POLICE BHAVAN KALABURAGI

POLICE BHAVAN KALABURAGI

12 October 2015

KALABURAGI DISTRICT REPORTED CRIMES.

ಹಲ್ಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ಶ್ರೀಮತಿ ಸರಳಾ ಗಂ. ಭೀರರ್ಣಣಾ ದೊಡ್ಡಮನಿ ಸಾ:ಅಫಜಲಪೂರ ಇವರು ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆ ಕಾರ್ಯಾಲಯದಲ್ಲಿ ಮೇಲ್ವಿಚಾರಕಿ ಅಂತಾ ಕೆಲಸ ಮಾಡಿಕೊಂಡಿದ್ದು 13 -14 ನೇ ಸಾಲಿನಲ್ಲಿ ಅಂಗನವಾಡಿ ಕೆಂದ್ರಗಳಿಗೆ ವಿದ್ಯೂತ ಸಂಪರ್ಕ ಕಲ್ಪಿಸಿದ್ದು ಹಾಗೂ ಅಪೌಷ್ಟಿಕ ಮಕ್ಕಳಿಗೆ ಕೋಳಿ ಮೊಟ್ಟೆ ಪೂರೈಕೆ ಮಾಡಿದ್ದು ಇರುತ್ತದೆ. ದಿನಾಂಕ 09-09-2014 ರಂದು ಶ್ರೀ ಸುರೇಶ ಗುರಣ್ಣ ಅವಟೆ ಸಾ|| ಅಫಜಲಪೂರ ಜೈ ಕರ್ನಾಟಕ ರಕ್ಷಣಾ ವೇದಿಕೆ ಅಫಜಲಪೂರ ತಾಲೂಕಾ ಅದ್ಯಕ್ಷರು ಇವರು ಅಂಗನವಾಡಿ ಕೆಂದ್ರಗಳಿಗೆ ವಿದ್ಯೂತ ಸಂಪರ್ಕ ಕಲ್ಪಿಸಿದ ಗುತ್ತಿಗೆದಾರರಿಗೆ ನೀಡಿದ ಹಣದ ಬಾಬತ್ತು ಹಾಗೂ ಅಪೌಷ್ಟಿಕ ಮಕ್ಕಳಿಗೆ ಕೋಳಿ ಮೊಟ್ಟೆ ಪೂರೈಕೆಗಾಗಿ ಖರ್ಚು ಮಾಡಿದ ಮಾಹಿತಿಯನ್ನು ಮಾಹಿತಿ ಹಕ್ಕು ಅದಿನಿಯಮದಡಿ ಕೊಡಲು ಕೇಳಿದಾಗ, ನಾವು ಸದರಿಯವರಿಗೆ ಸದರಿ ಮಾಹಿತಿಯನ್ನು ಮಾಹಿತಿ ಹಕ್ಕು ನಿಯಮದಡಿ ಕೊಟ್ಟಿರುತ್ತೇವೆ. ತದನಂತರ ಸದರಿ ಸುರೇಶ ಅವಟೆ ಇವರು ಆಗಾಗ ನಮ್ಮ ಕಾರ್ಯಾಲಯಕ್ಕೆ ಬಂದು ನನಗೆ ಮತ್ತು ನಮ್ಮ ಕಾರ್ಯಾಲಯದಲ್ಲಿ ಕೆಲಸ ಮಾಡುವ ಗುರುನಾಥ ಮಯೂರ ಇಬ್ಬರಿಗೂ ನೀವು ಕೊಟ್ಟ ಮಾಹಿತಿ ಸರಿ ಇದೆ, ಆದರೆ ನೀವು ನನಗೆ ಪ್ರತಿ ತಿಂಗಳು ಹಣ ಕೊಡುತ್ತಾ ಇರಬೇಕು, ಇಲ್ಲವಾದರೆ ನಮ್ಮ ಸಂಘಟನೆಯಿಂದ ನಿಮಗೆ ತೊಂದರೆ ಕೊಡುತ್ತೇವೆ ಹಣ ಕೊಡದಿದ್ದರೆ ಲೋಕಾಯುಕ್ತರಲ್ಲಿ ಕೇಸು ಮಾಡುತ್ತೇನೆ ಅಂತಾ ಹೇಳಿರುತ್ತಾನೆ. ಆಗ ನಾವು ಯಾವುದೆ ಅವ್ಯವಹಾರ ಮಾಡಿರುವುದಿಲ್ಲ, ನಾವೇಕೆ ಹಣ ಕೊಡಬೇಕು ನಾವು ಕೊಡುವುದಿಲ್ಲ ಅಂತಾ ಹೇಳಿರುತ್ತೇವೆ. ಅದರಂತೆ ದಿನಾಂಕ 24-09-2015 ರಂದು ನಾನು ನಮ್ಮ  ಕಾರ್ಯಾಲಯದಲ್ಲಿದ್ದಾಗ ನನ್ನ ಹೆಸರಿಗೆ ಕರ್ನಾಟಕ ಲೋಕಾಯುಕ್ತದ ಒಂದು ಲಕೋಟೆ ಬಂದಿರುತ್ತದೆ. ಸದರಿ ಲಕೋಟೆಯನ್ನು ನಾನು ತಗೆದು ನೊಡಿದಾಗ, ಒಂದು ನೋಟಿಸ್ ಇದ್ದು, ಸದರ ನೊಟಿಸಿನಲ್ಲಿ ಅಂಗನವಾಡಿ ಕೆಂದ್ರಗಳಿಗೆ ವಿದ್ಯೂತ ಸಂಪರ್ಕ ಕಲ್ಪಿಸಿದ್ದು ಹಾಗೂ ಅಪೌಷ್ಟಿಕ ಮಕ್ಕಳಿಗೆ ಕೋಳಿ ಮೊಟ್ಟೆ ಪೂರೈಕೆ ಮಾಡಿದ ವಿಚಾರಣೆ ಇದೆ ನೀವು ದಿನಾಂಕ 29-09-2015 ರಂದು ಲೋಕಾಯುಕ್ತ ಕಚೇರಿ ಬೆಂಗಳೂರ ರವರಲ್ಲಿ ಹಾಜರಾಗಬೇಕು ಎಂದು ಇದ್ದು Deputy Registrar Of Enquiries Karnataka Lokayukta  ಅಂತ ಬರೆದ ಹೆಸರಿನ ಮೇಲೆ ಸಹಿ ಮಾಡಿದ್ದು ಇದ್ದಿತ್ತು. ಅದರಂತೆ ದಿನಾಂಕ 24-09-2015 ರಂದು ನಮಗೆ ಬಂದ ನೋಟಿಸಿನ ಮೇರೆಗೆ ನಾನು ಮತ್ತು ಗುರುನಾಥ ಮಯೂರ ಹಾಗೂ ಶಿವಲಿಂಗಪ್ಪ ಪಡಶೇಟ್ಟಿ ಮೂರು ಜನರು ದಿನಾಂಕ 29-09-2015 ರಂದು ಬೆಂಗಳುರಿನ ಲೋಕಾಯುಕ್ತ ಕಚೇರಿಗೆ ಹೋಗಿ, ಕಾರ್ಯಾಲಯದಲ್ಲಿ ನಮಗೆ ಬಂದ ನೊಟೀಸನ್ನು ತೋರಿಸಿ ವಿಚಾರಿಸಿದಾಗ, ನಮ್ಮ ಕಾರ್ಯಾಲಯದಿಂದ ಈ ರೀತಿ ಯಾವುದೆ ನೋಟಿಸ್ ಕಳುಹಿಸಿರುವುದಿಲ್ಲ, ಈ ನೋಟಿಸು ಕೊಟ್ಟಿ ಇರುತ್ತದೆ ಎಂದು ಹೇಳಿರುತ್ತಾರೆ. ದಿನಾಂಕ 01-10-2015 ರಂದು ಮದ್ಯಾಹ್ನ 12:15 ಗಂಟೆ ಸುಮಾರಿಗೆ ನಮ್ಮ ಕಾರ್ಯಾಲಯದಲ್ಲಿ ನಾನು ಮತ್ತು ನಮ್ಮ ಜೋತೆಗೆ ಕೆಲಸ ಮಾಡುವ ಗುರುನಾಥ ತಂದೆ ನಿಂಗಪ್ಪ ಮಯುರ (ಎಫ್.ಡಿ.ಸಿ), ಶಿವಲಿಂಗಪ್ಪ ತಂದೆ ಭಸವಂತ್ರಾಯ ಪಡಶೇಟ್ಟಿ (ಎಸ್.ಡಿ.ಸಿ), ಸಂತೋಷ ತಂದೆ ಅರ್ಜುನ ಮಡ್ಡಿಕರ (ದಿನಗೂಲಿ ಕಂಪ್ಯೂಟರ ಆಫರೇಟರ), ಮಂಜುನಾಥ ತಂದೆ ಮಾಹಾದೇವಪ್ಪ ಆರೇಕರ (ಪ್ಯೂನ್) ಹಾಗೂ ನಮ್ಮ ಮೇಲಾದಿಕಾರಿಯವರಾದ ಅಂಬಣ್ಣ ಜಮಾದಾರ (ಸಿ.ಡಿ.ಪಿ.ಓ) ಎಲ್ಲರೂ ಕೆಲಸ ನಿರ್ವಹಿಸುತ್ತಿದ್ದಾಗಜೈ ಕರ್ನಾಟಕ ರಕ್ಷಣಾ ವೇದಿಕೆಯ ಅಫಜಲಪೂರ ತಾಲೂಕಾ ಅದ್ಯಕ್ಷರಾದ ಸುರೇಶ ತಂದೆ ಗುರಪ್ಪ ಅವಟೆ ಇವರು ನಮ್ಮ ಕಾರ್ಯಾಲಯಕ್ಕೆ ಬಂದು ನನಗೆ ಮತ್ತು ನನ್ನ ಸಹಯೋದ್ಯಗಿಯರವಾದ ಗುರುನಾಥ ಮಯೂರ ಇಬ್ಬರಿಗೂ ಈಗ ಸುಳ್ಳ ಹೇಳಿ ಲೋಕಾಯುಕ್ತ ಕಚೇರಿಗೆ ಕಳುಹಿಸಿ ತೊಂದರೆ ಕೊಟ್ಟಿನಿ, ನೀವು ನನಗೆ ಹಣ ಕೊಡದಿದ್ದರೆ ಇನ್ನು ದೊಡ್ಡ ಪ್ರಮಾಣದಲ್ಲಿ ನಿಮಗೆ ತೊಂದರೆ ಕೊಡಬೇಕಾಗುತ್ತದೆ ಅಂತಾ ಅಂದನು, ಆಗ ನಾವು ನಮಗೆ ಖೋಟ್ಟಿ ನೋಟಿಸ್ ಯಾಕ ಕಳಸಿದಿ ನಾವೇನ ಮಾಡಿವಿ ನಿನಗ ಯಾಕ ಹಣ ಕೊಡಬೇಕು ಅಂತಾ ಕೇಳಿದಕ್ಕೆ ಸದರಿ ಸುರೇಶ ಅವಟೆ ಈತನು ಹೊಲೆಯ ಮಕ್ಕಳೆ ನೀವು ನನಗೆ ಪ್ರತಿ ತಿಂಗಳು ಹಣ ಕೊಟ್ಟರೆ ನೀವು ಇಲ್ಲಿ ನೌಕರಿ ಮಾಡಬಹುದು, ನೀವು ಹಣ ಕೊಡದಿದ್ದರೆ ನಮ್ಮ ಸಂಘಟನೆಯಿಂದ ನಿಮಗೆ ತೊಂದರೆ ಕೊಡಬೇಕಾಗುತ್ತದೆ ಅಂತಾ ಹೇಳಿ ನಮ್ಮ ಕೆಲಸಕ್ಕೆ ಅಡೆ ತಡೆ ಮಾಡಿ ಜಾತಿ ನಿಂದನೆ ಮಾಡಿ ಅಲ್ಲಿಂದ ಹೋಗಿರುತ್ತಾನೆ. ಸದರಿ ಲಿಂಗಾಯತ ಜಾತಿಯ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಅಫಜಲಪೂರ ತಾಲೂಕಾ ಅದ್ಯಕ್ಷರಾದ ಸುರೇಶ ತಂದೆ ಗುರಣ್ಣ ಅವಟೆ ಸಾ|| ಅಫಜಲಪೂರ ಇವರು ನಮ್ಮಿಂದ ಪ್ರತಿ ತಿಂಗಳು ಹಣ ಪಡೆಯುವ ಉದ್ದೇಶದಿಂದ ನಮಗೆ ಹೇದರಸಿಬೇಕು, ಇವರಿಗೆ ಹೇದರಿಸಿದರೆ ಹಣ ಕೊಡುತ್ತಾರೆ ಅಂತಾ ತಿಳಿದುಕೊಂಡು ಲೋಕಾಯುಕ್ತ Deputy Registrar Of Enquiries Karnataka Lokayukta ಅಂತಾ ಸಹಿ ಇರುವ ಖೋಟ್ಟಿ ನೋಟಿಸನ್ನು ಪೋಷ್ಟ ಮೂಖಾಂತರ ನಮ್ಮ ಕಾರ್ಯಾಲಯಕ್ಕೆ ಕಳುಹಿಸಿ ಹಾಗೂ ನಮ್ಮ ಕಾರ್ಯಾಲಯಕ್ಕೆ ಬಂದು. ನನಗೆ ಮತ್ತು ನಮ್ಮ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುವ ಗುರುನಾಥ ತಂದೆ ನಿಂಗಪ್ಪ ಮಯೂರ ಇಬ್ಬರಿಗೂ ಪ್ರತಿ ತಿಂಗಳು ಹಣ ಕೊಡುವಂತೆ ಹೇಳಿ ಸರ್ಕಾರಿ ಕೆಲಸದಲ್ಲಿ ಅಡೆ ತಡೆ ಮಾಡಿ, ಪರಿಶಿಷ್ಟ ಜಾತಿಯವರಾದ ನಮಗೆ ಜಾತಿ ನಿಂದನೆ ಮಾಡಿರುತ್ತಾನೆ. ಹಾಗೂ ಖೋಟ್ಟಿ ನೋಟಿಸನ್ನು ತಯಾರಿಸಿ ಲೋಕಾಯುಕ್ತ ಇಲಾಖೆಗೂ ಹಾಗೂ ನಮಗೂ ಮೋಸ ಮಾಡಿರುತ್ತಾನೆ. ಸದರಿ ಅರ್ಜಿಯ ಜೋತೆಗೆ ಸುರೇಶ ಅವಟೆ ಈತನು ಕಳುಹಿಸಿದ ನೋಟಿಸನ್ನು ಹಾಗೂ ಲಕೋಟೆಯನ್ನು ಲಗತ್ತಿಟ್ಟಿರುತ್ತೇನೆ. ನನಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ವಿಶ್ರಾಂತಿಯನ್ನು ಪಡೆದುಕೊಂಡು ಮತ್ತು ಸದರಿ ವಿಷಯದ ಬಗ್ಗೆ ನಮ್ಮ ಮೇಲಾದಿಕಾರಿಯವರೊಂದಿಗೆ ಸುದಿರ್ಘವಾಗಿ ಚರ್ಚಿಸಿ ದೂರು ನೀಡಲು ತಡವಾಗಿರುತ್ತದೆ. ಕಾರಣ ಸದರಿ ಸುರೇಶ ಅವಟೆ ಈತನ ಮೇಲೆ ಕ್ರೀಮಿನಲ್ ಮೋಕದ್ದಮೆ ದಾಖಲಿಸಬೇಕು ಎಂದು ವಿನಂತಿ ಇದೆ.
ಹಲ್ಲೆ ಪ್ರಕರಣ;
ಅಫಜಲಪೂರ ಪೊಲೀಸ್ ಠಾಣೆ := ದಿನಾಂಕ 11-10-2015 ರಂದು ಶ್ರೀ ಪೈಗಂಬರ ತಂ. ಮೋಹಿದ್ದಿನ್ ಶೇಖ ಸಾ: ಅಫಜಲಪೂರ ಇವರು ಠಾಣೆಗೆ ಹಾಜರಾಗಿ ತಾನು ಅಫಜಲಪೂರ ಪಟ್ಟಣದಲ್ಲಿ ಪೋಸ್ಟ ಆಫಿಸ್ ಹಾಗೂ ಎಸ್.ಬಿ.ಹೆಚ್ ಬ್ಯಾಂಕ ಎದುರುಗಡೆ ವಡಾಪಾವ ಸೆಂಟರ ಅಂಗಡಿಗಳನ್ನು ಇಟ್ಟುಕೊಂಡು ಉಪ ಜಿವನ ಸಾಗಿಸುತ್ತಿರುತ್ತೇನೆ. ನನ್ನ ಅಂಗಡಿಯ ಎಲ್ಲಾ ಧರ್ಮಿಯ ಹಾಗೂ ಎಲ್ಲಾ ಜಾತಿಯ ಜನರು ಬರುತ್ತಾರೆ. ಹಾಗೂ ನಾನು ಕೂಡಾ ಅವರೊಂದಿಗೆ ವ್ಯವಹಾರ ಮಾಡುತ್ತಾ ಎಲ್ಲರೊಂದಿಗೆ ಸಹಬಾಳ್ವೆ ನಡೆಸಿರುತ್ತೇನೆ. ದಿನಾಂಕ 13-08-2015 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನನ್ನ ಅಂಗಡಿಯನ್ನು ಮುಚ್ಚುತ್ತಿರುವಾಗ ನನ್ನ ಅಂಗಡಿಯ ಹತ್ತಿರ ಬಂದ ಸುನೀಲ ಶೇಟ್ಟಿ ಹಾಗೂ ಇತರ 15-20 ಜನರು ಬಂದವರೆ ಏಕಾಏಕಿ ನನ್ನನ್ನು ಹಿಡಿದು ಏಳೆದು ಎಲ್ಲರು ತಮ್ಮ ಕೈಗಳಿಂದ ಭಲವಾಗಿ ನನ್ನ ಮನಸ್ಸಿಗೆ ಬಂದಂತೆ ತಳಿಸತೊಡಗಿದರು. ಕೆಲವರು ತಮ್ಮ ಕಾಲಿನಿಂದ ಒದೆಯ ತೋಡಗಿದರು. ನಾನು ಕಾರಣ ಕೇಳಿದಾಗ ಏ ತುರುಕ ನನ್ನ ಮಗನೆ ನೀನು ಭಾರತ ರಾಷ್ಟ್ರ ದ್ವಜವನ್ನು ಚಪ್ಪಲಿಗಳ ಮೇಲೆ ಇಟ್ಟು ನಿನ್ನ ಮೋಬೈಲನಿಂದ ಪೋಟೊ ತಗೆದು ಪೇಸ್ ಬುಕನಿಂದ ಎಲ್ಲರಿಗೂ ಕಳುಹಿಸಿರುವೆ, ನೀನು ಒಬ್ಬ ದೇಶ ದ್ರೋಹಿ ಬೋಸಡಿ ಮಗನೆ ನೀವು ತುರುಕುರ ಸೊಕ್ಕು ಹೆಚ್ಚಾಗಿದೆ ಇವತ್ತು ನಿಮಗೆ ಖಲಾಸ ಮಾಡುತ್ತೇವೆ ಎಂದು ಹೆಳಿದ ಸುನೀಲ ಶೇಟ್ಟಿ ಮತ್ತು ಇತರರು ನನ್ನ ಮೇಲೆ ಹಲ್ಲೇಯನ್ನು ಮುಂದುವರೆಸಿದರು. ಅದಕ್ಕೆ ನಾನು ಈ ಕೆಲಸ ನಾನು ಮಾಡಿರುವುದಿಲ್ಲ, ನನಗೆ ಆ ಚಿತ್ರ ಪೇಸಬುಕ ಅಕೌಂಟನಲ್ಲಿ ಬಂದಿರುತ್ತದೆ ಎಂದು ತಿಳಿಸಿದೆ. ನಂತರ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ ಜನರು ಇತರ ಜಮಾವಣೆಗೊಂಡ ಜನರನ್ನು ಕುರಿತು ಈತನು ದೇಶ ದ್ರೋಹಿ ಭಾರತದ ದ್ವಜದ ಮೆಲೆ ಚಪ್ಪಲಿಯನ್ನು ಇಟ್ಟು ಪೋಟೊ ತಗೆದಿದ್ದಾನೆ. ಎಂದು ಹೇಳಿ ಜನರ ಭಾವನೆಗಳನ್ನು ಕೇರಳಿಸಿ ನನ್ನ ವಿರುದ್ದ ಅನ್ಯ ಧರ್ಮಿಯ ಜನರು ಕೇರಳುವಂತೆ ಸುನೀಲ ಶೇಟ್ಟಿ ಈತನುಮಾಡತೊಡಗಿದ, ನಾನು ಅವರನ್ನು ಕುರಿತು ದೇಶ ದ್ರೋಹದ ಯಾವುದೆ ಕೆಲಸವನ್ನು ಮಾಡಿಲ್ಲ. ದಯವಿಟ್ಟು ನನ್ನನ್ನು ಬಿಟ್ಟು ಬೀಡಿ ಎಂದು ಕೇಳಿಕೊಂಡರು ಸಹ ಸುನೀಲ ಶೇಟ್ಟಿ ಮತ್ತು ಆತನ ಸಂಗಡಿಗರು ನನ್ನ ಮೇಲಿನ ಹಲ್ಲೆಯನ್ನು ಮುಂದುವರೆಸಿದರು. ನನ್ನನ್ನು ಬಿಡಿಸಲು ಬಂದಿದ್ದ ಮಹ್ಮದ ಸಾದಿಕ ತಂದೆ ಸೈಯದ ಯುಸುಫ ಎಂಬುವವನ ಮೇಲೆ ಹಲ್ಲೆ ಮಾಡತೊಡಗಿದರು. ಅವರೆಲ್ಲ ನನ್ನ ಅಂಗಡಿಯ ಸಾಮಾನುಗಳನ್ನು ದ್ವಂಸ ಮಾಡಿ ನನ್ನ ಅಂಗಡಿಯ ಸಾಮಾನುಗಳ ಮೇಲೆ ಮತ್ತು ನನ್ನ ಮೇಲೆ ಸೀಮೇ ಎಣ್ಣೆ ಸುರಿದು ಸಜೀವ ದಹನ ಮಾಡಲು ಸುನೀಲ ಶೇಟ್ಟಿ ತನ್ನ ಹತ್ತಿರ ಇದ್ದ ಬೆಂಕಿ ಪಟ್ಟಣದಿಂದ ಬೆಂಕಿ ಕಟ್ಟಿ ತಗೆದು ಕೊರೆದು ಬೆಂಕಿ ಹಚ್ಚಲು ಹವಣಿಸುತ್ತಿದ್ದಾಗ ನಾನು ಕಷ್ಟಪಟ್ಟು ಅವರೆಲ್ಲರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ, ಆದರೆ 5-6 ಜನರು ನನ್ನನ್ನು ಭಲವಾಗಿ ಹಿಡಿದಿದ್ದರಿಂದ ನಾನು ಅವರಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಸುನೀಲ ಶೇಟ್ಟಿ ಮತ್ತು ಇತರರು ನನ್ನ ಅಂಗಡಿಗೆ ಬೆಂಕಿ ಹಚ್ಚಿದರು, ನನ್ನ ಅಂಗಡಿಯ ಎಲ್ಲಾ ಸಾಮಾನುಗಳು ಬೆಂಕಿಗೆ ಆಹುತಿಯಾದವು. ಅದೆ ವೇಳೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದರಿಂದ  ನಾನು ಸುನೀಲ ಶೇಟ್ಟಿ ಮತ್ತು ಇತರರಿಂದ ನನ್ನ ಪ್ರಾಣವನ್ನು ಉಳಿಸಿಕೊಂಡೆ. ಸುನೀಲ ಶೇಟ್ಟಿ ನನ್ನ ಅಂಗಡಿಗೆ ಬೆಂಕಿ ನನ್ನ ಎದುರಿಗೆ ಇಟ್ಟಿರುತ್ತಾನೆ. ಪೊಲೀಸರು ನನಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ನಂತರ ನಾನು ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದೆ. ಅಷ್ಟರಲ್ಲಿ ಆರೋಪಿತರು ಪೊಲೀಸ ಠಾಣೆಗೆ ಬಂದು ನನ್ನ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪೊಲೀಸರೆ ಪೈಗಂಬರನನ್ನು ನಮಗೆ ಒಪ್ಪಿಸಿ ಆ ತುರುಕ ದೇಶ ದ್ರೋಹಿಯನ್ನು ನಾವು ಸುಟ್ಟು ಹಾಕುತ್ತೇವೆ ಎಂದು ಚೀರಾಡ ತೋಡಗಿದರು. ನಂತರ ಪೊಲೀಸರು ನನ್ನನ್ನು ಬೆಂಗಾವಲಿನಲ್ಲಿಟ್ಟು ಅಲ್ಲಿಗೆ ಬಂದಿದ್ದ ಸುನೀಲ ಶೇಟ್ಟಿ ಮತ್ತು ಇತರರನ್ನು ವಿಚಾರಣೆ ಮಾಡಿ ಅದಕ್ಕೆ ಅವರುಗಳು ನಾನು ದೇಶದ ದ್ವಜದ ಮೇಲೆ ಚಪ್ಪಲಿಯನ್ನು ಇಟ್ಟು ಪೋಟೊ ತಗೆದು ಹಾಕಿರುತ್ತೇನೆ ಎಂದು ತಿಳಿಸಿದರು. ಆದರೆ ನನ್ನ ಪೇಸಬುಕನಲ್ಲಿ ಸದರಿ ದ್ವಜದ ಮುದ್ರೆ ಇದ್ದ ಚಪ್ಪಲಿಗಳು ಒಬ್ಬ ಚಂದನಕುಮಾರ ಎಂಬ ಪತ್ರಕರ್ತನ ಪೇಸ್ ಬುಕ ಅಕೌಂಟನಿಂದ ಬಂದಿರುತ್ತದೆ. ಚಪ್ಪಲಿಗಳ ಚಿತ್ರವನ್ನು ಚಂದನಕುಮಾರ ಈತನು ಅಂತರಜಾಲದಲ್ಲಿ ಬಿತ್ತರಿಸಿರುತ್ತಾನೆ. ನಾನು ಅಂಗಡಿಯಲ್ಲಿ ಇದ್ದ ಸಮಯದಲ್ಲಿ ಸದರಿ ಚಪ್ಪಲಿಗಳ ಚಿತ್ರವನ್ನು ನೋಡುತ್ತಿದ್ದೇನು. ಆಗ ಗ್ರಾಹಕರು ಬಂದ ಕಾರಣ ಸದರಿ ಮೋಬೈಲನ್ನು ಹಾಗೆ ಇಟ್ಟಿದ್ದೆ. ಅಂಗಡಿಗೆ ಬಂದ ಗ್ರಾಹಕರೊಬ್ಬರಲ್ಲಿ ಯಾರೊ ಒಬ್ಬ ನನ್ನ ಪೇಸ ಬುಕ್ ಅಕೌಂಟನಿಂದ ಸದರಿ ಚಿತ್ರವನ್ನು ಬೇರೆಯವರಿಗೆ ಕಳುಹಿಸಿರುತ್ತಾರೆ. ನಾನು ಅಶೀಕ್ಷೀತನಾಗಿದ್ದು ಅಂತರ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಪೊಲೀಸರು ನನ್ನ ವಿರುದ್ದ ಸುನೀಲ ಶೇಟ್ಟಿ ಮತ್ತು ಇತರರು ನೀಡಿದ ತಪ್ಪು ಮಾಹಿತಿಯ ಮೇರೆಗೆ ಕೇಸನ್ನು ದಾಖಲು ಮಾಡಿ ಕಲಬುರಗಿಯಲ್ಲಿ ನ್ಯಾಯಾದೀಶರ ಮುಂದೆ ಮುಂಜಾನೆ 6:00 ಗಂಟೆಗೆ ಹಾಜರು ಪಡಿಸಿರುತ್ತಾರೆ. ಮರುದಿನ ದಿನಾಂಕ 14-08-2015 ರಂದು ಆರೋಪಿ ಸುನೀಲ ಶೇಟ್ಟಿ ಮತ್ತು ಇತರರು ಹಿಂದೂ ಮತ್ತು ಮುಸ್ಲಿಂ ಜನರನ್ನು ಜಮಾಯಿಸಿ ನನ್ನ ವಿರುದ್ದ ರಾಷ್ಟ್ರ ದ್ವಜದ ಅಫಮಾನ ಮಾಡಿದ ಹಾಗೂ ಸುಳ್ಳು ವಿಷಯದ ಬಗ್ಗೆ ಪೀತೂರಿ ನಡೆಸಿ ಅಫಜಲಪೂರ ಪಟ್ಟಣದ ಜನರೆಲ್ಲಾ ಕೇರಳುವಂತೆ ಮಾಡಿ ದಂಗೆ ಎಬ್ಬಿಸಿರುತ್ತಾರೆ. ನನ್ನ ವಿರುದ್ದ ಘೋಷಣೆಗಳನ್ನು ಕೂಗುತ್ತಿದ್ದ ಜನರು ಎಸ್.ಬಿ.ಹೆಚ್ ಬ್ಯಾಂಕ ಎದುರಗಡೆ ಇರುವ ನನ್ನ ಮತ್ತೊಂದು ಅಂಗಡಿಗೆ ನುಗ್ಗಿ 2 ಪ್ರೀಜಗಳು, ಚಹಾ ಮಾಡುವ ಮಶೀನ್ ಮತ್ತು ಇತರೆ ಸಾಮಾನುಗಳನ್ನು ದ್ವಂಸ ಮಾಡಿ ಜೆ.ಸಿ.ಬಿ ಯಿಂದ ನನ್ನ ಮನೆಯನ್ನು ಉರುಳಿಸುವ ಪ್ರಯತ್ನ ಮಾಡಿರುತ್ತಾರೆ. ಸದರಿ ಬಸ್ ನಿಲ್ದಾಣದ ಎದುರಿನ ಅಂಗಡಿಯಲ್ಲಿ ಮತ್ತು ಅಂಗಡಿಯ ಮುಂದೆ ಇರುವ ಡಬ್ಬಗಳಲ್ಲಿ ನಾನು ನನ್ನ ಧರ್ಮದ ಮಕ್ಕಾ ಮದೀನಾದ ಪೋಟೊ ಹಾಗೂ ಕುರಾನನ ಕೆಲವೊಮದು ಬರವಣಿಗಳನ್ನು ಅಂಟಿಸಿದ್ದೆ, ಅವೆಲ್ಲವುಗಳನ್ನು ಸುನೀಲ ಶೇಟ್ಟಿ ಮತ್ತು ಆತನ ಸಂಗಡಿಗರು ಕಿತ್ತು ಬಿಸಾಡಿ ಕಾಲಿನಿಂದ ತುಳಿದು ನಮ್ಮ ಧರ್ಮಕ್ಕೆ ಅವಮಾನ ಮಾಡಿರುತ್ತಾರೆ. ಸದರಿ ಗಲಾಟೆಯಲ್ಲಿ ನನಗೆ ಸೇರಿದ ಟಂ ಟಂ ವಾಹನವನ್ನು ಜಕಂ ಗೊಳಿಸಿ ಸದರಿ ವಾಹನದ ಮುಂದಿನ ಗಾಜಿನ ಮೇಲೆ ಬರೆದಿದ್ದ ಕುರಾನನ ವಾಕ್ಯಗಳನ್ನು ಹಾಳು ಮಾಡಿರುತ್ತಾರೆ. ಸದರಿ ಆರೋಪಿತರ ಈ ಕೃತ್ಯದಿಂದ ನನಗೆ ಸುಮಾರು 6 ರಿಂದ 7 ಲಕ್ಷ  ರೂಪಾಯಿ ನಷ್ಟ ಉಂಟಾಘಿರುತ್ತದೆ. ಸದರಿ ಕೇಸಿನಲ್ಲಿ ನಾನು ಜಾಮೀನು ಪಡೆದು ಈಗ ಹೊರ ಬಂದಿರುವ ನಾನು ನನಗೆ ಉಂಟಾದ ನಷ್ಟವನ್ನು ಅಂದಾಜು ಮಾಡಿ ಸದರಿ ಪಿರ್ಯಾದಿಯನ್ನು ಸಲ್ಲಿಸಲು ವಿಳಂಭವಾಗಿರುತ್ತದೆ. ಸದರಿ ಘಟನೆಯಲ್ಲಿ ನನಗೆ ಸೇರದಿ ಬ್ಯಾಂಕ್ ಪಾಸ್ ಬುಕಗಳು ಹಾಗೂ ಇತರ ಪೈನಾನ್ಸ ಬ್ಯಾಂಕ ಪಾಸ ಬುಕಗಳು ಸುಟ್ಟು ಹೋಗಿರುತ್ತವೆ.  ಈ ಎಲ್ಲಾ ಕೃತ್ಯಗಳು ನಡೆದಿರುವ ಬಗ್ಗೆ ನನ್ನ ಹೆಂಡತಿಯು ನಾನು ಜೈಲಿನಲ್ಲಿದ್ದಾಗ ವಿಷಯ ತಿಳಿಸಿರುತ್ತಾಳೆ. ಆದ ಕಾರಣ ದಯಾಳುಗಳಾದ ತಾವುಗಳು ನನ್ನ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡಿ ಹಲ್ಲೆ ಮಾಡಿ ಸೀಮ ಎಣ್ಗಣೆ ಸುರೀದು ಸಜೀವ ದಹನ ಮಾಡಲು ಪ್ರಯತ್ನಿಸಿದ ಹಾಗೂ ಜನರಿಗೆ ನನ್ನ ವಿರುದ್ದ ದಾರ್ಮಿಕವಾಗಿ ಕೇರಳುವಂತೆ ಮಾಡಿ ನನ್ನ ಅಂಗಡಿಗಳನ್ನು ದ್ವಂಸ ಮಾಡಿ ನನಗೆ ಮಾನ ಹಾನಿ ಮತ್ತು ಆಸ್ತಿ ಹಾನಿಯನ್ನು ಉಂಟು ಮಾಡಿದ ಸುನೀಲ ಶೇಟ್ಟಿ ಮತ್ತು ಆತನ ಸಂಗಡಿಗರ ವಿರುದ್ದ ಕಾನೂನಿ ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಮ್ಮಲ್ಲಿ ಈ ಪಿರ್ಯಾದಿಯ ಮೂಲಕ ವಿನಂತಿಸಿತ್ತೇನೆ.
ಕಳವು ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ : ದಿನಾಂಕಃ 11/10/2015 ರಂದು ಶ್ರೀ ಮಹ್ಮದ ಮುಜೀಬುರ್ ರಹೆಮಾನ್ ತಂದೆ ಮೌಲಾಸಾಬ ಇನಾಮ್ದಾರ ಸಾಃ ಬಾರೆಹಿಲ್ಸ್ ಗಣೇಶ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಅರ್ಜಿ ಸಲ್ಲಿಸಿದ್ದೇನೆಂದರೆ ಫಿರ್ಯಾದಿದಾರರು ತನ್ನ ಅಣ್ಣನ ಹೆಸರಿನಲ್ಲಿರುವ ರಾಯಲ್ ಎನಫೀಲ್ಡ ಮೋಟಾರ ಸೈಕಲನ್ನು ದಿ:-18/09/2015 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಎಂದಿನಂತೆ ರಾಯಲ್ ಎನಫೀಲ್ಡ ಕ್ಲಾಸಿಕ್ 350 ಮೋಟಾರ ಸೈಕಲ ನಂ. ಕೆ.ಎ 32 ಇಎ 4748 ಅಃಕಿಃ 1,00,000/- ರೂ ನೇದ್ದು ತಮ್ಮ ಮನೆಯ ಮುಂದೆ ಹಚ್ಚಿ ದಿನಾಂಕಃ 19/09/2015 ರಂದು ಬೆಳಗ್ಗೆ 06:30 ಗಂಟೆ ಸುಮಾರಿಗೆ ಎದ್ದು ನೋಡಲಾಗಿ ಮೊಟಾರ ಸೈಕಲ ಇರಲಿಲ್ಲಾ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಕಾರಣ ಇಂದು ತಡಮಾಡಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದೇನೆ. ಕಾರಣ ಕಳುವಾದ ನನ್ನ ರಾಯಲ್ ಎನಫೀಲ್ಡ ಕ್ಲಾಸಿಕ್ 350 ಮೋಟಾರ ಸೈಕಲ ನೇದ್ದನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.  
ಕಳವು ಪ್ರಕರಣ:
ಮಹಾಗಾಂವ ಪೊಲೀಶ್ ಠಾಣೆ: ದಿನಾಂಕ: 11/10/2015 ರಂದು ಶ್ರೀ ಅಯ್ಯಪ್ಪಾ ತಂದೆ ಶರಣಪ್ಪಾ ಕಮಠಾಣ ಸಹ ಶಿಕ್ಷಕ ಸಾ: ಮಹಾಗಾಂವ ಕ್ರಾಸ ಇವರು ಠಾಣೆಗೆ ಹಾಜರಾಗಿ ದಿನಾಂಕ: 10/10/2015 ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ 10-00 ಗಂಟೆಗೆ ಮನೆಯಲ್ಲಿಯೇ ಮಲಗಿಕೊಂಡಿದ್ದೇವು. ರಾತ್ರಿ 12-30 ಗಂಟೆ ಸುಮಾರಿಗೆ ನನ್ನ ಹೆಂಡತಿ ಮನೆಯಲ್ಲಿ ಏನೋ ಸಪ್ಪಳವಾಗುತ್ತಿದೆ ಅಂತಾ ಅಂದಾಗ ನಾವು ಮಲಗಿದ ಕೋಣೆಯಿಂದ ಹೊರಗಡೆ ಬರಲು ಹೋದಾಗ ಬಾಗಿಲು ತರೆಯಲಿಲ್ಲಾ. ನಂತರ ನಮ್ಮ ಪಕ್ಕದ ಮನೆವರಾದ ಮಲ್ಲಿಕಾರ್ಜುನ ಇವರ ಮೊಬೈಲಗೆ ಫೋನ ಮಾಡಿ, ಬಾಗಿಲು ತೆರೆಯಲು ಹೇಳಿದಾಗ ಅವರು ಬಂದು ಬಾಗಿಲು ತೆರೆದ ನಂತರ ಕೋಣೆಯಿಂದ ಹೊರಗೆ ಬಂದು ನೋಡಲಾಗಿ, ಮನೆಯ ಗೇಟ ಹಾಗು ಮುಖ್ಯ ಬಾಗಿಲಿಗೆ ಹಾಕಿದ ಬೀಗಗಳು ಮುರಿದು ಬಿದ್ದದ್ದವು ನೋಡಲಾಗಿ, ಬೆಡ್ ರೂಂನಲ್ಲಿರುವ ಅಲಮಾರಿ ತೆರೆದಿದ್ದು. ಹೋಗಿ ನೋಡಲಾಗಿ, ಅಲಮಾರಿಯಲ್ಲಿಟ್ಟಿದ್ದ 1) 4 ½ (45 ಗ್ರಾಂ) ತೋಲೆ ಬಂಗಾರದ ತಾಳಿ ಅ:ಕಿ: 1,12,500-00 ರೂ. 2) ಒಂದು ತೊಲೆ (10 ಗ್ರಾಂ) ಬಂಗಾರದ ಬೋರಮಾಳ ಅ:ಕಿ: 25000-00 ರೂ. ಮತ್ತು ಹಾಲನಲ್ಲಿ ಸಿಕ್ಕಿಸಿದ ಪ್ಯಾಂಟಿನಲ್ಲಿದ್ದ 1200-00 ರೂ. ನಗದು ಹಣ ಹೀಗೆ ಒಟ್ಟು 1, 38,700-00 ರೂ. ಕಿಮ್ಮತ್ತಿನ ಬಂಗಾರ ಮತ್ತು ನಗದು ಹಣವನ್ನು ರಾತ್ರಿ 10-00 ಗಂಟೆಯಿಂದ 12-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅವರ ವಿರುದ್ದ ಕಾನೂನು ಕ್ರಮ ಜರುಗಿಸಿ, ನನ್ನ ಮಾಲು ನನಗೆ ಮರಳಿ ದೊರಕಿಸಿಕೊಡಬೇಕು ಅಂತಾ ಅರ್ಜಿ ಸಲ್ಲಿಸಿದ ಸಾರಾಂಶದ ಮೇಲಿಂದ ಮಹಾಗಾಂಔ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಹಿಳಾ ದೌರ್ಜನ್ಯ ಪ್ರಕರಣ:
ಮಹಿಳಾ ಪೊಲೀಸ ಠಾಣೆ:ದಿನಾಂಕ 11-10-2015 ರಂದು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿದ್ದ  ಗಾಯಾಳು ವಹೀದಾ ಬೇಗಂ ಇವರು ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೇಂದರೆ ಸುಮಾರು 17 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ಮಹ್ಮದ ಯುಸುಫ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಢಿಕೊಟ್ಟಿದ್ದು ಇರುತ್ತದೆ, ನನ್ನ ಗಂಡ ಮಹ್ಮದ ಯುಸುಫ ಇತನು ರೈಲಿನಲ್ಲಿ ಬೆಳ್ ಮಾರುವ ಕೆಲಸ ಮಾಡುತ್ತಾನೆ ನನಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾಳೆ . ನನ್ನ ಗಂಡ ಯುಸುಪ ಇತನು ಕುಡಿಯುವ ಚಟದವನಿದ್ದು ಮನೆಗೆ ಯಾವುದೇ ಖರ್ಚಿಗೆ ದುಡ್ಡು ಕೊಡುತ್ತಿರಲಿಲ್ಲ ನಾನೇ ಬಟ್ಟೆ ಹೊಲೆದು ಸಂಸಾರ ನಡೆಸಿಕೊಂಢು ಬಂದಿರುತ್ತೇನೆ. ಆದರೂ ಕೂಡ ದಿನಾಲು ಕುಡಿದು ಬಂದು ಮನೆಯಲ್ಲಿ ವಿನಾಕಾರಣ ನನ್ನೊಂದಿಗೆ ಜಗಳ ತೆಗೆಯುವುದು ಬೈಯುವುದು ಮಾಡಿ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದನು. ಇವತ್ತಿಲ್ಲಾ ನಾಳೆ ನನ್ನ ಗಂಡ ಸುದಾರಿಸಬಹುದು ಅಂತಾ ತಿಳಿದು ಅವನು ಕೊಡುವ ಹಿಂಸೆಯನ್ನು ಸಹಿಸಿಕೊಂಡು ಬಂದಿರುತ್ತೇನೆ. ಹೀಗಿದ್ದು ಇಂದು ದಿನಾಂಕ 11-10-2015 ರಂದು ಅಂದಾಜು ಸುಮಾರು 8-30 ಗಂಟೆಯ ಸುಮಾರಿಗೆ ನಾನು ನನ್ನ ಮಕ್ಕಳೊಂದಿಗೆ ಊಟ ಮಾಡುತ್ತಾ ಮನೆಯಲ್ಲಿ ಬಾಗಿಲು ಹಾಕಿಕೊಂಡು ಕುಳಿತುಕೊಂಡಾಗ ನನ್ನ ಗಂಡ ಕುಡಿದು ಬಂದನವೇ ಹೊರಗಡೆಯಿಂದ ಅವಾಚ್ಯ ಶಬ್ದಗಳಿಂದ ಬೈದು ಚಿರಾಡುತ್ತಿದ್ದನು. ಆಗ ನಾನು ಒಳಗಡೆಯಿಂದಲೆ ನನ್ನ ಗಂಡನಿಗೆ ಯಾಕೆ ಸುಮ್ಮನೆ ಚೀರಾಡುತ್ತಿದ್ದಿಯಾ ಅಂತಾ ಕೇಳಿದಕ್ಕೆ ನನಗೆ ಎದುರುವಾದಿಸುತ್ತೀಯಾ ಇವತ್ತು ನಿನಗೆ ಖಲಾಸ ಮಾಡುತ್ತೇನೆ ಅಂತಾ ಚೀರಾಡುತ್ತಿದ್ದನು. ಆಗ ನಾನು ಹೊರಗಡೆ ಬಂದು ನೋಡುವಷ್ಟರಲ್ಲಿ ನನ್ನ ಗಂಡ ನನ್ನ ಕೈ ಹಿಡಿದು ಅಂಗಳಕ್ಕೆ  ಎಳೆದುಕೊಂಡು ಹೋಗಿ ತನ್ನ ಕಿಸೆಯಲ್ಲಿಯ ಚಾಕುವನ್ನು ತೆಗೆದುಕೊಂಡು ನನ್ನ ಹೊಟ್ಟೆಯ ಎಡಭಾಗಕ್ಕೆ ಚುಚ್ಚಿದನು. ನಾನು ಚೀರಾಡುವದನ್ನು ಕಂಡು ನನ್ನ ದೊಡ್ಡ ಮಗ ಮಹ್ಮದ ಸಂಮೀರ ಮತ್ತು ನಮ್ಮ ಮನೆಯ ಅಕ್ಕ ಪಕ್ಕದವರೆಲ್ಲಾ ಬಂದು ನನಗೆ ಗಂಡನಿಂದ ಬಿಡಿಸಿದರು . ಆಗ ನನ್ನ ಗಂಡ ಅಲ್ಲಿಂದ ಓಡಿ ಹೋದನು, ಕಾರಣ ಮದುವೆ ಆದಾಗಿನಿಂದ ಕುಡಿದು ಬಂದು ದಿನಾಲು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿದ್ದು ಅಲ್ಲದೇ ಇಂದು ಅವಾಚ್ಯ ಶಬ್ದಗಳಿಂದ ಬೈದು ಚಾಕುವಿನಿಂದ ನನ್ನ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಸಿದ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.