POLICE BHAVAN KALABURAGI

POLICE BHAVAN KALABURAGI

29 May 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ  ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 28.05.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಎಮ್.ಎಸ್.ಕೆ.ಮೀಲ್ ಸಿಟಿ ಬಸ್ಸ ನಿಲ್ದಾಣದ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎಮ್.ಎಸ್.ಕೆ.ಮೀಲ್ ಸಿಟಿ ಬಸ್ಸ ನಿಲ್ದಾಣ ಹತ್ತಿರ ದಿಂದ ಸ್ವಲ್ಪ ದೂರದಲ್ಲಿ ಹೋಗಿ ನಿಂತುಕೊಂಡು ಎಮ್.ಎಸ್.ಕೆ.ಮೀಲ್ ಸಿಟಿ ಬಸ್ಸ ನಿಲ್ದಾಣ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಅಬ್ದುಲ ರಜಾಕ ತಂದೆ ಅಬ್ದುಲ ಸುಕುರ ರಜಾಕಸಾಹೇಬ ಸಾ: ರೇಷನ್ ಅಂಗಡಿ ಪಕ್ಕದಲ್ಲಿ ಖದೀರ ಚೌಕ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1320/-ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್ ಅ:ಕಿ: 00 ಮತ್ತು 4) ಒಂದು ಎಲ್.ಎಫ್.ವ್ಯಾಯಿ ಮೊಬೈಲ ಅ:ಕಿ: 300/- ರೂ ದೊರೆತಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 27/05/2018 ರಂದು 10.00 ಗಂಟೆಯ ಸುಮಾರಿಗೆ ತನ್ನ ಮಗನಾದ ಓಂಕಾರ ಈತನು ಕಾರ ನಂ ಕೆಎ-32 ಎನ್-0765 ನೆದ್ದು ತೆಗೆದುಕೊಂಡು ತನ್ನ ಹೆಂಡತಿಯ ತವರೂರಾದ ಶಹಾಪೂರ ತಾಲೂಕಿನ ಕರಕಳ್ಳಿ ತಾಂಡಾಕ್ಕೆ ಕಲಬುರಗಿಯಿಂದ ಹೊಗಿದ್ದು, ಮದ್ಯ ರಾತ್ರಿ ಅಂದರೆ ದಿನಾಂಕ 28/05/2018 ರಂದು 12.45 ಎ.ಎಮದ ಸುಮಾರಿಗೆ ತನ್ನ ಮಗನಾದ ಓಂಕಾರ ಈತನಿಗೆ ರಾಷ್ಟ್ರೀಯ ಹೆದ್ದಾರಿ 218ರ ಶಹಾಬಾದ ಕ್ರಾಸ ಹತ್ತಿರ ರಸ್ತೆ ಅಪಘಾತವಾಗಿ ಮೃತಪಟ್ಟಿರುತ್ತಾನೆ ಅಂತಾ ಮಾಹಿತಿ ತಿಳಿದು ಎಲ್ಲರೂ ಹೋಗಿ ನೋಡಲಾಗಿ ಓಂಕಾರ ಈತನು ತಲೆಗೆ & ಹಣೆಗೆ ಭಾರಿ ರಕ್ತಗಾಯ, ಎದೆಗೆ ಭಾರಿ ರಕ್ತಗಾಯ, ಎರಡು ಕೈಗಳಿಗೆ ಭಾರಿ ಗುಪ್ತಗಾಯ, ಎಡಗಾಲಿನ ಮೊಳಕಾಲಿಗೆ ಭಾರಿರಕ್ತಗಾಯ, ಬಲಗಾಲಿಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಕಾರ ನೋಡಲಾಗಿ ಸಂಪೂರ್ಣ ಜಜ್ಜಿ ಹೊಗಿದ್ದು, ಯಾವುದೋ ಒಂದು ಭಾರಿ ವಾಹನದ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಓಂಕಾರ ಈತನು ಚಲಾಯಿಸುತ್ತಿದ್ದ ಕಾರ ನಂ ಕೆಎ-32 ಎನ್-0765 ನೇದ್ದಕ್ಕೆ ಡಿಕ್ಕಿಪಡಿಸಿದ ಹಾಗೇಯೆ ಚಲಾಯಿಸಿಕೊಂಡು ಹೊಗಿರುತ್ತಾನೆ. ಸದರಿ ಘಟನೆ ನಡೆದಾಗ ಸುಮಯ ಸುಮಾರು 11.30 ಪಿ.ಎಮ್ ಆಗಿರಬಹುದು ಸದರಿ ಅಪರಿಚಿತ ಭಾರಿ ವಾಹನದ ಚಾಲಕನ ವಿರುದ್ದ ಸೂಕ್ರ ಕಾನೂನು ರೀತಿ ಕ್ರಮ ಜರೂಗಿಸಬೇಕೆಂದು ಶ್ರೀ ತುಳಸಿರಾಮ ತಂದೆ ವಿಠಲ ಪವಾರ ಸಾ : ಶಕ್ತಿ ನಗರ ಶಾಹಾಬಾದ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.