POLICE BHAVAN KALABURAGI

POLICE BHAVAN KALABURAGI

05 August 2015

Kalaburagi District Reported Crimes

ನಾಲ್ಕು ಜನ ಕುಖ್ಯಾತ ಯುವ ದರೋಡೆಕೋರರ ಬಂಧನ
ಗ್ರಾಮೀಣ ಠಾಣೆ : ದಿನಾಂಕ.4-8-2015 ರಂದು ಎಜಾಜ ಪಟೇಲ್ ತಂದೆ ಖಾಜಾ ಪಟೇಲ ಸಾ;ಮಿಲ್ಲತನಗರ ಕಲಬುರಗಿ ಇವರು ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದು ಏನೆಂದರೆ ದಿನಾಂಕ.3-8-2015 ರಂದು ತಾವು ಮತ್ತು ತಮ್ಮ 5 ಗೆಳೆಯರು ಕೂಡಿಕೊಂಡು ಮಿಲ್ಲತ ನಗರ ಹೊರವಲಯದ  ದಾವುಲ ಮಲಿಕ್ ಚಿಲ್ಲಾದ ಮುಂದೆ ಇರುವ ಹುಣಸೆ ಮರದ ಕೆಳಗೆ  ಮದ್ಯಾನ 2-00 ಊಟ ಮಾಡುತ್ತಾ ಕುಳಿತಾಗ ಯಾರೋ ಅಪರಿಚಿತ ವಯಸ್ಸು ಅಂದಾಜು 19-25 ವಯಸ್ಸಿನವರು  6-7 ಜನರು ಎರಡು ಮೋಟಾರ ಸೈಕಲ ಮೇಲೆ ಬಂದು  ತಲವಾರಗಳಿಂದ ಅಂಜಿಸಿ ತಮ್ಮೆಲ್ಲರ ಕಿಸೆಯಿಂದ ಜಬರದಸ್ತಿಯಿಂದ 18000/- ರೂ ನಗದ ಹಣ ಹಾಗೂ 2 ಮೋಬಾಯಿಲಗಳು ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಅಂತಾ ವಗೈರೆ ಕೊಟ್ಟ ಫಿರ್ಯಾದಿ ಮೇಲಿಂದ ಗ್ರಾಮೀಣ ಠಾಣೆಯಲ್ಲಿ  ದಿನಾಂಕ.4-8-2015 ರಂದು ಗುನ್ನೆ ನಂ. 309/2015 ಕಲಂ. 395 ಐಪಿಸಿನೆದ್ದರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

           ಸದರಿ ಪ್ರಕರಣದಲ್ಲಿ  ದರೋಡೆಕೋರರ ಪತ್ತೆ ಕುರಿತು ಮಾನ್ಯ ಶ್ರೀಅಮೀತ ಸಿಂಗ ಐ.ಪಿ.ಎಸ್. ಎಸ್.ಪಿ.ಕಲಬುರಗಿ  ಮತ್ತು ಮಾನ್ಯ ಶ್ರೀ.ಜಯ ಪ್ರಕಾಶ   ಅಪರ ಎಸ್.ಪಿ. ಕಲಬುರಗಿ ಹಾಗೂ  ಮಾನ್ಯ ಶ್ರೀ. ವಿಜಯ ಅಂಚಿ ಡಿ.ಎಸ್.ಪಿ. ಗ್ರಾಮೀಣ ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಗ್ರಾಮೀಣ ವೃತ್ತದ ಸಿಪಿಐರವರಾದ ಶ್ರೀ.ಎ.ವಾಜೀದ ಪಟೇಲ್ .ರವರ ನೇತೃತ್ವದಲ್ಲಿ   ಗ್ರಾಮೀಣ ಪೊಲೀಸ್ ಠಾಣೆಯ  ಪಿ.ಎಸ್.ಐ. (ಅವಿ) ರವರಾದ ಉದಂಡಪ್ಪಾ .ಮಣ್ಣೂರಕರ , ಶರಣಬಸಪ್ಪಾ .ಕೆ. ಪಿ.ಎಸ್.ಐ. (ಕಾ&ಸೂ) ಹಾಗೂ ಸಿಬ್ಬಂದಿ ಜನರಾದ  ಹುಸೇನ ಬಾಷ , ರಾಜಕುಮಾರ  , ವಿಶ್ವನಾಥ , ಅಂಬಾಜಿ , ಕೇಶವ , ಕಂಠೆಪ್ಪಾ , ಶಿವಶರಣಪ್ಪಾ , ಶರಣಬಸ್ಸಪ್ಪಾ , ಈರಣ್ಣಾ ಜೀಪ ಚಾಲಕರಾದ ಬಂಡೆಪ್ಪಾ  ರವರೆಲ್ಲರೊಂದಿಗೆ ಟೀಮನು ರಚಿಸಿಕೊಂಡು  ದರೋಡೆಕೋರರ ಶೋಧ ಕಾರ್ಯದಲ್ಲಿ ತೊಡಗಿದಾಗ ಇಂದು ದಿನಾಂಕ. 5-8-2015 ರಂದು  ಬೆಳಗ್ಗೆ 8-30 ಗಂಟೆಗೆ ಕಲಬುರಗಿಯ ಚೋರ ಗುಮ್ಮದ ಹತ್ತಿರ ದರೋಡೆಕೊರರಾದ 1) ಸಲಾವುದ್ದಿನ ತಂದೆ ಸಾಹೇಬ ಪಟೇಲ ವಯಾ:22 ವರ್ಷ ಜಾ:ಮುಸ್ಲಿಂ ಉ:ಪ್ಲಂಬರ ಕೆಲಸ ಸಾ:ಎಂ.ಎಸ್.ಕೆ ಮೀಲ ಜಿಲಾನಾಬಾದ ಕಲಬುರಗಿ 2)ಮೆಹಿಬೂಬ ತಂದೆ ಹುಸೇನಸಾಬ ನಧಾಫ ವಯಾ:21 ವರ್ಷ ಜಾ:ಮುಸ್ಲಿಂ ಉ:ಫರ್ನಿಚರ ಕೆಲಸ ಸಾ:ಮದಿನಾ ಮೀದ ಹಿಂದುಗಡೆ ಮದಿನಾ ಕಾಲೋನಿ ಕಲಬುರಗಿ 3)ಅಬ್ದುಲ್ ಕರೀಮ ತಂದೆ ಅಬ್ದುಲ್ ರೆಹಮಾನ ಶೇಖ ವಯಾ:19 ವರ್ಷ ಜಾ:ಮುಸ್ಲಿಂ ಉ:ವಿದ್ಯಾರ್ಥಿ ಸಾ:ತಯ್ಯಾಬ ಮಜೀದ ಹತ್ತಿರ ಮಿಜಬಾ ನಗರ ಕಲಬುರಗಿ 4)ಶೇಖ ಇರಫಾನ ತಂದೆ ಶೇಖ ಅಬ್ದುಲ್ ಸೌದಾಗರ ವಯಾ:-23 ವರ್ಷ ಜಾ:ಮುಸ್ಲಿಂ ಉ:ಗೌಂಡಿ ಗುತ್ತೆದಾರ ಸಾ:ತಯ್ಯಾಬ ಮಜೀದ ಹತ್ತಿರ ಮಿಜಬಾ ನಗರ ಕಲಬುರಗಿ ಇವರೆಲ್ಲರನ್ನು ವಶಕ್ಕೆ ತೆಗೆದುಕೊಂಡು  ತನಿಖೆ ಕಾಲಕ್ಕೆ ದರೋಡೆಯಾದ 18,000/- ರೂ, ಎರಡು ಮೋಬಾಯಿಲಗಳು , ಎರಡು ಮೋಟಾರ ಸೈಕಲಗಳು  03 ಲಾಂಗ ತಲವಾರಗಳು  ಹೀಗೆ ಅಂದಾಜು 70,000/- ಕ್ಕಿಮ್ಮತ್ತಿನ ವಸ್ತುಗಳನ್ನು ಜಪ್ತಪಡಿಸಿಕೊಂಡಿದ್ದು , ದರೋಡೆಕೊರರಿಗೆ ನ್ಯಾಯಾಂಗಬಂಧನಕ್ಕೆ ಕಳುಹಿಸಿದ್ದು ಇರುತ್ತದೆ.ಇನ್ನೂ ಮೂರು ಜನ ಆರೋಪಿತರಾದ 1) ಇಸ್ಮಾಯಿಲ್ , 2) ಹಬೀಬ , 3) ವಜೀರ ಇವರು ತಲೆಮರೆಯಿಸಿಕೊಂಡಿದ್ದು  ಇವರ ಪತ್ತೆಕುರಿತು ಪೊಲೀಸ್ ರು ಜಾಲ ಬೀಸಿರುತ್ತದೆ , ಈ ಗ್ರಾಮೀಣ ವೃತ್ತ ದ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ. 

Kalaburagi District Reported Crimes

ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶರಣಬಸಪ್ಪ ತಂದೆ ಗದಗೆಪ್ಪ ಕಡಗಂಚಿ ಉ : ಪಿ.ಡಿ.ಓ ಗ್ರಾಮ ಪಂಚಾಯತ ಕವಲಗಾ, ಸಾ|| ದೇವಂತಗಿ ಇವರು ದಿನಾಂಕ 04/08/2015 ರಂದು ಗ್ರಾಮ ಪಂಚಾಯತ ಕವಲಗಾ ಆವರಣದಲ್ಲಿ ಕುಡಿಯುವ ನೀರಿನ ಇನ್ನು 07 ಟ್ಯಾಂಕರ ಕಳುಹಿಸು ಅಂತ ಆರೋಪಿತರಾದ ಬಸವರಾಜ ತಂದೆ ಕಾಮಣ್ಣ ಚೌಡಾಪೂರ ಸಂಗಡ ಇತರರು ಅಕ್ರಮ ಕೂಟ ಕಟ್ಟಿಕೊಂಡು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಜೀವ ಭಯಪಡಿಸಿರುತ್ತಾರೆ ಅಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಏಜಾಜ ಪಟೇಲ ತಂದೆ ಖಾಜಾಪಟೇಲ ಸಾ: ನೂರಹಿಲಾಯಿ ಮಜೀದ್ ಹತ್ತಿರ ಮಿಲ್ಲತನಗರ ಕಲಬುರಗಿ  ಇವರು ದಿನಾಂಕ 03/08/2015  ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ  ನಾನು ಮತ್ತು ನನ್ನ ಗೆಳೆಯರಾದ 1) ಅಬ್ದುಲ್ ಮತೀನ್ ತಂದೆ ಅಬ್ದುಲ್ ಸಮದ್ 2) ಅಬ್ಬಾಸಅಲಿ ತಂದೆ ಲಾಲ ಮಹಮ್ಮದ್ 3) ಶಾರುಕಶೇಖ ತಂದೆ ಮಹಮ್ಮದ್ ಮಶಾಕ್ 4) ಸಲೀಂ ತಂದೆ ಕರೀಮಸಾಬ್ 5) ಸೈಯದ್ ಜಾಖೀರ್ ತಂದೆ ಸೈಯದ್ ಮೈನೋದ್ದೀನ  ಎಲ್ಲರೂ ಕೂಡಿಕೊಂಡು ಮಿಲ್ಲತನಗರ ಬಡಾವಣೆಯ ಹಿಂದುಗಡೆ ಇರುವ ದಾವುಲ್ ಮಲ್ಲಿಕ್ ಚಿಲ್ಲಾದ ಹತ್ತಿರವಿರುವ ಖುಲ್ಲಾ ಜಾಗೆಯಲ್ಲಿ  ಹುಣಸೆ ಮರದ ಕೆಳಗೆ ಊಟ ಮಾಡುತ್ತಿದ್ದಾಗ  ಎರಡು ಮೋಟಾರ ಸೈಕಲ್ ಮೇಲೆ ಮೂರು, ಮೂರು ಜನರಂತೆ ಅಂದಾಜು 19 ರಿಂದ 25 ವರ್ಷ ವಯಸ್ಸಿನವರು ನಾವು ಕುಳಿತಲ್ಲಿಗೆ  ಅವರ  ಹಿಂದೆಯೇ ಒಬ್ಬನು ನಡೆದುಕೊಂಡು  ಬಂದವರೇ ಫಿರ್ಯಾದಿ ಮತ್ತು ಅವನ ಗೆಳೆಯರಿಗೆ ಸುತ್ತುವರೆದು  ಎಲ್ಲರಿಗೂ ಎದ್ದೇಳದಂತೆ ಹೇಳಿದಾಗ, ಗಡಬಡಿಸಿ ಎಳುತ್ತಿರುವಾಗ  ಅವರಲ್ಲಿ ಮೂರು  ಜನರು ತಮ್ಮ  ಹತ್ತಿರ ಇದ್ದ ತಲವಾರಗಳನ್ನು ಫಿರ್ಯಾದಿ ಮತ್ತು ಅವನ ಗೆಳೆಯರಿಗೆ ತೋರಿಸಿ ಹೆದರಿಸುತ್ತಾ ಅವರಲ್ಲಿ ಒಬ್ಬನು ಎ ಸಲಾವುದ್ದೀನ ಎಂದು ಕೂಗಿ ಅವರಿಗೆ ಕಿಸೆ ಚೆಕ್ಕು ಮಾಡು ಅಂತಾ ಹಿಂದಿಯಲ್ಲಿ ಹೇಳಿದಾಗ ಸಲಾವುದ್ದೀನ ಎಂಬುವವನು ನಮ್ಮಲ್ಲರಿಗೆ ಏ ಭೋಸಡಿಕೇ, ರಾಂಡಕೇ, ತುಮಾರೆ ಪಾಶಾ ಕಿತನಾ ಪೈಸ ಹೈ ಔರ ಮೋಬಾಯಿಲ್ ನಿಕಾಲೋ  ಎಂದು ಹೇಳುತ್ತಿದ್ದಾಗ  ಫಿರ್ಯಾದಿ ಮತ್ತು ಅವನ ಗೆಳೆಯರು ಅವರಿಗೆ ಅಂಜಿಕೊಂಡು ಸುಮ್ಮನೇ ಇದ್ದಾಗ  ಈ ಮೇಲಿನ ಎಲ್ಲಾ ಎಳು  ಜನರು ಫಿರ್ಯಾದಿ ಮತ್ತು ಅವನ ಗೆಳೆಯರ  ಕಿಸೆಯಲ್ಲಿ ಜಬರದಸ್ತಿಯಿಂದ ಕೈ ಹಾಕಿ ನಮ್ಮ ಹತ್ತಿರ ಇದ್ದ ನಗದು ಹಣ 18,000 ರೂ.  ಮತ್ತು ಒಂದು ನೋಕಿಯಾ,ಒಂದು ಸಾಮಸಂಗ ಮೋಬಾಯಿಲ್ ಅ:ಕಿ: 1000 ಹೀಗೆ ಒಟ್ಟು 19,000/- ರೂ. ದೋಚಿಕೊಂಡು, ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡು ಹೊಂಚು ಹಾಕಿ ಕುಳಿತವರ ಬಂಧನ :
ಅಶೋಕ ನಗರ ಠಾಣೆ : ದಿನಾಂಕ 04/08/2015 ರಂದು ರಾತ್ರಿ ರಾಮ ಮಂದಿರ ಸರ್ಕಲ ಹತ್ತಿರ  5-6 ಜನರು  ಕೈಯಲ್ಲಿ ತಲವಾರ ಹಿಡಿದುಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪ್ಲಾನ ಮಾಡುತ್ತ ನಿಂತ್ತಿದ್ದಾರೆ. ಅಂತಾ ಬಾತ್ಮಿ ಮೇರೆಗೆ ಶ್ರೀಮತಿ. ಸುಧಾ ಆದಿ  ಪಿ.ಐ  ಅಶೋಕನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ರಾಮ ಮಂದಿರ ಹತ್ತಿರ  ಹೊಗಿ ಮರೇಯಾಗಿ ನೊಡಲು  6 ಜನರು ಮುಖಕ್ಕೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ಕೈಯಲ್ಲಿ ತಲವಾರ ಮಾರಕಾಸ್ತ್ರಗಳನ್ನು ಹಿಡಿದು ದರೊಡೆಗೆ ಸಂಚು ರೂಪಿಸುತ್ತಿದ್ದನ್ನು ಖಾತ್ರಿ ಪಡಿಸಿಕೊಂಡು ಎಲ್ಲರೂ ದಾಳಿ ಮಾಡಿ ಹಿಡಿಯಲು ಹೊದಾಗ 3 ಜನರು ಸಿಕ್ಕಿದ್ದು ಇನ್ನೂ 3 ಜನರು ತಪ್ಪಿಸಿಕೊಂಡು ಓಡಿ ಹೋದರು. ಸೆರೆ ಸಿಕ್ಕವರ ಹೆಸರು ವಿಳಾಸ ವಿಚಾರಿಸಲು   1) ಗಿರೀಶ ತಂದೆ ಅಣ್ಣಪ್ಪಾ ಕಲಮೂಡಕರ ಸಾ: ಸಂಜಿವ ನಗರ ಗಂಜ ಕಲಬುರಗಿ 2) ಶರಣು ತಂದೆ ನಿಂಗಣ್ಣಾ ಗುಗ್ಗರಿ ಸಾ: ಭವಾನಿ ನಗರ ಗಂಜ ಕಲಬುರಗಿ  3) ಶ್ರೀಕಾಂತ ತಂದೆ ಅನಂತಯ್ಯಾ ಗುತ್ತೆದಾರ ಸಾ: ರಾಮ ನಗರ ಟಿ.ವಿ ಸ್ಟೇಷನ ಹತ್ತಿರ ಕಲಬುರಗಿ ಅಂಥಾ ತಿಳಿಸಿದ್ದು ಓಡಿ ಹೊದ 3 ಜನರ ಹೆಸರು ಕೇಳಿದಾಗ  1) ವಿರೇಶ ತಂದೆ ಶ್ರೀಕಾಂತ ಬಿರಾದಾರ  ಸಾ: ಭವಾನಿ ನಗರ ಕಲಬುರಗಿ , 2) ಪ್ರಭು ತಂದೆ ರಾಚಯ್ಯಾ ಸ್ವಾಮಿ ಸಾ: ಶಾಹಬಜಾರ ಕಲಬುರಗಿ  3) ಸಂದೀಪ ತಂದೆ ನಾರಾಯಣರಾವ ಚವ್ಹಾಣ  ಸಾ: ರಾಮ ನಗರ ಟಿ.,ವಿ ಸ್ಟೇಷನ ಕಲಬುರಗಿ  ಅಂತಾ ತಿಳಿಸಿದ್ದು ಸೇರೆ ಸಿಕ್ಕವರಲ್ಲಿ  ಗಿರೀಶನಿಗೆ ವಿಚಾರಿಸಿದಾಗ ಪಾಪ್ಯಾ ಮರ್ಡರ ಕೇಸಿನಲ್ಲಿ ಆರೋಪಿ ಇದ್ದೆ, ಜಾಮೀನ ಮೇಲೆ ಹೊರಬಂದಿರುತ್ತೆನೆ.  ಖರ್ಚಿಗೆ ಹಣ ಇಲ್ಲದೇ ಇರುವುದ್ದರಿಂದ ಮತ್ತು ವಕೀಲ ಫೀಸು ಕೊಡಬೇಕಾಗಿದ್ದರಿಂದ ದರೋಡೆ ಮಾಡಲು ಪ್ಲಾನ ಮಾಡಿರುತ್ತೆವೆ. ಎಂದು ಹೇಳಿದರು.  ಸದರಿಯವರಿಂದ  1) ಎರಡು ಹರಿತವಾದ ತಲವಾರಗಳು 2) ಮೂರು ಖಾರದ ಪಾಕೇಟಗಳು, 3) ಒಂದು ಹಗ್ಗ  4) ಮೂರು ಕಪ್ಪು ಬಟ್ಟೆಯ ಮಾಸ್ಕವನ್ನು  ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಶೋಕ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ,
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಮಡಿವಾಳ ತಂದೆ ಹಣಮಂತರಾಯ ಭಾಸಗಿ ಸಾ:ಫರಹತಾಬಾದ ಇವರ ತಮ್ಮನಾದ ಶ್ಯಾಮರಾಯ ಈತನು ಕಾರ ಮತ್ತು ಜೀಪಗಳ ಮೇಲೆ ಚಾಲಕ ಅಂತಾ ಕೆಲಸ ಮಾಡಿಕೊಂಡಿದ್ದು. ಅವನು ಯಾರಾದರೂ ಕರೆದರೆ ವಾಹನಗಳನ್ನು ಚಲಾಯಿಸಲು ಹೋಗಿತ್ತಿದ್ದನು. ದಿನಾಂಕ : 03/08/2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ತಮ್ಮನಿಗೆ ಕಲಬುರಗಿಯಿಂದ ಯಾರೋ ಪೋನ ಮಾಡಿ ಕಾರ ನಡೆಸುವುದಿದೆ ಬಾ ಅಂತಾ ಹೇಳಿದಾಗ ನಮ್ಮ ತಮ್ಮನು ಕಾರ ನಡೆಸಲು ಪೋನ ಬಂದಿದೆ, ನಾನು ಕಲಬುರಗಿಗೆ ಹೋಗುತ್ತೆನೆ ಅಂತಾ ಹೇಳಿ ತನ್ನ ಹೊಸ ಮೋಟಾರ ಸೈಕಲ ಮೇಲೆ ಮನೆಯಿಂದ ಹೋಗಿರುತ್ತಾನೆ. ನಂತರ ರಾತ್ರಿ 11:45 ಗಂಟೆಯ ಸುಮಾರಿಗೆ ಯಾರೋ ನಮ್ಮ ತಮ್ಮನ ಮೊಬೈಲದಿಂದ ನಮ್ಮಗೆ ಫೊನ ಮಾಡಿ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಕೆರೆಯಂಗಳದ ಹತ್ತಿರ ಒಂದು ಹೊಸ ಸ್ಪ್ಲೆಂಡರ ಮೋಟಾರ ಸೈಕಲ ಚಾಲಕನು ಕಲಬುರಗಿ ಕಡೆಗೆ ರಾತ್ರಿ ಅಂದಾಜು 11:30 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಎದುರಿನಿಂದ ಒಬ್ಬ ಕಾರನ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದರಿಂದ ಈ ಮೋಟಾರ ಸೈಕಲ ಮೇಲೆ ಇದ್ದ ಮನುಷ್ಯ ಸ್ಥಳದಲ್ಲಿಯೆ ಮೃತಪಟ್ಟಿದ್ದು ಅವನ ಮೃತದೇಹದ ಹತ್ತಿರ ಈ ಮೊಬೈಲ ದೊರಕಿದೆ ಅಂತಾ ತಿಳಿಸಿ, ಸದರಿ ಕಾರ ಚಾಲಕನು ತನ್ನ ಕಾರನ್ನು ಅಲ್ಲೇ ಬಿಟ್ಟು ಕತ್ತಲಲ್ಲಿ ಓಡಿಹೋಗಿರುತ್ತಾನೆ ಅಂತಾ ತಿಳಿಸಿದ ಕೂಡಲೇ ನಾನು, ನಮ್ಮ ತಂದೆ ಹಣಮಂತರಾಯ, ನಮ್ಮ ತಾಯಿ ಮಹಾದೇವಿ ಹಾಗೂ ಇತರರು ಕೂಡಿಕೊಂಡು ಸದರಿ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಮ್ಮನಾದ ಶ್ಯಾಮರಾಯ ಈತನು ಶವವು ರಸ್ತೆಯ ಮೇಲೆ ಬಿದಿದ್ದು, ಶವದ ಹತ್ತಿರ ಹೋಗಿ ನೋಡಲಾಗಿ ನಮ್ಮ ತಮ್ಮನ ಎಡಗಾಲು ,ಎಡಗೈ ಮುರಿದಂತೆ ಆಗಿದಲ್ಲದೆ ,ಎಡಭುಜದ ಹತ್ತಿರ ಭಾರಿರಕ್ತಗಾಯವಾಗಿದ್ದು ಮತ್ತು ತಲೆಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ನಮ್ಮ ತಮ್ಮ ನ ಶವ ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಮ್ಮ ತಮ್ಮನಿಗೆ ಅಪಘಾತ ಪಡಿಸಿದ ಕಾರ ನೋಡಲಾಗಿ ಅದರ ನಂಬರ ಕೆಎ 36 ಎನ್ 3633 ನೇದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಭೀಮರಾಯ ತಂದೆ ಸಾಯಿಬಣ್ಣ ನೈಕೊಡಿ ಸಾ: ಬುಟ್ನಾಳ  ಇವರು ದಿನಾಂಕ 04.08.2015 ರಂದು ಮುಂಜಾನೆ 09:15 ಗಂಟೆಗೆ ಜೇವರಗಿ ಪಟ್ಟಣದ ಹೊರವಲಯದಲ್ಲಿನ ಬಿ.ಎಸ್.ಎನ್.ಎಲ್ ಟವರ್ ಹತ್ತಿರ ಜೇವರಗಿ ಶಹಾಪುರ ಮೇನ್ ರೋಡ್‌ ಮೇಲೆ ಟಂಟಂ ವಾಹನ ನಂ ಕೆ.ಎ32ಸಿ3477 ನೇದ್ದರಲ್ಲಿ ನಾನು ಮತ್ತು ನನ್ನ ತಮ್ಮ ಶ್ರೀಶೈಲ, ಹಾಗು ರಾವುತಪ್ಪ ಹಡಪದ, ರಾಜಶೇಖರ, ಹುಸೇನಬಾಶಾ, ಬೀಬನ್,ಮದಿನಾ ಎಲ್ಲರು ಕುಳಿತುಕೊಂಡು ಹೋಗುತ್ತಿದ್ದಾಗ ಸದರಿ ಟಂಟಂ ನೇದ್ದರ ಚಾಲಕನು ತನ್ನ ಟಂಟಂ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತದ್ದಾಗ ಟಂಟಂನ ಮುಂದಿನ ಟೈರ್ ಒಡೆದು ಟಂಟಂ ರೋಡಿನ ಎಡಮಗ್ಗಲಾಗಿ ಪಲ್ಟಿಯಾಗಿ ಬಿದ್ದ ಪರಿಣಾಮ ನಮಗೆ ಭಾರಿ ಮತ್ತು ಸಣ್ಣಪುಟ್ಟ ಗಾಯಗಳಾಗಿದ್ದು , ಅಪಘಾತದ ನಂತರ ಟಂಟಂ ಚಾಲಕನು ತನ್ನ ಟಂಟಂ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ನಂತರ ನಾವುಗಳು ಉಪಚಾರ ಕುರಿತು ಜೇವರಗಿ ಪಟ್ಟಣದ ಸರಕಾರಿ ಆಸ್ಪತ್ರೆಗೆ ಸೇರಿಕೆಯಾದಾಗ ಅಂದಾಜು 10:೦೦ ಗಂಟೆಗೆ ರಾವುತಪ್ಪ ಈತನು ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.