ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ
ಠಾಣೆ : ಶ್ರೀಮತಿ ಸಬೀಹಾ ಬೇಗಂ ಗಂಡ ಅಬುಬಕರ್ ಸಿದ್ದಿಕ್
ಸಾ;ಪಾಶಾಪೂರ ಗುಲಬರ್ಗಾ ಇವರನ್ನು 3 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರೂ ಅಬುಬಕರ್ ಇತನೊಂದಿಗೆ
ಸಂಫ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರನಿಗೆ 1 ತೊಲೆ ಬಂಗಾರ 21.000/-
ರೂಪಾಯಿ ಮತ್ತು ಮನೆಯ ಬಳಕೆಯ ಸಾಮಾನುಗಳು ಕೊಟ್ಟು ಸುಮಾರು 2.50.000/- ಖರ್ಚು ಮಾಡಿದ್ದು
ಇರುತ್ತದೆ. ಮದುವೆಯಾದ ನಂತರ ಸುಮಾರು 3-4 ತಿಂಗಳವರೆಗೆ ನನಗೆ ಚೆನ್ನಾಗಿ ನೋಡಿಕೊಂಡಿದ್ದು ನಂತರ
ಗಂಡ ಅಬೂಬಕರ ಅತ್ತೆ ಶಮೀಮ ಬೇಗಂ ಮಾವ ಯೂಸುಫ ಅಲಿ ನಾದಿನಿ ಆಪ್ರೀನ್ ಬೇಗಂ ಇವರೆಲ್ಲರೂ
ಕೂಡಿಕೊಂಡು ತೊಂದರೆ ಕೊಡುತ್ತಾ ಊಟ ಕೊಡದೇ ಅವಾಚ್ಯ ಶಬ್ದಗಳಿಂದ ಬೈಯ್ಯುವುದು
ಮಾಡುತ್ತಿರುತ್ತಾರೆ. ದಿನಾಂಕ 19.03.2014 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಗಂಡ ಅತ್ತೆ ಮಾವ
ನಾದಿನಿ ಎಲ್ಲರೂ ಕೂಡಿಕೊಂಡು ನನಗೆ ಹಾಗೂ ನನ್ನ ಚಿಕ್ಕ ಮಗುವಿನೊಂದಿಗೆ ಮನೆಯಿಂದ ಹೊರಗೆ ಹಾಕಿ ನಿನ್ನ ತವರು ಮನೆಯಿಂದ 3 ಲಕ್ಚ
ರೂಪಾಯಿ ಇಲ್ಲದಿದ್ದರೆ ಒಂದು ಪ್ಲಾಟ ತೆಗೆದುಕೊಂಡು ಬಾ ಎಂದು ನನಗೆ ಹೊಡೆಬಡೆ ಮಾಡಿ ಜೀವದ
ಬೆದರಿಕೆ ಹಾಕಿ ಮನೆಯಿಂದ ಹೊರಗೆ ಹಾಕಿರುತ್ತಾರೆ. ಆವಾಗಿನಿಂದ ನಾನು ನನ್ನ ಮಗುವಿನೊಂದಿಗೆ ನನ್ನ
ತವರು ಮನೆಯಲ್ಲಿಯೇ ಇರುತ್ತೇನೆ. ನನ್ನ ತವರು ಮನೆಗೆ ಬಂದು ದೊಡ್ಡ ರೌಡಿಗಳನ್ನು ಕರೆಯಿಸಿ ನಿನಗೆ
ಖಲಾಸ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು
ಪ್ರಕರಣ :
ವಿಶ್ವವಿದ್ಯಾಲಯ
ಠಾಣೆ : ಶ್ರೀ
ಶಿವಶರಣಪ್ಪ ತಂದೆ ರಾಮಣ್ಣ ಕೋರೆ, ಸಾ :
ಆಜಾದಪೂರ ಗ್ರಾಮ ತಾ||ಜಿ|| ಗುಲಬರ್ಗಾ
ರವರು ದಿನಾಂಕ: 17-06-2014 ರಂದು ರಾತ್ರಿ ಸಮಯ ನಾನು ನನ್ನ ಹೆಂಡತಿ ಶಾಮಲಾಬಾಯಿ, ಮಗಳು
ಧೀಕ್ಷಾ ಮೂರು ಜನರು ಊಟ ಮಾಡಿಕೊಂಡು ಮಲಗಿಕೊಂಡೇವು. ಮದ್ಯರಾತ್ರಿ ಅಂದರೆ ದಿನಾಂಕ:18-06-2014 ರಂದು
0200 ಗಂಟೆಯ ಸುಮಾರಿಗೆ ಯಾರೋ ಕಳ್ಳರು ಹಿಂದಿನ ಬಾಗಿಲಿಗೆ ಜೋರಾಗಿ
ದಬ್ಬಿ ಕೊಂಡಿ ಮುರಿದು ಒಳಗೆ ಪ್ರವೇಶಿಸಿ ನಾವು ಮಲಗಿರುವ ಸ್ಥಳದಲ್ಲಿ ಗುರುತಿಸಲಾಗದಂತೆ ಮುಖಕ್ಕೆ
ಬಟ್ಟೆಕಟ್ಟಿಕೊಂಡು ಬಂದು ಮೂರು ಜನರು ತಮ್ಮಲ್ಲೆರ ಕೈಯಲ್ಲಿ ತಲವಾರ ಹಿಡಿದುಕೊಂಡು ಬಂದು ನಮ್ಮಗೆ ಹೆದರಿಸಿ
ನೀವು ಚೀರಾಡಿದರೆ ನಿಮ್ಮ ಜೀವ ತೆಗೆಯುತ್ತೇವೆ ಅಂತಾ ಹೆದರಿಸಿ ನಿಮ್ಮ ಮನೆಯಲ್ಲಿರುವ ಬೆಳ್ಳಿ ಮತ್ತು
ಬಂಗಾರದ ಸಾಮಾನುಗಳು ಎಲ್ಲಿ ಇಟ್ಟಿದ್ದಿರಿ ಅಂತಾ ಹೆದರಿಸಿ ಅಲಮಾರಿ ಮೇಲೆ ಇಟ್ಟಿದ್ದ ಕೀಲಿಯನ್ನು ತೆಗೆದುಕೊಂಡು
ಅಲಮಾರಿಯನ್ನು ತೆಗೆದು ಅಲಮಾರಿ ಒಳಗೆ ಇಟ್ಟ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಮತ್ತು
ಮೊಬೈಲಗಳನ್ನು ಮತ್ತು ಮೋಟಾರ ಸೈಕಲ್ ಹೀಗೆ ಒಟ್ಟು 1, 75, 000/- ರೂಪಾಯಿ ಬೆಲೆಬಾಳುವ ವಸ್ತುಗಳನ್ನು
ದೋಚಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment