POLICE BHAVAN KALABURAGI

POLICE BHAVAN KALABURAGI

20 November 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪೂಜಾ ಗಂಡ ಪರಶುರಾಮ ಸಾ: ಮಾಶ್ಯಾಳ ತಾ: ಅಫ್ಜಲಪೂರ ಜಿ;ಕಲಬುರಗಿ ಹಾ;ವ: ಮದರಿ ತಾ:ಅಫ್ಜಲಪೂರ  ಇವರನ್ನು ಸುಮಾರು 6 ವರ್ಷಗಳ ಹಿಂದೆ ಮಾಶ್ಯಾಳ ಗ್ರಾಮದ ಪರಶುರಾಮ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಆಗಿರುತ್ತದೆ. ಮದುವೆಯಲ್ಲಿ ನನ್ನ ಗಂಡನಿಗೆ 1 ತೊಲೆ ಬಂಗಾರ ಕೊಟ್ಟಿರುತ್ತೇವೆ. ಮದುವೆ ಆದ ನಂತರ ನಾನು ನನ್ನ ಗಂಡನ ಮನೆಯಾದ ಮಾಶ್ಯಾಳ ಗ್ರಾಮದಲ್ಲಿದ್ದು, ಸುಮಾರು 5 ತಿಂಗಳವರೆಗೆ ನನ್ನೊಂದಿಗೆ ಚೆನ್ನಾಗಿ ಇದ್ದನು. ನಂತರ ನನ್ನ ಗಂಡ ಪರಶುರಾಮ ಅತ್ತೆ ಚೆನ್ನಮ್ಮ ಭಾವ ನಾಗಪ್ಪ ಇವರೆಲ್ಲರೂ ಕೂಡಿ ವಿನಾಕಾರಣ ನನ್ನೊಂದಿಗೆ ಜಗಳ ತೆಗೆಯುವುದು ರಂಡಿ,ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುವುದು ವಗೈರೆ ಮಾಡುತ್ತಿದ್ದರು. ನಾನು ಅವರು ಕೊಡುವ ಹಿಂಸೆಯನ್ನು ತಾಳಿಕೊಂಡು ಬಂದಿರುತ್ತೇನೆ. ನನಗೆ ಈಗ ಎರಡು ಗಂಡು  ಮಕ್ಕಳು ಇರುತ್ತಾರೆ. ಮತ್ತು ಸದ್ಯ 7 ತಿಂಗಳ ಗಭರ್ಣಿ ಇರುತ್ತೇನೆ. ಮತ್ತು ಅವರೆಲ್ಲರೂ ಕೂಡಿ ನನಗೆ ತವರು ಮನೆಯಿಂದ 50 ಸಾವಿರ ರೂಪಾಯಿ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಹಿಂಸೆ ಕೊಡುತ್ತಿದ್ದರು. ನನ್ನ ಗಂಡ ಅತ್ತೆ,ಭಾವ ಕೊಡುವ ಹಿಂಸೆಯನ್ನು ತಾಳಲಾರದೇ ನಮ್ಮ ತಂದೆ ತಾಯಿಯವರಿಗೆ ವಿಷಯ ತಿಳಿಸಿದಾಗ ಅವರು ಬಂದು ನಾವು ಬಡವರಿದ್ದೇನೆ ನಮ್ಮಿಂದ ಅಷ್ಟೊಂದು ದುಡ್ಡು ಕೊಡುವುದು ಆಗುವದಿಲ್ಲ ಅಂತಾ ಕೇಳಿಕೊಂಡರು ಕೂಡ ಅವರು ತಮ್ಮ ಚಟವನ್ನೆ ಮುಂದುವರೆಸಿಕೊಂಡು ಬಂದಿರುತ್ತಾರೆ. ರಂಡಿ ಹಣ ತೆಗೆದುಕೊಂಡು ಬಾ ಅಂದರೆ ಬರೆ ನಿಮ್ಮ ತಂದೆ ತಾಯಿಗೆ ಕರೆಯಿಸಿ ನಮಗೆ ತಿಳುವಳೀಗೆ ಹೇಳುತ್ತಿಯಾ ನಿನಗೆ ಖಲಾಸ ಮಾಡಿ ಬಿಡುತ್ತೇವೆ ಅಂತಾ ನನ್ನ ಗಂಡ ನನಗೆ ಜೀವದ ಬೆದರಿಕೆ ಹಾಕುತ್ತಿದ್ದಾನೆ. ದಿನಾಲು ಕುಡಿದು ಬಂದು ನಿನ್ನ ಅಣ್ಣ ಮತ್ತು ನಿನ್ನ ತಂದೆಗೂ ಕೂಡ ಖಲಾಸ ಮಾಡುತ್ತೇನೆ ಅಂತಾ ಹೆದರಿಸುತ್ತಾನೆ. ನಾನು ಅವರು ಕೊಡುವ ಹಿಂಸೆಯನ್ನು ತಾಳಲಾರದೇ ನನ್ನ ಎರಡು ಮಕ್ಕಳೊಂದಿಗೆ ನನ್ನ ತವರು ಮನೆಯಲ್ಲಿ ಬಂದು ಉಳಿದುಕೊಂಡಿರುತ್ತೇನೆ. ದಿನಾಂಕ: 02.05.2015 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ನನ್ನ ಗಂಡ ಪರಶುರಾಮ,ಅತ್ತೆ ಚೆನ್ನಮ್ಮಾ ಮತ್ತು ಭಾವ ನಾಗಪ್ಪ ಇವರೆಲ್ಲರೂ ನಮ್ಮ ತವರು ಮನೆಯಾದ ಮದರಿ ಗ್ರಾಮಕ್ಕೆ ಬಂದು ರಂಡಿ, 50 ಸಾವಿರ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ನೀನು ಇಲ್ಲೆ ಕುಳಿತಿರುವಿಯಾ ನೀನು ನನ್ನ ಜೊತೆ ಸಂಸಾರ ಮಾಡುವುದು ಸಾಕು ನನ್ನ ಮಕ್ಕಳಿಗೆ ಕೊಡು ನಾನು ನಿನಗೆ (ಡೈವಸ್) ಫಾರಿಖತ್ ಕೊಡು ಅಂತಾ ನನ್ನ ಗಂಡ ನನಗೆ ಕೈಯಿಂದ ಹೊಡೆದನು. ಆಗ ನನ್ನ ಅತ್ತೆ ಚೆನ್ನಮ್ಮ ನನ್ನ ಕೂದಲು ಹಿಡಿದು ಜಗ್ಗಾಡಿ ರಂಡಿ ತಾಳಿ ಕೊಡು ನಾನು ನನ್ನ ಮಗನಿಗೆ ಬೇರೆ ಮದುವೆ  ಮಾಡುತ್ತೇನೆ ಅಂತಾ ಬೈದಳು. ಆಗ ನನ್ನ ಅಣ್ಣ  ಮಾಂತಪ್ಪ  ಬಿಡಿಸಲು ಬಂದಾಗ ಆಗ ನನ್ನ ಭಾವ ನಾಗಪ್ಪ ಅವನಿಗೆ ಹಿಡಿದು ಎಳದಾಡಿ ಕೈಯಿಂದ ಹೊಡೆದು ಕೆಳಗೆ ನೂಕಿ ಕೊಟ್ಟೆನು. ಮದುವೆ ಆದಾಗಿನಿಂದ ತವರು ಮನೆಯಿಂದ 50 ಸಾವಿರ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ದೈಹಿಕ ಹಿಂಸೆ  ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂದನೆ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಹಣಮಂತ ಜಿ. ಯಳಸಂಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ನ್ಯಾಯವಾದಿಗಳು ಕಲಬುರಗಿ ಇವರು ದಿನಾಂಕ 16-11-2015 ರಂದು 6 ಪಿ.ಎಮ್ ದಿಂದ 7 ಪಿ.ಎಮ್ ದ ವರೆಗೆ ನಾನು ಮನೆಯಲ್ಲಿ ಟಿ.ವಿ ನೋಡುತ್ತಿದ್ದಾಗ ಡಾ|| ಬಾಬಾ ಸಾಹೇಬ ರವರು ಈ ದೇಶದ ಸಂವಿಧಾನ ಬರೆದ ಪಿತಾಮಹಾ ಮತ್ತು ಮಹಾ ಮೇಧಾವಿ ರವರ ವಿರುದ್ಧ ಅತ್ಯಂತ ಹಗುರವಾಗಿ ಬಿ.ಟಿ.ವಿ ಯಲ್ಲಿ ಅವಮಾನಿಸಿ ಮಾತನಾಡಿ ಸಮಸ್ತ ನಾಡಿನ ಜನತೆಯ ಭಾವನೆಗಳಿಗೆ ಧಕ್ಕೆ ತಂದ ಹುಚ್ಚ ವೆಂಕಟ ಬಾಬಾ ಸಾಹೇಬ ನನ್ನ ಎಕ್ಕಡ ಎಂದು ದಿನಾಂಕ 16-11-2015 ರಂದು ಸಾಯಂಕಾಲ ಹಿಯಾಳಿಸಿರುವುದು ಸಮಾಜದಲ್ಲಿನ ಶಾಂತಿಗೆ ಭಂಗ ತರುವ ಹುನ್ನಾರು ಆಗಿದೆ ಹುಚ್ಚ ವೆಂಕಟನ ಬಾಯಿಯಿಂದ ಡಾ|| ಬಾಬಾ ಸಾಹೇಬ ಅಂಬೇಡ್ಕರ ರವರಿಗೆ ಅವಮಾನ ಆಗುವಂತೆ ಮಾಡಿದ ಬಿ.ಟಿ.ವಿಯ ಚಂದನ ಶರ್ಮಾ ಎಂಬ ಸಮಾಜ ಘಾತುಕ ಯಾವುದೇ ಭಯವಿಲ್ಲದೆ ತಮ್ಮ ಬಿ.ಟಿ.ವಿ ಯಲ್ಲಿ ಪ್ರಸಾರ ಮಾಡಿದ್ದರಿಂದ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.