POLICE BHAVAN KALABURAGI

POLICE BHAVAN KALABURAGI

30 October 2016

KALABURAGI DISTRICT REPORTED CRIMES

ಗ್ರಾಮೀಣ ಪೊಲೀಸ್ ಠಾಣೆ:
ಅಪರಿಚಿತ ಶಪ ಪತ್ತೆ: ದಿನಾಂಕ. 29-10-2016 ರಂದು ಶ್ರೀ. ಮಹಮ್ಮದ ರಫೀಕ ತಂದೆ ಮಹಮ್ಮದ ಮಹಿಬೂಬಸಾಬ ಸಾ;ಬುಲಂದ ಪರ್ವೆಜ ಕಾಲೂನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ.28-10-2016 ರಂದು ರಾತ್ರಿಯಿಂದ ದಿನಾಂಕ 29-10-2016 ರಂದು ಬೆಳಗಿನ ಜಾವದ ಮಧ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಫಯೂಮ ಸೌದಿ ಇವರ ಕಟ್ಟಡ ಮನೆಯ ಎದರುಗಡೆ ಸಿಟೌಟ ತರಹ ಇರುವ ರೂಮಿನ ಜಾಗೆಯಲ್ಲಿ ಸದರಿ ಅಪರಿಚಿತ ವ್ಯಕ್ತಿಗೆ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹರಿತವಾದ ಚಾಕುದಿಂದ ಹೊಡೆದು ಭಾರಿ ಗಾಯಗೊಳಿಸಿ ಕೊಲೆ ಮಾಡಿ  ಆತನ ಹತ್ತಿರ ಯಾವುದೆ ಸಾಕ್ಷಿಗಳನ್ನು ಇಡದಂತೆ ಸಾಕ್ಷಿ ನಾಶ ಪಡಿಸಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಕೊಲೆಯಾದ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಮತ್ತು ರಕ್ತ ಸಮ್ಮಂದಿಕರ ಪತ್ತೆ ಹಾಗೂ ಕೊಲೆ ಮಾಡಿದ ಆಪಾದಿತರನ್ನು ಪತ್ತೆ ಹಚ್ಚುವ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ  ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊರ್ಳಳಲಾಗಿದೆ.
ಚೌಕ ಪೊಲೀಸ್ ಠಾಣೆ:
ಬಾಲಕ ಕಾಣೆ ಪ್ರಕರಣ: ದಿನಾಂಕ 29.10.2016 ರಂದು ಶ್ರೀಮತಿ ದ್ರೌಪತಿ ಗಂಡ ಅನಿಲಕುಮಾರ ದಾಸರ ಸಾಃ ಬೇಳಕೋಟಾ ತಾಃಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತಾನು ಪಿನ್ನು, ಹಣಗಿ ವ್ಯಾಪಾರ ಮಾಡಿಕೊಂಡು ಗಂಡ ಹಾಗೂ ಮಕ್ಕಳೊಂದಿಗೆ ಬೇಲಕೋಟಾ ಗ್ರಾಮದಲ್ಲಿ ವಾಸವಾಗಿದ್ದು. ತನ್ನ ಗಂಡ ಅನಿಲ ಕುಮಾರ ಇವರು ಡ್ರೈವರ್ ಕೆಲಸ ಮಾಡಿಕೊಂಡು ಇರುತ್ತಾರೆ. ನನ್ನ ಸೋಹದರ ಮಾವ ವೆಂಕಪ್ಪ ಇವರ ಮಗಳಾದ ಕಮಲಾಬಾಯಿ ಅವರ ಮಗನಾದ ಸಾಯಿರಾಮ ತಂದೆ ನರಸಿಂಹಲು ದಾಸರ ನಮ್ಮ ಹತ್ತಿರವೆ ಇದ್ದು ವಿಧ್ಯಾಬ್ಯಾಸ ಮಾಡುತ್ತಿದ್ದು. ದಿಃ 26.10.2016 ರಂದು ಸಾಮಾನು ಖರಿದಿ ಮಾಡುವ ಸಲುವಾಗಿ ತರಕಾರಿ ಮಾಕೆðಟ ಹತ್ತಿರ ಇರುವ ಚೈನಾ ಕಾಂಪ್ಲೆಕ್ಸಗೆ ಬಂದು ನಾನು ಸಾಮಾನು ಖರಿದಿ ಮಾಡುತ್ತಿದ್ದಾಗ ನನ್ನ ಸಂಗಡ ಬಂದಿದ್ದ ಸಾಯಿರಾಮನು ಅಂದಾಜು 04.00 ಗಂಟೆ ಸುಮಾರಿಗೆ ಚೈನಾ ಕಾಂಪ್ಲೇಕ್ಸ ಹತ್ತೀರದಿಂದ ತಪ್ಪಿಸಿಕೊಂಡಿದ್ದು ಹುಡುಕಾಡಿದರೂ ಸಹಃ ಸಿಕ್ಕಿರುವುದಿಲ್ಲಾ, ನಂತರ ಈ ವಿಷಯವನ್ನು ನನ್ನ ಗಂಡನಿಗೆ ತಿಳಿಸಿದ್ದು ಅವರು ಸಹಃ ಕಲಬುರಗಿ ಬಂದು ಏಲ್ಲಾ ಕಡೆಗಳಲ್ಲಿ, ನಮ್ಮ ಬಂಧು ಬಳಗದಲ್ಲಿ, ದೇವಸ್ಥಾನಗಳಲ್ಲಿ, ಸಿಟಿ ಬಸ್ ಸ್ಟ್ಯಾಂಡ ಹತ್ತೀರ, ಸೂಪರ ಮಾಕೆðಟದ ಮುಂತಾದ ಕಡೆಗಳಲ್ಲಿ ಇಬ್ಬರೂ ಸೇರಿ ಇಂದಿನವರೆಗೂ ಹುಡುಕಾಟ ಮಾಡಿದರೂ ಸಹಃ ಸಿಕ್ಕಿರುವುದಿಲ್ಲಾ. ಕಾಣೆಯಾದ ನನ್ನ ಸೋದರಳಿಯನ ಪತ್ತೆ ಮಾಡಿಕೊಡುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

29 October 2016

KALABURAGI DISTRICT REPORTED CRIMES

ಜೇವರಗಿ ಠಾಣೆ :  ಶ್ರೀ ಮಹ್ಮದ ತಾಲೀಬ ಹುಸೇನ ತಂದೆ ಲಾಲೀಮ್ ಹುಸೇನ ಶೇಖ ವಯಾಃ 56 ವರ್ಷ, ಜಾತಿಃ ಮುಸ್ಲಿಂ ಉಃ ಸ್ಟೇಷನರಿ ಕೆಲಸ ಸಾಃ ಓಂನಗರ ಜೇವರಗಿ ಇವರು ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ ನನಗೆ ವಯಾಃ 17 ವರ್ಷದ ಮಗಳಿರುತ್ತಾಳೆ ಅವಳು ಜೇವರಗಿ ಪಟ್ಟಣದ ವಿದ್ಯಾಬ್ಯಾಸ ಮಾಡುತ್ತಾಳೆ, ನಮ್ಮ ಮನೆಯ ಸಮೀಪ ಗಣೇಶ ಜಾದವ ಇತನ ಮನೆ ಇರುತ್ತದೆ. ಅವನ ಪರಿಚಯ ಕೂಡಾ ಇರುತ್ತದೆ. ಅವನು ಆಗಾಗ ನಮ್ಮ ಮನೆಗೆ ಬಂದು ಹೋಗಿ ಮಾಡುತ್ತಿದ್ದನು. ಅಲ್ಲದೆ ಅವನು ನಮ್ಮ ಮನೆಯವರ ಸಂಗಡ ಮತ್ತು ನಮ್ಮ ಮಗಳು ಇವಳೊಂದಿಗೂ ಕೂಡಾ ಸಲುಗೆಯಿಂದ ಮಾತನಾಡುವದು ಮಾಡುತ್ತಿದ್ದನು. ಅದಕ್ಕೆ ನಾವು ಒಂದು ದಿವಸ ಅವನಿಗೆ ನೀವು ನಮ್ಮ ಮಗಳ ಸಂಗಡ ಹೀಗೆ ಮಾತನಾಡುವುದು ಸರಿ ಇಲ್ಲಾ ಅಂತಾ ಅವನಿಗೂ ಮತ್ತು ಅವನ ಮನೆಯವರಿಗೂ ಬುದ್ದಿ ಹೇಳಿದ್ದೆವು.  ದಿ. 26.10.2016 ರಂದು ಮುಂಜಾನೆ ನಾನು ಮನೆಯಿಂದ ಜೇವರಗಿ ಪಟ್ಟಣದ ಪೊಸ್ಟ ಆಫೀಸ್ ಹತ್ತಿರ ಇರುವ ನಮ್ಮ ಸ್ಟೇಶನರಿ ಅಂಗಡಿಗೆ ಬಂದಿದ್ದೆನು. ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಸಮೀನಾ ಖಾತುನ್ ಇವಳು ಪೋನ ಮಾಡಿ  ಮಗಳು  ಇವಳು ಮದ್ಯಾಹ್ನ 2.00 ಗಂಟೆಗೆ  ಮನೆಯಿಂದ ಬಿಸ್ಕಿಟ್ ತರುತ್ತೆನೆ ಅಂತಾ ಅಂಗಡಿಗೆ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ. ನಮ್ಮ ಸ್ಟೇಶನರಿ ಅಂಗಡಿಗೆ ಬಂದಿದ್ದಾಳೆ ಹೇಗೆ? ಅಂತಾ ಕೇಳಿದಳು. ಅದಕ್ಕೆ ನಾನು ನನ್ನ ಹತ್ತಿರ ಬಂದಿರುವುದಿಲ್ಲಾ ಅಂತಾ ತಿಳಿಸಿ, ನಾನು ಮತ್ತು ನನ್ನ ಮಗ ಮಹ್ಮದ ಮುಜಾಫರ್ ಇಬ್ಬರೂ ಕೂಡಿ ಮನೆಗೆ ಹೋಗಿ ಮನೆಯಲ್ಲಿ ವಿಚಾರಿಸಿದೆವು. ನಂತರ  ನಾವಿಬ್ಬರೂ ಕೂಡಿ ಇವಳ ಬಗ್ಗೆ ಓಂ ನಗರದಲ್ಲಿ ಮತ್ತು ಜೇವರಗಿ ಪಟ್ಟಣದಲ್ಲಿ ಹುಡುಕಾಡಿದ್ದೇವು. ಆದರು ಅವಳು ಸಿಕ್ಕಿರುವುದಿಲ್ಲಾ, ಸಾಯಂಕಾಲ 6.00 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದಲ್ಲಿ ಹುಡುಕಾಡುತ್ತಿದ್ದಾಗ ಜೊಪಡಪಟ್ಟಿ ಏರಿಯಾದ ಮಹ್ಮದಗೌಸ ತಂದೆ ಅಹೇಮದಸಾಬ ಇನಾಮದಾರ ಇವರು ಸಿಕ್ಕಾಗ ಅವರು ಹೇಳಿದ್ದನೆಂದರೆ ನಾನು ಇಂದು ಮದ್ಯಾಹ್ನ 2.30 ಗಂಟೆಗೆ  ಜೇವರಗಿ ಪಟ್ಟಣದ ಜ್ಯೋತಿ ಹೊಟೇಲ ಹತ್ತಿರ ಇದ್ದಾಗ ನೀಮ್ಮ ಮಗಳಾದ ಇವಳಿಗೆ ಗಣೇಶ ತಂದೆ ಧರ್ಮಸಿಂಗ್ ಜಾದವ, ಇತನು ಯಾವುದೋ ಒಂದು ಅಟೋದಲ್ಲಿ ಕೂಡಿಸಿಕೊಂಡು ಹೋಗುವದನ್ನು ನೋಡಿರುತ್ತೆನೆ ಅಂತಾ ತಿಳಿಸಿದನು. ಅವನು ನಿಮ್ಮ ಮನೆಯ ಹತ್ತಿರ ಇರುವದರಿಂದ ನಾನು ಅವರಿಗೆ ಮಾತಾಡಿಸಿರುವದಿಲ್ಲಾ ಅಂತ ಹೇಳಿದನು. ನಂತರ ನಾನು ಮತ್ತು ನನ್ನ ಮಗ ಇಬ್ಬರೂ ಗಣೇಶನ ಮನೆಗೆ ಹೋಗಿ ವಿಚಾರಿಸಲು ಅವನು ಮನೆಯಲ್ಲಿ ಇರಲಿಲ್ಲಾ, ನಾನು ಮತ್ತು ನಮ್ಮ ಮನೆಯವರು ನಮ್ಮ ಮಗಳು ಹೊದ ದಿವಸದಿಂದ ಇಂದಿನವರೆಗೆ ಹುಡುಕಾಡಿದರೂ ನನ್ನ ಮಗಳು ಸಿಕ್ಕಿರುವುದಿಲ್ಲಾ. ಅಪ್ರಾಪ್ತ ನನ್ನ ಮಗಳಾದ 17 ವರ್ಷ ಇವಳಿಗೆ ಗಣೇಶ ಜಾದವ ಇತನು ಯಾವುದೋ ಉದ್ದೇಶಕ್ಕೆ ಅವಳಿಗೆ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ. ಕಾರಣ ನನ್ನ ಮಗಳಿಗೆ ಪತ್ತೆ ಹಚ್ಚಿ ಗಣೇಶ ಜಾಧವನ ವಿರುದ್ದ ಕಾನೂನು  ಕ್ರಮ ಕೈಕೊಳ್ಳಲು ವರದಿ ಇರುತ್ತದೆ.
ಅರ್. ಜಿ. ನಗರ ಠಾಣೆ :  ಫೀರ್ಯಾದಿ ಶ್ರೀ ಮೊಹ್ಮದ ಇಸೂಫ್ ತಂದೆ ಮೊಹ್ಮದ ಇಸ್ಮಾಯಿಲ್ ವ:51 ಜಾ:ಮುಸ್ಲೀಂ ಉ:ಹೋಟಲದಲ್ಲಿ ಕೆಲಸ ಸಾ:ರುದ್ರವಾಡಿ ತಾ:ಡಾಲಫೀನ್ ಶಾಲೆ ಹತ್ತಿರ ಮದಿನಾ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೆಳಿಕೆ ನೀಡಿದ್ದು ಅದರ ಸಾರಾಂಶ ವೇನೆಂದರೆ. ದಿನಾಂಕ:24/10/2016 ರಂದು ಬೇಳಗ್ಗೆ 10-00 ಗಂಟೆಗೆ ಮನೆಗೆ ಬೀಗ ಹಾಕಿ ನಾನು ನನ್ನ ಹೆಂಡತಿ ಮಕ್ಕಳೋಂದಿಗೆ ನನ್ನ ಹೆಂಡತಿಯ ತವರೂರಾದ ಕಲಬುರಗಿ ನಗರದ ಊಮರ ಕಾಲೋನಿಗೆ ಹೊಗಿದ್ದು ಇಂದು ದಿನಂಕ:28/10/2016 ರಂದು ಬೆಳಗ್ಗೆ 05-00 ಗಂಟೆಗೆ ಮನೆಗೆ ಬಂದಿದ್ದು ಮನೆಯ ಮುಖ್ಯ ಬಾಗಿಲು ತೆರೆದಿದ್ದು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲು ಬೇಡ್ ರೂಮಿನ ಅಲಮಾರಿ ತೆರೆದಿದ್ದು ಇದ್ದು ಅಲಮಾರಿಯಲ್ಲಿದ್ದ 5 ಗ್ರಾಂ ಬಂಗಾರದ ಒಂದು ಉಂಗುರ ಮತ್ತು ನಗದು ಹಣ 8,000/-ರೂ ಇರಲಿಲ್ಲಾ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ವರದಿ ಇರುತ್ತದೆ. 

26 October 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ:  ದಿನಾಂಕ: 25/10/2016 ರಂದು ವೀರಯ್ಯಾ ಪಂಚಯ್ಯಾ ಮಠ  ಸಾ: ಲಾಡ್ಲಾಫೂರ  ರವರು ಲಾಡ್ಲಾಫೂರದ ಪೊಸ್ಟ್  ಆಪೀಸದಲ್ಲಿ ಕರ್ತವ್ಯ ಹೋಗಿ ತಮ್ಮ ಮೊ/ಸೈ ನಂ; ಕೆ.ಎ-32/ಕೆ-3422 ನೇದ್ದರ ಮೇಲೆ ಪೊಸ್ಟದ ಪತ್ರಗಳು ವಿತರಣೆ ಮಾಡುವ ಕುರಿತು ಡಿಗ್ಗಿ ತಾಂಡದ ಕ್ರಾಸ ಹತ್ತಿರ ಲಾಡ್ಲಾಫೂರ ಕಡೆಗೆ ಹೋಗುತ್ತಿದ್ದಾಗ ಅಂದಾಜು 6.30 ಪಿಎಮ್ ಸುಮಾರಿಗೆ ಯಾದಗಿರ ಕಡೆಯಿಂದ ವಾಡಿ ಕಡೆಗೆ ಬರುತ್ತಿದ್ದ ಲಾರಿ ನಂ: ಕೆ.ಎ-32-ಬಿ-2135 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ವೀರಯ್ಯಾ ಪಂಚಯ್ಯಾ ಮಠ  ಚಲಾಯಿಸುತ್ತಿದ್ದ ಮೊ/ಸೈ ಕ್ಕೆ ಒಮ್ಮೇಲೆ ಅಪಘಾತಪಡಿಸಿದ್ದರಿಂದ ವೀರಯ್ಯಾ ಪಂಚಯ್ಯಾ ಮಠ ರವರಿಗೆ  ಭಾರಿ ಮತ್ತು ಸಾಧಾ ಗಾಯಾಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಶ್ರೀ ವೀರಯ್ಯಾ ಪಂಚಯ್ಯಾ ಮಠ  ರವರ ಮೋಸೈಕಲ್ಗೆ ಅಪಘಾತಪಡಿಸಿದ ಲಾರಿ ಚಾಲಕನ ವಿರುದ್ದ ಕ್ರಮ ಕೈಕೊಳ್ಳುವಂತೆ ಅವರ ಮಗ ಪಂಚಯ್ಯಾ ತಂದೆ ವೀರಯ್ಯಾ ಮಠ ರವರು ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನೀರಿನಲ್ಲಿ ಮುಳುಗಿ ಮಹಿಳೆ ಸಾವು:
ಅಫಜಲಪೂರ ಪೊಲೀಸ್ ಠಾಣೆ:  ದಿನಾಂಕ 25-10-2016 ರಂದು ಶ್ರೀ  ಹಣಮಂತ ತಂದೆ ಮಲ್ಲಪ್ಪ ಬ್ಯಾಕೋಡ ಸಾ:ಡವಳಗಿ ಮುದ್ದೆ ಬಿಹಾಳ ಇವರು ಠಾಣೆಗೆ ಹಾಜರಾಗಿ ಶ್ರೀಮತಿ ಶಾಂತವ್ವ ಗಂಡ ಚಂದ್ರಶೇಖರ ಸಾ: ಡವಳಗಿ ಇವಳು ಘತ್ತರಗಾ ಗ್ರಾಮದ ದೇವಸ್ಥಾನಕ್ಕೆ ಬಂದು ದೇವಸ್ಥಾನದ ಹತ್ತಿರದ ಬೀಮಾನದಿಯಲ್ಲಿ ಸ್ನಾನಮಾಡಲು ಹೋದಾಗ ನದಿಯಲ್ಲಿ ಕಾಲು ಜಾರಿ ಬಿದ್ದು ನಿರಿನಲ್ಲಿ ಮುಳುಗಿ ಮೃತ ಪಟ್ಟಿದ್ದು. ಸೂಕ್ತ ಕಾನೂನು ಕ್ರಮ ಕೈಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಲೆ ಪ್ರಕರಣ:
ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ  25-10-2016 ರಂದು  ಶ್ರೀ ಮಹಮ್ಮದ ಮಜರ ಅಲಿ ತಂದೆ ಮಹಮ್ಮದ ಮೌಲಾಸಾಬ ಸಾ; ಮದಿನಾ ಕಾಲೂನಿ ರೋಜಾ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ. 5-10-2016 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ  ತನ್ನ ತಮ್ಮ ಮಹಮ್ಮದ ಅಜರೋದ್ದಿನ ಇತನು ಕೆಲಕ್ಕೆ ಹೋಗುತ್ತೇನೆ ಅಂತಾ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ ಕಾರಣ  ಕಲಬುರಗಿಯ ಎಲ್ಲಾ  ಕಡೆಗೆ ಹಾಗೂ ನಮ್ಮ ಸಮ್ಮಂದಿಕರಲ್ಲಿ  ವಿಚಾರಿಸಲು ತಮ್ಮನ್ನು ಪತ್ತೆಯಾಗದೆ ಇದ್ದ ಕಾರಣ ದಿನಾಂಕ 15-10-2016 ರಂದು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದ್ದು  ಅದರ ಮೇಲಿಂದ ಠಾಣೆಯಲ್ಲಿ  ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದ್ದು ಇರುತ್ತದೆ
    ದಿನಾಂಕ. 19-10-2016 ರಂದು ವೆಂಕಟಬೇನೂರ ಗ್ರಾಮದ ನಮ್ಮ ಪರಿಚಯದವರು ಫೋನ ಮಾಡಿ ತಮ್ಮ ಗ್ರಾಮದ  ಸೀಮಾಂತರ ಮತ್ತು ಖಾಜಾಕೋಟನೂರ ಕೆರೆಯ ಕುಪೆಂದ್ರ ಮಾಲಿಪಾಟೀಲ್ ಇವರ ಹೊಲದ ದಂಡೆಯ ನೀರಿನಲ್ಲಿ ಒಂದು ಗಂಡು ಮನುಷ್ಯ ಶವ ಬಿದ್ದಿರುತ್ತದೆ ಅಂತಾ ತಿಳಿಸಿದ ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಶವವು ಅಂಗಾತವಾಗಿ ಬಿದಿದ್ದು , ಶವ ಕೊಳೆತು ಶವದ ಅಸ್ತಿಪಂಜರ ಕಾಣುತಿದ್ದು, ಶವದ ಮೈ ಮೇಲೆ ಹಸಿರು ಬಣ್ಣದ ಶರ್ಟ , ಡಾರ್ಕ ಬಣ್ಣ ಜೀನ್ಸ ಫ್ಯಾಂಟ ಗೊಲ್ಡನ ಮತ್ತು ಕಪ್ಪು ಮಿಶ್ರಿತ  ಜಾಕೆಟ ಹಾಗೂ ಜಾಕಲೇಟ ಕಲರ ಜಾಂಗಾ ಹಾಗೂ ಬೆಲ್ಟನ್ನು ನೋಡಿ ನಾವು ನಮ್ಮ ತಮ್ಮ ಅಜರೊದ್ದಿನ ಇರುವದಾಗಿ ಗುರ್ತಿಸಿದ್ದು. ನನ್ನ ತಮ್ಮನ ಮರಣದಲ್ಲಿ ಬಲವಾಗಿ ಸಂಶಯ ಬಂದ ಕಾರಣ ಈ ಬಗ್ಗೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪಿರ್ಯಾದಿ ಹೇಳಿಕೆ ನೀಡಲಾಗಿ ವಿರ್ಶವ ವಿದ್ಯಾಲಯ ಠಾಣೆಯಲ್ಲಿ ಯು.ಡಿ.ಆರ್. ಪ್ರಕರಣ ದಾಖಲಿಸಿದ್ದು ಇರುತ್ತದೆ.
ನಮ್ಮ ಪರಿಚಯದವರಾದ ಅಬ್ದುಲ ರಶೀದ ತಂದೆ ಅಬ್ದುಲ ಹಮೀದ ಶೇಖ ಸಾ: ಜುಬೇರ ಕಾಲೋನಿ, ಹಾಗರಗಾ ರೋಡ್, ಕಲಬುರಗಿ ಇವರು ದಿನಾಂಕ. 5-10-2016 ರಂದು ನನ್ನ ತಮ್ಮ ಅಜರೊದ್ದಿನ್ ನಿಗೆ ಖಾಜಾ ಮೈನೊದ್ದಿನ ಬಾಬಾ ತಂದೆ ಮಹಿಮೂದ ಹುಸೇನ ಇತನು ತನ್ನ ಹೀರೊಹೊಂಡ ಪ್ಯಾಶನ ಮೋಟಾರ ಸೈಕಲ್ ನಂ.ಕೆ.ಎ.32 ಇ.ಎಫ್. 3915 ನೆದ್ದರ ಮೇಲೆ ಹಿಂದೆ ಇಸಾಕ ತಂದೆ ಅಬ್ದುಲ ಸಾಬ ಇಬ್ಬರೊ ನನ್ನ ತಮ್ಮ  ಮಹಮ್ಮದ ಅಜರೊದ್ದಿನನ್ನು ನಡುವೆ ಕೂಡಿಸಿಕೊಂಡು ಮಾಲಗತ್ತಿ ಕಡೆಗೆ ಕೂಡಿಸಿಕೊಂಡು ಹೋಗಿರುವದನ್ನು ನೋಡಿದ್ದ ಬಗ್ಗೆ ತಿಳಿಸಿದ್ದು. ಅಲ್ಲದೆ ಖಾಜಾಕೋಟನೂರ ಕೆರೆದಂಡೆಯಲ್ಲಿ ಕುಪೆಂದ್ರ ಪಾಟೀಲ್ ಇವರ ಹೊಲದ ದಂಡೆಗೆ ಮೀನು ಹಿಡಿಯುವ ನೆಪ ಮಾಡಿ ಕರೆದುಕೊಂಡು ಹೋಗಿ ಅಲ್ಲಿ  ನನ್ನ ತಮ್ಮನಿಗೆ  ಖಾಜಾ ಮೈನೊದ್ದಿನ ಬಾಬಾ ಮತ್ತು ಇಸಾಕ  ಇವರು ಹಣದ ಮತ್ತು ಮರಳಿನ ಬ್ರೋಕರ ಕೆಲಸದ ದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ಖಾಜಾ ಮೈನೊದ್ದಿನ ಬಾಬಾ ಇತನು ಹತೋಡಿಯಿಂದ ನನ್ನ ತಮ್ಮನ ತಲೆ ಹಿಂಬಾಗಕ್ಕೆ ಜೋರಾಗಿ ಹೊಡೆದು ,ತಮ್ಮನು ಬೇಹೋಶ ಆಗಿ ಬಿದ್ದು ಆತನು ಕೊಲೆಯಾಗಿ ಬಿದ್ದಿದ್ದನ್ನು ಕಂಡು  ಖಾಜಾ ಮೈನೊದ್ದಿನ ಮತ್ತು ಇಸಾಕ ಇಬ್ಬರು ಕೆರೆನೀರನಲ್ಲಿ  ಬಿಸಾಕಿ ಸಾಕ್ಷಿಯನ್ನು ನಾಶ ಪಡಿಸಿ ಅದೇ ಮೋಟಾರ ಸೈಕಲ ಮೇಲೆ ಮರಳಿ ಬಂದಿರುವ ಬಗ್ಗೆ ತಿಳಿದು ಬಂದಿರುತ್ತದೆ. ನನ್ನ ತಮ್ಮ ಮಹಮ್ಮದ ಅಜರೋದ್ದಿನ ಇತನ ಕೊಲೆಮಾಡಿದ ಖಾಜಾ ಮೈನೊದ್ದಿನ  ಬಾಬಾ ತಂದೆ ಮಹಿಮೂದ ಹುಸೇನ ಸಾ;ಅಬುಬಕರ ಕಾಲೂನಿ ಕಲಬುರಗಿ  ಮತ್ತು ಇಸಾಕ ತಂದೆ ಅಬ್ದುಲ ಸಾಬ ಸಾ; ನವಾಬಸಾಬ ಮೊಹಲ್ಲಾ ಅಜಾದಪೂರ ರೋಡ ಕಲಬುರಗಿ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಕಲಬುಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ 25-10-2016 ರಂದು ಶ್ರೀ  ಚಂದ್ರ @ ಚಂದ್ರು ತಂದೆ ರೂಪಸಿಂಗ ರಾಠೋಡ ಸಾ; ಬಸವನಗರ ತಾಂಡಾ ತಾ:ಜಿ ಕಲಬುರಗಿ ಠಾಣೆಗೆ ಹಾಜರಾಗಿ ದಿನಾಂಕ 24.10.2016 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಮನೆಯ ಸಾಮಾನುಗಳಿರುವ ಕೊಣೆಗೆ ಕೀಲಿ ಹಾಕಿ ಪಕ್ಕದಲ್ಲಿ ಕೊಣೆಯಲ್ಲಿ ನಾನು ನನ್ನ ಹೆಂಡತಿ ಮಕ್ಕಳು ಕೂಡಿಕೊಂಡು ಮಲಗಿಕೊಂಡಿದ್ದು. ಬೆಳ್ಳಿಗ್ಗೆ  ಎದ್ದು ಮನೆಯಿಂದ ಹೊರಗೆ ಬಂದು ನೋಡಲು ನಾವು ಕೀಲಿ ಹಾಕಿ ಮಲಗಿದ ಮನೆಯ ಬಾಗೀಲು ತೆರೆದಿದ್ದು ಆಗ ನಾನು ಬಾಗಿಲ ಹತ್ತಿರ ಹೋಗಿ ನೊಡಲು ಮನೆಯಲ್ಲಿ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿದ್ದು ಸಂದುಕಗಳು ತೆರೆದು ಅದರಲ್ಲಿ ಸಾಮಾನುಗಳು ಬಟ್ಟೆ ಬರೆ ಹೊರಗೆ ಬಿಸಾಡಿದ್ದು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ನಮ್ಮ ಮನೆಯ ಬಾಗೀಲ ಕೀಲಿ ಮುರಿದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತ ಗೊತ್ತಾಗಿದ್ದು ಮನೆಯಲ್ಲಿ ಇಟ್ಟ ನಮ್ಮ ಸಾಮಾನುಗಳನ್ನು ಪರಿಶೀಲಿಸಿ ನೋಡಲು ಟಿಜೇರಿಯಲ್ಲಿ ಒಟ್ಟು 4 ತೊಲೆ ಬಂಗಾದ ಆಭರಣಗಳು ಅಂದಾಜ ಕಿಮ್ಮತ್ತು 1 ಲಕ್ಷ 20 ಸಾವೀರ ರೂ ಮತ್ತು ನಗದು ಹಣ 20,000/- ಹೀಗೆ ಒಟ್ಟು 1 ಲಕ್ಷ 40 ಸಾವೀರ ಕಿಮ್ಮತ್ತಿನ ಬಂಗಾರ ಮತ್ತು ಹಣ ಕಳ್ಳತನವಾಗಿದ್ದು ನಾನು ತಾಂಡಾದಲ್ಲಿ ಹೋಗಿ ಜನರಿಗೆ ವಿಚಾರಿಸಲಾಗಿ, ನಮ್ಮ ಮನೆ ಕಳ್ಳತನ ಮಾಡಿದಂತೆ ನಮ್ಮ ತಾಂಡಾದ ಶ್ರೀಮತಿ ಧರ್ಮಬಾಯಿ ಗಂಡ ಪೋಮು ಚೌವ್ಹಾಣ ಇವರ ಮನೆಯ ಬಾಗೀಲ ಕೀಲಿ ಮುರಿದು ಅವರ ಮನೆಯ ಸಂದುಕದಲ್ಲಿಟ್ಟಿದ 1 ತೊಲೆ ಬಂಗಾರದ ಗಂಟಿನ ಹಾರ ಅ:ಕಿ: 30 ಸಾವೀರ, ಮತ್ತು 4 ತೊಲೆ ಬೆಳ್ಳಿ ಕಾಲ ಚೈನಗಳನು ಅ:ಕಿ 2 ಸಾವೀರ ಹೀಗೆ ಒಟ್ಟು 32 ಸಾವೀರ ಕಿಮ್ಮತ್ತಿನ ಆಭರಣಗಳು ಕಳ್ಳತನ ಮಾಡಿದ್ದು, ಅದರಂತೆ ಶ್ರೀಮತಿ ಮಂಜುಬಾಯಿ ಗಂಡ ಸುನೀಲ ಚೌವ್ಹಾಣ ಇವರ ಮನೆಯ ಬಾಗೀಲ ಕೀಲಿ ಮುರಿದ್ದು ಅವರ ಮನೆಯಲ್ಲಿ ಇಟ್ಟಿದ 1 ತೊಲೆ ಬಂಗಾರದ ನಕಲೇಸ್, ಅ:ಕಿ 30 ಸಾವೀರ ರೂ 5 ಗ್ರಾಂ ಬಂಗಾದ ಉಂಗುರ, ಅ:ಕಿ: 15 ಸಾವೀರ ರೂ ಮತ್ತು 5 ಗ್ರಾಂ ಬಂಗಾರದ ಕಿವಿಯಲ್ಲಿ ಹುವುಗಳು, ಅ:ಕಿ: 15 ಸಾವೀರ ರೂ 15 ತೋಲೆ ಬೆಳ್ಳಿಯ ಕಾಲ ಚೈನಗಳು ಅ.ಕಿ 7000/- ರೂ ಮತ್ತು ನಗದು ಹಣ 5 ಸಾವೀರ ರುಪಾಯಿ, ಹೀಗೆ ಒಟ್ಟು 67 ಸಾವಿರ ಕಿಮ್ಮತ್ತಿನ ಆಭರಣ ಮತ್ತು ನಗದು ಹಣ ಕಳ್ಳತನವಾಗಿದ್ದು ಅದರಂತೆ ಶಾಂತಾಬಾಯಿ ಗಂಡ ಗೋಪಾಲ ಚೌವ್ಹಾಣ ಇವರ ಮನೆಯ ಬಾಗೀಲ ಕೀಲಿ ಮುರಿದು ಮನೆಯಲ್ಲಿ ಇಟ್ಟ ನಗದು ಹಣ 20 ಸಾವೀರ ರುಪಾಯಿ ಕಳ್ಳತನ ಮಾಡಿಕೊಂಡು ಹೋಗಿದ್ದು ಮತ್ತು ನಮ್ಮ ತಾಂಡಾಕ್ಕೆ ಹೊಂದಿಕೊಂಡಿರುವ ಶ್ರೀ ಸಂಗಶಟ್ಟಿ ತಂದೆ ಶಿವಶರಣಪ್ಪ ರೊಟಿ ಇವರ ಮನೆಯ ಮುಂದೆ ನಿಲ್ಲಿಸಿದ ಅವರ ಹಿರೊ ಹೊಂಡಾ ಸ್ಲೇಂಡರ ಮೋಟಾರ ಸೈಕಲ ನಂ ಕೆಎ 32 ಕೆ 9087 ಅ:ಕಿ: 10,000 ರೂ ನೇದ್ದು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನಾವೆಲ್ಲರೂ ನಮ್ಮ ನಮ್ಮ ಮನೆಯಲ್ಲಿಯ ಕಳ್ಳತನವಾದ ಸಾಮಾನುಗಳನ್ನು ಪರಿಶೀಲಿಸಿ ನಂತರ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಎಲ್ಲರ ಬಂಗಾರ, ಬೆಳ್ಳಿ, ನಗದು ಹಣ ಮತ್ತು ಮೋಟಾರ ಸೈಕಲ ಕೂಡಿ ಹೀಗೆ ಒಟ್ಟು ಅಂದಾಜ ಕಿಮ್ಮತ್ತು 2 ಲಕ್ಷ 69 ಸಾವೀರ ರೂಪಾಯಿ ಇದ್ದು. ಸದರಿ ಕಳುವಾದ ನಮ್ಮ ಆಭರಣ, ವಸ್ತುಗಳು ಮತ್ತು ನಗದು ಹಣ ಪತ್ತೆ ಮಾಡಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

23 October 2016

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಸಂಗೀತಾ ಗಂಡ ಶಿವಾನಂದ ಬಮ್ಮನಹಳ್ಳಿ ಮಡ್ಡಿ ಸಾ ಬಮ್ಮನಹಳ್ಳಿ ತಾ ಆಳಂದ ರವರ ಶಿಖರಪ್ಪ @ ಚುಕ್ಕಾ ವ:8 ವರ್ಷ ಇತನು ಕಪನೂರ ಗ್ರಾಮದ  ಸರಕಾರಿ ಶಾಲೆಯ ಎದುರುಗಡೆ ಮೇನ ರೋಡಿನ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ  ಅದೇ ವೇಳೆಗೆ ಹನುಮನಾಬಾದ ರಿಂಗ ರೋಡ ಕಡೆಯಿಂದ ಟಂಟಂ ಕೆಎ 32 9592 ನೇದ್ದರ ಚಾಲಕನು ತನ್ನ ಟಂಟಂನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸಿಕೊಂಡು ಬಂದು ಶಿಖರಪ್ಪ @ ಚುಯಕ್ಕಾ ಇತನಿಗೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತಪಡಿಸಿದ್ದರಿಂದ ಶಿಖರಪ್ಪ ಇತನು ಕೆಳೆಗೆ ಬಿದ್ದು ಆತನಿಗೆ ಎಡ ಎದೆ ಭಾರಿ ರಕ್ತಗಾಯ, ಬಲಕಪಾಳಕ್ಕೆ ಭಾರಿ ಗಾಯ ಮತ್ತು ಬಲಗೈ ಮೊಳಕೈಗೆ  ಮೊಳಕೈಗೆ ಕೆಳೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಹಾಗೂ ಅಪಘಾತವಾದ ಟಂಟಂ ಚಾಲಕನು  ಅಲ್ಲಿ ಜನರು ನೆರೆತ್ತಿದ್ದಾಗ ಚಾಲಕ ಟಂಟಂನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ದಿವ್ಯಶ್ರೀ ಗಂಡ ನಾಗರಾಜ ದರಬಾರಿ ಇವರು ದಿನಾಂಕ 08.08.2011 ರಂದು ಶಹಾಪೂರದ ನಾಗರಾಜ ದರಬಾರಿ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರುತ್ತೇನೆ   ಅವನು ಯಾವುದೇ ಕೆಲಸ ಮಾಡದೇ ಮತ್ತು ನಾನು ದುಡಿದ ಹಣವನ್ನು ಕೂಡ ತನಗೆ ಕೊಡು ಮತ್ತು ನಮ್ಮ ತಂದೆ ತಾಯಿ ಇವರಿಂದ 20 ಲಕ್ಷ ರೂ ಹಣ ತೆಗೆದುಕೊಂಡು ಬಾ ಅಂತಾ ದಿನಾಲು ಕುಡಿದು ಬಂದು ನನಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾನೆ ಮತ್ತು ನನ್ನ ಮೇಲೆ ಸಂಶಯ ಪಡುತ್ತಾನೆ ನನ್ನ ಗಂಡ ಕೊಡುವ ಹಿಂಸೆಯನ್ನು ನೋಡಲಾರದೇ ನನ್ನ ತಾಯಿ ಉಮಾ ಇವರು ಮೈಸೂರನಲ್ಲಿರುವ ನಮ್ಮ ಸೈಟ್ ಕೂಡ ಮಾರಾಟ ಮಾಡಿ ನನ್ನ ಗಂಡನಿಗೆ 20 ಲಕ್ಷ ಹಣ ಕೊಟ್ಟಿದ್ದಾರೆ.ಆದರೂ ಕೂಡ ನನ್ನ ಗಂಡ ತನ್ನ ಚಟವನ್ನು ಬಿಡದೇ ರಂಡಿ ಬೋಸಡಿ ಸೂಳೆ ಮಗಳು ನೀನಾದರು ಕಲಬುರಗಿಯಲ್ಲಿ ಇರಬೇಕು ಇಲ್ಲ ನಾನು ಇರಬೇಕು   ಅಂತಾ ಹಿಂಸೆ ಕೊಡುತ್ತಾನೆ.  ದಿನಾಂಕ 14.10.2016 ರಂದು ಮದ್ಯ ರಾತ್ರಿ 1 ಗಂಟೆಯ ಸುಮಾರಿಗೆ ನನ್ನ ಗಂಡ ನಾಗರಾಜ ಇತನು ಕುಡಿದು ಬಂದು ರಂಡಿ ನೀನು ಯಾರ ಜೊತೆ ಮಲಗಿಕೊಂಡಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಕೂದಲು ಹಿಡಿದು ಎಳದಾಡಿ ನೀನು ಪೊಲೀಸ ಠಾಣೆಗೆ ಹೋದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ನಾನು ಚಿರಾಡುವದನ್ನು ಕಂಡು ನಮ್ಮ ಅಕ್ಕಪಕ್ಕದ ಮನೆಯವರು ಬಂದು ಜಗಳ ಬಿಡಿಸಿರುತ್ತಾರೆ.ಆಗ ನನ್ನ ಗಂಡ ಅಲ್ಲಿಂದ ಓಡಿ ಹೋದನು. ಅಲ್ಲಿಂದ ಇಲ್ಲಿಯವರೆಗೆ ಪೋನಿನಲ್ಲಿ ದಿನಾಲು ನನಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 21/10/2016 ರಂದು ನಮ್ಮ ಅಣ್ಣನಾದ ಶಿವಲಿಂಗಪ್ಪ ರವರ ಮಗಳಾದ ಅಶ್ವಿನಿ ಇವಳ ಮಗನಾದ ಅವಿನಾಶ 9 ತಿಂಗಳು ಇತನ ಜವಳ ಕಾರ್ಯಕ್ರಮ ಅಫಜಲಪೂರ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ದೇವಿಯ ದೇವಸ್ಥಾನದಲ್ಲಿ ಇದ್ದ ಪ್ರಯುಕ್ತ ಸದರಿ ಕಾರ್ಯಕ್ರಮಕ್ಕೆ   ನಾನು ನನ್ನ ಮಗಳಾದ  ಕು. ಪ್ರತಿಭಾ ವ||17 ವರ್ಷ, ನಮ್ಮ ಅಣ್ಣನಾದ ಶಿವಲಿಂಗಪ್ಪ ಅಣ್ಣನ ಮಕ್ಕಳಾದ ವಿಲಾಸ, ವಿನೋದ , ನಮ್ಮ ಗ್ರಾಮದ ಭಿಮವ್ವ ಗಂಡ ಚನ್ನಪ್ಪ , ಚಂದ್ರಭಾಗಮ್ಮ ಗಂಡ ಮಲ್ಲಿಕಾರ್ಜುನ ಹೊಸ್ಮನಿ  ಹಾಗೂ ಅಶ್ವಿನಿ ಮತ್ತು ಅವಳ ಗಂಡನಾದ ರಾಘು ಕೆಂಗನಾಳ ಎಲ್ಲರು ಕೂಡಿ ಒಂದು ಖಾಸಗಿ ವಾಹನದಲ್ಲಿ ನಿನ್ನೆ ಮದ್ಯಾಹ್ನ 12.00 ಗಂಟೆ ಸುಮಾರಿಗೆ  ಘತ್ತರಗಾ ಗ್ರಾಮಕ್ಕೆ ಬಂದು ನಾವು ಗ್ರಾಮದ ಭೀಮಾನದಿಯಲ್ಲಿ ಜಳಕ ಮಾಡಲು ಹೋಗಿದ್ದು ನನ್ನ ಮಗಳಾದ ಪ್ರತಿಭಾ ಇವಳು ಜಳಕ ಮಾಡುತ್ತಾ ಭೀಮಾನದಿಯಲ್ಲಿ ಸ್ವಲ್ಪ ಒಳಗೆ ಹೋಗಿ ನೀರಿನ ಆಳಕ್ಕೆ ಸಿಕ್ಕು ಮುಳಗುತಿದ್ದಾಗ ನಾವೇಲ್ಲರು ಚಿರಾಡುತಿದ್ದಾಗ ನಮ್ಮಂತೆ ದೇವಸ್ಥಾನಕ್ಕೆ ಬಂದು ಅಲ್ಲೆ ಭೀಮಾನದಿಯಲ್ಲಿ ಈಜಾಡುತಿದ್ದ  ಒಬ್ಬ ಹುಡುಗ ನಮ್ಮ ಮಗಳು ನೀರಿನಲ್ಲಿ ಮುಳಗುವದನ್ನು ನೋಡಿ ಅವಳಿಗೆ ಹಿಡಿಯಲು ಈಜಾಡುತ್ತಾ ಹೋಗಿ ಅವನು ನೀರಿನ ಆಳಕ್ಕೆ ಸಿಕ್ಕು ಇಬ್ಬರು ನೀರಿನಲ್ಲಿ ಮುಳಗಿರುತ್ತಾರೆ ನಂತರ ಹುಡುಗನ ಹೆಸರು ವಿರೇಶ ತಂದೆ ನಾಗರಾಜ ಚಿಕಟಿಮಲ್ಲ ವ||20 ವರ್ಷ ಜಾ|| ಕೋಮಟಗಾ ಸಾ|| ಗಂಡವಿಡ ತಾ|| ಮಂಡಲ ಜಿ|| ಮಹಿಬೂಬನಗರ ಅಂತ ಗೊತ್ತಾಗಿರುತ್ತದೆ, ನಂತರ ನಾವು ಹಾಗೂ ವಿರೇಶನ ಸಂಬಂದಿಕರು ಎಲ್ಲರು ಕೂಡಿ  ನೀರಿನಲ್ಲಿ ಹುಡುಕಾಡಿದರು ನಮ್ಮ ಮಗಳು ಹಾಗೂ ವಿರೇಶ ಇಬ್ಬರು ಪತ್ತೆ ಯಾಗಿರುವುದಿಲ್ಲ  ಇಂದು ದಿನಾಂಕ 22/10/2016 ರಂದು ಬೆಳಿಗ್ಗೆ 07.00 ಗಂಟೆ ಸುಮಾರಿಗೆ ನನ್ನ ಮಗಳು ಹಾಗು ವಿರೇಶ ಇಬ್ಬರ ಶವ ಭಿಮಾನದಿಯಲ್ಲಿ ತೆಲಾಡುತಿದ್ದಾಗ ನಾವು ಎಲ್ಲರು ಕೂಡಿ ಇಬ್ಬರು ಶವವನ್ನು ನೀರಿನಿಂದ ಹೊರಗೆ ತಗೆದು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ  ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಹಾಕಿರುತ್ತೆವೆ ಅಂತಾ ಶ್ರೀ ಮಲ್ಲಪ್ಪ ತಂದೆ ಶಿವಪ್ಪ ಹೊಸ್ಮನಿ ಸಾ||ಕಗ್ಗೋಡ ತಾ||ಜಿ|| ವಿಜಯಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಈಗ ಠಾಣೆಗೆ ಬಂದಿದ್ದು ಇರುತ್ತದೆ

21 October 2016

Kalaburagi District Reported Crimes

ಪತ್ರಿಕಾ ಪ್ರಕಟಣೆ
 
ಕಮಾಂಡೆಂಟ್ 99 ಬಟಾಲಿಯನ್, ಆರ್.ಎ.ಎಫ್/ಸಿ.ಆರ್.ಪಿ.ಎಫ್. ಹಕೀಮಪೇಟ ಸಿಕಂದರಾಬಾದರವರು ರವರು ದಿನಾಂಕ: 20/10/2016 ರಂದು ಕಲಬುರಗಿ (ಬಿ) ಉಪ ವಿಭಾಗದ ಅಧೀನ ಪೊಲೀಸ್ ಠಾಣೆಗಳಿಗೆ ಬೆಳಗಿನ ಅವಧಿಯಲ್ಲಿ 11-00 ಗಂಟೆಯಿಂದ ಮಧ್ಹ್ಯಾನದವರೆಗೆ ಪೊಲೀಸ್ ಠಾಣೆಗಳಿಗೆ ಭೇಟಿ ನಂತರ ಸಾಯಂಕಾಲ 04-00 ಗಂಟೆಗೆ ಚೌಕ್ ಠಾಣೆಯಿಂದ ರೂಟಮಾರ್ಚ ಪ್ರಾರಂಭಿಸಿ ಜೆ.ಬಿ ಕ್ರಾಸ್, ಚೌಕ್ ಸರ್ಕಲ್, ಪ್ರಕಾಶ ಟಾಕೀಜ್, ಶಹಾಬಜಾರ ನಾಕಾ, ಲಾಲ ಹನುಮಾನ ಗುಡಿ, ಕಾವೇರಿ ನಗರ ಅಯ್ಯರವಾಡಿ, ಹುಮನಾಬಾದ ಬೇಸ್, ಎಮ್.ಎ.ಟಿ ಕ್ರಾಸ್, ಮಿಜಗುರಿ, ರೋಜಾ ಠಾಣೆ, ಬಿ.ಬಿ ರಜಾ ಕಾಲೇಜ್, ರಫೀಕ್ ರೋಡ, ಹಾಗರಗಾ ಕ್ರಾಸ್, ರಾಮಜೀ ನಗರ, ಕಮಠಾನ ಲಾಡ್ಜ್, ಕೆ.ಬಿ.ಎನ್ ದರ್ಗಾ, ಡಂಕಾ ಕ್ರಾಸ್ ಗಣೇಶ ಮಂದಿರ, ಸರಫ ಬಜಾರ, ಮಾಕೇಟ್ ಮಜೀದ್, ಮಹಿಬಾಸ್ಕ ಮಾಸ್ ಮಜೀದ್, ಚೌಕ್ ಪೊಲೀಸ್ ಠಾಣೆಗೆ ಬಂದು ಮುಕ್ತಾಯಗೊಂಡಿದ್ದು, ಕಾನೂನು ಸುವ್ಯವಸ್ಥೆ ಸಲುವಾಗಿ (ಬಿ) ಉಪ ವಿಭಾಗದ ಮೇಲ್ಕಂಡ ಮುಖ್ಯವಾದ ರಸ್ತೆಗಳಲ್ಲಿ ರೂಟಮಾರ್ಚ ಮಾಡಿ ಜನರಿಗೆ ಅರಿವು ಮೂಡಿಸಲಾಗಿದೆ
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಂಕರ ತಂದೆ  ಸಾಯಿಬಣ್ಣ ವಡ್ಡರ ಸಾ; ರಾಜಾಪೂರ  ತಾ;ಜಿ;ಕಲಬುರಗಿ ಇವರು ದಿನಾಂಕ. 19-10-2016 ರಂದು ಸಂಜೆ ನನ್ನ ಗೆಳೆಯನಾದ  ರಾಚಣಗೌಡ ತಾಳಿಕೋಟೆ ಸಾ;ಪಟ್ಟಣ , ಮಹಿಬೂಬ ಆಳಂದ ಸಾ;ಸುಂಟನೂರ ಇವರು ಬೀಜ ತೆಗೆದುಕೊಳ್ಳಲು ಕಲಬುರಗಿಗೆ ಬಂದಿದ್ದು ಸಂಜೆಗೆ ಅವರು ನಾವು ಭೇಟಿಯಾಗಿದ್ದು ನಂತರ ಊಟ ಮಾಡಲು ಪಟ್ಟಣದ ಮುತ್ತ್ಯಾನ ದಾಬಾಕ್ಕೆ ಹೋಗೊಣ ಅಂತಾ ನಾನು ಮತ್ತು ನನ್ನ ಸಂಗಡ ಸಂತೋಷ ತಂದೆ ನಾಗಪ್ಪಾ ಜಾಪೂರ ಇಬ್ಬರು ಒಂದು ಮೋಟಾರ ಸೈಕಲ್ ಮೇಲೆ ಮತ್ತು ರಾಚಣಗೌಡ ತಾಳಿಕೋಟೆ ಮತ್ತು ಮಹಿಬೂಬ ಸುಂಟನೂರ ಇವರಿಬ್ಬರು ಒಂದು ಮೋಟಾರ ಸೈಕಲ್ ಮೇಲೆ ಪಟ್ಟಣ ಕ್ರಾಸ ಗೆ ಹೋಗಿ ಅಲ್ಲಿ ಇರುವ ಮುತ್ತ್ಯಾನ  ದಾಬದಲ್ಲಿ  ಊಟಕ್ಕೆ ಕುಳಿತಾಗ ರಾತ್ರಿ 10-00 ಗಂಟೆಯ ಸುಮಾರಿಗೆ ಮಲ್ಲಪ್ಪಾ ವಗ್ಗೆ, ಕಾಂತಪ್ಪಾ ವಗ್ಗೆ, ಗಣೇಶ ವಗ್ಗೆ ಹಾಗೂ ಇನ್ನೂ 5-6 ಜನರು ಕೂಡಿಕೊಂಡು ಕೈಯಲ್ಲಿ ರಾಡಗಳನ್ನು ಹಿಡಿದುಕೊಂಡು ಬಂದು ಮಲ್ಲಪ್ಪಾ ವಗ್ಗೆ ಇತನು ಬಂದವನೆ ಎನೋ ವಡ್ಡ ಸೂಳೆಮಗನೆ 20 ಸಾವಿರ ರೂಪಾಯಿ ಕೋಡುವದಕ್ಕೆ ಬಹಳ ಮಾತಾಡುತ್ಯಾ ಸಣ್ಣಜಾತಿ ಸೂಳೆಮಗನೆ ಅಂತಾ ನನ್ನ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ತನ್ನ ಜೇಬಿನಲ್ಲಿದ್ದ ಖಾರ ಪುಡಿಯನ್ನು ನನ್ನ ಮುಖದ ಮೇಲೆ ಎರಚಿ ತನ್ನ ಕೈಯಲಿದ್ದ ರಾಡದಿಂದ ನನ್ನ ತಲೆಯ ಮೇಲೆ ಹೊಡೆದನು ಮತ್ತು ಅವನ ಸಂಗಡ ಇದ್ದ ಕಾಂತಪ್ಪಾ ವಗ್ಗೆ ಮತ್ತು ಗಣೇಶ ವಗ್ಗೆ ಇವರು ನನ್ನ ಬಲಗೈ ಮೋಳಕೈ ಮತ್ತು ಎಡಗೈ ಮೋಳಕೈ ಮೇಲೆ ಹೊಡೆದು ಭಾರಿಗಾಗೊಳಿಸಿದ್ದು, ಮತ್ತು ಅವರ ಸಂಗಡ ಇದ್ದ ಇನ್ನೂ 5-6 ಜನರು  ನನಗೆ ಕೆಳಗೆ ಹಾಕಿ ತಮ್ಮ ಕೈಯಲಿದ್ದ ರಾಡ ಮತ್ತು ಬಡಿಗೆಗಳಿಂದ  ಎರಡು ಮೋಳಕಾಲುಗಳಿಗೆ, ಎದೆಗೆ, ಎರಡು ಪಕ್ಕೆಗಳಿಗೆ ಹೋಡೆಯುತ್ತಾ  ಆಗ ಎಲ್ಲರೂ ನನಗೆ  ವಡ್ಡ ಸೂಳೆ ಮಗನಿಗೆ ಜೀವಂತ ಬಿಡಬಾರುದು ಖಲಾಸ ಮಾಡೋಣ  ಅಂತಾ ರಾಡಗಳಿಂದ ಹೊಡೆದು ಕಾಲುಗಳಿಂದ ಒದ್ದು ಕೊಲೆ ಮಾಡಲು ಪ್ರಯತ್ನಿಸುತಿದ್ದಾಗ  ನಾನು ಚೀರಾಡುವಾಗ ನನ್ನ ಸಂಗಡ ಇದ್ದ  ರಾಚಣಗೌಡ  ತಾಳಿಕೋಟೆ, ಮಹಿಬೂಬ ತಂದೆ ಹೈದರಸಾಬ ಅಳಂದ, ಸಾ;ಸುಂಟನೂರ ,ಸಂತೋಷ ಜಾಪೂರ ಹಾಗೂ ದಾಬಾದ ವರ್ಕರಗಳು ಬಂದು ಹೊಡೆಯುವದನ್ನು ಬಿಡಿಸಿಕೊಂಡು. ಆಗ ಅವರೆಲ್ಲರೂ ಸೂಳೆ ಮಗನೇ ಈಗ ಬದಕಿಕೋ ಇನ್ನೊಂದು ಬಾರಿ ನಮ್ಮೊಂದಿಗೆ  ತಕರಾರು ಮಾಡಿದರೆ ನಿನ್ನನ್ನು ಮುಗಿಸಿಯೇ ಬಿಡುತ್ತೇವೆ ಎಂದು ಹೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 October 2016

KALABURAGI DISTRICT REPORTED CRIMES

ಅಪಘಾತ ಪ್ರಕರಣ;
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ 18-10-16 ರಂದು ಶ್ರೀ ಮಲ್ಲಿಕಾರ್ಜುನ ತಂ. ಬಾಬುರಾವ ಕೋಬಾಳ ಸಾ: ಜೇವರ್ಗಿ ರವರು ರಾ.ಹೆ 218 ರಲ್ಲಿ ತಮ್ಮ ಮೋ ಸೈಕಲ್ ಮೇಲೆ ಹೋಗುತ್ತಿರುವಾಗ ಶಹಾಬಾದ ಕ್ರಾಸ್ ಹತ್ತಿರ ಲಾರಿ ನಂ ಆರಜೆ 19-ಜೆಬಿ 5339 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ರಸ್ತೆ ಮೇಲೆ ಮೋ ಸೈಕಲ್ ಮೇಲೆ ಹೋಗುತ್ತಿದ್ದ ಶ್ರೀ ಮಲ್ಲಿಕಾರ್ಜುನ ತಂ. ಬಾಬುರಾವ ಕೋಬಾಳ ಸಾ: ಜೇವರ್ಗಿ ರವರಿಗೆ ಅಪಘಾತ ಪಡಿಸಿದ್ದು ಮಲ್ಲಿಕಾರ್ಜುನ ರವರಿಗೆ ಗಾಯಗಳಾಗಿದ್ದು. ತಮ್ಮ ಮೋ.ಸೈಕಲ್ ಗೆ ಅಪಘಾತ ಪಡಿಸಿದ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುತಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜುಕೋರರ ಬಂಧನ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ. 19-10-2016 ರಂದು ಶ್ರೀಮತಿ ಎಸ್. ಜಾಹ್ನವಿ ಡಿ.ಎಸ್.ಪಿ ಉಪವಿಭಾಗ ಕಲಬುರಗಿ ರವರು ಒಬ್ಬ ಗಸ್ತಿನಲ್ಲಿರುವಾಗ ಕಲಬುರಗಿ ನಗರದ ಸೂಪರ ಮಾರ್ಕೆಟದ ಸಿಟಿ ಬಸ್ ಸ್ಟ್ಯಾಂಡ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಜೂಜಾಟದ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಇಬ್ಬರು ಪಂಚರಾದ 1. ಶಾರುಖ ತಂದೆ ಮಸ್ತಾನ ಪಟೇಲ ಸಾ: ಓರಿಯಂಟ ಲಾಡ್ಜ ಹಿಂದುಗಡೆ ಸ್ಟೇಷನ ಬಜಾರ ಕಲಬುರಗಿ, 2.ಶರಣು ತಂದೆ ಅಂಬಣ್ಣ ಹೀರಾಪೂರ ಸಾ: ಅಂಬಿಕಾ ನಗರ ಕಲಬುರಗಿ ಇವರ ಸಮಕ್ಷಮ ಸಿಬ್ಬಂದಿಯವರಾದ ಬಸವರಾಜ ಪಾಟೀಲ .ಎಸ., ಚಂದ್ರಕಾಂತ ಪಿಸಿ, ಶಂಕರಲಿಂಗ ಪಿಸಿ ಇವರ ಸಹಾಯದಿಂದ ದಾಳಿ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದ ಅಕ್ಬರ ತಂದೆ ಮಸ್ತಾನಸಾಬ ಮಗರಾಬಿ ಸಾ: ಶಹಾಬಜಾರ ನಾಕಾ ಈತನನ್ನು ದಸ್ತಗೀರ ಮಾಟಿ ಆತನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2,100/-, ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೆನ್ ಎರಡು ಮೊಬೈಲಗಳನ್ನು ಜಪ್ತಿಪಡಿಸಿಕೊಂಡು ಆಪಾದಿನ ವಿರುದ್ದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದವನ ಬಂಧನ:
ಕಾಳಗಿ ಪೊಲೀಸ್ ಠಾಣೆ: ದಿನಾಂಕ: 19-10-2016  ರಂದು ಪಿ.ಎಸ್. ಕಾಳಗಿ ಪೊಲೀಸ್ ಠಾಣೆ ರವರು ಠಾಣೆಯಲ್ಲಿದ್ದಾಗ ಕಂದಗೂಳ ಗ್ರಾಮದ ಕ್ರಾಸ ಹತ್ತಿರ ಚನ್ನವೀರಯ್ಯ ಮಠಪತಿ ಇವರ ಹೋಟೆ ಹತ್ತಿರ ಒಬ್ಬ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಮಟಕಾ ಚೀಟಿ ಬರೆದು ಕೊಟ್ಟು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಆದೇಶ ಪಡೆದುಕೊಂಡು ಡಿ.ಎಸ್.ಪಿ. ಶಹಾಬಾದ ಮತ್ತು ಸಿ.ಪಿ. ಕಾಳಗಿ ವೃತ್ತ ರವರ ಮಾರ್ಗದರ್ಶನದಲ್ಲಿ ಪಂಚರಾದ 1.ಶ್ರೀ ಸಂಬಣ್ಣ ತಂದೆ ನಾಗಪ್ಪ ಮಾಡಬೂಳ  2. ಶ್ರೀ ವೀರಯ್ಯ ತಂದೆ ನಾಗಯ್ಯ ಸ್ವಾಮಿ ರವರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ  ಹೆಚ್.ಸಿ296, ಪಿ.ಸಿ 319, 351, 694, 453 ರವರೊಂದಿಗೆ ಚನ್ನವೀರಯ್ಯ ಮಠಪತಿ ಹೋಟಲ ಹತ್ತಿರ ಹೋಗಿ ನೋಡಲು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಒಂದು ರೂಪಾಯಿಗೆ 80/-  ರೂ ಕೊಡುವದಾಗಿ ಅಂತಾ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಚೀಟಿ ಬರೆದು ಕೊಡುತ್ತಿದ್ದನ್ನು ನೋಡಿ ಸಿಬ್ಬಂದಿಯೊಂದಿಗೆ ಮುತ್ತಿಗೆ ಹಾಕಿ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ ಚನ್ನವೀರಯ್ಯ ಮಠಪತಿ ಸಾ:ಕಂದಗೂಳ ಅಂತಾ ಹೇಳಿದ್ದು ಆತನಿಂದ ರೂ 3095/-  ನಗದು ಹಣಒಂದು ಮಟಕಾ ನಂಬರ ಬರೆದ ಚೀಟಿ ಮತ್ತು  ಒಂದು  ಬಾಲ ಪೆನ್ನು ಇದ್ದು  ಮತ್ತು ಮಟಕಾ ನಂಬರ ಬರೆದುಕೊಳ್ಳಲು ಉಪಯೋಗಿಸಿದ ಸಾಮಸಂಗ ಮೋಬೈಲ ಅಂ.ಕಿ 500/-  ರೂ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆಮಾಲು ಸಮೇತ ಠಾಣೆಗೆ ಬಂದು ಆಪಾದಿತನ ವಿರುದ್ದ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಇಸ್ಪೀಟು ಜೂಜುಕೋರರ ಬಂಧನ:
ರಟಕಲ್ ಪೊಲೀಸ್ ಠಾಣೆ: ದಿನಾಂಕ1-9-10-2016 ರಂದು ಪಿ.ಎಸ್.ಐ ರಟಕಲ್ ಠಾಣೆರವರು  ಠಾಣೆಯಲ್ಲಿರುವಾಗ ಚಂದನಕೇರ ಗ್ರಾಮದ ಬಸ್ ನಿಲ್ದಾಣದ ಹಿಂದುಗಡೆ ಖುಲ್ಲಾ ಜಾಗದಲ್ಲಿ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿ ಶ್ರೀ ಮಹಾದೇವ ಪಿಸಿ , ಶ್ರೀ ಸುನಿಲ ಪಿ.ಸಿ. , ಹಾಗೂ ವಾಹನ ಚಾಲಕ ಶ್ರೀ ನಿಂಗಪ್ಪ ಹೆಚ್.ಸಿ ರವರೊಂದಿಗೆ ಬಾತ್ಮಿ ಸ್ಥಳಕ್ಕೆ ತಲುಪಿ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿಯಲಾಗಿ ಜೂಜಾಟದಲ್ಲಿ ತೊಡಗಿದ್ದ 9 ಜನರನ್ನು ಹಿಡಿದು ಅವರಿಂಧ ಜೂಜಾಟದ ಪಣಕ್ಕೆ ಇಟ್ಟಿದ್ದ ನಗದು ರೂ 2,070/- ಮತ್ತು ಜೂಜಾಟಕ್ಕೆ ಬಳಸಿದ್ದ 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ರಟಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಜಪ್ತಿ:
 ಮಳಖೇಡ ಪೊಲೀಸ್ ಠಾಣೆ: ದಿನಾಂಕ 19-10-2016  ರಂದು ಶ್ರೀ ಶ್ರೀಮಂತ ,ಎಸ್, ರವರು ಮಳಖೇಡದಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಮುಖಾಂತರ ಮಳಖೇಡ ಗ್ರಾಮದ ಸೀಮಾಂತರದಲ್ಲಿರುವ ಕಾಗಿಣಾ ನದಿಯಿಂದ ಟ್ರಾಕ್ಟರನಲ್ಲಿ ಅಕ್ರಮವಾಗಿ ಸರಕಾರದಿಂದ ಯಾವುದೇ ರಾಜ ಧನ ಪರವಾನಿಗೆ ಇಲ್ಲದೆ ನದಿಯಿಂದ ಮರಳು ತುಂಬಿಕೊಂಡು ಮಳಖೇಡ ಗ್ರಾಮದ ದರ್ಗಾ ಕ್ರಾಸ ಕಡೆಗೆ ಬರುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಶ್ರೀಮಂತ ಎ.ಎಸ್.ಐ ರವರು ಠಾಣೆಯ  ಸಿಬ್ಬಂದಿ  ಜಗದೇವಪ್ಪ ಪಿಸಿ, ಹಾಗು ಇಬ್ಬರು ಪಂಚರಾದ 1. ಶ್ರೀ ನಾಗಪ್ಪ ತಂದೆ ಸಾಬಣ್ಣ ನಂದೂರ, ಸಾ:ಮಳಖೇಡ ಹಾಗೂ 2.  ಶ್ರೀ ಜಾವಿದ ತಂದೆ ನವಾಬಮಿಯ್ಯಾ ಸೈಯದ , ಸಾ:ಮಳಖೇಡ ಗ್ರಾಮ ವರನ್ನು ಪಂಚರನ್ನಾಗಿ ಬರಮಾಡಿಕೊಂಡು ಪಂಚರೊಂದಿಗೆ ಮಳಖೇಡ ಗ್ರಾಮದ ದರ್ಗಾ ಕ್ರಾಸ  ಹತ್ತಿರ ಚಿತ್ತಾಪೂರ ರೋಡ ಕಡೆಯಿಂದ ದರ್ಗಾ ಕ್ರಾಸ ಕಡೆಗೆ ಒಂದು ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು  ಪಂಚರ ಸಮಕ್ಷದಲ್ಲಿ ನಾನು ನಮ್ಮ ಸಿಬ್ದಬಂದಿ ಜನರೊಂದಿಗೆ  ದಾಳಿ ಮಾಡಿ ಹಿಡಿಯಲು ಹೋದಾಗ ಟ್ರಾಕ್ಟರ  ಚಾಲಕ ಟ್ರಾಕ್ಟರನ್ನು ರೋಡಿನ ಪಕ್ಕದಲ್ಲಿ ಬಿಟ್ಟು ಅಲ್ಲಿಂದ ಓಡಿ ಹೋದನು  ನಂತರ ಹತ್ತಿರ  ಹೋಗಿ ಟ್ರಾಕ್ಟರ ಪರಶೀಲಿಸಿ ನೋಡಿದಾಗ ಕೆಂಪು ಬಣ್ಣದ ಮಾಸ್ಯೇ ಫರ್ಗುಸನ್ ಕಂಪನಿಯ ಟ್ರಾಕ್ಟರ  ಇದ್ದು  ಅದರ ನಂಬರ ನೋಡಲಾಗಿ ಅದರ ಮೇಲೆ ಯಾವುದೇ ನಂಬರ ಕಂಡುಬರಲಿಲ್ಲ  ಟ್ರಾಕ್ಟರದಲ್ಲಿ  ಪೂರ್ತಿ  ಉಸುಕು ತುಂಬಿದ್ದು, ಉಸುಕು  :ಕಿ 600/-  ರೂ ಹಾಗೂ ಟ್ರಾಕ್ಟರ :ಕಿ. 35,000/-  ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಟ್ರಾಕ್ಟರನ ಚಾಲಕ ಮತ್ತು ಮಾಲಿಕನ ವಿರುದ್ದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.