POLICE BHAVAN KALABURAGI

POLICE BHAVAN KALABURAGI

07 August 2016

Kalaburagi District Reported Crimes

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಸಕ್ಕುಬಾಯಿ ಗಂಡ ಸುಭಾಷ ಇಟಿ ಸಾ:ಸೊಂತಗ್ರಾಮ ತಾ:ಜಿ:ಕಲಬುರಗಿ ರವರು. ದಿನಾಂಕ:18.04.2016 ರಂದು ಚಂದ್ರಪ್ಪ ಪೋಲಾ ಅಂಬರೀಷ ಕೋಡ್ಲಿ ಹಾಗೂ ಅರುಣ ಮುದ್ನಾಳ ಇವರು ಸಾಯಂಕಾಲದ ವೇಳೆಯಲ್ಲಿ ಸೊಂತ ಗ್ರಾಮದಲ್ಲಿ ನನಗೆ ಹೋಡೆಬಡೆ ಮಾಡಿದ್ದರಿಂದ ನಾನು ಅವರ ಮೇಲೆ ಕೇಸ ಮಾಡಿದ್ದು. ಅದೇ ವಿಷಯದಲ್ಲಿ ಅವರು ನನ್ನ ಸಂಗಡ ಕಾಲು ಕೆದರಿ ಜಗಳ ಮಾಡುತ್ತ ಬಂದಿದ್ದು.  ದಿನಾಂಕ:29.04.2016 ರಂದು ಮದ್ಯಾಹ್ನ ಸೊಂತ ಗ್ರಾಮದ ನನ್ನ ಮನೆಯ ಮುಂದೆ ಬಂದಾಗ ಅದೇ ವೇಳೆಗೆ ಚಂದ್ರಪ್ಪ ಪೋಲಾ ಅಂಬರೀಷ ಕೋಡ್ಲಿ ಮತ್ತು ಅರುಣ ಮುದ್ನಾಳ ಇವರು ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ನನಗೆ ಏ ರಂಡೀ ಸಕ್ಕಿ ಸುಮ್ಮ ಸುಮ್ಮನೆ ನಮ್ಮ ಮೇಲೆ ಕೇಸ ಮಾಡತಿ ನಮ್ಮ ಮೇಲಿನ ಕೇಸ ವಾಪಸ್ಸ ತೆಗೆದುಕೋ ಅಂತಾ ಬೈಯುತ್ತ ಬಂದವರೆ ಚಂದ್ರಪ್ಪ ಇವನು ಬಡಿಗೆಯಿಂದ ನನ್ನ ತಲೆಯ ಮೇಲೆ ಹೋಡೆದನು. ಅಂಬ್ರೇಷ ಇವನು ನನ್ನ ತಲೆ ಕೂದಲು ಹಿಡಿದು ಏಳೆದಾಡಿ ಕಲ್ಲಿನಿಂದ ನನ್ನ ಹೆಡಕಿಗೆ ಹೋಡೆದನು. ಅರುಣ ಇವನು ನನ್ನ ಸೀರೆ ಬಿಚ್ಚಿ ನನಗೆ ಲಂಗಾದ ಮೇಲೆ ನಿಲ್ಲಿಸಿ ಅವಮಾನ ಮಾಡಿದನು. ನಂತರ ಚಂದ್ರಪ್ಪ ಇವನು ತನ್ನ ಕೈಯಲ್ಲಿನ ಬಡಿಗೆ ಬಿಟಾಕಿ ನನಗೆ ಕೋಲೆ ಮಾಡುವ ಉದ್ದೇಶದಿಂದ ನನ್ನ ಬಲಗೈ ಒಡ್ಡು ಮುರಿದು ತಿರುವಿ ನನ್ನ ಮುಖವನ್ನು ಗೋಡೆಗೆ ಒತ್ತುತ್ತಿದ್ದಾಗ ನನ್ನ ಕೈ ಪಟ್ಟನೆ ಮುರಿದಂತೆ ಶಬ್ದ ಕೇಳಿ ನಾನು ಅಂಜಿ ಚಿರಾಡುತ್ತಿದ್ದು ಅದೇ ವೇಳೆಗೆ ನನಗೆ ಹೋಡೆಯುತ್ತಿದ್ದನ್ನು ನಿಂತು ನೋಡುತ್ತಿದ್ದ ಶ್ಯಾಮರಾವ ಇಟಿ ಹಾಗೂ ಕೆಲಸ ಮುಗಿಸಿ ಮನೆಗೆ ಬರುತಿದ್ದ ನನ್ನ ಗಂಡ ಸುಭಾಷ ಇಟಿ ಇವರು ಬಂದು ನನಗೆ ಹೋಡೆಯುತ್ತಿದ್ದನ್ನು ಬಿಡಿಸುತ್ತಿದ್ದಾಗ ಚಂದ್ರಪ್ಪ ಪೋಲಾ ಇವನು ನನಗೆ ಏ ರಂಡೀ ನಮ್ಮ ಮ್ಯಾಲಿನ ಕೇಸ ವಾಪಸ್ಸ ತೆಗೆಯದಿದ್ದರೆ. ಮುಂದಿನ ಸಾರಿ ನಿನಗೆ ಕೋಲೆ ಮಾಡುತ್ತೇನೆ ಅಂತಾ ನನಗೆ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರೋಲ ರಜೆಯ ಮೇಲೆ ಹೋದ ಕೈದಿ ತಲೆಮರಿಸಿಕೊಂಡ ಪ್ರಕರಣ :
ಫರತಾಬಾದ ಠಾಣೆ : ಶಿಕ್ಷಾ ಬಂದಿ ಸಂಖ್ಯೆ 19162 ಸದಾನಂದ @ ಪಾಪು ತಂದೆ ಸುಭಾಷರಾವ ಎಂಬಾತನು ಕೇಂದ್ರ ಕಾರಾಗ್ರಹ ಕಛೇರಿಯ ಪತ್ರ ಸಂಖ್ಯೆ. ಕೇಕಾಗು/ಜೆ.ಸಿ-1/ಪೆರೋಲ್/1100/2014-15 ದಿನಾಂಕ 04/07/2016 ರ ಪ್ರಕಾರ ದಿನಾಂಕ 04/07/2016 ರಂದು 30 ದಿನಗಳ ಸಾಮಾನ್ಯ ಪೆರೋಲ್ ರಜೆಯ ಮೇಲೆ ಬಿಡುಗಡೆ ಮಾಡಲಾಗಿತ್ತು ಸದರಿ ಬಂದಿಯು ದಿನಾಂಕ 04/08/2016 ರಂದು ಬಂದು ಶರಣಾಗಬೇಕಾಗಿತ್ತು ಆದರೆ ಸದರಿ ಬಂದಿಯು ಕಾರಾಗ್ರಹಕ್ಕೆ ಶರಣಾಗದೆ ತಲೆ ಮರೆಸಿಕೊಂಡಿರುತ್ತಾನೆ ಸದರಿ ಬಂದಿಗೆ ಶ್ರೀ ಬಾಬುರಾವ ತಂದೆ ಖಂಡೆರಾವ ಸಾ:ಬಸವಕಲ್ಯಾಣ ತಾ:ಬಸವಕಲ್ಯಾಣ ಜಿ: ಬೀದರ ಇವರು ಜಾಮೀನುದಾರರಾಗಿರುತ್ತಾರೆ, ಸದರಿ ಬಂದಿಯು ಪೆರೋಲ್ ರಜೆಯ ಮೇಲೆ ಹೋಗಿ ತಲೆಮರಿಸಿಕೊಂಡಿರುವ ಕಾರಣ ಬಂದಿಯ ಮೇಲೆ ಮತ್ತು ಜಾಮೀನುದಾರನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ ಎಮ್. ಸೋಮಶೇಖರ ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗ್ರಹ ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.