POLICE BHAVAN KALABURAGI

POLICE BHAVAN KALABURAGI

18 September 2014

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಶ್ರೀನಿವಾಸ ತಂದೆ ಶರಣಪ್ಪಾ ದಾಬಿಮನಿ ಸಾ : ರಾಜಾಪೂರ ರವರು ದಿನಾಂಕ 17-09-2014 ರಂದು ರಾತ್ರಿ ವೆಲ್ಡಿಂಗ್ ಕೆಲಸ ಮುಗಿಸಿಕೊಂಡು ಮನಗೆ ಹೋಗುತ್ತಿರುವಾಗ, ರಾಜಾಪೂರ ಹನುಮಾನ ಗುಡಿ ಹತ್ತಿರ ನಮ್ಮ ರಾಜಾಪೂರ ಬಡಾವಣೆಯ 1) ಸಿದ್ದು ತಂದೆ ಈರಣ್ಣ ನಂದೂರ 2) ರಾಹುಲ ತಂದೆ ಈರಣ್ಣ ನಂದೂರ 3) ಸಿದ್ಯಾ ತಂದೆ ಅಣವೀರಪ್ಪ ಹೊನ್ನಳ್ಳಿ 4) ಸಂಗಮೇಶ ತಂದೆ ಅಣವೀರಪ್ಪ ಹೊನ್ನಳ್ಳಿ ಸಾಃ ಎಲ್ಲರು ರಾಜಾಪೂರ ಇವರೆಲ್ಲರು ಒಮ್ಮೆಂದೊಮ್ಮೆಲೆ ಬಂದವರೆ ನನಗೆ ತಡೆದು ನಿಲ್ಲಿಸಿ ಏ ವಡ್ಡ ಸೀನ್ಯಾ ಸೂಳೆ ಮಗನೆ ಅಂತ ಜಾತಿ ಎತ್ತಿ ಅವಾಚೈ ಬೈದು, ಸಿದ್ಯಾ ಮತ್ತು ಸಂಗಮೇಶ ಇವರಿಬ್ಬರು ನನಗೆ ಏಕಾ-ಏಕಿಯಾಗಿ ಗಟ್ಟಿಯಾಗಿ ಹಿಡಿದರು ಸಿದ್ದು ನಂದೂರ ಈತನು  ಅಲ್ಲೇ ಬಿದ್ದಿದ್ದ ಖಾಲಿ ಬೀರ ಬಾಟ್ಲಿ ತೆಗೆದುಕೊಂಡು ನನ್ನ ಬಲ ಹಣೆಯ ಮೇಲೆ ಜೋರಾಗಿ ಹೊಡೆದನು ಅದರಿಂದ ನನಗೆ ರಕ್ತಗಾಯವಾಯಿತು, ರಾಹುಲ ಈತನು ಸಿದ್ದು ನಂದೂರ ಇವನ ಕೈಯಲ್ಲಿ ಇದ್ದ ಬೀರ ಬಾಟ್ಲಿ ಕಸಿದುಕೊಂಡು ಈ ವಡ್ಡ ಭೋಸಡಿ ಮಗನಿಗೆ ಸೊಕ್ಕು ಬಹಳ ಬಂದಿದೆ ಖಲಾಸ ಮಾಡೋಣ ಅಂತ ಅಂದವನೆ ಕೈಯಲ್ಲಿದ್ದ ಬೀರ ಬಾಟ್ಲಿಯಿಂದ ಮೂಗಿನ ಬಲಭಾಗದ ಹತ್ತಿರ ಜೋರಾಗಿ ಹೊಡೆದನು ಅದರಿಂದ ನನಗೆ ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 16-09-2014 ರಾತ್ರಿ ಶ್ರೀ ವಿನಯ ತಂದೆ ರಾಜೇಂದ್ರಕುಮಾರ  ಸಾ: ಸರಸ್ವತಿ ಗೋದಾಮ ಸುಪರ ಮಾರ್ಕೇಟ ರೋಡ  ಗುಲಬರ್ಗಾ ಮತ್ತು ಆತನ ತಂದೆಯಾದ ರಾಜೇಂದ್ರಕುಮಾರ ಇಬ್ಬರು ಬಾವಿಕಟ್ಟಿ ಬುಕ್ಕ ಸ್ಟಾಲ ಹತ್ತಿರವಿರುವ ಮೆಡಿಕಲ್ ಸ್ಟೋರ ಕಡೆಗೆ ಮನೆಯಿಂದ ಬಂದು ಜಗತ ಸರ್ಕಲ್ ,ಸುಪರ ಮಾರ್ಕೇಟ ಮುಖ್ಯ ರಸ್ತೆಯನ್ನು ನಡೆದುಕೊಂಡು ದಾಟುತ್ತಿರುವಾಗ ಜಗತ ಸರ್ಕಲ್ ಕಡೆಯಿಂದ ಮೋ/ಸೈಕಲ್ ನಂ; ಕೆಎ 32 ವಾಯಿ 8070 ರ ಸವಾರನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಯಾದ ರಾಜೇಂದ್ರಕುಮಾರನಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ರಾಜೇಂದ್ರನಿಗೆ ಎಡಗಾಲ ಮೊಳಕಾಲು ಕೆಳಗೆ ಭಾರಿ ಗುಪ್ತಪೆಟ್ಟು ಮತ್ತು ರಕ್ತಗಾಯ, ಬಲ ಟೊಂಕಿಗೆ ಭಾರಿ ಗುಪ್ತ ಪೆಟ್ಟು ಹಾಗು ಎಡಗೈ ರಿಸ್ಟ ಹತ್ತಿರ ತರಚೀದ ಗಾಯಮಾಡಿ ತನ್ನ ಮೋ/ಸೈಕಲ್ ಅಲ್ಲೇ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.