POLICE BHAVAN KALABURAGI

POLICE BHAVAN KALABURAGI

18 June 2014

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸಬೀಹಾ ಬೇಗಂ ಗಂಡ ಅಬುಬಕರ್ ಸಿದ್ದಿಕ್ ಸಾ;ಪಾಶಾಪೂರ ಗುಲಬರ್ಗಾ ಇವರನ್ನು 3 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರೂ ಅಬುಬಕರ್ ಇತನೊಂದಿಗೆ ಸಂಫ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರನಿಗೆ 1 ತೊಲೆ ಬಂಗಾರ 21.000/- ರೂಪಾಯಿ ಮತ್ತು ಮನೆಯ ಬಳಕೆಯ ಸಾಮಾನುಗಳು ಕೊಟ್ಟು ಸುಮಾರು 2.50.000/- ಖರ್ಚು ಮಾಡಿದ್ದು ಇರುತ್ತದೆ. ಮದುವೆಯಾದ ನಂತರ ಸುಮಾರು 3-4 ತಿಂಗಳವರೆಗೆ ನನಗೆ ಚೆನ್ನಾಗಿ ನೋಡಿಕೊಂಡಿದ್ದು ನಂತರ ಗಂಡ ಅಬೂಬಕರ ಅತ್ತೆ ಶಮೀಮ ಬೇಗಂ ಮಾವ ಯೂಸುಫ ಅಲಿ ನಾದಿನಿ ಆಪ್ರೀನ್ ಬೇಗಂ ಇವರೆಲ್ಲರೂ ಕೂಡಿಕೊಂಡು ತೊಂದರೆ ಕೊಡುತ್ತಾ ಊಟ ಕೊಡದೇ ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಮಾಡುತ್ತಿರುತ್ತಾರೆ. ದಿನಾಂಕ 19.03.2014 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಗಂಡ ಅತ್ತೆ ಮಾವ ನಾದಿನಿ ಎಲ್ಲರೂ ಕೂಡಿಕೊಂಡು ನನಗೆ ಹಾಗೂ ನನ್ನ ಚಿಕ್ಕ ಮಗುವಿನೊಂದಿಗೆ  ಮನೆಯಿಂದ ಹೊರಗೆ ಹಾಕಿ ನಿನ್ನ ತವರು ಮನೆಯಿಂದ 3 ಲಕ್ಚ ರೂಪಾಯಿ ಇಲ್ಲದಿದ್ದರೆ ಒಂದು ಪ್ಲಾಟ ತೆಗೆದುಕೊಂಡು ಬಾ ಎಂದು ನನಗೆ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಮನೆಯಿಂದ ಹೊರಗೆ ಹಾಕಿರುತ್ತಾರೆ. ಆವಾಗಿನಿಂದ ನಾನು ನನ್ನ ಮಗುವಿನೊಂದಿಗೆ ನನ್ನ ತವರು ಮನೆಯಲ್ಲಿಯೇ ಇರುತ್ತೇನೆ. ನನ್ನ ತವರು ಮನೆಗೆ ಬಂದು ದೊಡ್ಡ ರೌಡಿಗಳನ್ನು ಕರೆಯಿಸಿ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಶಿವಶರಣಪ್ಪ ತಂದೆ ರಾಮಣ್ಣ ಕೋರೆ, ಸಾ : ಆಜಾದಪೂರ ಗ್ರಾಮ ತಾ||ಜಿ|| ಗುಲಬರ್ಗಾ ರವರು ದಿನಾಂಕ: 17-06-2014 ರಂದು ರಾತ್ರಿ ಸಮಯ ನಾನು ನನ್ನ ಹೆಂಡತಿ ಶಾಮಲಾಬಾಯಿ, ಮಗಳು ಧೀಕ್ಷಾ ಮೂರು ಜನರು ಊಟ ಮಾಡಿಕೊಂಡು ಮಲಗಿಕೊಂಡೇವು. ಮದ್ಯರಾತ್ರಿ ಅಂದರೆ ದಿನಾಂಕ:18-06-2014 ರಂದು 0200 ಗಂಟೆಯ ಸುಮಾರಿಗೆ ಯಾರೋ ಕಳ್ಳರು ಹಿಂದಿನ ಬಾಗಿಲಿಗೆ ಜೋರಾಗಿ ದಬ್ಬಿ ಕೊಂಡಿ ಮುರಿದು ಒಳಗೆ ಪ್ರವೇಶಿಸಿ ನಾವು ಮಲಗಿರುವ ಸ್ಥಳದಲ್ಲಿ ಗುರುತಿಸಲಾಗದಂತೆ ಮುಖಕ್ಕೆ ಬಟ್ಟೆಕಟ್ಟಿಕೊಂಡು ಬಂದು ಮೂರು ಜನರು ತಮ್ಮಲ್ಲೆರ ಕೈಯಲ್ಲಿ ತಲವಾರ ಹಿಡಿದುಕೊಂಡು ಬಂದು ನಮ್ಮಗೆ ಹೆದರಿಸಿ ನೀವು ಚೀರಾಡಿದರೆ ನಿಮ್ಮ ಜೀವ ತೆಗೆಯುತ್ತೇವೆ ಅಂತಾ ಹೆದರಿಸಿ ನಿಮ್ಮ ಮನೆಯಲ್ಲಿರುವ ಬೆಳ್ಳಿ ಮತ್ತು ಬಂಗಾರದ ಸಾಮಾನುಗಳು ಎಲ್ಲಿ ಇಟ್ಟಿದ್ದಿರಿ ಅಂತಾ ಹೆದರಿಸಿ ಅಲಮಾರಿ ಮೇಲೆ ಇಟ್ಟಿದ್ದ ಕೀಲಿಯನ್ನು ತೆಗೆದುಕೊಂಡು ಅಲಮಾರಿಯನ್ನು ತೆಗೆದು ಅಲಮಾರಿ ಒಳಗೆ ಇಟ್ಟ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಮತ್ತು ಮೊಬೈಲಗಳನ್ನು ಮತ್ತು ಮೋಟಾರ ಸೈಕಲ್ ಹೀಗೆ ಒಟ್ಟು 1, 75, 000/- ರೂಪಾಯಿ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಗೃಹಿಣಿಗೆ ಕಿರುಕಳ ನೀಡಿ ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಗಂಪುಬಾಯಿ ಗಂಡ ಪಂಡಿತ ರಾಠೋಡ ಮು:ನಾಯಕ ನಗರ ಮುರುಮ ತಾ:ಉಮರ್ಗಾ ಜಿ: ಉಸ್ಮಾನಾಬಾದ ಇವರ ಮಗಳಾದ ಸಂಗಿತಾ ಇವಳಿಗೆ ಆಳಂದ ತಾಲ್ಲೂಕಿನ ಹೊದಲೂರ ತಾಂಡಾದ ಅರ್ಜುನ ಇತನಿಗೆ 3 ವರ್ಷಗಳ ಹಿಂದೆ ನಮ್ಮ ದಾರ್ಮಿಕ ಪದ್ದತಿಯಂತೆ ಮದುವೆ ಮಾಡಿ ಕೊಟ್ಟಿದ್ದು ಕೇಲವು ದಿನಗಳ ಕಾಲ ಗಂಡ ಹೆಂಡತಿ ಚೆನ್ನಾಗಿ ಇದ್ದು ಅವರಿಗೆ ನೀಷಾ ಒಂದು ವರ್ಷದ ಹೆಣ್ಣು ಮಗಳು ಇರುತ್ತಾಳೆ. ಈ ಹಿಂದೆ ಒಂದುವರೆ ವರ್ಷದಿಂದ ಅವಳ ಗಂಡ ಅತ್ತೆ ಮಾವ ಮೈದುನ ಇವರೂ ನನ್ನ ಮಗಳಿಗೆ ಕೆಲಸಕ್ಕೆ ಹೊಗುವುದಿಲ್ಲಾ ನಿನಗೆ ಕೆಲಸ ಬುರುವುದಿಲ್ಲಾ ಅಂತಾ ಜಗಳ ತಗೆದು ಹೊಡೆಬಡೆ ಮಾಡಿ ತವರು ಮನೆಗೆ ಕಳುಹಿಸಿದ್ದರಿಂದ ಅವಳಿಗೆ ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿದ್ದರಿಂದ ಅವಳು ನಮ್ಮೂರಿಗೆ ಬಂದಾಗ ನಾನು ಮತ್ತು ವೆಂಕಟ , ಕಮಲಾಬಾಯಿ ಇವರು ಕೂಡಿ ಅವಳ ಗಂಡನಿಗೆ ತಿಳಿ ಹೇಳಿ ಗಂಡನೊಂದಿಗೆ ಸಂಸಾರ ಮಾಡಲು ಹೇಳಿ ಕಳುಹಿಸಿರುತ್ತೇವೆ. ನಂತರ ನನ್ನ ಮಗಳಿಗೆ ಹೆಣ್ಣು ಮಗಳು ಹುಟ್ಟಿದ್ದರಿಂದ ನೀನು ಗಂಡು ಮಗು ಏಕೆ ಹಡೆದಿಲ್ಲಾ ಎಂದು ಹಿಂಸೆ ಕೊಟ್ಟು ಅವಳಿಗೆ ಹೊಡೆ ಬಡೆ ಮಾಡುತ್ತಿದ್ದ ಬಗ್ಗೆ ನನ್ನ ಮಗಳು ಊರಿಗೆ ಬಂದಾಗ ವಿಷಯ ತಿಳಿಸಿರುತ್ತಾಳೆ. ದಿನಾಂಕ 16/06/2014 ರಂದು ರಾತ್ರಿ 8 ಗಂಟೆಗೆ ನನ್ನ ಮಗಳು ಪೋನ ಮಾಡಿ ವಿಷಯ ತಿಳಿಸಿದೆನೆಂದರೆ ನನ್ನ ಗಂಡ 1) ಅರ್ಜುನ ತಂದೆ ತುಳಸಿರಾಮ ಚವ್ಹಾಣ  2) ತುಳಸಿರಾಮ ತಂದೆ ಕಿಶನ ಚವ್ಹಾಣ 3) ಲಲಿತಾಬಾಯಿ ಗಂಡ ತುಳಸಿರಾಮ ಚವ್ಹಾಣ 4) ಅರವಿಂದ ತಂದೆ ತುಳಸಿರಾಮ ಚವ್ಹಾಣ ಇವರು ಕೂಡಿ ಗಂಡು ಮಗು ಹುಟ್ಟಿಲ್ಲಾ ಗಂಡು ಮಗು ಹಡೆದಿಲ್ಲಾ ಎಂದು ಹೊಡೆಬಡೆ ಮಾಡುತ್ತಿದ್ದಾರೆ ನನಗೆ ಬಹಳ ತ್ರಾಸ ಕೊಡುತ್ತಿದ್ದಾರೆ ನಾನು ಸಾಯುತ್ತೇನೆ ಎಂದು ತಿಳಿಸಿರುತ್ತಾಳೆ. ದಿನಾಂಕ 17/06/2014 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನನಗೆ ಗೊತ್ತಾಗಿದೆನೆಂದರೆ ನನ್ನ ಮಗಳು ಸಂಗಿತಾ ಗಂಡ ಅರ್ಜುನ ವಯ: 25 ವರ್ಷ ಇವಳು ಮದ್ಯಾಹ್ನ 1 ಗಂಟೆ ಸುಮಾರಿಗೆ ಮನೆಯಲ್ಲಿ ಯ್ಯಾರು ಇಲ್ಲದ ಸಮಯದಲ್ಲಿ ಅವರ ತ್ರಾಸ ತಾಳಲಾರದೆ ಮನನೊಂದುಕೊಂಡು ಸೀಮೆ ಎಣ್ಣೆ ಮೈ ಮೇಲೆ ಸುರಿದು ಕೊಂಡು ಮೈ ಸುಟ್ಟು ಕೊಂಡಿರುತ್ತಾಳೆ ಆಸ್ಪತ್ರೆಗೆ ಒಯ್ದಿರುತ್ತಾರೆ ಅಂತಾ ವಿಷಯ ಗೊತ್ತಾಗಿ ನಾವು ಬಂದು ನೋಡಲು ನನ್ನ ಮಗಳು ಗುಲಬರ್ಗಾದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಅಂಬರಾಯ ತಂದೆ ಸಿದ್ದಣ್ಣಾ ಪಾಟೀಲ ಸಾಃ ಮನೆ ನಂ. 12-75 ರಾಜಾಪೂರ ಗುಲಬರ್ಗಾ ರವರು  ದಿನಾಂಕಃ 17/06/2014 ರಂದು 06:45 ಪಿ.ಎಂ. ಸುಮಾರಿಗೆ ನಾನು ನನ್ನ ಆಟೋ ನಂ. ಕೆ.ಎ 32 ಎ 6445 ನೇದ್ದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹುಮನಾಬಾದ ರಿಂಗ್ ರೋಡ್ ಕಡೆಗೆ ಹೋಗುವ ಸಲುವಾಗಿ ಆದರ್ಶ ನಗರ ರಿಂಗ್ ರೋಡ್ ಸಮೀಪ ಹೋಗುತ್ತಿರುವಾಗ ಆದರ್ಶ ನಗರ ಕಡೆಯಿಂದ ಕಾರ ನಂ. ಕೆ.ಎ 32 ಎನ್ 1893 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಡಿಕ್ಕಿ ಪಡಿಸಿದ್ದರಿಂದ ಆಟೋ ಉರುಳಿ ಬಿತ್ತು. ಆಗ ನಾನು ರೋಡಿನ ಮೇಲೆ ಬಿದ್ದೇನು. ಆಟೋದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರುವುದಿಲ್ಲಾ. ನನಗೆ ಬಲಗಡೆ ಕಪಾಳಕ್ಕೆ ಭಾರಿರಕ್ತಗಾಯ, ಬಲಭುಜಕ್ಕೆ ಮತ್ತು ಭುಜದ ಕೆಳಗೆ ಹಾಗು ಎಡಕಾಲಿನ ಪಾದದ ಮೇಲೆ ತರಚಿದ ರಕ್ತಗಾಯವಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.