POLICE BHAVAN KALABURAGI

POLICE BHAVAN KALABURAGI

05 October 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಬಾಬುರಾವ ತಂದೆ ಗುರುನಾಥ ಜಮಾದಾರ ಸಾಃ ಮಳ್ಳಿ ಗ್ರಾಮ ಇವರು ದಿನಾಂಕ 03/10/2017 ರಂದು 5.30 ಪಿ.ಎಮಕ್ಕೆ ಮಳ್ಳಿ ಗ್ರಾಮದ ಕ್ರಾಸ ಹತ್ತಿರ ರೋಡಿನ ಮೇಲೆ ಟಂಟಂ ನಂ ಕೆಎ-32 ಸಿ-6514 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೃತ ನಾಗಪ್ಪಾ ಹಾಗೂ ಫಿರ್ಯಾದಿದಾರರು ಕುಳಿತುಕೊಂಡು ಮೋಟಾರ ಸೈಕಲ ನಂ ಕೆಎ-32 ಇಬಿ-4665 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಫಿರ್ಯಾದಿಯ ಬಲಗಾಲಿನಮೊಳಕಾಲಿಗೆ ಭಾರಿ ರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ಗಾಯ ಹಾಗೂ ನಾಗಪ್ಪಾ ಈತನಿಗೆ ಬಲಗಾಲಿನ ತೊಡೆಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು, ಮತ್ತು ಬಲಗಾಲಿನ ಪಾದಕ್ಕೆ ರಕ್ತಗಾಯವಾಗಿದ್ದು, ಉಪಚಾರ ಕುರಿತು 108 ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ನಾಗಪ್ಪಾ ತಂದೆ ಭೀಮಣ್ಣ ಜಮದಾರ ಈತನು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಜಗದೇವಿ ಗಂಡ ಮಹಾದೇವಪ್ಪಾ ಸಿರಗಾಪೂರ ಸಾ:ನರೋಣ ಹಾ:ವ:ಪ್ಲಾಟ ನಂ 142 ಶಿವಲಿಂಗ ನಗರ ಆಳಂದ ರೋಡ ಕಲಬುರಗಿ ರವರ ಮಗನಾದ ಸಂಜೀವಕುಮಾರ ಇತನಿಗೆ ಈಗ ಸುಮಾರು 6 ವರ್ಷಗಳ ಹಿಂದೆ ಓಕಳಿ ಗ್ರಾಮದ ಅಶ್ವಿನಿ ತಂದೆ ಮಹಾದೇವಪ್ಪ ಇವಳೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ಆದರೆ ಅಶ್ವಿನಿ ಇವಳು ನಮ್ಮ ಮನೆಯಲ್ಲಿ ನಡೆಯದೆ ಮದುವೆಯಾದ 3 ತಿಂಗಳಲ್ಲಿ ತನ್ನ ತವರು ಮನೆಗೆ ಹೋಗಿರುತ್ತಾಳೆ. ನಂತರ ಅಶ್ವಿನಿ ಮತ್ತು ಅವರ ಮನೆಯವರು ನಮ್ಮ ಮೇಲೆ ವರದಕ್ಷಿಣೆ ಕಿರುಕುಳ ಕೇಸು ಮಾಡಿರುತ್ತಾರೆ. ಆ ಕೇಸು ಸದ್ಯ ಕೊರ್ಟನಲ್ಲಿ ನಡೆದಿರುತ್ತದೆ. ಅಶ್ವಿನಿಯವರ ತಂದೆಯಾದ ಮಹಾದೇವಪ್ಪಾ, ಅವರ ಸಂಬಂದಿಕರಾದ ರಾಜಕುಮಾರ, ಮಲ್ಲಪ್ಪಾ, ಸಿದ್ದಾರೂಡ ಮತ್ತು ಅವರಿಗೆ ಪರಿಚಯದವನಾದ ಶರಣಗೌಡ ಇವರೆಲ್ಲರೂ ಕೂಡಿಕೊಂಡು ನಿನ್ನೆ ದಿನಾಂಕ:03-10-2017  ರಂದು ಮದ್ಯಾಹ್ನ ಮನೆಗೆ ಬಂದು ನಮ್ಮ ಮಗಳಿಗೆ 20 ಲಕ್ಷ ರೂಪಾಯಿ ಕೊಡಬೇಕು ಆ ಮೇಲೆ ನಾವು ಹಾಕಿದ ಕೇಸನ್ನು ವಾಪಸ್‌ ತೆಗೆದುಕೊಳ್ಳುತ್ತೆವೆ ನಂತರ ಡೈವರ್ಸ ಕೊಡಬೇಕು ಇಲ್ಲ ಅಂದ್ರೆ ನಿಮಗೆ ಬಿಡುವದಿಲ್ಲ ಅಂತ ಹೇಳಿ ದಮಕಿ ಹಾಕಿ ಹೋಗಿರುತ್ತಾರೆ. ನಂತರ ನಿನ್ನೆ ರಾತ್ರಿ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂದಿಕರಾದ ಮಹಾದೇವಪ್ಪಾ ಓಕಳಿ, ರಾಜಕುಮಾರ, ಮಲ್ಲಪ್ಪಾ, ಸಿದ್ದಾರೂಡ ಮತ್ತು ಅವರಿಗೆ ಪರಿಚಯದವನಾದ ಶರಣಗೌಡ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆಯೊಳಗೆ ಪ್ರವೇಶ ಮಾಡಿ ಮಹಾದೆವಪ್ಪಾ ಇವನು ರಂಡಿ ನಿನ್ನ ಮಗ ಛೆಕ್ಕಾ ಹನ ನಮ್ಮ ಮಗಳಿಗೆ ಡೈವರ್ಸ ಕೊಡಬೇಕು, 20 ಲಕ್ಷ ರೂಪಾಯಿ ಕೋಡಬೇಕು ಅಂತ ಅಂದಾಗ ನಾನು ನಿಮಗೆ ಯಾಕ ರೊಕ್ಕ ಕೊಡಬೇಕು ಅಂತ ಕೇಳಿದಕ್ಕೆ ನಿನ್ನ ಬೊಸಡಾನ ಹಡಾ ನಿಂದೆ ಎಲ್ಲಾ ಅಂತ ಬೈಯುತ್ತಿದ್ದಾಗ, ರಾಜಕುಮಾರ ಇವನು ಕೈ ಹಿಡಿದು ಎಳೆದು ಬಗ್ಗಿಸಿ ಹೆಡಕಿನ ಮೇಲೆ  ಹೊಡೆದಿರುತ್ತಾನೆ, ಸಿದ್ದಾರೂಡ ಇವನು ಬೆನ್ನಿನ ಮೇಲೆ ಕೈಯಿಂದ ಹೊಡೆದಿರುತ್ತಾನೆ. ಮಲ್ಲಪ್ಪಾ ಮತ್ತು ಶರಣಗೌಡ ಇವರು ಇವರೌನ ತುಲ್ಲಾ ಇವಳಿಗೆ ಬಿಡಬ್ಯಾಡ್ರಿ ಖಲಾಸ ಮಾಡ್ರಿ ಅಂತ ಜೀವದ ಭಯ ಹಾಕುತ್ತಿದ್ದಾಗ ನಾನು ಅಂಜಿ ಚೀರಾಡುತ್ತಿದ್ದಾಗ ನನಗೆ ಹೊಡೆಯುದನ್ನು ಬಿಟ್ಟು ಅವರೆಲ್ಲರೂ ಓಡಿ ಹೋಗಿರುತ್ತಾರೆ. ನಂತರ ನನ್ನ ಮಗ ನರೇಂದ್ರಕುಮಾರ ಇತನಿಗೆ ವಿಷಯ ಗೊತ್ತಾಗಿ ಮನೆಗೆ ಬಂದು ನನಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಶ್ರೀಶೈಲ್ ತಂದೆ ಗಿರಿಮಲ್ಲಪ್ಪಾ ಹುಗ್ಗಿ ಸಾ:ತೋನಸನಳ್ಳಿ (ಎಸ್) ಇವರು ದಿನಾಂಕ:04.10.2017 ರಂದು ತೋನಸನಳ್ಳಿ (ಎಸ್‌) ರಸ್ತೆಯ ಕಟಿಂಗ್ ಶಾಪ್ ಹತ್ತಿರ ನಿಂತಾಗ ಸತೀಶ ತಂದೆ ರಾಜು ಹುಗ್ಗಿ ಹಾಗೂ ಇತರರು ಗುಂಪು ಕಟ್ಟಿಕೊಂಡು ಬಂದು ಸತೀಶ ನನಗೆ "ನಿಂದ್ರಲೇ ಬೋಸಡಿಮಗನೆ ಎಲ್ಲಗೆ ಹೊಂಟಿದಿ, ಮೊನ್ನೆ ಸರಕಾರದ ಮನೆ ಹಂಚಿಕೆ ಮಾಡುವಾಗ ನನಗೆ ಬೈದಿದ್ದಿ ನಿನ್ನ ತಿಂಡಿ ಜಾಸ್ತಯಾಗಿದೆ ,ಅಂತಾ ಬೈಯುತ್ತಾ ಅವರಲ್ಲಿ ಶರಣು ಮತ್ತು ಬಸವರಾಜ ಇಬ್ಬರು ತಡೆದು ನಿಲ್ಲಿಸಿ ಹಿಡಿದುಕೊಂಡಾಗ ಸತೀಶ ಇತನು ತನ್ನ ಕೈಯಲ್ಲಿದ್ದ ತಲವಾರದಿಂದ ಎಡ ರಟ್ಟೆಗೆ ಹೊಡೆದು ರಕ್ತಗಾಯ ಮಾಡಿದಾಗ ಘಾಬರಿಯಿಂದ ಚೀರಾಡುವಾಗ ಶಿವಬಸಪ್ಪಾ ಮತ್ತು ರಮೇಶ ಇವರು ನನ್ನ ಹೆಡಕಿಗೆ ಕೈಹಾಕಿ ನೆಲಕ್ಕೆ ಹಾಕಿದಾಗ ಪ್ರೀತಮ್ ಇತನು ಕಾಲಿನಿಂದ ಬೆನ್ನಿಗೆ ಹೊಡೆಯುತಿದ್ದಾಗ ತಲೆ ಸುತ್ತು ಬಂದು ಬಿದ್ದಾಗ ಎಲ್ಲರೂ ಕೂಡಿ "ನಡೆಯಿರಿ ಸೂಳೆ ಮಗ ಸತ್ತಿರುತ್ತಾನೆ" ಹೋದರು ನಂತರ ನಮ್ಮ ಅಣ್ಣನಿಗೆ ತಿಳಿಸಿದ್ದರಿಂದ ಸ್ಥಳಕ್ಕೆ ಬಂದು ಗಾಯ ಪೆಟ್ಟು ಹೊಂದಿದ ನನಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಬಾದ ತಂದು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರೇವೂರ ಠಾಣೆ : ಶ್ರೀ ಸುನಿಲ ತಂದೆ ರೂಪಸಿಂಗ ರಾಠೋಡ ಸಾ:ಅರ್ಜುಣಗಿ ತಾಂಡಾ ಇವರು ದಿನಾಂಕ:02/10/2017 ರಂದು ಮುಂಜಾನೆ ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ನಮ್ಮ ಮನೆಯ ಮುಂದೆ ಇರುವ ಗಲ್ಲಿ ಇಂದ ರಸ್ತೆಯ ಮುಖಾಂತರ ಹೊಗುವಾಗ ಚನ್ನಪ್ಪ ತಂದೆ ಸೊಮಸಿಂಗ ರಾಠೋಡ ನಮ್ಮ ಮನೆಯ ಪಕ್ಕದವನಾಗಿದ್ದು ಎಲೈಯ ಸುಳಿಯಾಮಗನೆ ನಮ್ಮ ಮನೆಯ ಸಂದಿಯಾಗಿಂದು ಎಕಿ ಮಾಡಲಿಕೆ ಬಂದಿದ್ದಿಯಾ ಸುಳಿಯಾಮಗನೆ ಇನ್ನು ಮ್ಯಾಗ ನಮ್ಮ ಗಲ್ಲಿಯ ರಸ್ತೆ ಯಿಂದ ಬರಲಾರದಂಗ ನಿನ್ನ ಕಾಲಕಡಿಯುತ್ತೆನೆ.ಅಂದನು ನಾನು ಎಕಿ ಮಾಡಲ್ಯಾಕ ಬಂದಿಲ ನನ್ನ ವೈಯಕ್ತಿಕ ಕೆಲಸದ ಸಲುವಾಗಿ ಹೊಗುತ್ತಾ ಇದ್ದೆನೆ. ಅಂತಾ ಚನ್ನಪ್ಪನಿಗೆ ನಾನು ಹೇಳಿದೆನು. ಲೆ ಭೋಸಡಿಮಗನೆ ನನಗೆ ಎನು ಬುದ್ದಿ ಹೇಳುತಿಯಾ ಸುಳೆ ಮಗನೆ ಅಂದವನೆ ಅವನ ಅಣ್ಣನಿಗೆ ಎ ಯಶವಂತ ಮನೆಯಿಂದ ಕೊಡಲಿತೆಗೆದುಕೊಂಡು ಜಲ್ದಿಬಾ ಅಂದನು ಅಣ್ಣ ತಮ್ಮ ಇಬ್ಬರು ಕುಡಿಕೊಂಡು ನನ್ನ ಎದೆಯ ಮೇಲಿನ ಅಂಗಿ ಹಿಡಿದ್ದು ಚನ್ನಪ್ಪ ನೆಲಕೆ ಹಾಕಿದನು ಯಶವಂತ ಎ ಸಚೀನ ಅಂಜನಾ ಎ ಬಾರೋ ಈ ಸುಳಿಯಾಮಗನಿಗೆ ಖಲಾಸಮಾಡಿ  ಮುಗಿಸಿ ಬಿಡೊಣ ಅಂದು ನನಗೆ ಕೊಡಲಿಯತ್ತಿ ಯಶವಂತ ನನ ಎಡಕಿವಿಯ ಮಡ್ಡಿಯ ಪಕ್ಕದಲ್ಲಿ ಹೊಡೆದನು ನನಗೆ ಹೊಡೆದತಕ್ಷಣ ಎ ಯವ್ವಾ ಸತ್ತೆನೊ ಎಂದು ದೊಡದ್ವನಿಯಿಂದ ಚಿರಿದ್ದನ್ನು ಅಷ್ಟರಲ್ಲಿ ನನ್ನ ಶಬ್ದಕೆಳಿ ನನ್ನ ತಾಯಿಯವರಾದ ಶಿತಾಬಾಯಿ ಗಂಡ ರೂಪಸಿಂಗ ಮತ್ತು ಬಳಿರಾಮ ತಂದೆ ಸೆವು ಚವ್ಹಾಣ ಪ್ರೇಮಕುಮಾರ ತಂದೆ ನಾಮು ಚವ್ಹಾಣ ಇವರೆಲ್ಲರು ನನ್ನ ಹೊಡೆದ ರಕ್ತ ಗಾಯಗಳನ್ನು ನೋಡಿ ನಮ್ಮ ತಾಯಿ ಮತ್ತು ಇವರೆಲ್ಲರು ಕುಡಿಕೊಂಡು ಜಗಳಬಿಡಿಸುವಾಗ ನನ್ನ ತಾಯಿಯ ಕೊರಳಲ್ಲಿಯಿದ್ದ ಎರಡು ತಾಳಿಯ ಬಟ್ಟಲು ಮತ್ತು ಬಂಗಾರದ 8 ಗುಂಡುಗಳು ಯಶವಂತ,ಚನ್ನಪ್ಪ,ಸಚೀನ,ಅಂಜನಾ ಇವರೆಲ್ಲರು ಕುಡಿಕೊಂಡು ನನ್ನ ತಾಯಿಯ ಸಿರೆ,ಸೆರಗ ಮತ್ತು ಕುಬಸ ಎಳೆದು ಹೊಡೆಯುವಾಗ ಐದು ಜನರಲ್ಲಿ ನನ್ನ ತಾಯಿಯ ಬಂಗಾರದ ಒಡವೆಗಳು ಜಗಳ ನಡೆಯುವಾಗ ಬಿಡಿಸಲಕ್ಕೆ ಬಂದಾಗ ಈ ಮೇಲ್ಕಂಡವರು ಕೊರಳಿನಿಂದ ಬಂಗಾರದ ಒಡವೆಗಳು ಕಿತ್ತಿಕೊಂಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.