POLICE BHAVAN KALABURAGI

POLICE BHAVAN KALABURAGI

14 June 2013

GULBARGA DISTRICT REPORTED CRIME

ವರದಕ್ಷಿಣೆ ಕಿರುಕುಳ ಪ್ರಕರಣ:

ಮಹಿಳಾ ಪೋಲಿಸ ಠಾಣೆ:ಶ್ರೀಮತಿ ಲಲೀತಾ @ ಪಿಂಕಿ ಗಂಡ ನರಸಿಂಗ್ ಸಾ:ಕರನಕೋಟ್ ತಾ:ತಾಂಡೂರ್ ಹಾ:ವ:ಉಪ್ಪರ ಗಲ್ಲಿ  ಸ್ಟೇಶನ ಬಜಾರ ಗುಲಬರ್ಗಾರವರು ನನಗೆ ನರಸಿಂಗ್ ತಂದೆ ಪೆಂಟೋಜಿ  ಸಾ:ಕರನಕೋಟ್ ತಾ: ತಾಂಡೂರ್ ಜಿ: ರಂಗಾ ರೆಡ್ಡಿ ರಾಜ್ಯ: ಆಂಧ್ರ ಪ್ರದೇಶ ಇತನ ಸಂಗಡ 8 ವರ್ಷಗಳ ಹಿಂದೆ ಮಾದುವೆ ಮಾಡಿಕೊಟ್ಟಿದ್ದು, ಮದುವೆ ಸಮಯಲ್ಲಿ ನನ್ನ ತಂದೆಯವರು 10 ತೊಲೆ ಬಂಗಾರ 2 ಲಕ್ಷ ರೂಪಾಯಿಗಳು ಹಿರೋ ಹೊಂಡಾ ಮೋಟಾರ ಸೈಕಲ್ ಮತ್ತು ಇತರೆ ಸಾಮಾನುಗಳು ಕೊಟ್ಟಿರುತ್ತಾರೆ. ಮದುವೆಯಾದ  ಎಂದೂವರೆ ವರ್ಷದ ನಂತರ ನನ್ನ ಗಂಡ,ಅತ್ತೆ,ಮಾವ,ಮೈದುನರರು ವಿನಾಃಕಾರಣ ಕಿರುಕುಳ ಕೊಡುವುದು ಹೊಡೆ ಬಡೆ ಮಾಡದಲ್ಲಾದೆ ಅವಾಚ್ಯ ಶಬ್ದಗಳಿಂದ ನಿಂದನ ಮಾಡುತ್ತಾ ತವರು ಮನೆಯಿಂದ 5 ಲಕ್ಷ ರೂಪಾಯಿ ತೆಗೆದುಕೊಂಡು ಬರಬೇಕು ನಾನು ವ್ಯಾಪಾರ ಮಾಡುವುದಿದೇ ಅಂತಾ ಹೊಡೆ ಬಡೆ ಮಾಡುತ್ತಿದ್ದರು.ನೀನು ತವರ ಮನೆಯಿಂದ ಹಣ ತೆಗೆದುಕೊಂಡು ಬರದಿದ್ದರೆ ಮತೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಬೇದರಿಕೆ ಹಾಕುತ್ತಿದ್ದನು, ಈ ವಿಷಯ ನನ್ನ ತಂದೆ ತಾಯಿಗೆ ವಿಷಯ ತಿಳಿಸಿ ಮತ್ತೇ 2 ಲಕ್ಷ ರೂಪಾಯಿಗಳು ತಂದು ನನ್ನ ಗಂಡನಿಗೆ ವ್ಯಾಪಾರಗೊಸ್ಕರ ತಂದುಕೊಟ್ಟಿರುತ್ತೇನೆ. ದಿನಾಂಕ:08.06.2013 ರಂದು ರಾತ್ರಿ 10.00 ಗಂಟೆ ಸುಮಾರಿಗೆ ನಾನು ತವರು ಮನೆಗೆಲ್ಲಿರುವಾಗ ಒಂದು ವಾಹನಲ್ಲಿ ನನ್ನ ಗಂಡ ಅತ್ತೆ, ಮಾವ, ಮೈದುನರರು  ಮತ್ತು ಮಾವನ ತಮ್ಮನಾದ ಬಾಲಕೀಶನ ಇವರು ನನ್ನ ತಂದೆ ತಾಯಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆ ಬಡೆ ಮಾಡಿ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:34/2013 ಕಲಂ 498 (ಎ).323.504.506 ಸಂಗಡ 34 ಐ.ಪಿ.ಸಿ ಮತ್ತು 3&4 ಡಿ.ಪಿ.ಎಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.