POLICE BHAVAN KALABURAGI

POLICE BHAVAN KALABURAGI

30 August 2011

GULBARGA DIST REPORTED CRIME

ಹಲ್ಲೆ ಪ್ರಕರಣ:
ಶಹಾಬಾದ ನಗರ ಠಾಣೆ:
ಶ್ರೀ ಸೈಯದ ರುಕ್ಮೂದ್ದೀನ ತಂದೆ ಸೈಯದ ಹುಸೇನಸಾಬ ಚಿತ್ತಾಪುರವಾಲೆ ಅಟೋಚಾಲಕ ಸಾ|| ಶಿಬಿರ ಕಟ್ಟಾ ರವರು ನಾನು ಮತ್ತು ಮಹೇಶ ಇಬ್ಬರು ಅಟೋ ನಂಬರ ಹಚ್ಚಿ ಪಾಳಿಯಲ್ಲಿ ನಿಂತಿದ್ದು, ಸುನೀಲ ತಂದೆ ಕಲ್ಯಾಣೆ ಇತನು ತನ್ನ ಅಟೋವನ್ನು ನಂಬರ ಹಚ್ಚಲಾರದೆ ಪ್ಯಾಸಿಂಜರ ತುಂಬುತ್ತಿದ್ದನು ಆಗ ನಾನು ಮತ್ತು ಮಹೇಶ ಕೂಡಿ ನಂಬರ ಹಚ್ಚಿ ಪ್ಯಾಸೆಂಜರ ತುಂಬಿಕೊಂಡು ಹೋಗು ಅಂದಿದ್ದಕ್ಕೆ ಸುನೀಲ ಇತನು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ಮತಿ ಶರಣಮ್ಮ  ಗಂಡ ಅರ್ಜುನ ಭೀಮನಳ್ಳಿ ಸಾ: ಗುಲಾಬ ವಾಡಿ ಗುಲಬರ್ಗಾ ರವರು ನಾನು ಕೆ.ಬಿ.ಎನ್ ಕಾಂಪ್ಲೇಕ್ಸದಲ್ಲಿರುವ ಪ್ರೀನ್ಸ ಪೂಟವೇರ ಅಂಗಡಿ ಎದುರುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಕೆಎ 32 ಕೆ 4430 ನೇದ್ದರ ಮೋಟಾರ ಸೈಕಲ್ ಚಾಲಕ ಲಕ್ಷ್ಮಿಕಾಂತ ತಂದೆ ಮಾನಪ್ಪಾ ಇತನು ಅಲಕ್ಷತನದಿಂದ ನಡೆಯಿಸಿ ಡಿಕ್ಕಿ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯು.ಡಿ.ಅರ್. ಪ್ರಕರಣ :

ಫರಹತಾಬಾದ ಠಾಣೆ : ಶ್ರೀ ಕೃಷ್ಣಕುಮಾರ ಅಧೀಕ್ಷಕರು ಕೇಂದ್ರ ಕಾರಾಗೃಹ ಗುಲಬರ್ಗಾ ರವರು ನಮ್ಮ ಕಾರಾಗೃಹ ದಲ್ಲಿ ಮೃತ ಮಲ್ಲಿಕಾರ್ಜುನ ತಂದೆ ಸಾಯಪ್ಪಾ ಅಗಸರ ಸಾ: ಬಟಗೇರ (ಕೆ) ತಾ: ಸೇಡಂ ಈತನು ಸೇಡಂ ಪೊಲೀಸ್ ಠಾಣೆ ಗುನ್ನೆ ನಂ: 149/2011 ನೇದ್ದರ ಪ್ರಕರಣದಲ್ಲಿ ಆರೋಪಿತನಿರುವದರಿಂದ ದಸ್ತಗಿರಿ ಮಾಡಿ ನ್ಯಾಯಾಂಗಕ್ಕೆ ಕೊಟ್ಟು ಕಳುಹಿಸಿದ್ದು, ದಿನಾಂಕ: 28/8/2011 ರಂದು   ಕೇಂದ್ರ ಕಾರಾಗೃಹದಲ್ಲಿ ಸಾಯಂಕಾಲ 6-10 ಗಂಟೆಗೆ ವಿಚಾರಣಾ ಬಂಧೀ ಸಂಖ್ಯೆ 10477 ರಲ್ಲಿ ಸೇರಿಕೆಯಾಗಿದ್ದು,   ಮಲ್ಲಿಕಾರ್ಜುನ ಇತನು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳು ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಅಂದೇ ದಿನಾಂಕ: 28-8-2011 ರಂದು ರಾತ್ರಿ ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದು, ಸದರಿಯವನು ಉಪಚಾರ ಹೊಂದುತ್ತಾ ದಿನಾಂಕ: 29-8-2011 ರಂದು ಬೆಳಗ್ಗೆ 10-40 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಪ್ರಕರಣ:

ಮಳಖೇಡ ಠಾಣೆ : ಶೇಖರ ತಂದೆ ಸಂಗಯ್ಯಾ ಜಂಗಮ್ ಸಾ: ಸತಗುರು ಕ್ಯಾರಿಯರ್ಸ ಆದೀತ್ಯ  ನಗರ ಮಳಖೇಡ ರವರು ನಾನು ಪ್ರತಿದಿನ ಲಾರಿಗಳಲ್ಲಿ ಸಿಮೆಟ್ ಲೋಡ್ ಮಾಡಿ ಬೇರೆ ಬೇರೆ ಕಡೆಗೆ ಕಳುಹಿಸಿತ್ತಿದ್ದು ಅದರಂತೆ ದಿ: 12-08-2011 ರಂದು 4 ಲಾರಿಗಳ ನಂ, ಎ.ಪಿ.ನಂ, 16-ಎಕ್ಸ್ 9986. 02] ಎ.ಪಿ. 12-ಯು.6962. 03]  ಎ.ಪಿ. 26. ಎಕ್ಸ್ -6872. 04] ಎ.ಪಿ. 22. ವ್ಹಿ -4309. ನೇದ್ದು ಕಳುಸಿದ್ದು, ದಿನಾಂಕ 13-08.2011. ರಂದು  ಎ.ಪಿ. 12 ಯು. 8586. ನೇದ್ದನ್ನು ಸಹ ಸದರಿ ವಿಳಾಸಕ್ಕೆ  ಕಳುಹಿಸಿದ್ದು  ನಂತರ ದಿನಾಂಕ  15-08-2011.ರಂದು ಲಾರಿ ನಂ, ಎ.ಪಿ. 12-ವ್ಹಿ.1512. ನೇದ್ದು ಕಳಿಸಿದ್ದು ಅದು ಸಹ ಸಿಮೆಂಟ್ ಲೋಡ ಮಾಡಿ  ಒಟ್ಟು 06. ಲಾರಿಗಳಲ್ಲಿ ಪ್ರತಿ ಲಾರಿಯಲ್ಲಿ 340. ಚೀಲದಂತೆ ಒಟ್ಟು 2040. ಚೀಲ ಸಿಮಂಟ್ ಒಟ್ಟು ಅಂದಾಜು ಕಿಮ್ಮತ್ತು 5.63.040=00 ರೂಗಳು. ನೇದ್ದರ ಸಿಮೇಂಟನ್ನು  M/S UTCL FALAKHNAMA Shivaramapally. ವಿಳಾಸಕ್ಕೆ ಸಿಮೆಂಟ್ ಖಾಲಿ ಮಾಡಲು ತಿಳಿಸಿ ಟಪಾಲ ಕೊಟ್ಟು ಕಳುಹಿಸಿದೆವು. ಆದರೆ ಸಿಮೆಂಟ್ ಲೋಡ ಮಾಡಿಸಿದ ಏಜೆಂಟ್ ಗೀರಿಧರ ಪಿ.ಆರ್, ಮತ್ತು ಲಾರಿ ನಂ, 01] ಎ.ಪಿ. 16. ಎಕ್ಸ್ 9986. ನೇದ್ದರ ಚಾಲಕ ರಫೀ ಮತ್ತು ಲಾರಿ ಮಾಲಕ ವೆಲು ಕೊಂಡಲ ಸಾ: ಗಗನ ಪವಾಡ 02] ಎ.ಪಿ. 12.ಯು.6962. ನೇದ್ದರ ಚಾಲಕ ಮೀನಾಜ ತಂದೆ ಲಾರಿ ಮಾಲಿಕ ಹುಸೇನ್ ಸಾ: ಕೀಶನ್ ಭಾಗ  03] ಎ.ಪಿ. 26. ಏಕ್ಸ್ -6872 ನೇದ್ದರ ಚಾಲಕ ರಫೀಕ ಮತ್ತು ಲಾರಿ ಮಾಲಿಕ ಮಹ್ಮದ ಮೌಲಾನಾ ಸಾ: ಕೀಶನ್ ಬಾಗ್  04] ಎ.ಪಿ. -22. ವ್ಹಿ 4309. ನೇದ್ದರ ಲಾರಿ ಚಾಲಕ ಇರ್ಸಾಧ ಮತ್ತು ಲಾರಿ ಮಾಲಿಕ ಹುಸೇನ ಖಾದರಿ  ಸಾ: ಎ.ಬಿ. ನಗರ  05] ಎ.ಪಿ. 12. ಯು, 8586 ನೇದ್ದರ ಲಾರಿ ಚಾಲಕ ಸುಧಾಕರ್ ಮತ್ತು ಲಾರಿ ಮಾಲಿಕ ಖಾಜಾಮೀಯಾ ಸಾ: ಕಿಶನ್ ಭಾಗ  06] ಎ.ಪಿ. 12. ವ್ಹಿ 1512 ನೇದ್ದರ ಲಾರಿ ಚಾಲಕ  ರಜಾಕ ಮತ್ತು ಲಾರಿ ಮಾಲಿಕ ಅಬ್ದುಲ್ ಗನಿ ಸಾ: ರಾಜೇಂದ್ರ ನಗರ ಇವರಲ್ಲರೂ ಕೂಡಿ ನಾನು ನಂಬಿಕೆಯ ಮೇಲೆ ಲೋಡ್ ಮಾಡಿ ಕಳಿಸಿದ ಸಿಮೆಂಟ್ M/S UTCL FALAKHNAMA Shivaramapally. ವಿಳಾಸಕ್ಕೆ ಸಿಮೆಂಟ್ ಮುಟ್ಟಿಸದೆ ಬೇರೆ ಕಡೆಗೆ ಸಾಗಿಸಿ ಲಾರಿ ಚಾಲಕರು ಮತ್ತು ಮಾಲಿಕರು  ಹಾಗೂ ಏಜೆಂಟ್  ಗೀರಿಧರ ಪಿ.ಆರ್ ಇವರು ಕೂಡಿ ಕೊಂಡು ನಮಗೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುತ್ತಾರೆ,  ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.