POLICE BHAVAN KALABURAGI

POLICE BHAVAN KALABURAGI

06 April 2014

Gulbarga District Reported Crimes

ಆಕ್ರಮವಾಗಿ ಸ್ಪೋಟಕ ವಸ್ತಗಳನ್ನು ಸಾಗಿಸುತ್ತಿದ್ದವರ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ:05/04/2014 ರಂದು 4-00 ಪಿಎಮ ಸುಮಾರಿಗೆ ವಿಶ್ವವಿದ್ಯಾಲಯ ಪೊಲೀಸ ಠಾಣಾ ವ್ಯಾಪ್ತಿಯ ಗುಲಬರ್ಗಾ-ಸೇಡಂ ರೋಡಿನ ಸಣ್ಣೂರ ಕ್ರಾಸ ಬಳಿ ಬ್ಲಾಸ್ಟಿಂಗ ಮಾಡಲು ಸ್ಪೋಟಕ ವಷ್ತುಗಳನ್ನು ವಾಹನಗಳಲ್ಲಿ ಸಾಗಣಿಕೆ ಮಾಡುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಸಂತೋಷ ಬಾಬು ಎ.ಎಸ್.ಪಿ. ಗ್ರಾಮಾಂತರ ವಿಭಾಗ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೇಡಂ ರೋಡ ಮುಖಾಂತರ ಸಣ್ಣೂರ ಕ್ರಾಸ ಹತ್ತಿರ ಬಂದು ನಿಂತೆವು. ಅಂದಾಜು 5-20 ಪಿಎಮ ಆದಾಗ ಗುಲಬರ್ಗಾ ಕಡೆಯಿಂದ ಒಂದು 407 ವಾಹನ ನಂ. KA-32-A-8809 ಮತ್ತು ಅದರ ಹಿಂದೆ ಒಂದು ಜೀಪ ನಂ. KA-32-M-3279 ನೇದ್ದವುಗಳನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ನಿಲ್ಲಿಸಿ ವಾಹನಗಳಲ್ಲಿ ಇದ್ದು ಸ್ಪೋಟಕ ವಸ್ತುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಮತ್ತು ಸದರಿ ಸರಬರಾಜು ವಾಹನ ಚಲಾಯಿಸಿಕೊಂಡು ಹೋಗುವ ಚಾಲಕ 1) ರಾಧೇಶಾಮ ತಂದೆ ಮನೋಹರಲಾಲ ಧಾರೋ  ಸಾ|| ಮೇಲ್ಯಾಸ ತಾ|| ಮಂಡಲ್, ಜಿ|| ಬಿಲವಾಡ ರಾಜ್ಯಸ್ಥಾನ ಹಾ|||| ತೇಜು ಚವ್ಹಾಣ ಕಡಗಂಚಿ ರವರ ಮನೆಯಲ್ಲಿ ಬಾಡಿಗೆ, 2) ಸೀತಾರಾಮ ತಂದೆ ಲಾದುಲಾಲ  ಸಾ|| ಮೇಲ್ಯಾಸ್ ತಾ|| ಮಂಡಲ್, ಜಿ|| ಬಿಲವಾಡ ರಾಜ್ಯಸ್ಥಾನ ಹಾ|||| ಸುಲ್ತಾನಪೂರ ಕಾಗಿ ದಾಲ್ಮಿಲದಲ್ಲಿ ಬಾಡಿಗೆ ಮತ್ತು ಸುಪರವೈಜರ್ ಕೆಲಸ ಮಾಡುವ 3) ಗುರುಲಿಂಗಪ್ಪ ತಂದೆ ವಿಜಯಕುಮಾರ ರಾಂಪೂರೆ,  ಸಾ|| ರೇವಣಸಿದ್ದೇಶ್ವರ ಕಾಲೋನಿ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ವಾಹನ ಮತ್ತು ಮಾಲು ಒಟ್ಟು ಅ||ಕಿ|| 4,64,720/- ರೂ. ಬೆಲೆಬಾಳುವ ಮುದ್ದೆಮಾಲ ಜೋತೆಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಗಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 05-04-2014 ರಂದು 04:00 ಪಿ.ಎಂ ಕ್ಕೆ ಖಚಿತವಾದ ಬಾತ್ಮಿ  ದೊರೆತ್ತಿದ್ದೆ ನೆಂದೆರೆ, ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ  ಬರುವ ವಿರೇಂದ್ರ ಪಾಟೀಲ ಬಡಾವಣೆಯ ಜಿ.ಡಿ. ಸಾರ್ವಜನಿಕರ ಗಾರ್ಡನದಲ್ಲಿ 03 ಜನರು ದುಂಡಾಗಿ ಕುಳಿತು ಕೆಲವು ಜನರು ಹಣಕ್ಕೆ ಪಣ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದವರ ಮೇಲೆ ಸಿಬ್ಬಂದಿಯವರೊಂದಿಗೆ 04:45 ಪಿ.ಎಂ. ಕ್ಕೆ ದಾಳಿ ಮಾಡಿ 03 ಜನರನ್ನು ಹಿಡಿದು 1. ವಸೀಮ ತಂದೆ ಹಮೀದ ಪಟೇಲ ಸಾ :ಮಹೀಬೂಬ ನಗರ ಗುಲಬರ್ಗಾ 2. ಜಾನಿಮಿಯಾ ತಂದೆ ಗೌಸ ಮಿಯಾ ಪಟೇಲ 3. ಶಾಕೀರ ತಂದೆ ದಾವೂದ ಬಾಗ ಸಾ : ಇಬ್ಬರು  ಅಜಾದಪೂರ ರೋಡ ಗುಲಬರ್ಗಾ ರವರಿಂದ ಹಾಗು ಸ್ಥಳದಲ್ಲಿ ಹೀಗೆ ಒಟ್ಟು 5,520/- ರೂ. ಹಾಗು 52 ಇಸ್ಪೇಟ್ ಎಲೆಗಳುನ್ನು  ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಪ್ಪಾ ತಂದೆ ಅಯ್ಯಪ್ಪಾ ರವರು  ದಿನಾಂಕ 27-03-2014 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ  ತನ್ನ ಮನೆಯಿಂದ ಏಕಿ ಮಾಡುವ ಸಲುವಾಗಿ ಅಪ್ಪನ ಮೈದಾನಕ್ಕೆ ನಡೆದುಕೊಂಡು ಹೋಗುವಾಗ ಮೈಹಿಬಾಬ ಮಜೀದ ಎದುರು ರೋಡ ಮೇಲೆ ಗೋವಾ ಹೋಟೆಲ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಡಬ್ಲೂ-0801 ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಚಂದ್ರಕಾಂತ ತಂದೆ ತಿಪ್ಪಣ್ಣ ನಾಯಕ ಸಾ : ವಿದ್ಯಾ ನಗರ ಗುಲಬರ್ಗಾ ಇವರು ದಿನಾಂಕ : 27-03-2014  ರಂದು ರಾತ್ರಿ 08-30 ಗಂಟೆಗೆ ತನ್ನ ಹೀರೋ ಹೊಂಡಾ ಸಿಡಿ ಡಿಲೇಕ್ಸ್ ಮೋಟಾರ ಸೈಕಲ್ ನಂ ಕೆಎ - 32 - ಎಸ್ - 2185 ನೇದ್ದನ್ನು ಗುಲಬರ್ಗಾ ನಗರದ ಶ್ರೀ ಶರಣಬಸವೇಶ್ವರ ಗುಡಿಯ ಅವರಣದಲ್ಲಿ ನಿಲ್ಲಿಸಿ ನಾನು ದರ್ಶನ ಕುರಿತು ಹೋಗಿ ದರ್ಶನ ಮಾಡಿ ಮರಳಿ ರಾತ್ರಿ 09-30 ಗಂಟೆ ಸುಮಾರಿಗೆ ನನ್ನ ವಾಹನ ಹತ್ತಿರ ಬರಲು ಅಲ್ಲಿ ನನ್ನ ಮೋಟಾರ ಸೈಕಲ ಇರಲಿಲ್ಲ ನಾನು ಅಂದಿನಿಂದ ನನ್ನ ಮೋಟಾರ ಸೈಕಲ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ  ಕಾರಣ ನನ್ನ ಹೀರೋ ಹೊಂಡಾ ಮೋಟಾರ ಸೈಕಲ ನಂ ಕೆಎ - 32 - ಎಸ್ - 2185 ಅ.ಕಿ 15,000=00 ರೂ. ಬೆಲೆ ಬಾಳುವುದನ್ನು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.