮೂರ್ತಿ ಕಳ್ಳತನವಾಗಿದ್ದು ಕಂಡು ಬಂದಿರುತ್ತದೆ. ದಿನಾಂಕ:21/06/2015 ರಾತ್ರಿ 12-30 ಗಂಟೆಯಿಂದ ಬೆಳಗಿನ ಜಾವ 04-00 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ದೇವಸ್ಥಾನದ ಗರ್ಭಗುಡಿಯ ಬಾಗಿಲು ಮುರಿದು ಹಿತ್ತಾಳೆಯಲ್ಲಿ ಪಂಚಧಾತು ಮಿಶ್ರಿತ ಶಿವಲಿಂಗೇಶ್ವರ ಮೂರ್ತಿಯನ್ನು ಕಳ್ಳತನ ಮಾಡಿಕೊಮಡು ಹೋಗಿರುತ್ತಾರೆ.  ಮೂರ್ತಿಯು ಅಂದಾಜು 10 ರಿಂದ 12 ಸಾವಿರ ರೂಪಾಯಿಯ ಮೌಲ್ಯ ಹೊಂದಿರುತ್ತದೆ. ಅಂತಾ ಶ್ರೀ ಯೂನುಸ ಪಟೇಲ ತಂದೆ ಅಲ್ಲಾಭಕ್ಷ ಮಾಲಿ ಪಟೇಲ ಸಾ:ಕುರಿಕೋಟಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.